India vs Nepal: ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್; ಜೈಸ್ವಾಲ್ ಸ್ಫೋಟಕ ಶತಕ; ನೇಪಾಳ ಗೆಲುವಿಗೆ 203 ರನ್‌ಗಳ ಬೃಹತ್ ಟಾರ್ಗೆಟ್
ಕನ್ನಡ ಸುದ್ದಿ  /  ಕ್ರಿಕೆಟ್  /  India Vs Nepal: ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್; ಜೈಸ್ವಾಲ್ ಸ್ಫೋಟಕ ಶತಕ; ನೇಪಾಳ ಗೆಲುವಿಗೆ 203 ರನ್‌ಗಳ ಬೃಹತ್ ಟಾರ್ಗೆಟ್

India vs Nepal: ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್; ಜೈಸ್ವಾಲ್ ಸ್ಫೋಟಕ ಶತಕ; ನೇಪಾಳ ಗೆಲುವಿಗೆ 203 ರನ್‌ಗಳ ಬೃಹತ್ ಟಾರ್ಗೆಟ್

ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ ಟೀಂ ಇಂಡಿಯಾದ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ನೇಪಾಳ ಗೆಲುವಿಗೆ 203 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ.

ನೇಪಾಳ ವಿರುದ್ಧ ಭರ್ಜರಿ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ (ಸೋನಿ ಲೈವ್)
ನೇಪಾಳ ವಿರುದ್ಧ ಭರ್ಜರಿ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ (ಸೋನಿ ಲೈವ್)

ಹ್ಯಾಂಗ್‌ಝೌ (ಚೀನಾ): ಟೀಂ ಇಂಡಿಯಾದ (Team India) ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಸ್ಫೋಟಕ ಶತಕ ಹಾಗೂ ಕೊನೆಯಲ್ಲಿ ರಿಂಕು ಸಿಂಗ್ ಅಬ್ಬರದಿಂದಾಗಿ ನೇಪಾಳ (Nepal) ಗೆಲುವಿಗೆ 203 ರನ್‌ಗಳ ಬೃಹತ್ ಟಾರ್ಗೆಟ್ ನೀಡಲಾಗಿದೆ.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ (Asian Games Cricket 2023) ಟೀಂ ಇಂಡಿಯಾದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202ರನ್ ಗಳಿಸಿತು. ಆರಂಭಿಕ ಬ್ಯಾಟರ್ ಜೈಸ್ವಾಲ್ 8 ಬೌಂಡರಿ ಹಾಗೂ 7 ಅಮೋಘ ಸಿಕ್ಸರ್‌ಗಳೊಂದಿಗೆ 100 ರನ್ ಬಾರಿಸಿದರು.

ನಿರಾಸೆ ಮೂಡಿಸಿದ ನಾಯಕ ಗಾಯಕ್ವಾಡ್, ತಿಲಕ್ ವರ್ಮಾ, ಜಿತೇಶ್ ಶರ್ಮಾ

ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ರುತುರಾಜ್ ಗಾಯಕ್ವಾಡ್ ನಿರಾಸೆ ಮೂಡಿಸಿದರು. ಗಾಯಕ್ವಾಡ್ 23 ಎಸೆತಗಳನ್ನು ಎದುರಿಸಿ 4 ಬೌಂಡರಿ ಸೇರಿ 25 ರನ್ ಗಳಿಸಿ ದೀಪೇಂದ್ರ ಸಿಂಗ್ ಬೌಲಿಂಗ್‌ನಲ್ಲಿ ರೋಹಿತ್ ಪೌಡೆಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಆ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ತಿಲಕ್ ವರ್ಮಾ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಹೈದರಾಬಾದ್‌ನ ತಿಲಕ್ 10 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ಸೋಪಾಲ್ ಕಾಮಿ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಬ್ಯಾಟಿಂಗ್‌ನಲ್ಲಿ ವಿಫಲವಾದರು.

ವಿಕೆಟ್ ಕೀಪರ್ ಜಿತೇಶ್ ಶರ್ಮಾ ಬಂದಷ್ಟೇ ವೇಗವಾಗಿ ಪೆಲಿವಿಯನ್ ಸೇರಿಕೊಂಡರು. ಶರ್ಮಾ ನಾಲ್ಕು ಎಸೆತಗಳನ್ನು ಎದುರಿಸಿ 1 ಬೌಂಡರಿ ಸೇರಿ 5 ರನ್ ಗಳಿಸಿ ಸಂದೀಪ್ ಲಮಿಚಾನೆ ಬೌಲಿಂಗ್‌ನಲ್ಲಿ ಔಟ್ ಆದರು.

ಕೊನೆಯಲ್ಲಿ ಅಬ್ಬರಿಸಿದ ರಿಂಕು ಸಿಂಗ್

ಕೊನೆಯಲ್ಲಿ ಶಿವಂ ದುಬೆ 19 ಎಸೆತಗಳಿಂದ 2 ಬೌಂಡರಿ 1 ಸಿಕ್ಸರ್ ಸೇರಿ 25 ರನ್ ಗಳಿಸಿದರೆ ಮತ್ತು ರಿಂಕು ಸಿಂಗ್ 15 ಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್‌ಗಳಿಂದ 37 ರನ್ ಬಾರಿಸಿದರು. ಆ ಮೂಲಕ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು. ನೇಪಾಳದ ಪರವಾಗಿ ದೀಪೇಂದ್ರ ಸಿಂಗ್ ಎರಡು ವಿಕೆಟ್ ಪಡೆದರೆ ಸೋಂಪಾಲ್ ಕಾಮಿ ಹಾಗೂ ಸಂದೀಪ್ ಲಮಿಚಾನೆ ತಲಾ 1 ವಿಕೆಟ್ ಗಳಿಸಿದರು. ಉತ್ತಮ ಶ್ರೇಯಾಂಕದ ಆಧಾರದ ಮೇಲೆ ಟೀಂ ಇಂಡಿಯಾ ಏಷ್ಯನ್ ಗೇಮ್ಸ್‌ನಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಬಂದಿದೆ.

ಭಾರತದ ಆಡುವ 11ರ ಬಳಗ

ರುತುರಾಜ್ ಗಾಯಕ್ವಾಡ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಶ್ರೀನಿವಾಸನ್ ಸಾಯಿ ಕಿಶೋರ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್,

ನೇಪಾಳ ಆಡುವ 11ರ ಬಳಗ

ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಭುರ್ಟೆಲ್, ಆಸಿಫ್ ಶೇಕ್ (ವಿಕೆಟ್ ಕೀಪರ್), ಸಂದೀಪ್ ಜೋರಾ, ಗುಲ್ಸನ್ ಝಾ, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸೋಂಪಾಲ್ ಕಾಮಿ, ಕರಣ್ ಕೆಸಿ, ಭಿನಾಶ್ ಬೋಹರಾ, ಸಂದೀಪ್ ಲಮಿಚಾನೆ

Whats_app_banner