Yashasvi Jaiswal: ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್; ನೇಪಾಳ ವಿರುದ್ಧ ಭರ್ಜರಿ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್
ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ ನೇಪಾಳ ವಿರುದ್ಧ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ (Asian Games Cricket) ಫೈನಲ್‌ನಲ್ಲಿ ಟೀಂ ಇಂಡಿಯಾದ (Team India) ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ನೇಪಾಳ ವಿರುದ್ಧ ಏಕಾಂಗಿ ಹೋರಾಟ ಮಾಡಿದ್ದು, ಭರ್ಜರಿ ಶತಕ ಸಡಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಏಷ್ಯನ್ ಗೇಮ್ಸ್ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಜೈಸ್ವಾಲ್ ಕೇವಲ 48 ಎಸೆತಗಳಿಂದ 8 ಬೌಂಡರಿ ಹಾಗೂ 7 ಅಮೋಘ ಸಿಕ್ಸರ್‌ಗಳ ನೆರವಿನಿಂದ 100 ರನ್ ಗಳಿಸಿದ್ದಾರೆ. ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದಾರೆ.
ಜೈಸ್ವಾಲ್ ಅವರ ಸ್ಫೋಟಕ ಶತಕದ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಅಂತಿಮವಾಗಿ ಜೈಸ್ವಾನ್ 49 ಎಸೆತಗಳಿಂದ 8 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಸೇರಿದಂತೆ 100 ರನ್ ಗಳಿಸಿ ದೀಪೇಂದ್ರ ಸಿಂಗ್ ಬೌಲಿಂಗ್‌ನಲ್ಲಿ ಔಟಾದರು.
ತಂಡದ ಮೊತ್ತವನ್ನ 200ರ ಗಡಿ ದಾಟಿಸಿದ ರಿಂಕು ಸಿಂಗ್, ಶಿವಂ ದುಬೆ
ನಾಯಕ ರುತುರಾಜ್ ಗಾಯಕ್ವಾಡ್ (25), ತಿಲಕ್ ವರ್ಮಾ (2), ಜಿತೇಶ್ ಶರ್ಮಾ (5) ನಿರಾಸೆ ಮೂಡಿಸಿದರೂ ಕೊನೆಯಲ್ಲಿ ಶಿವಂ ದುಬೆ (25) ಹಾಗೂ ರಿಂಕು ಸಿಂಗ್ 15 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಅಮೋಘ ಸಿಕ್ಸರ್‌ಗಳ ನೆರೆವಿನಿಂದ 37 ರನ್ ಗಳಿಸಿ ತಂಡದ ಮೊತ್ತವನ್ನು 200ಕ್ಕೆ ಹೆಚ್ಚಿಸಿದರು.
ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಎರಡು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದ್ದು, 54.18 ಸ್ಟ್ರೈಕ್ ರೇಟ್‌ನಲ್ಲಿ
1 ಶತಕ, 1 ಅರ್ಧ ಶತಕ ಸೇರಿ 266 ರನ್ ಗಳಿಸಿದ್ದಾರೆ. 6 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಜೈಸ್ವಾಲ್ 165.71 ಸ್ಟ್ರೈಕ್ ರೇಟ್‌ನಲ್ಲಿ 1 ಶತಕ, 1 ಅರ್ಧ ಶತಕ ಸೇರಿ 232 ರನ್ ಗಳಿಸಿದ್ದಾರೆ.
ಐಪಿಎಲ್‌ನಲ್ಲಿ ಆರ್‌ಆರ್ ಪರ ಆರಂಭಿಕ ಬ್ಯಾಟರ್
ರಾಜಸ್ಥಾನ್ ರಾಯಲ್ಸ್ ಪರವಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಆಡುತ್ತಿರುವ ಯಶಸ್ವಿ ಜೈಸ್ವಾಲ್ ಒಟ್ಟಾರೆಯಾಗಿ 37 ಐಪಿಎಲ್ ಪಂದ್ಯಗಳಿಂದ 148.73 ಸ್ಟ್ರೈಕ್ ರೇಟ್‌ನಲ್ಲಿ 1 ಶತಕ, 8 ಅರ್ಧ ಶತಕಗಳೊಂದಿಗೆ 1,172 ರನ್ ಬಾರಿಸಿದ್ದಾರೆ. ಜೈಸ್ವಾಲ್‌ಗೆ ಇನ್ನೂ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ಸಿಕ್ಕಿಲ್ಲ. ಇನ್ನಷ್ಟೇ ಪದಾರ್ಪಣೆ ಮಾಡಬೇಕಿದೆ.
ಸಂಬಂಧಿತ ಲೇಖನ