ಕೊಹ್ಲಿ 2ನೇ ಮಗು, ಕಷ್ಟದ ದಿನಗಳು, ಯಶಸ್ಸು, ನಿವೃತ್ತಿ ಕುರಿತು 2016ರಲ್ಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ; ವಿರಾಟ್ ಫ್ಯಾನ್ಸ್ಗೆ ಆತಂಕ
Virat Kohli : 2024ರಲ್ಲಿ ವಿರಾಟ್ ಕೊಹ್ಲಿ ಎರಡನೇ ಬಾರಿಗೆ ತಂದೆಯಾಗುವ ಕುರಿತು 2016ಲ್ಲೇ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರು. ಇದೀಗ ಆ ಪೋಸ್ಟ್ ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರು ಲಂಡನ್ನಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಕಾರಣಕ್ಕೆ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ಕೊಹ್ಲಿ, ಪತ್ನಿ ಮತ್ತು ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ. 2ನೇ ಬಾರಿಗೆ ತಂದೆಯಾದ ಕೊಹ್ಲಿ ಫೆಬ್ರವರಿ 20ರಂದು ಪೋಸ್ಟ್ ಹಾಕಿ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು.
ಈ ನಡುವೆ ಕೊಹ್ಲಿ ಕುರಿತು 2016ರಲ್ಲಿ ಜ್ಯೋತಿಷಿಯೊಬ್ಬರು ನುಡಿದಿದ್ದ ಭವಿಷ್ಯವಾಣಿ ಇದೀಗ ವೈರಲ್ ಆಗುತ್ತಿದೆ. ತಮ್ಮ ಹಳೆಯ ಪೋಸ್ಟನ್ನು ಈಗ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. 2024ರ ಫೆಬ್ರವರಿ 15ರಂದು ಕೊಹ್ಲಿ ತಮ್ಮ 2ನೇ ಮಗುವನ್ನು ಸ್ವಾಗತಿಸಿದ ನಂತರ ಜ್ಯೋತಿಷಿಯ ಭವಿಷ್ಯವಾಣಿ ಮತ್ತೊಮ್ಮೆ ವೈರಲ್ ಆಗುತ್ತಿದೆ. ಜ್ಯೋತಿಷಿ ಈ ಹಿಂದೆ ನುಡಿದಿದ್ದೆಲ್ಲವೂ ನಿಜವಾಗಿರುವುದು ಅಚ್ಚರಿಯ ಸಂಗತಿ.
ಸದ್ಯ ವೈರಲ್ ಆಗುತ್ತಿರುವ ಪೋಸ್ಟ್ನಲ್ಲಿ ವಿರಾಟ್ 2024 ರಲ್ಲಿ ತಂದೆ ಆಗಲಿದ್ದಾರೆ ಎಂದಿದೆ. 2016ರ ಏಪ್ರಿಲ್ 16ರಂದು ಪೋಸ್ಟ್ ಮಾಡಲಾದ ಭವಿಷ್ಯವಾಣಿಯಲ್ಲಿ ಎಲ್ಲವೂ ಸರಿಯಾಗಿದೆ. 2021-2024ರಲ್ಲಿ ಏನೆಲ್ಲಾ ಆಗಲಿದೆ? 2025 ರಿಂದ 2027ರವರೆಗೆ ಕ್ರಿಕೆಟ್ನಲ್ಲಿ ಕೊಹ್ಲಿ ಮತ್ತೆ ಕಷ್ಟದ ದಿನಗಳನ್ನು ಎದುರಿಸುತ್ತಾರೆ. ಹಾಗೆಯೇ ನಿವೃತ್ತಿ ಘೋಷಿಸುವ ವರ್ಷವನ್ನೂ ಉಲ್ಲೇಖಿಸಲಾಗಿದೆ. ಹಾಗಾದರೆ ಪೋಸ್ಟ್ನಲ್ಲಿ ಏನಿದೆ? ಬನ್ನಿ ನೋಡೋಣ.
ಜ್ಯೋತಿಷಿ ಏನೆಲ್ಲಾ ಹೇಳಿದ್ರು ಇಲ್ಲಿದೆ ನೋಡಿ
1. ವಿರಾಟ್ ಕೊಹ್ಲಿ 2016 ಮತ್ತು 2017ರಲ್ಲಿ ಹೆಚ್ಚಿನ ಸ್ಟಾರ್‌ಡಮ್ ಸಂಪಾದಿಸುತ್ತಾರೆ. ಕ್ರಿಕೆಟ್ ಕೌಶಲ್ಯಗಳು ಇನ್ನಷ್ಟು ಹೆಚ್ಚಾಗುತ್ತವೆ. ಶನಿಯು 2017ರ ಜನವರಿಯಲ್ಲಿ ವೃಶ್ಚಿಕ ರಾಶಿಯಿಂದ ಹೊರ ಹೋಗುವುದರಿಂದ, 2016 ವರ್ಷಕ್ಕೆ ಹೋಲಿಸಿದರೆ 2017 ರಲ್ಲಿ ಅವರ ಯಶಸ್ಸು ಇನ್ನೂ ಹೆಚ್ಚಾಗುತ್ತದೆ.
2. ಮಾರ್ಚ್/ಏಪ್ರಿಲ್ 2017ರಲ್ಲಿ ವಿರಾಟ್ ಮದುವೆಯ ಮಾತುಕತೆಗಳು ಹೊರಹೊಮ್ಮುತ್ತವೆ. 2017ರ ಅಂತ್ಯ ಅಥವಾ 2018ರ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. 2017ರ ಡಿಸೆಂಬರ್ ಅಥವಾ 2018ರ ಜನವರಿಯಲ್ಲೇ ಮದುವೆಯಾಗುವ ಅವಕಾಶ ಹೆಚ್ಚಿದೆ.
3. ಮದುವೆಯ ನಂತರ ಅಪಾರ ಸಂಪತ್ತು ಗಳಿಸುತ್ತಾರೆ. ಫೆಬ್ರವರಿ 2018 ಮತ್ತು ಸೆಪ್ಟೆಂಬರ್ 2020ರ ನಡುವೆ ಮೊದಲ ಮಗುವಿಗೆ ತಂದೆ ಆಗಲಿದ್ದಾರೆ. ಆ ಮಗುವು ತಂದೆಗೆ (ಕೊಹ್ಲಿಗೆ) ಅಪಾರ ಅದೃಷ್ಟ ಮತ್ತು ಅದೃಷ್ಟವನ್ನು ತರುತ್ತದೆ.
4. ಸೆಪ್ಟೆಂಬರ್ 2020-ಸೆಪ್ಟೆಂಬರ್ 2021ರ ನಡುವೆ ವಿರಾಟ್ ಕಡಿಮೆ ಕ್ರಿಕೆಟ್ ಅವಧಿಯನ್ನು ಹೊಂದಿರುತ್ತಾರೆ.
5. ವಿರಾಟ್ ಸೆಪ್ಟೆಂಬರ್ 2021-2025ರ ನಡುವೆ ಅಪಾರ ಯಶಸ್ಸು ಗಳಿಸುತ್ತಾರೆ. ಕ್ರಿಕೆಟ್ ಮತ್ತು ಸಂಪತ್ತಿನಲ್ಲಿ ಯಶಸ್ಸು.
6. ಹೆಚ್ಚುವರಿಯಾಗಿ ವಿರಾಟ್ 2021-2024ರ ನಡುವೆ ಮತ್ತೊಂದು ಮಗುವಿಗೆ ತಂದೆಯಾಗುವ ಸಾಧ್ಯತೆ ಇದೆ.
7. ಕೊಹ್ಲಿ ಅವರು ಆಗಸ್ಟ್ 2025 ರಿಂದ ಫೆಬ್ರವರಿ 2027ರವರೆಗೆ ಕೆಟ್ಟ ದಿನಗಳನ್ನು ಎದುರಿಸಲಿದ್ದಾರೆ. ಕಳಪೆ ಫಾರ್ಮ್‌ಗೆ ಸಿಲುಕಲಿದ್ದಾರೆ.
8. 2027ರಲ್ಲಿ ಮತ್ತೊಮ್ಮೆ ವಿರಾಟ್ ವೃತ್ತಿಜೀವನ ಉತ್ತುಂಗಕ್ಕೇರುತ್ತದೆ. ನಂತರ 2028ರ ಮಾರ್ಚ್ ತಿಂಗಳಲ್ಲಿ ವಿರಾಟ್ ನಿವೃತ್ತಿ ಪಡೆಯುತ್ತಾರೆ ಎಂದು ಜ್ಯೋತಿಷಿಯೊಬ್ಬರು ಬರೆದುಕೊಂಡಿದ್ದರು.