ಭಾರತ ತಂಡದ ವಿರುದ್ಧದ 3ನೇ ಟೆಸ್ಟ್​​ಗೆ ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ಆಸ್ಟ್ರೇಲಿಯಾ; ಆರ್​ಸಿಬಿ ಆಟಗಾರನಿಗೆ ಮಣೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ತಂಡದ ವಿರುದ್ಧದ 3ನೇ ಟೆಸ್ಟ್​​ಗೆ ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ಆಸ್ಟ್ರೇಲಿಯಾ; ಆರ್​ಸಿಬಿ ಆಟಗಾರನಿಗೆ ಮಣೆ

ಭಾರತ ತಂಡದ ವಿರುದ್ಧದ 3ನೇ ಟೆಸ್ಟ್​​ಗೆ ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ಆಸ್ಟ್ರೇಲಿಯಾ; ಆರ್​ಸಿಬಿ ಆಟಗಾರನಿಗೆ ಮಣೆ

Australia announced playing XI: ಟೀಮ್ ಇಂಡಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡವು ತನ್ನ ಪ್ಲೇಯಿಂಗ್ ಇಲೆವೆನ್​ ಅನ್ನು ಪ್ರಕಟಿಸಿದೆ. ಆರ್​ಸಿಬಿ ಆಟಗಾರ ಜೋಶ್ ಹೇಜಲ್​ವುಡ್ ತಂಡಕ್ಕೆ ಮರಳಿದ್ದಾರೆ.

ಭಾರತ ತಂಡದ ವಿರುದ್ಧದ 3ನೇ ಟೆಸ್ಟ್​​ಗೆ ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ಆಸ್ಟ್ರೇಲಿಯಾ
ಭಾರತ ತಂಡದ ವಿರುದ್ಧದ 3ನೇ ಟೆಸ್ಟ್​​ಗೆ ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ಆಸ್ಟ್ರೇಲಿಯಾ (AP)

ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಟೀಮ್ ಇಂಡಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ 2025ರ 3ನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದೆ. ಆಡುವ 11ರ ಬಳಗದಲ್ಲಿ ಪ್ರಮುಖ ಬದಲಾವಣೆ ಮಾತ್ರ ಕಂಡಿದೆ. ಆರಂಭಿಕ ಟೆಸ್ಟ್​ನಲ್ಲಿ ಅಬ್ಬರಿಸಿ ಎರಡನೇ ಟೆಸ್ಟ್​​ಗೆ ಗಾಯಗೊಂಡು ಅಲಭ್ಯರಾಗಿದ್ದ ವೇಗಿ ಜೋಶ್ ಹೇಜಲ್​ವುಡ್ ಇದೀಗ ಫಿಟ್​ ಆಗಿದ್ದು, ಮತ್ತೆ ಪ್ಲೇಯಿಂಗ್ 11ಗೆ ಮರಳಿದ್ದಾರೆ. ಗಾಯದ ಕಾರಣ ಹೇಜಲ್​ವುಡ್ ಅಡಿಲೇಡ್​ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾಗಿದ್ದರು. ಜೋಶ್​ ಬದಲಿಗೆ ಸ್ಕಾಟ್​ ಬೋಲ್ಯಾಂಡ್ ಅವಕಾಶ ಪಡೆದಿದ್ದರು.

ಇದೀಗ ಆರ್​ಸಿಬಿ ಆಟಗಾರ ಜೋಶ್ ಹೇಜಲ್​ವುಡ್ ತಂಡಕ್ಕೆ ಮರಳಿದ ಕಾರಣ ಬೋಲ್ಯಾಂಡ್ ತನ್ನ ಸ್ಥಾನ ಬಿಟ್ಟುಕೊಡಬೇಕಿದೆ. ಉಳಿದಂತೆ ಆಸ್ಟ್ರೇಲಿಯಾದ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಡಿಲೇಡ್ ಟೆಸ್ಟ್​​​ನಲ್ಲಿ 5 ವಿಕೆಟ್ ಪಡೆದರೂ ಬೋಲ್ಯಾಂಡ್ ತನ್ನ ಸ್ಥಾನವನ್ನು ಕಳೆದುಕೊಂಡಿದ್ದಾರೆ. ದುರದೃಷ್ಟಕರ. ಈ ಬಗ್ಗೆ ನಾಯಕ ಪ್ಯಾಟ್ ಕಮಿನ್ಸ್ ಮಾತನಾಡಿ ಗಬ್ಬಾದಲ್ಲಿ ಸ್ಕಾಟ್ ಬೋಲ್ಯಾಂಡ್ ಅವರ ಬದಲಿಯಾಗಿ ಹೇಜಲ್​ವುಡ್ ಅವರನ್ನು ಸೇರಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಜೋಶ್ ಫಿಟ್ ಆಗಿದ್ದಾರೆ. ನೆಟ್ಸ್​ನಲ್ಲೂ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ವೈದ್ಯಕೀಯ ತಂಡವು ವಿಶ್ವಾಸ ಹೊಂದಿದೆ. ಹೀಗಾಗಿ ಬ್ರಿಸ್ಬೇನ್​ನಲ್ಲಿ ಆಡಲಿದ್ದಾರೆ ಎಂದರು.

ಬೋಲ್ಯಾಂಡ್​ಗೆ ಮತ್ತೆ ಅವಕಾಶ ಸಿಗಲಿದೆ ಎಂದ ಕಮಿನ್ಸ್

ಆರಂಭಿಕ ಆಟಗಾರ ನಾಥನ್ ಮೆಕ್ಸ್ವೀನಿ ಬದಲಿಗೆ ಮತ್ತೊಬ್ಬರಿಗೆ ಅವಕಾಶ ನೀಡಬಹುದು ಎಂದು ವರದಿಯಾಗಿತ್ತು. ಆದರೆ ಕಳಪೆ ಪ್ರದರ್ಶನದ ನಡುವೆಯೂ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸರಣಿಯ ಕೊನೆಯ ಎರಡು ಟೆಸ್ಟ್​​ ಪಂದ್ಯಗಳಲ್ಲಿ ಬೋಲ್ಯಾಂಡ್​ಗೆ ಮತ್ತೊಂದು ಅವಕಾಶ ಸಿಗಬಹುದು ಎಂದು ಪ್ಯಾಟ್ ಕಮಿನ್ಸ್ ಭರವಸೆ ನೀಡಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ 2025 ಪ್ರಸ್ತುತ 1-1 ರಲ್ಲಿ ಸಮಬಲಗೊಂಡಿದೆ. ಪರ್ತ್ ಟೆಸ್ಟ್​​ನಲ್ಲಿ 295 ರನ್​ಗಳ ದೊಡ್ಡ ಅಂತರದಿಂದ ಗೆದ್ದಿದ್ದ ಭಾರತ, ಸರಣಿಯಲ್ಲಿ ಉತ್ತಮ ಆರಂಭ ನೀಡಿತ್ತು, ಆದರೆ, ಅಡಿಲೇಡ್ ಟೆಸ್ಟ್​​​ನಲ್ಲಿ ಕಾಂಗರೂ ಪಡೆ, ಭಾರತ ತಂಡವನ್ನು 10 ವಿಕೆಟ್​ಗಳಿಂದ ಸೋಲಿಸುವ ಮೂಲಕ ಬಲಿಷ್ಠವಾಗಿ ಕಂಬ್ಯಾಕ್ ಮಾಡಿತು. 3ನೇ ಪಂದ್ಯ ಡಿಸೆಂಬರ್ 14ರಂದು ನಡೆಯಲಿದೆ.

ಸ್ಕಾಟ್ ಬೋಲ್ಯಾಂಡ್ ಅವರನ್ನು ತಂಡದಿಂದ ಹೊರಗಿಡುವ ನಿರ್ಧಾರ, ಕಷ್ಟದಿಂದ ತೆಗೆದುಕೊಂಡದ್ದು. ಅಡಿಲೇಡ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ದುರದೃಷ್ಟವಶಾತ್, ಕಳೆದ 18 ತಿಂಗಳಿಂದ ಅವರು ಸಾಕಷ್ಟು ಬಾರಿ ಬೆಂಚ್ ಕಾದಿದ್ದಾರೆ. ಅವರು ಅವಕಾಶ ಪಡೆದಾಗೆಲೆಲ್ಲಾ ಅದ್ಭುತವಾಗಿ ಮಾಡಿದ್ದಾರೆ. ಆದರೆ ಈ ಸರಣಿಯಲ್ಲಿ ಆಡಲು ಇನ್ನೂ ಸಾಕಷ್ಟು ಇದೆ. ಒಂದು ಹಂತದಲ್ಲಿ ಅವರಿಗೆ ಮತ್ತೊಂದು ಅವಕಾಶ ಸಿಗುತ್ತದೆ ಎಂದು ಕಮಿನ್ಸ್ ಹೇಳಿದ್ದಾರೆ.

ಭಾರತ ವಿರುದ್ಧದ ಮೂರನೇ ಟೆಸ್ಟ್​ ಆಸ್ಟ್ರೇಲಿಯಾ ತಂಡ

ಉಸ್ಮಾನ್ ಖವಾಜಾ, ನಾಥನ್ ಮೆಕ್ಸ್ವೀನಿ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹೇಜಲ್​ವುಡ್.

Whats_app_banner