ದೊಡ್ಡ ಸೋಲು, ತವರಿನಲ್ಲಿ ಮುಖಭಂಗ; ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಮತ್ತು 242 ರನ್ಗಳಿಂದ ಗೆದ್ದ ಆಸ್ಟ್ರೇಲಿಯಾ ದಾಖಲೆ
Sri Lanka vs Australia 1st Test: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್ ಹಾಗೂ 242 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಲಂಕಾ ಅತಿ ದೊಡ್ಡ ಟೆಸ್ಟ್ ಸೋಲಿಗೆ ಶರಣಾದರೆ, ಕಾಂಗರೂ ಪಡೆ ನಾಲ್ಕನೇ ಅತಿ ದೊಡ್ಡ ಟೆಸ್ಟ್ ಗೆಲುವಿಗೆ ಸಾಕ್ಷಿಯಾಗಿದೆ.

ಉಸ್ಮಾನ್ ಖವಾಜ ದ್ವಿಶತಕ (232) ಮತ್ತು ಮ್ಯಾಥ್ಯೂ ಕುಹ್ನೆಮನ್ (9 ವಿಕೆಟ್) ಬೌಲಿಂಗ್ ಬಲದಿಂದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್ ಮತ್ತು 232 ರನ್ಗಳಿಂದ ಗೆದ್ದು ದಾಖಲೆ ನಿರ್ಮಿಸಿದೆ. ಇದರೊಂದಿಗೆ ಸರಣಿಯಲ್ಲಿ 0-1 ಅಂತರದಿಂದ ಮುನ್ನಡೆ ಸಾಧಿಸಿದೆ. ಲಂಕಾ ಅತಿ ದೊಡ್ಡ ಟೆಸ್ಟ್ ಸೋಲಿಗೆ ಶರಣಾದರೆ, ಕಾಂಗರೂ ಪಡೆ ನಾಲ್ಕನೇ ಅತಿ ದೊಡ್ಡ ಟೆಸ್ಟ್ ಗೆಲುವಿಗೆ ಸಾಕ್ಷಿಯಾಗಿದೆ. ಪ್ಯಾಟ್ ಕಮಿನ್ಸ್ ಅಲಭ್ಯತೆಯಲ್ಲಿ ತಂಡವನ್ನು ಮುನ್ನಡೆಸಿದ ಸ್ಟೀವ್ ಸ್ಮಿತ್ ಗೆಲುವಿನ ನಗೆ ಬೀರಿದ್ದಾರೆ.
ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ದ್ವಿಶತಕ ಸೇರಿ ಮೂವರ ಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 654 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಲಂಕಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 165 ರನ್ಗೆ ಕುಸಿಯಿತು. 489 ರನ್‌ಗಳ ಹಿನ್ನಡೆ ಅನುಭವಿಸಿದ ಲಂಕಾ, ಫಾಲೋ ಆನ್ಗೆ ಗುರಿಯಾಯಿತು. ಆದರೆ ತನ್ನ 2ನೇ ಇನ್ನಿಂಗ್ಸ್ನಲ್ಲೂ ಆಸ್ಟ್ರೇಲಿಯಾ ಬೌಲರ್ಗಳ ದಾಳಿಗೆ ನಲಗಿ 247 ರನ್ಗೆ ಕುಸಿಯಿತು.
ಇದು ಟೆಸ್ಟ್ ಕ್ರಿಕೆಟ್ನಲ್ಲಿ ಶ್ರೀಲಂಕಾದ ಅತಿದೊಡ್ಡ ಸೋಲು. ಇದಕ್ಕೂ ಮುನ್ನ 2017ರಲ್ಲಿ ಭಾರತ ವಿರುದ್ಧ ಇನ್ನಿಂಗ್ಸ್ ಹಾಗೂ 239 ರನ್‌ಗಳ ಸೋಲು ಅನುಭವಿಸಿತ್ತು. ಉಸ್ಮಾನ್ ಖವಾಜಾ (232), ನಾಯಕ ಸ್ಟೀವ್ ಸ್ಮಿತ್ (141), ಜೋಸ್ ಇಂಗ್ಲಿಸ್ (102), ಮ್ಯಾಥ್ಯೂ ಕುನೆಮನ್ ಟೋಟಲ್ (9 ವಿಕೆಟ್- ಎರಡು ಇನ್ನಿಂಗ್ಸ್) ಮತ್ತು ನಾಥನ್ ಲಿಯಾನ್ (7 ವಿಕೆಟ್ - ಎರಡು ಇನ್ನಿಂಗ್ಸ್) ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಆಸೀಸ್ ಪ್ರಥಮ ಟೆಸ್ಟ್ನ ನಾಲ್ಕನೇ ದಿನದಂದು ಆತಿಥೇಯ ಶ್ರೀಲಂಕಾ ತಂಡವನ್ನು ಇನ್ನಿಂಗ್ಸ್ ಮತ್ತು 242 ರನ್ಗಳಿಂದ ಮಣಿಸಿತು.
ಲಂಕಾ ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ವಿಫಲ
ತವರಿನ ಕ್ರಿಕೆಟ್ ಮೈದಾನದಲ್ಲಿ ಶ್ರೀಲಂಕಾ ತೀವ್ರ ಮುಖಭಂಗಕ್ಕೆ ಒಳಗಾಯಿತು. ಪಂದ್ಯದ ಆರಂಭ ಹಿಡಿದು ಸೋಲಿನ ತನಕ ಯಾವುದೇ ಹಂತದಲ್ಲೂ ಮೇಲುಗೈ ಸಾಧಿಸಲು ವಿಫಲವಾಯಿತು. ಮೊದಲ ಇನ್ನಿಂಗ್ಸ್ನಲ್ಲಿ ದಿನೇಶ್ ಚಾಂಡಿಮಲ್ 72 ರನ್, ಎರಡನೇ ಇನ್ನಿಂಗ್ಸ್ನಲ್ಲಿ ಜೆಫ್ರಿ ವಾಂಡರ್ಸೆ 53 ರನ್ ಗಳಿಸಿದ್ದು ಬಿಟ್ಟರೆ ಯಾರೂ ಸಹ ಅರ್ಧಶತಕ ಸಿಡಿಸಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ಪ್ರಭಾತ್ ಜಯಸೂರ್ಯ, ವಾಂಡರ್ಸೆ ತಲಾ 3 ವಿಕೆಟ್ ಕಬಳಿಸಿದರೂ ಬೃಹತ್ ರನ್ ಬಿಟ್ಟುಕೊಟ್ಟರು.
ಆಸ್ಟ್ರೇಲಿಯಾ ತಂಡದ ಅತಿ ದೊಡ್ಡ ಇನ್ನಿಂಗ್ಸ್ ಗೆಲುವುಗಳು
- ಸೌತ್ ಆಫ್ರಿಕಾ ವಿರುದ್ಧ ಇನ್ನಿಂಗ್ಸ್ ಮತ್ತು 360 ರನ್‌ಗಳ ಗೆಲುವು, ಜೋಹಾನ್ಸ್ಬರ್ಗ್ (2002)
- ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಮತ್ತು 1946 ರನ್‌ಗಳ ಗೆಲುವು, ಬ್ರಿಸ್ಬೇನ್ (1946)
- ಸೌತ್ ಆಫ್ರಿಕಾ ವಿರುದ್ಧ ಇನ್ನಿಂಗ್ಸ್ ಮತ್ತು 259 ರನ್‌ಗಳ ಗೆಲುವು, ಗ್ಕೆಬರ್ಹಾ (1950)
- ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಮತ್ತು 242 ರನ್‌ಗಳ ಗೆಲುವು, ಗಾಲೆ (1950)
- ಭಾರತದ ವಿರುದ್ಧ ಇನ್ನಿಂಗ್ಸ್ ಮತ್ತು 226 ರನ್‌ಗಳ ಗೆಲುವು, ಬ್ರಿಸ್ಬೇನ್ (1950)
ಇದನ್ನೂ ಓದಿ: ಕನ್ಕಷನ್ ಬದಲಿ ಆಟಗಾರನಾಗಿ ಟಿ20 ಪದಾರ್ಪಣೆ ಮಾಡಿದ ಭಾರತದ ಮೊದಲ ಆಟಗಾರ ಹರ್ಷಿತ್ ರಾಣಾ; ಏನಿದು ನಿಯಮ?
ಶ್ರೀಲಂಕಾದ ಅತಿ ದೊಡ್ಡ ಇನ್ನಿಂಗ್ಸ್ ಸೋಲುಗಳು
- ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ ಮತ್ತು 242 ರನ್‌ಗಳ ಸೋಲು, ಗಾಲೆ (2025)
- ಭಾರತ ವಿರುದ್ಧ ಇನ್ನಿಂಗ್ಸ್ ಮತ್ತು 239 ರನ್‌ಗಳ ಸೋಲು, ನಾಗ್ಪುರ (2017)
- ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್ ಮತ್ತು 229 ರನ್‌ಗಳ ಸೋಲು, ಕೇಪ್ ಟೌನ್ (2001)
- ಪಾಕಿಸ್ತಾನ ವಿರುದ್ಧ ಇನ್ನಿಂಗ್ಸ್ ಮತ್ತು 222 ರನ್‌ಗಳ ಸೋಲು, ಕೊಲಂಬೊ (2023)
- ಭಾರತ ವಿರುದ್ಧ ಇನ್ನಿಂಗ್ಸ್ ಮತ್ತು 222 ರನ್‌ಗಳ ಸೋಲು, ಮೊಹಾಲಿ (2022)
ಇದನ್ನೂ ಓದಿ: ರಣಜಿ ಕಮ್‌ಬ್ಯಾಕ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡಕ್ಕೆ ಗೆಲುವು
