ಭಾರತದ ಹಲವು ಹುಡುಗಿಯರಿಗೆ ನಿಮ್ಮ ಮೇಲೆ ಕ್ರಷ್‌ ಇದೆ; ನಿರೂಪಕಿ ಪ್ರಶ್ನೆಗೆ ಪ್ಯಾಟ್ ಕಮಿನ್ಸ್ ಏನಂದ್ರು ನೋಡಿ -Video
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದ ಹಲವು ಹುಡುಗಿಯರಿಗೆ ನಿಮ್ಮ ಮೇಲೆ ಕ್ರಷ್‌ ಇದೆ; ನಿರೂಪಕಿ ಪ್ರಶ್ನೆಗೆ ಪ್ಯಾಟ್ ಕಮಿನ್ಸ್ ಏನಂದ್ರು ನೋಡಿ -Video

ಭಾರತದ ಹಲವು ಹುಡುಗಿಯರಿಗೆ ನಿಮ್ಮ ಮೇಲೆ ಕ್ರಷ್‌ ಇದೆ; ನಿರೂಪಕಿ ಪ್ರಶ್ನೆಗೆ ಪ್ಯಾಟ್ ಕಮಿನ್ಸ್ ಏನಂದ್ರು ನೋಡಿ -Video

ಭಾರತದಲ್ಲಿ ನಿಮಗೆ ತುಂಬಾ ಅಭಿಮಾನಿಗಳಿದ್ದಾರೆ. ಅದರಲ್ಲೂ ಮಹಿಳೆಯರ ಸಂಖ್ಯೆ ತುಂಬಾ ದೊಡ್ಡದಿದೆ. ಭಾರತದ ಹಲವು ಹುಡುಗಿಯರಿಗೆ ನಿಮ್ಮ ಮೇಲೆ ಕ್ರಷ್ ಇದೆ ಎಂದು ಪ್ಯಾಟ್‌ ಕಮಿನ್ಸ್‌ಗೆ ಆ್ಯಂಕರ್ ಹೇಳಿದ್ದಾರೆ. ಇದಕ್ಕೆ ಆಸ್ಟ್ರೇಲಿಯಾ ನಾಯಕ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದ ಹುಡುಗಿಯರಿಗೆ ನಿಮ್ಮ ಮೇಲೆ ಕ್ರಷ್‌ ಇದೆ; ಪ್ಯಾಟ್ ಕಮಿನ್ಸ್ ಏನಂದ್ರು ನೋಡಿ -Video
ಭಾರತದ ಹುಡುಗಿಯರಿಗೆ ನಿಮ್ಮ ಮೇಲೆ ಕ್ರಷ್‌ ಇದೆ; ಪ್ಯಾಟ್ ಕಮಿನ್ಸ್ ಏನಂದ್ರು ನೋಡಿ -Video

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌, ಹಲವಾರು ಮಹತ್ವದ ಟೂರ್ನಿಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿ ಯಶಸ್ಸು ಗಳಿಸಿದವರು. ಅದರಲ್ಲೂ ಭಾರತ ತಂಡದ ವಿರುದ್ಧ ಇವರು ಭರ್ಜರಿ ಯಶಸ್ಸು ಪಡೆದಿದ್ದಾರೆ. ಕಳೆದ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್‌, ಏಕದಿನ ವಿಶ್ವಕಪ್‌ ಗೆಲುವು ಸೇರಿದಂತೆ ಈ ಬಾರಿಯ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲೂ ಆಸೀಸ್‌ ಗೆಲುವಿನಲ್ಲಿ ಕಮಿನ್ಸ್‌ ಪಾತ್ರ ಮಹತ್ವದ್ದು. 3-1 ಅಂತರದಿಂದ ಸರಣಿ ವಶಪಡಿಸಿಕೊಳ್ಳುವ ಮೂಲಕ, ತಮ್ಮ ಯಶಸ್ಸನ್ನು ವಿಸ್ತರಿಸಿದ್ದಾರೆ. ಕಳೆದೊಂದು ದಶಕದಲ್ಲಿ ಆಸೀಸ್‌ ಪಾಲಿಗೆ ಮರೀಚಿಕೆಯಾಗಿದ್ದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ, ಈ ಬಾರಿ ತಂಡಕ್ಕೆ ಒಲಿದಿದೆ.

ಕಳೆದ ಒಂದು ದಶಕದಿಂದ ಟೆಸ್ಟ್‌ ಸ್ವರೂಪದಲ್ಲಿ ಆಸೀಸ್‌ ತಂಡವನ್ನು ಹೆಚ್ಚು ಕಾಡಿದ್ದು ಭಾರತ. ಆದರೆ, ಈ ಬಾರಿ ಅದು ಸಾಧ್ಯವಾಗಲಿಲ್ಲ. ತವರಿನಲ್ಲೇ ನಡೆದ ಸರಣಿಯಲ್ಲಿ ಕಮಿನ್ಸ್ ನಾಯಕತ್ವದಲ್ಲಿ ಕಾಂಗರೂಗಳ ತಂಡ ಸರಣಿ ವಶಪಡಿಸಿಕೊಂಡಿತು. ಇದರೊಂದಿಗೆ ಜೂನ್ ತಿಂಗಳಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆಯಲಿರುವ WTC ಫೈನಲ್‌ಗೆ ಸ್ಥಾನ ಭದ್ರಪಡಿಸಿಕೊಂಡಿತು.

ಸರಣಿಯ ಜೊತೆಗೆ ಅಧಿಕೃತ ಪ್ರಸಾರಕರಾದ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ಯಾಟ್ ಕಮಿನ್ಸ್ ಸಂದರ್ಶನ ನಡೆಸಲಾಯ್ತು. ಇದರಲ್ಲಿ ಕೆಲವೊಂದು ಆಸಕ್ತಿಕರ ಪ್ರಶ್ನೆಗಳನ್ನು ಆಸೀಸ್‌ ನಾಯಕನಿಗೆ ಕೇಳಲಾಯ್ತು.

ನಿಮ್ಮ ಮೇಲೆ ಭಾರತೀಯರಿಗೆ ಕ್ರಶ್‌ ಇದೆ

“ಭಾರತದಲ್ಲಿ ನಿಮಗೆ ತುಂಬಾ ಅಭಿಮಾನಿಗಳಿದ್ದಾರೆ. ಅದರಲ್ಲೂ ಮಹಿಳೆಯರ ಸಂಖ್ಯೆ ತುಂಬಾ ದೊಡ್ಡದಿದೆ. ಹಲವರಿಗೆ ನಿಮ್ಮ ಮೇಲೆ ಮೋಹವಿದೆ (ಕ್ರಷ್). ಅವರಲ್ಲಿ ನಾನೂ ಒಬ್ಬಳು. ನನ್ನ ಆತ್ಮೀಯ ಸ್ನೇಹಿತರೂ ಸೇರಿದ್ದಾರೆ. ನಿಮ್ಮ ಸಂದರ್ಶನದ ವಿಷಯ ತಿಳಿದು ಅವಳು ನನಗೆ ಸಂದೇಶ ಕಳುಹಿಸಿದಳು, 'ಓಹ್ ನೀನು ಕಮಿನ್ಸ್ ಭೇಟಿಯಾಗುತ್ತಿರುವೆ. ನನಗೆ ತುಂಬಾ ಅಸೂಯೆಯಾಗುತ್ತದೆʼ. ಎಂದಳು. ನಿಮಗೆ ಮದುವೆಯಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ನೀವು ಸ್ತ್ರೀಯರ ಗಮನ ಸೆಳೆಯುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ” ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಆ್ಯಂಕರ್ ಸಾಹಿಬಾ ಬಾಲಿ ಕೇಳಿದ್ದಾರೆ.

ಸಂದರ್ಶನದ ಮಾತುಗಳ ವಿಡಿಯೋ

"ನಿಮಗೆ ಇದೆಲ್ಲಾ ಹೇಗೆ ಗೊತ್ತಾಗುತ್ತೆ ಎಂದು ನನಗೆ ಗೊತ್ತಿಲ್ಲ. ನಾನು ನನ್ನ ಕೆಲಸವನ್ನು ಮಾಡುತ್ತೇನೆ ಅಷ್ಟೇ" ಎಂದು ಪ್ಯಾಟ್ ಕಮಿನ್ಸ್ ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ "ನೀವು ಇದನ್ನು ಒಪ್ಪಿಕೊಳ್ಳುತ್ತೀರಾ?" ಎಂದು ಕೇಳಿದ್ದಾರೆ.

“ಖಂಡಿತಾ ಹೌದು. ಭಾರತದಲ್ಲಿ ತುಂಬಾ ಅಭಿಮಾನಿಗಳು ಇದ್ದಾರೆ. ಅವರು ತುಂಬಾ ಕ್ರೇಝಿ. ಆದರೆ ನಾವು ಹೆಚ್ಚಿನ ಸಮಯವನ್ನು ನಮ್ಮ ಕ್ರಿಕೆಟ್‌ ತಂಡದೊಂದಿಗೆ, ಹೋಟೆಲ್‌ನಲ್ಲಿ ಹಾಗೂ ಕುಟುಂಬದವರೊಂದಿಗೆ ಕಳೆಯುತ್ತೇವೆ. ಹೀಗಾಗಿ ಅಭಿಮಾನಿಗಳೊಂದಿಗೆ ಹೆಚ್ಚು ಬೆರೆಯುವುದಿಲ್ಲ. ಅವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ,” ಎಂದು ಕಮಿನ್ಸ್ ಉತ್ತರಿಸಿದ್ದಾರೆ.

Whats_app_banner