ಭಾರತ ಬಾರ್ಡರ್​-ಗವಾಸ್ಕರ್​ ಟ್ರೋಫಿ ಗೆಲ್ಲಲ್ಲ; ಸರಣಿಗೂ ಮುನ್ನ ರಿಕಿ ಪಾಂಟಿಂಗ್ ಮೈಂಡ್ ಗೇಮ್ ಶುರು
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ಬಾರ್ಡರ್​-ಗವಾಸ್ಕರ್​ ಟ್ರೋಫಿ ಗೆಲ್ಲಲ್ಲ; ಸರಣಿಗೂ ಮುನ್ನ ರಿಕಿ ಪಾಂಟಿಂಗ್ ಮೈಂಡ್ ಗೇಮ್ ಶುರು

ಭಾರತ ಬಾರ್ಡರ್​-ಗವಾಸ್ಕರ್​ ಟ್ರೋಫಿ ಗೆಲ್ಲಲ್ಲ; ಸರಣಿಗೂ ಮುನ್ನ ರಿಕಿ ಪಾಂಟಿಂಗ್ ಮೈಂಡ್ ಗೇಮ್ ಶುರು

Border-Gavaskar Trophy: ವರ್ಷದ ಅಂತ್ಯದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಗೆಲ್ಲುವ ತಂಡವನ್ನು ರಿಕಿ ಪಾಂಟಿಂಗ್ ಆರಿಸಿದ್ದಾರೆ.

ಭಾರತ ಬಾರ್ಡರ್​-ಗವಾಸ್ಕರ್​ ಟ್ರೋಫಿ ಗೆಲ್ಲೋದೇ ಡೌಟ್; ಸರಣಿಗೂ ಮುನ್ನ ರಿಕಿ ಪಾಂಟಿಂಗ್ ಮೈಂಡ್ ಗೇಮ್ ಶುರು
ಭಾರತ ಬಾರ್ಡರ್​-ಗವಾಸ್ಕರ್​ ಟ್ರೋಫಿ ಗೆಲ್ಲೋದೇ ಡೌಟ್; ಸರಣಿಗೂ ಮುನ್ನ ರಿಕಿ ಪಾಂಟಿಂಗ್ ಮೈಂಡ್ ಗೇಮ್ ಶುರು

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ಹಲವು ತಿಂಗಳು ಬಾಕಿ ಇದ್ದರೂ ಮಾಜಿ ನಾಯಕರೊಬ್ಬರು ಈಗಿನಿಂದಲೇ ಮೈಂಡ್​ಗೇಮ್​ ಶುರು ಮಾಡಿದ್ದಾರೆ. ಈ ಸಿರೀಸ್​​ನಲ್ಲಿ ಭಾರತ ಗೆಲ್ಲೋದಿಲ್ಲ, ಸೋಲುವುದು ಖಾಯಂ ಎಂದು ಹೇಳಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಇಂಡೋ-ಆಸೀಸ್ ನಡುವಿನ 5 ಪಂದ್ಯಗಳ ಸರಣಿ ನಡೆಯಲಿದೆ. 1991-92ರ ನಂತರ ಮೊದಲ ಬಾರಿಗೆ ಉಭಯ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿಯ ನಡೆಯಲಿದೆ.

ಈ 33 ವರ್ಷಗಳಲ್ಲಿ 3 ಮತ್ತು 4 ಪಂದ್ಯಗಳ ಟೆಸ್ಟ್ ಸರಣಿ ನಡೆದಿವೆ. ಅತಿ ಹೆಚ್ಚು ಬಾರಿ ಅಂದರೆ 4 ಪಂದ್ಯಗಳ ಸರಣಿ. ಆದರೆ ಸರಣಿಗೂ ಮುನ್ನ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಮಾತನಾಡಿ, ಈ ಸಿರೀಸ್​ನ ಕುರಿತು ಭವಿಷ್ಯ ನುಡಿದಿದ್ದಾರೆ. ಇದೊಂದು ಸ್ಪರ್ಧಾತ್ಮಕ ಸರಣಿಯಾಗಲಿದೆ. ಕಳೆದ ಎರಡು ಸೋಲುಗಳಿಂದ ಹೊರಬಂದು ಭಾರತದ ವಿರುದ್ಧ ಆಸ್ಟ್ರೇಲಿಯಾ ತಿರುಗಿ ಬೀಳುವುದು ಖಚಿತ. ಕಳೆದ ಎರಡೂ ಸರಣಿಗಳಲ್ಲಿ ಗೆದ್ದಿರುವ ಭಾರತ ಸೋಲುವುದು ಖಚಿತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 2 ಬಾರಿ ಕೇವಲ 4 ಟೆಸ್ಟ್ ಪಂದ್ಯಗಳು ನಡೆದಿವೆ. 5 ಪಂದ್ಯಗಳ ಟೆಸ್ಟ್ ಸರಣಿಗೆ ಮರಳಿದ್ದೇವೆ, ಇದು ಈ ಸರಣಿಯ ಮತ್ತೊಂದು ಪ್ರಮುಖ ವಿಷಯವಾಗಿದೆ. ನಾನು ಖಂಡಿತವಾಗಿಯೂ ಆಸ್ಟ್ರೇಲಿಯಾಕ್ಕೆ ಗೆಲ್ಲಲು ಸಲಹೆ ನೀಡಲಿದ್ದೇನೆ. ಆಸ್ಟ್ರೇಲಿಯಾ ವಿರುದ್ಧ ಹೇಳಿಕೆ ನೀಡಲು ಸಾಧ್ಯವಿಲ್ಲ. ಒಂದು ಪಂದ್ಯ ಡ್ರಾ ಸಾಧಿಸಬಹುದು ಅಥವಾ ಮಳೆಯಿಂದ ರದ್ದಾಗಬಹುದು ಎಂದುಕೊಂಡು ಆಸೀಸ್​ 3-1 ರಿಂದ ಮುನ್ನಡೆ ಪಡೆಯಲಿದ್ದೇವೆ ಎಂದು ಪಾಂಟಿಂಗ್ ಐಸಿಸಿ ರಿವ್ಯೂ ಶೋನಲ್ಲಿ ಹೇಳಿದ್ದಾರೆ.

ಕಳೆದ 4 ಸರಣಿಗಳಲ್ಲಿ ಏನಾಗಿತ್ತು?

2016/17ರಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ ಭಾರತ ತಂಡದೊಂದಿಗೆ ಉಳಿದಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಬ್ಯಾಕ್ ಟು ಬ್ಯಾಕ್ ಸರಣಿ ಗೆಲುವು ದಾಖಲಿಸಿದ ಏಕೈಕ ತಂಡವಾಗಿದೆ. ಕಳೆದ ನಾಲ್ಕು ಸರಣಿಗಳಲ್ಲೂ ಭಾರತವೇ ಗೆದ್ದಿದ್ದು (ಪ್ರತಿ ಸಲವೂ 2-1ರಲ್ಲಿ ಸರಣಿ ಗೆದ್ದಿರುವುದು ವಿಶೇಷ), ಸತತ ಐದನೇ ಹಾಗೂ ಆಸೀಸ್ ನೆಲದಲ್ಲಿ ಸತತ 3ನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಅದರಲ್ಲೂ 2020/21ರ ಸರಣಿಯು ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು ಭಾರತ ತಂಡ.

ಆಸೀಸ್ ಸರಣಿಗೂ ಮುನ್ನ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಆದರೆ ಅದಕ್ಕೂ ಮುನ್ನ ಒಂದು ತಿಂಗಳು ವಿರಾಮದಲ್ಲಿ ಇರಲಿದೆ. ತದ ನಂತರ ನ್ಯೂಜಿಲೆಂಡ್ ತಂಡವನ್ನು ತವರಿನಲ್ಲಿ ಎದುರಿಸಲಿದೆ. ಈ ಉಭಯ ತಂಡಗಳಲ್ಲೂ ತಲಾ 2 ಪಂದ್ಯಗಳ ಟೆಸ್ಟ್​ ಸರಣಿ ನಡೆಯಲಿದೆ. ಇದರ ನಂತರ ಆಸೀಸ್ ಎದುರು ಸೆಣಸಾಟ ನಡೆಸಲಿದೆ. ಈ ವರ್ಷದ ಅಂತ್ಯದ ವೇಳೆಗೆ ಒಟ್ಟು 9 ಟೆಸ್ಟ್​ ಸರಣಿಗಳನ್ನು ಆಡಲಿದೆ.

ಭಾರತ vs ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ವೇಳಾಪಟ್ಟಿ

  • ಮೊದಲ ಟೆಸ್ಟ್‌: ನವೆಂಬರ್ 22-26, ಪರ್ತ್
  • ಎರಡನೇ ಟೆಸ್ಟ್: ಡಿಸೆಂಬರ್ 6-10, ಅಡಿಲೇಡ್ (ಹಗಲು-ರಾತ್ರಿ)
  • ಮೂರನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್
  • ನಾಲ್ಕನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬೋರ್ನ್
  • ಐದನೇ ಟೆಸ್ಟ್: ಜನವರಿ 3-7, ಸಿಡ್ನಿ
  • ಅಭ್ಯಾಸ ಪಂದ್ಯ: ಪ್ರೈಮ್‌ ಮಿನಿಸ್ಟರ್ಸ್ ಇಲೆವೆನ್ vs ಭಾರತ, ನವೆಂಬರ್ 30, ಕ್ಯಾನ್ಬೆರಾ.

ಇದನ್ನೂ ಓದಿ: ಫಿಟ್‌ನೆಸ್‌ ವಿಚಾರದಲ್ಲಿ ಕೊಹ್ಲಿಗೆ 19ರ ಯುವಕನೂ ಸರಿಸಾಟಿಯಲ್ಲ; ವಿರಾಟ್ ವಿಶ್ವಕಪ್ ಭವಿಷ್ಯದ ಕುರಿತು ದಿಗ್ಗಜನ ಮಾತು ಕೇಳಿ

 

Whats_app_banner