ಬಾಕ್ಸಿಂಗ್‌ ಡೇ ಟೆಸ್ಟ್ ಡ್ರಾ ಮಾಡುವ ಭಾರತದ ಯೋಜನೆಗೆ ಆಸೀಸ್‌ ಅಡ್ಡಿ; ಗೆಲುವು ದೂರದ ಬೆಟ್ಟ, ಜಟಿಲವಾಯ್ತು WTC ಫೈನಲ್ ಲೆಕ್ಕಾಚಾರ
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಕ್ಸಿಂಗ್‌ ಡೇ ಟೆಸ್ಟ್ ಡ್ರಾ ಮಾಡುವ ಭಾರತದ ಯೋಜನೆಗೆ ಆಸೀಸ್‌ ಅಡ್ಡಿ; ಗೆಲುವು ದೂರದ ಬೆಟ್ಟ, ಜಟಿಲವಾಯ್ತು Wtc ಫೈನಲ್ ಲೆಕ್ಕಾಚಾರ

ಬಾಕ್ಸಿಂಗ್‌ ಡೇ ಟೆಸ್ಟ್ ಡ್ರಾ ಮಾಡುವ ಭಾರತದ ಯೋಜನೆಗೆ ಆಸೀಸ್‌ ಅಡ್ಡಿ; ಗೆಲುವು ದೂರದ ಬೆಟ್ಟ, ಜಟಿಲವಾಯ್ತು WTC ಫೈನಲ್ ಲೆಕ್ಕಾಚಾರ

ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡಕ್ಕೆ 340 ರನ್‌ಗಳ ಬೃಹತ್‌ ಗುರಿ ಸಿಕ್ಕಿದೆ. ಅಂತಿಮ ದಿನದಾಟದಲ್ಲಿ ಒಟ್ಟು 92 ಓವರ್‌ಗಳಲ್ಲಿ ಈ ಗುರಿ ಬೆನ್ನಟ್ಟಬೇಕಿದೆ. ಅತ್ತ ಆಸ್ಟ್ರೇಲಿಯಾ ತಂಡ ದಿನದಾಟದೊಳಗೆ 10 ವಿಕೆಟ್ ಪಡೆದರೆ ಪಂದ್ಯ ಗೆಲ್ಲಲಿದೆ. ಈ ನಡುವೆ ಡಬ್ಲ್ಯುಟಿಸಿ ಫೈನಲ್‌ ಲೆಕ್ಕಾಚಾರ ಕೂಡಾ ಕುತೂಹಲಕರವಾಗಿದೆ.

ಬಾಕ್ಸಿಂಗ್‌ ಡೇ ಟೆಸ್ಟ್ ಡ್ರಾ ಮಾಡುವ ಭಾರತದ ಯೋಜನೆಗೆ ಆಸೀಸ್‌ ಅಡ್ಡಿ; ಗೆಲುವು ದೂರದ ಬೆಟ್ಟ, ಜಟಿಲವಾಯ್ತು WTC ಫೈನಲ್ ಲೆಕ್ಕಾಚಾರ
ಬಾಕ್ಸಿಂಗ್‌ ಡೇ ಟೆಸ್ಟ್ ಡ್ರಾ ಮಾಡುವ ಭಾರತದ ಯೋಜನೆಗೆ ಆಸೀಸ್‌ ಅಡ್ಡಿ; ಗೆಲುವು ದೂರದ ಬೆಟ್ಟ, ಜಟಿಲವಾಯ್ತು WTC ಫೈನಲ್ ಲೆಕ್ಕಾಚಾರ (AP)

ಅತ್ತ ದಕ್ಷಿಣ ಆಫ್ರಿಕಾ ತಂಡವು ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌​​ಶಿಪ್ ಫೈನಲ್‌ಗೆ ಅರ್ಹತೆ ಪಡೆದಿದೆ. 2025ರ ಜೂನ್‌​ನಲ್ಲಿ ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಮೂರನೇ ಆವೃತ್ತಿಯ ಡಬ್ಲ್ಯುಟಿಸಿ (WTC 2025) ಫೈನಲ್‌ ಗೆ ಬರುವ ಇನ್ನೊಂದು ತಂಡ ಯಾವುದು ಎಂಬುದು ಇನ್ನಷ್ಟೇ ಅಂತಿಮವಾಗಬೇಕಿದೆ. ಡಬ್ಲ್ಯುಟಿಸಿ ಫೈನಲ್‌​ಗೇರಲು ಪಾಕ್ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾಗೆ ಒಂದು ಜಯ ಸಾಕಾಗಿತ್ತು. ಅದರಂತೆ ಮೊದಲ ಪಂದ್ಯದಲ್ಲೇ ರೋಚಕ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜೊತೆಗೆ ಮೊದಲ ಬಾರಿಗೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಿದೆ. ಈಗ ಎರಡನೇ ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಪೈಪೋಟಿ ಶುರುವಾಗಿದೆ. ಅದುವೇ ಭಾರತ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ.

ದಕ್ಷಿಣ ಆಫ್ರಿಕಾ ಗೆಲುವು ಸಾಧಿಸುತ್ತಿದ್ದಂತೆಯೇ ಭಾರತ ತಂಡದ ಮೇಲೆ ಒತ್ತಡ ಹೆಚ್ಚಿದೆ. ಮೆಲ್ಬೋರ್ನ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆಡುತ್ತಿದ್ದು ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಅದರಲ್ಲೂ ಭಾರತದ ಪಾಲಿಗೆ ಎರಡೂ ಪಂದ್ಯ ಗೆದ್ದರಷ್ಟೇ ಚಿಂತೆ ಕಡಿಮೆಯಾಗಲಿದೆ. ಸದ್ಯ ಅಂತಿಮ ದಿನದಾಟದ ಬಾಕ್ಸಿಂಗ್‌ ಡೇ ಟೆಸ್ಟ್​​​ ಪಂದ್ಯ ರೋಚಕ ಘಟ್ಟ ತಲುಪಿದ್ದು, ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಸೃಷ್ಟಿಯಾಗಿದೆ.

ಬಾಕ್ಸಿಂಗ್‌ ಡೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಆಸೀಸ್‌ ತಂಡ 234 ರನ್‌ ಗಳಿಸಿ ಆಲೌಟ್‌ ಆಗಿದೆ. ಅದರಂತೆ ಭಾರತ ತಂಡಕ್ಕೆ 340 ರನ್‌ಗಳ ಬೃಹತ್‌ ಗುರಿ ಸಿಕ್ಕಿದೆ. ಭಾರತವು 340 ರನ್‌ ಗುರಿ ತಲುಪಲು ಕೊನೆಯ ದಿನದಾಟದಲ್ಲಿ 92 ಓವರ್‌ಗಳು ಲಭ್ಯವಿದೆ. ಅಷ್ಟರೊಳಗೆ ಈ ಬೃಹತ್‌ ಗುರಿ ತಲುಪಿದರೆ ಭಾರತದ ಗೆಲುವು ಖಚಿತ. ಅತ್ತ ಆಸ್ಟ್ರೇಲಿಯಾ ತಂಡ ದಿನದಾಟದೊಳಗೆ 10 ವಿಕೆಟ್ ಪಡೆದರೆ ಪಂದ್ಯ ಗೆಲ್ಲಲಿದೆ.

ನಿಧಾನ ಗತಿಯ ಆರಂಭ ಪಡೆದ ಭಾರತ

ಭಾರತವು ಇನ್ನಿಂಗ್ಸ್‌ ಆರಂಭದಿಂದಲೂ ನಿಧಾನಗತಿಯ ಆಟಕ್ಕೆ ಮಣೆ ಹಾಕಿದೆ. ಅದನ್ನು ಗಮನಿಸಿದರೆ ತಂಡವು ಪಂದ್ಯ ಡ್ರಾ ಮಾಡುವ ಲೆಕ್ಕಾಚಾರದಲ್ಲಿದೆ. ವೇಗದ ಆಟಕ್ಕೆ ಕೈ ಹಾಕಿ ಪಂದ್ಯ ಸೋಲುವುದು ಭಾರತಕ್ಕೆ ಇಷ್ಟವಿಲ್ಲ. ಆದರೂ, ಊಟದ ವಿರಾಮದ ವೇಳೆಗೆ ತಂಡ 33 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದೆ. ಹಾಗಿದ್ದರೆ, ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡರೆ ಏನಾಗಲಿದೆ. ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭಾರತಕ್ಕಿರುವ ದಾರಿ ಏನು ಎಂಬುದನ್ನು ನೋಡೋಣ.

  1. ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು ಸರಣಿಯನ್ನು 3-1 ಅಂತರದಲ್ಲಿ ಗೆಲ್ಲಬೇಕು. ಅಂದರೆ ಎಂಸಿಜಿ ಟೆಸ್ಟ್‌ ಜೊತೆಗೆ, ಸಿಡ್ನಿಯಲ್ಲಿ ನಡೆಯಲಿರುವ ಐದನೇ ಟೆಸ್ಟ್ ಗೆಲ್ಲಬೇಕು. ಆಗ 60.53 ಶೇಕಡಾ ಅಂಕದೊಂದಿಗೆ ಡಬ್ಲ್ಯುಟಿಸಿ ಪ್ರವೇಶದ​ ಟಿಕೆಟ್​ ಖಚಿತವಾಗುತ್ತದೆ.
  2. ಭಾರತವು ಎಂಸಿಜಿ ಟೆಸ್ಟ್‌ ಡ್ರಾ ಮಾಡಿ, ಸಿಡ್ನಿ ಟೆಸ್ಟ್‌ ಗೆದ್ದರೆ ಲೆಕ್ಕಾಚಾರ ಭಿನ್ನವಾಗುತ್ತದೆ. ಅಂದರೆ, ಒಂದು ಟೆಸ್ಟ್ ಗೆದ್ದು ಮತ್ತು ಇನ್ನೊಂದು ಪಂದ್ಯ ಡ್ರಾ ಆದಾಗ ಪಿಸಿಟಿ 57.02 ಆಗುತ್ತದೆ. ಅಂತಹ ಸಂದರ್ಭದಲ್ಲಿ, ಆಸ್ಟ್ರೇಲಿಯಾ ಮುಂದೆ ಶ್ರೀಲಂಕಾದಲ್ಲಿ ಎರಡೂ ಟೆಸ್ಟ್‌ಗಳನ್ನು ಆಡಲಿದ್ದು, ಆ ಎರಡೂ ಪಂದ್ಯಗಳಲ್ಲಿ ಗೆದ್ದರೆ ಆಸೀಸ್‌ ಪಿಸಿಟಿ 58.77 ಆಗುತ್ತದೆ. ಹೀಗಾಗಿ ಭಾರತವು 57.02 ಅಂಕಗಳೊಂದಿಗೆ ಅರ್ಹತೆ ಪಡೆಯಬೇಕಾದರೆ ಶ್ರೀಲಂಕಾದಲ್ಲಿ ಆಸ್ಟ್ರೇಲಿಯಾ ಒಂದು ಗೆಲುವು ಮತ್ತು ಇನ್ನೊಂದು ಪಂದ್ಯದಲ್ಲಿ ಡ್ರಾ ಸಾಧಿಸಬೇಕು.
  3. ಆಸ್ಟ್ರೇಲಿಯಾದಲ್ಲಿ ಎಂಸಿಜಿ ಟೆಸ್ಟ್‌ ಸೋತು ಕೊನೆಯ ಟೆಸ್ಟ್‌ನಲ್ಲಿ ಭಾರತ ಗೆದ್ದರೆ, ಭಾರತದ ಅಂಕ 55.26 ಆಗುತ್ತದೆ. ಆಗ ಶ್ರೀಲಂಕಾವು ಆಸ್ಟ್ರೇಲಿಯಾವನ್ನು ಕನಿಷ್ಠ 1-0 ಅಂತರದಿಂದ ಸೋಲಿಸಿದರೆ ಮಾತ್ರ ಭಾರತ ಫೈನಲ್‌ ಆಸೆ ಜೀವಂತವಾಗಿಡಬಹುದು.

ಇದನ್ನೂ ಓದಿ | ಡಬ್ಲ್ಯುಟಿಸಿ ಫೈನಲ್​ಗೇರಿದ ದಕ್ಷಿಣ ಆಫ್ರಿಕಾ, ಉಳಿದ ಸ್ಥಾನಕ್ಕೆ 3 ತಂಡಗಳ ನಡುವೆ ಫೈಟ್, ಎರಡೂ ಪಂದ್ಯ ಗೆದ್ದರಷ್ಟೇ ಭಾರತಕ್ಕೆ ಉಳಿಗಾಲ

  1. ಒಂದು ವೇಳೆ ಭಾರತದ ಎರಡೂ ಪಂದ್ಯಗಳು ಡ್ರಾದಲ್ಲಿ ಅಂತ್ಯವಾದರೆ, ತಂಡದ ಪಿಸಿಟಿ 53.51 ಆಗುತ್ತದೆ. ಆಗ ಆಸ್ಟ್ರೇಲಿಯಾ ತಂಡಕ್ಕೆ ಶ್ರೀಲಂಕಾದಲ್ಲಿ ಕನಿಷ್ಠ ಒಂದು ಗೆಲುವು ಮಾತ್ರ ಅಗತ್ಯವಾಗುತ್ತದೆ.
  2. ಭಾರತವು ಒಂದು ಟೆಸ್ಟ್ ಡ್ರಾ ಸಾಧಿಸಿ, ಇನ್ನೊಂದರಲ್ಲಿ ಸೋತರೆ ಫೈನಲ್‌ ರೇಸ್‌ನಿಂದ ಹೊರಗುಳಿಯುತ್ತದೆ. ಇಂತಹ ಸಂದರ್ಭದಲ್ಲಿ ಆಸ್ಟ್ರೇಲಿಯವು ಶ್ರೀಲಂಕಾದಲ್ಲಿ 2-0 ಅಂತರದಿಂದ ಸರಣಿ ಸೋತರೂ, ಅಂಕಪಟ್ಟಿಯಲ್ಲಿ ಭಾರತಕ್ಕಿಂತ ಮೇಲೆ ಇರಲಿದೆ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope

Whats_app_banner