ಎರಡನೇ ಟಿ20ಯಲ್ಲಿ ಭಾರತ ವಿರುದ್ಧ ಆಸೀಸ್ ವನಿತೆಯರಿಗೆ ಜಯ; ಸರಣಿ ಸಮಬಲ
India Women vs Australia Women: ಆಸೀಸ್ ಪರ ಎಲಿಸ್ ಪೆರ್ರಿ ಅಜೇಯ 34 ರನ್ ಗಳಿಸಿದರು. ಲಿಚ್‌ಫೀಲ್ಡ್ ಅಜೇಯ 18 ರನ್ ಪೇರಿಸಿದರೆ, ನಾಯಕಿ ಹೀಲಿ 26 ರನ್ ಗಳಿಸಿದರು. ಬೆತ್ ಮೂನಿ 20 ಮತ್ತು ತಹ್ಲಿಯಾ ಮೆಕ್‌ಗ್ರಾತ್ 19 ರನ್ ಪೇರಿಸಿದರು.
ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆಸೀಸ್ ಮಹಿಳಾ ತಂಡ ಭರ್ಜರಿ ಜಯ ಗಳಿಸಿದೆ. ಸರಣಿಯ ಮೊದಲ ಪಂದ್ಯದಲ್ಲಿ ಸೋತಿದ್ದ ಕಾಂಗರೂಗಳು, ಗೆಲುವಿನ ಲಯಕ್ಕೆ ಮರಳಿದ್ದಾರೆ. ಅಲ್ಲದೆ ಸದ್ಯ ಮೂರು ಪಂದ್ಯಗಳ ಸರಣಿಯನ್ನು ಸಮಬಲಗೊಳಿಸಿದ್ದಾರೆ. ಮುಂದೆ ನಡೆಯಲಿರುವ ಮೂರನೇ ಹಾಗೂ ಅಂತಿಮ ಪಂದ್ಯವು ಉಭಯ ತಂಡಗಳ ಪಾಲಿಗೂ ನಿರ್ಣಾಯಕವಾಗಲಿದೆ.
ಇಂದು (ಜನವರಿ 7, ಭಾನುವಾರ) ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಅಲಿಸ್ಸಾ ಹೀಲಿ ಪಡೆಯು 6 ವಿಕೆಟ್‌ಗಳಿಂದ ಗೆದ್ದಿದೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತವು, ಆಸೀಸ್ ಬೌಲರ್‌ಗಳ ದಾಳಿಗೆ ಸಿಲುಕಿ 8 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಸೀಸ್ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಕೇವಲ 4 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತು.
ಇದನ್ನೂ ಓದಿ | ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ರೋಹಿತ್ ಶರ್ಮಾ ನಾಯಕ, ಕೊಹ್ಲಿ ಕಂಬ್ಯಾಕ್
ಆಸೀಸ್ ಪರ ನಾಯಕಿ ಹೀಲಿ 26 ರನ್ ಗಳಿಸಿದರೆ, ಮೂನಿ 20 ರನ್ ಗಳಿಸಿ ಔಟಾದರು. ತಹ್ಲಿಯಾ ಮೆಕ್‌ಗ್ರಾತ್ 19 ರನ್ ಪೇರಿಸಿದರೆ, ಎಲಿಸ್ ಪೆರ್ರಿ ಅಜೇಯ 34 ರನ್ ಗಳಿಸಿದರು. ಲಿಚ್‌ಫೀಲ್ಡ್ ಕೂಡಾ ಅಜೇಯ 18 ರನ್ ಪೇರಿಸಿದರು.
ಭಾರತದ ಪರ ಸ್ಮೃತಿ ಮಂಧಾನ 23 ರನ್ ಗಳಿಸಿದರೆ, ಜೆಮಿಮಾ ರೋಡ್ರಿಗಸ್ 13 ರನ್ ಕಲೆ ಹಾಕಿದರು. ಮತ್ತೆ ಕಳಪೆ ಪ್ರದರ್ಶನ ನೀಡಿದ ನಾಯಕಿ ಕೌರ್ 6 ರನ್ ಗಳಿಸಿ ಔಟಾದರು. ವೇಗದ ಆಟಕ್ಕೆ ಕೈಹಾಕಿದ ರಿಚಾ ಘೋಷ್ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 30 ರನ್ ಗಳಿಸಿದ ದೀಪ್ತಿ ಶರ್ಮಾ ರನೌಟ್ ಆದರು.
ಇದನ್ನೂ ಓದಿ | ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಎರಡನೇ ಟಿ20; ಸರಣಿ ಗೆಲುವಿನ ಮೇಲೆ ಭಾರತ ಮಹಿಳಾ ತಂಡದ ಕಣ್ಣು
ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ನಡೆಸಿತು. ಭಾರತದ ಬೌಲರ್‌ಗಳ ದಾಳಿಗೆ ಕುಸಿಯಿತು. 19.1 ಓವರ್ಗಳಲ್ಲಿ 141 ರನ್ಗಳಿಗೆ ಆಲೌಟ್ ಆಯಿತು.ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ 137 ರನ್ಗಳ ಜೊತೆಯಾಟವಾಡಿ 9 ವಿಕೆಟ್ಗಳ ಗೆಲುವು ತಂದುಕೊಟ್ಟರು.
ವಿಡಿಯೋ ನೋಡಿ | Rishabh shettey : ಕಾಂತಾರ -1 ಚಿತ್ರೀಕರಣ ನಡುವಲ್ಲೇ ದೈವಕ್ಕೆ ತಲೆಬಾಗಿದ ರಿಷಬ್ ; ಸಿನಿಮಾಕ್ಕೆ ದೈವದ ಅಭಯ