Australian Cricket Awards: ಟ್ರಾವಿಸ್ ಹೆಡ್ ಅಲ್ಲ, 34 ವರ್ಷದ ಆಟಗಾರನಿಗೆ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ, ಸಂಪೂರ್ಣ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  Australian Cricket Awards: ಟ್ರಾವಿಸ್ ಹೆಡ್ ಅಲ್ಲ, 34 ವರ್ಷದ ಆಟಗಾರನಿಗೆ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ, ಸಂಪೂರ್ಣ ಪಟ್ಟಿ ಇಲ್ಲಿದೆ

Australian Cricket Awards: ಟ್ರಾವಿಸ್ ಹೆಡ್ ಅಲ್ಲ, 34 ವರ್ಷದ ಆಟಗಾರನಿಗೆ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ, ಸಂಪೂರ್ಣ ಪಟ್ಟಿ ಇಲ್ಲಿದೆ

Australian Cricket Awards: 2024ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿಗಳನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ.

Australian Cricket Awards: ಟ್ರಾವಿಸ್ ಹೆಡ್ ಅಲ್ಲ, 34 ವರ್ಷದ ಆಟಗಾರನಿಗೆ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ, ಸಂಪೂರ್ಣ ಪಟ್ಟಿ ಇಲ್ಲಿದೆ
Australian Cricket Awards: ಟ್ರಾವಿಸ್ ಹೆಡ್ ಅಲ್ಲ, 34 ವರ್ಷದ ಆಟಗಾರನಿಗೆ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ, ಸಂಪೂರ್ಣ ಪಟ್ಟಿ ಇಲ್ಲಿದೆ

ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ತನ್ನ ವಾರ್ಷಿಕ ಪ್ರಶಸ್ತಿಗಳನ್ನು ಫೆಬ್ರವರಿ 1ರ ಸೋಮವಾರ ಪ್ರಕಟಿಸಿದೆ. 2024ರ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪುರುಷ-ಮಹಿಳಾ ಆಟಗಾರರನ್ನು ಪುರಸ್ಕರಿಸಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆಲ್ಲದಿದ್ದರೂ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 3-1 ಅಂತರದಿಂದ ಗೆದ್ದು ಬೀಗಿತ್ತು. ಇದರೊಂದಿಗೆ 10 ವರ್ಷಗಳ ನಂತರ ಭಾರತದ ವಿರುದ್ಧ ಟ್ರೋಫಿ ಮರಳಿ ಪಡೆಯಿತು. ಆಟಗಾರರ ಕೊಡುಗೆಗಾಗಿ ಆಸ್ಟ್ರೇಲಿಯನ್ ಕ್ರಿಕೆಟ್ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಶೇನ್ ವಾರ್ನ್ ಪುರುಷರ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ವೇಗಿ ಜೋಶ್ ಹೇಜಲ್​ವುಡ್ ಪಾತ್ರರಾಗಿದ್ದಾರೆ. 34 ವರ್ಷದ ಹೇಜಲ್​ವುಡ್ ಮತದಾನದ ಅವಧಿಯಲ್ಲಿ ಆಸ್ಟ್ರೇಲಿಯಾ ಪರ 9 ಟೆಸ್ಟ್‌ಗಳಲ್ಲಿ ಕೇವಲ 5 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. 13.16ರ ಸರಾಸರಿಯಲ್ಲಿ 30 ವಿಕೆಟ್‌ ಪಡೆದಿದ್ದರು. ಏತನ್ಮಧ್ಯೆ, ಟ್ರಾವಿಸ್ ಹೆಡ್ ಅವರು ಅಲನ್ ಬಾರ್ಡರ್ ಪದಕಕ್ಕೆ ಮುತ್ತಿಕ್ಕಿದರು. 2024ರಲ್ಲಿ ಹೆಡ್ 35 ಇನ್ನಿಂಗ್ಸ್‌ಗಳಲ್ಲಿ 1399 ರನ್ ಗಳಿಸಿದ್ದರು. ಅವರು 4 ಶತಕ, 5 ಅರ್ಧ ಶತಕ ಸಹ ಸಿಡಿಸಿದ್ದರು.

ಅನ್ನಾಬೆಲ್ ಸದರ್ಲ್ಯಾಂಡ್ ಮಹಿಳೆಯರ ವಿಭಾಗದಲ್ಲಿ ಬೆಲಿಂಡಾ ಕ್ಲಾರ್ಕ್ ಪದಕ ವಿಜೇತರಾಗಿ ಕಿರೀಟವನ್ನು ಅಲಂಕರಿಸಿದ್ದಾರೆ. ಅವರು 2024 ರಲ್ಲಿ 615 ರನ್‌ ಸಿಡಿಸುವುದರ ಜೊತೆಗೆ 37 ವಿಕೆಟ್‌ಗಳನ್ನೂ ಕಿತ್ತಿದ್ದಾರೆ. ಆಡಮ್ ಜಂಪಾ ಅವರು ಟಿ20ಐ ಕ್ರಿಕೆಟ್​​​ನಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕೆ ವರ್ಷದ ಟಿ20 ಪ್ರಶಸ್ತಿ ಗೆದ್ದರು. 21 ಪಂದ್ಯಗಳಲ್ಲಿ 35 ವಿಕೆಟ್ ಕಿತ್ತಿದ್ದಾರೆ. ಟಿ20ಐನಲ್ಲಿ ಆಸ್ಟ್ರೇಲಿಯಾ ಪರ ಅತ್ಯಧಿಕ ವಿಕೆಟ್ ಕಬಳಿಸಿರುವ ಹಿನ್ನೆಲೆ ವರ್ಷದ ಅತ್ಯುತ್ತಮ ಟಿ20ಐ ಕ್ರಿಕೆಟಿಗ ಎಂಬ ಗೌರವ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ, ಆಶ್ ಗಾರ್ಡ್ನರ್ ವರ್ಷದ ಏಕದಿನ ಆಟಗಾರ್ತಿ ಎಂದು ಹೆಸರಿಸಲ್ಪಟ್ಟರೆ, ಬೆತ್ ಮೂನಿ ಟಿ20ಐ ವರ್ಷದ ಆಟಗಾರ್ತಿಯಾಗಿ ಆಯ್ಕೆಯಾದರು. ಏತನ್ಮಧ್ಯೆ, ಮಾಜಿ ಆಸ್ಟ್ರೇಲಿಯನ್ ಬ್ಯಾಟರ್ ಮತ್ತು ಏಕದಿನಗಳಲ್ಲಿ ಅತ್ಯುತ್ತಮ ಫಿನಿಷರ್‌ಗಳಲ್ಲಿ ಒಬ್ಬರಾದ ಮೈಕೆಲ್ ಬೆವನ್, ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡರು.

ಆಸ್ಟ್ರೇಲಿಯನ್ ಕ್ರಿಕೆಟ್‌ನಲ್ಲಿ ಎಲ್ಲಾ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ

  1. ಶೇನ್ ವಾರ್ನ್ ವರ್ಷದ ಪುರುಷರ ಟೆಸ್ಟ್ ಆಟಗಾರ - ಜೋಶ್ ಹೇಜಲ್‌ವುಡ್
  2. ಅಲನ್ ಬಾರ್ಡರ್ ಪದಕ - ಟ್ರಾವಿಸ್ ಹೆಡ್
  3. ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿ - ಅನ್ನಾಬೆಲ್ ಸದರ್ಲ್ಯಾಂಡ್
  4. ವರ್ಷದ ಪುರುಷರ ಏಕದಿನ ಆಟಗಾರ - ಟ್ರಾವಿಸ್ ಹೆಡ್
  5. ವರ್ಷದ ಮಹಿಳಾ ಏಕದಿನ ಆಟಗಾರ್ತಿ - ಆ್ಯಶ್ಲೇ ಗಾರ್ಡ್ನರ್
  6. ಪುರುಷರ ಟಿ20ಐ ವರ್ಷದ ಆಟಗಾರ - ಆಡಮ್ ಜಂಪಾ
  7. ವರ್ಷದ ಮಹಿಳಾ ಟಿ20ಐ ಆಟಗಾರ್ತಿ - ಬೆತ್ ಮೂನಿ
  8. ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್ - ಮೈಕೆಲ್ ಬೆವನ್
  9. ಕಮ್ಯುನಿಟಿ ಇಂಪ್ಯಾಕ್ಟ್ ಅವಾರ್ಡ್ - ಕ್ಯಾಮರೂನ್ ಗ್ರೀನ್
  10. ವರ್ಷದ ಪುರುಷರ ದೇಶೀಯ ಆಟಗಾರ - ಬ್ಯೂ ವೆಬ್‌ಸ್ಟರ್
  11. ವರ್ಷದ ಮಹಿಳಾ ದೇಶೀಯ ಆಟಗಾರ್ತಿ - ಜಾರ್ಜಿಯಾ ವೋಲ್
  12. ಬ್ರಾಡ್ಮನ್ ವರ್ಷದ ಯುವ ಕ್ರಿಕೆಟಿಗ -: ಸ್ಯಾಮ್ ಕಾನ್ಸ್ಟಾಸ್
  13. ಬೆಟ್ಟಿ ವಿಲ್ಸನ್ ವರ್ಷದ ಯುವ ಕ್ರಿಕೆಟಿಗ - ಕ್ಲೋಯ್ ಐನ್ಸ್‌ವರ್ಟ್

Whats_app_banner