Mitchell Starc: 9 ವರ್ಷಗಳ ಬಳಿಕ ಐಪಿಎಲ್‌ಗೆ ವಾಪಸ್‌ ಬರುತ್ತಿರುವ ಆಸ್ಟ್ರೇಲಿಯಾ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್-australian star bowler mitchell starc returning to ipl after 9 years indian premier league cricket news in kannada rmy ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Mitchell Starc: 9 ವರ್ಷಗಳ ಬಳಿಕ ಐಪಿಎಲ್‌ಗೆ ವಾಪಸ್‌ ಬರುತ್ತಿರುವ ಆಸ್ಟ್ರೇಲಿಯಾ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್

Mitchell Starc: 9 ವರ್ಷಗಳ ಬಳಿಕ ಐಪಿಎಲ್‌ಗೆ ವಾಪಸ್‌ ಬರುತ್ತಿರುವ ಆಸ್ಟ್ರೇಲಿಯಾ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್

ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 9 ವರ್ಷಗಳ ಬಳಿಕ ಮತ್ತೆ ಐಪಿಎಲ್‌ನಲ್ಲಿ ಆಡಲು ಮನಸು ಮಾಡಿದ್ದಾರೆ. ಅವರು ಕೊನೆಯ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದರು.

ಆರ್‌ಸಿಬಿಯ ಪಂದ್ಯದ ವೇಳೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಟೀಂ ಇಂಡಿಯಾ ಬ್ಯಾಟರ್ ಕಿಂಗ್ ಕೊಹ್ಲಿ (HT)
ಆರ್‌ಸಿಬಿಯ ಪಂದ್ಯದ ವೇಳೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಟೀಂ ಇಂಡಿಯಾ ಬ್ಯಾಟರ್ ಕಿಂಗ್ ಕೊಹ್ಲಿ (HT)

ಬೆಂಗಳೂರು: ಆಸ್ಟ್ರೇಲಿಯಾದ (Australia) ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (Mitchell Starc) ಮುಂದಿನ ವರ್ಷದ ಐಪಿಎಲ್‌ (IPL 2024) ಆಡುವುದಾಗಿ ಘೋಷಣೆ ಮಾಡಿದ್ದಾರೆ.

ಸ್ಟಾರ್ಕ್ 2015ರಲ್ಲಿ ಕೊನೆಯ ಬಾರಿಗೆ ಚಟುಕು ಕ್ರಿಕೆಟ್‌ನಲ್ಲಿ ಆಡಿದ್ದರು. ಆ ಬಳಿಕ ಅವರು ಆಸ್ಟ್ರೇಲಿಯಾ ತಂಡದ ಮೇಲೆ ಹೆಚ್ಚು ಗಮನಹರಿಸಲು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಐಪಿಎಲ್‌ನಿಂದ ದೂರ ಉಳಿದಿದ್ದರು.

2024ರ ಐಪಿಎಲ್ ಟೂರ್ನಿಗೆ ನಡೆಯಲಿರುವ ಮಿನಿ ಹರಾಜಿನಲ್ಲಿ ಭಾಗವಹಿಸಲು ಸ್ಟಾರ್ಕ್ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲಿದ್ದಾರೆ. 2018ರ ಐಪಿಎಲ್‌ನ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ ಕೂಡ ಇದ್ದರು. ಈ ಎಡಗೈ ವೇಗಿಯನ್ನು ಕೋಲ್ಕತ್ತ ನೈಟ್ ರೈಡರ್ಸ್ ತಂಡ 9.4 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದರೆ ಸ್ಟಾರ್ಕ್ ಬೆನ್ನುನೋವಿನಿಂದಾಗಿ ಇಡೀ ಆವೃತ್ತಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು. ಆ ಬಳಿಕ ಐಪಿಎಲ್‌ಗೆ ಬರಲೇ ಇಲ್ಲ. 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅವರು ಕೊನೆಯ ಬಾರಿಗೆ ಆಡಿದ್ದರು.

‘ಐಸಿಸಿ ಟಿ20 ವಿಶ್ವಕಪ್‌ಗೆ ಐಪಿಎಲ್ ನೆರವಾಗುತ್ತೆ’

ಮುಂದಿನ ವರ್ಷ ಅವಕಾಶ ಸಿಕ್ಕರೆ ಐಪಿಎಲ್‌ನಲ್ಲಿ ಆಡಲಿದ್ದೇನೆ ಎಂದು ಸ್ಟಾರ್ಕ್ ಸ್ಪಷ್ಟಪಡಿಸಿದ್ದಾರೆ. ಐಪಿಎಲ್ ಮುಂಬರುವ ಟಿ20 ವಿಶ್ವಕಪ್‌ಗೆ ಐಪಿಎಲ್ ಉತ್ತಮ ಅಭ್ಯಾಸವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವರ್ಷ ಖಂಡಿತಾ ಐಪಿಎಲ್‌ಗೆ ಮರುಳುತ್ತಿದ್ದೇನೆ. ಟಿ20 ವಿಶ್ವಕಪ್‌ಗೆ ಇದು ಉತ್ತಮ ಅಭ್ಯಾಸವಾಗಿ ಕಾರ್ಯನಿರ್ವಹಿಸಲಿದೆ. ಟಿ20 ವಿಶ್ವಕಪ್‌ಗೆ ಗುರಿಯಾಗಿರುವವರು ಇಂಡಿಯನ್ ಪ್ರೀಮಿಯರ್ ಲೀಗ್‌ ಅನ್ನು ಉತ್ತಮ ಅವಕಾಶ ಎಂದು ಪರಿಗಣಿಸಬೇಕು. ಹಾಗಾಗಿ ಐಪಿಎಲ್ ಮಿನಿ ಹರಾಜಿನಲ್ಲಿ ನನ್ನ ಹೆಸರನ್ನು ನೋಂದಣಿ ಮಾಡಿಕೊಳ್ಳುತ್ತೇನೆ ಎಂದು ಸ್ಟಾರ್ಕ್ ತಿಳಿಸಿದ್ದಾರೆ.

ಆಸೀಸ್ ಪರ 100 ಟೆಸ್ಟ್ ಪಂದ್ಯಗಳನ್ನು ಆಡುವ ಗುರಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆದಿರುವ ಅವರು 100 ಟೆಸ್ಟ್ ಪಂದ್ಯಗಳನ್ನು ಆಡಲು ಉತ್ತಮ ಸ್ಥಿತಿಯಲ್ಲಿರಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾ ತಂಡದಲ್ಲಿ ಮಿಚೆಲ್ ಸ್ಟಾರ್ಕ್ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಿಶ್ವದ ನಂಬರ್ 1 ಬೌಲರ್ ಜೋಸ್ ಹೇಜಲ್‌ವುಡ್, ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ಸ್ಟಾರ್ಕ್ ಅವರೊಂದಿಗೆ ಆಸ್ಟ್ರೇಲಿಯಾ ಬಲಿಷ್ಠ ಬೌಲಿಂಗ್ ಲೈನ್ ಹೊಂದಿದೆ.

ಐಸಿಸಿ ವಿಶ್ವಕಪ್ ನಂತರ ತಮ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಸ್ಟಾರ್ಕ್ ಸ್ಪಷ್ಟಪಡಿಸಿದ್ದಾರೆ. ಅನೇಕ ಯುವ ವೇಗಿಗಳು ಬರುತ್ತಿರುವಾಗ ವಿಶ್ವಕಪ್ ನಂತರ ಸ್ಟಾರ್ಕ್ ಏಕದಿನ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳುವ ಸಾಧ್ಯತೆ ಇದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಚೆಲ್ ಸ್ಟ್ರಾಕ್ ಪ್ರದರ್ಶನ

ಮಿಚೆಲ್ ಸ್ಟಾರ್ಕ್ ಈವರೆಗೆ 82 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 27.61 ಸರಿಸರಿಯಲ್ಲಿ 333 ವಿಕೆಟ್‌ಗಳನ್ನು ಪಡೆದಿದ್ದಾರೆ. 2 ಬಾರಿ 10 ವಿಕೆಟ್ ಹಾಗೂ 14 ಬಾರಿ 5 ವಿಕೆಟ್‌ಗಳ ಗೊಂಚಲನ್ನು ತಮ್ಮದಾಗಿಸಿಕೊಂಡಿದ್ದಾರೆ.

ಏಕದಿನ ಮಾದರಿಯಲ್ಲಿ 110 ಪಂದ್ಯಗಳನ್ನು ಆಡಿದ್ದು, 22.1 ಸರಾಸರಿಯಲ್ಲಿ 219 ವಿಕೆಟ್‌ಗಳನ್ನು ಪಡೆದಿದ್ದಾರೆ. 9 ಬಾರಿ 5 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. 58 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, 22.92 ಸರಾಸರಿಯಲ್ಲಿ 73 ವಿಕೆಟ್ ಕಬಳಿಸಿದ್ದಾರೆ.

ಸ್ಟಾರ್ಕ್ ಐಪಿಎಲ್‌ ಅಂಕಿ ಅಂಶಗಳು

ಐಪಿಎಲ್‌ನಲ್ಲಿ 27 ಪಂದ್ಯಗಳನ್ನು ಆಡಿದ್ದು, 20.38 ಸರಾಸರಿಯಲ್ಲಿ 34 ವಿಕೆಟ್ ಗಳಿಸಿದ್ದಾರೆ. 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್-2ರ ಕೊನೆಯ ಐಪಿಎಲ್ ಪಂದ್ಯದಲ್ಲಿ ಸ್ಟಾರ್ಕ್ ಆಡಿದ್ದರು.