ಭಾರತದ ಐತಿಹಾಸಿಕ ಟೆಸ್ಟ್‌ ಗೆಲುವಿಗೆ ಸಾಕ್ಷಿಯಾದ ದಿ ಗಬ್ಬಾ ಸ್ಟೇಡಿಯಂ ಕೆಡವಲು ಮುಂದಾದ ಆಸ್ಟ್ರೇಲಿಯಾ; ಕಾರಣವೇನು?
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದ ಐತಿಹಾಸಿಕ ಟೆಸ್ಟ್‌ ಗೆಲುವಿಗೆ ಸಾಕ್ಷಿಯಾದ ದಿ ಗಬ್ಬಾ ಸ್ಟೇಡಿಯಂ ಕೆಡವಲು ಮುಂದಾದ ಆಸ್ಟ್ರೇಲಿಯಾ; ಕಾರಣವೇನು?

ಭಾರತದ ಐತಿಹಾಸಿಕ ಟೆಸ್ಟ್‌ ಗೆಲುವಿಗೆ ಸಾಕ್ಷಿಯಾದ ದಿ ಗಬ್ಬಾ ಸ್ಟೇಡಿಯಂ ಕೆಡವಲು ಮುಂದಾದ ಆಸ್ಟ್ರೇಲಿಯಾ; ಕಾರಣವೇನು?

2032ರ ಒಲಿಂಪಿಕ್ಸ್ ಕ್ರೀಡಾಕೂಟ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಆವರೆಗೆ ಗಬ್ಬಾ ಸ್ಟೇಡಿಯಂ ಇರಲಿದ್ದು, ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಒಲಿಂಪಿಕ್ಸ್‌ ಕ್ರೀಡಾಕೂಟ ಮುಗಿದ ಬಳಿಕ ಗಬ್ಬಾ ಸ್ಟೇಡಿಯಂ ಕೆಡವಲಾಗುತ್ತಿದೆ.

ಬ್ರಿಸ್ಬೇನ್‌ನ ದಿ ಗಬ್ಬಾ ಸ್ಟೇಡಿಯಂ ಕೆಡವಲು ಮುಂದಾದ ಆಸ್ಟ್ರೇಲಿಯಾ
ಬ್ರಿಸ್ಬೇನ್‌ನ ದಿ ಗಬ್ಬಾ ಸ್ಟೇಡಿಯಂ ಕೆಡವಲು ಮುಂದಾದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾದ ದಿ ಗಬ್ಬಾ ಸ್ಟೇಡಿಯಂ ಹೆಸರು ಹೇಳಿದಾಗಲೇ, ಭಾರತದ 2021ರ ಐತಿಹಾಸಿಕ ಟೆಸ್ಟ್ ಗೆಲುವು ನೆನಪಿಗೆ ಬರುತ್ತದೆ. ಬ್ರಿಸ್ಬೇನ್‌ ನಗರದಲ್ಲಿರುವ ಸ್ಟೇಡಿಯಂ ಅನ್ನು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಸರ್ಕಾರ ಕೆಡವಲು ಮುಂದಾಗಿದೆ. ಇದಕ್ಕೆ ಕಾರಣ 2032ರ ಒಲಿಂಪಿಕ್ಸ್‌. ಕ್ರೀಡೆಯಲ್ಲಿ ಭಾರಿ ಮುಂಚೂಣಿಯಲ್ಲಿರುವ ಆಸ್ಟ್ರೇಲಿಯಾ, 2023ರ ಒಲಿಂಪಿಕ್ಸ್ ಆತಿಥ್ಯಕ್ಕೆ ಸಜ್ಜಾಗಿದೆ. ಹೀಗಾಗಿ ಕ್ವೀನ್ಸ್‌ಲ್ಯಾಂಡ್ ಸರ್ಕಾರದ ಯೋಜನೆಯ ಭಾಗವಾಗಿ ದಿ ಗಬ್ಬಾ ಎಂದು ಕರೆಯಲ್ಪಡುವ ಬ್ರಿಸ್ಬೇನ್ ಕ್ರಿಕೆಟ್ ಮೈದಾನವನ್ನು ನೆಲಸಮಗೊಳಿಸಲು ಸಜ್ಜಾಗಿದೆ. ಇದಕ್ಕಾಗಿ ಏಳು ವರ್ಷಗಳ ನೀಲನಕ್ಷೆ ಸಿದ್ದಪಡಿಸಿದೆ.

ಕ್ವೀನ್ಸ್‌ಲ್ಯಾಂಡ್‌ನ ರಾಜಧಾನಿಯಾಗಿರುವ ಬ್ರಿಸ್ಬೇನ್‌ ನಗರದಲ್ಲಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ಈ ಹಿಂದೆ ಎರಡು ಬಾರಿ ಒಲಿಂಪಿಕ್ಸ್‌ ನಡೆಯಲಿದೆ. 1956ರ ಮೆಲ್ಬೋರ್ನ್ ಮತ್ತು 2000ದಲ್ಲಿ ಸಿಡ್ನಿ ಒಲಿಂಪಿಕ್ಸ್‌ ನಡೆದಿತ್ತು. ಅದಾದ ಬಳಿಕ ಇದು ಮೂರನೇ ಬಾರಿಗೆ ಆಸ್ಟ್ರೇಲಿಯಾದಲ್ಲಿ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದೆ. ಹೀಗಾಗಿ ಬ್ರಿಸ್ಬೇನ್‌ನಲ್ಲಿ 63,000 ಆಸನಗಳ ಸಾಮರ್ಥ್ಯ ಇರುವ ಹೊಸ ಕ್ರೀಡಾಂಗಣವನ್ನು ನಿರ್ಮಿಸಲು ಮುಂದಾಗಿದ್ದು, ಇದಕ್ಕಾಗಿ 3.8 ಬಿಲಿಯನ್ ಯುಎಸ್ ಡಾಲರ್ ವೆಚ್ಚವಾಗಲಿದೆ. ನೂತನ ಕ್ರೀಡಾಂಗಣವು ಒಲಿಂಪಿಕ್ಸ್‌ ಕ್ರೀಡಾಕೂಟದ ಕ್ರೀಡಾಂಗಣವಾಗಿ ಕಾರ್ಯನಿರ್ವಹಿಸುತ್ತದೆ.

ಬ್ರಿಸ್ಬೇನ್‌ಗೆ 2032ರ ಒಲಿಂಪಿಕ್ಸ್ ಆಯೋಜನೆಯ ಹಕ್ಕು ಸಿಕ್ಕಿದಾಗಿನಿಂದ, ಗಬ್ಬಾ ಸ್ಟೇಡಿಯಂ ಉಳಿಯುವ ಬಗ್ಗೆ ಸಂದೇಹಗಳಿದ್ದವು. ಇಲ್ಲೇ ಉದ್ಘಾಟನಾ ಸಮಾರಂಭ ಆಯೋಜಿಸಬಹುದೆಂಬ ಸಲಹೆಗಳಿದ್ದರೂ, ಅದು ಸಾಧ್ಯವಾಗುತ್ತಿಲ್ಲ.

ಗಬ್ಬಾದ ಬದಲಿಗೆ ಹೊಸ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಗಳು

ಬ್ರಿಸ್ಬೇನ್‌ನಲ್ಲಿ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಹೊಸ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ಕ್ವೀನ್ಸ್‌ಲ್ಯಾಂಡ್ ಸರ್ಕಾರ ಘೋಷಿಸಿದೆ. ಇಲ್ಲೇ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭ ನಡೆಸಲಾಗುತ್ತಿದೆ. ಹೊಸ ವಿಕ್ಟೋರಿಯಾ ಪಾರ್ಕ್ ಕ್ರೀಡಾಂಗಣವು ಒಲಿಂಪಿಕ್ಸ್ ಮುಗಿದ ನಂತರ ಬ್ರಿಸ್ಬೇನ್‌ನ ಪ್ರಮುಖ ಕ್ರಿಕೆಟ್ ಕ್ರೀಡಾಂಗಣವಾಗಲಿದೆ. ಹೀಗಾಗಿ ಗಬ್ಬಾ ಸ್ಎಟೇಡಿಯಂ ಅಗತ್ದ್ದುಯವಿರುವುದಿಲ್ಲ. ಗಬ್ಬಾ ಸ್ಟೇಡಿಯಂನಂತೆಯೇ ಹೊಸ ಕ್ರೀಡಾಂಗಣ ಕೂಡಾ ಬಹು-ಕ್ರೀಡಾ ಕ್ರೀಡಾಂಗಣವಾಗಿರುತ್ತದೆ (multi-sport arena). ಹೀಗಾಗಿ ಒಲಿಂಪಿಕ್ಸ್‌ ಬಳಿಕ ಗಬ್ಬಾವನ್ನು ಕೆಡವಲು ಚಿಂತಿಸಲಾಗಿದೆ.

ಆದಾಗ್ಯೂ, 2032ರ ಆವೃತ್ತಿಯ ಒಲಿಂಪಿಕ್ಸ್ ವೇಳೆಗೆ ಕ್ರಿಕೆಟ್ ನಡೆದರೆ, ಗಬ್ಬಾದಲ್ಲಿ ಒಲಿಂಪಿಕ್ಸ್‌ ವೇಳೆಗೆ ಕೊನೆಯ ಬಾರಿಗೆ ಕ್ರಿಕೆಟ್‌ ಪಂದ್ಯ ನಡೆಯಲಿದೆ. 2032ರ ಒಲಿಂಪಿಕ್ಸ್‌ನ ಫೈನಲ್ ಪಂದ್ಯವು ಗಬ್ಬಾ ಕ್ರೀಡಾಂಗಣವನ್ನು ಕೆಡವುವ ಮೊದಲು ಈ ಸ್ಥಳದಲ್ಲಿ ನಡೆಯಲಿರುವ ಕೊನೆಯ ಕ್ರಿಕೆಟ್ ಪಂದ್ಯವಾಗಬಹುದು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner