ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20ಐ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್; ವಿರಾಟ್ ಕೊಹ್ಲಿಯ ದೀರ್ಘಕಾಲದ ವಿಶ್ವದಾಖಲೆ ಮುರಿದ ಬಾಬರ್ ಅಜಮ್

ಟಿ20ಐ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್; ವಿರಾಟ್ ಕೊಹ್ಲಿಯ ದೀರ್ಘಕಾಲದ ವಿಶ್ವದಾಖಲೆ ಮುರಿದ ಬಾಬರ್ ಅಜಮ್

Babar Azam : ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್​, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ.

ಟಿ20ಐ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್; ವಿರಾಟ್ ಕೊಹ್ಲಿಯ ದೀರ್ಘಕಾಲದ ವಿಶ್ವದಾಖಲೆ ಮುರಿದ ಬಾಬರ್ ಅಜಮ್
ಟಿ20ಐ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್; ವಿರಾಟ್ ಕೊಹ್ಲಿಯ ದೀರ್ಘಕಾಲದ ವಿಶ್ವದಾಖಲೆ ಮುರಿದ ಬಾಬರ್ ಅಜಮ್

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ (T20Is) ಟೀಮ್ ಇಂಡಿಯಾ ಬ್ಯಾಟಿಂಗ್ ಸೂಪರ್​ ಸ್ಟಾರ್​ ವಿರಾಟ್ ಕೊಹ್ಲಿ (Virat Kohli) ಅವರ ವಿಶ್ವದಾಖಲೆಯೊಂದನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ (Babar Azam) ಮುರಿದಿದ್ದಾರೆ. ಟಿ20ಐ ಕ್ರಿಕೆಟ್​​ನಲ್ಲಿ ಅಧಿಕ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಬಾಬರ್ ಪಾತ್ರರಾಗಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಗುಂಪು ಹಂತದ 11ನೇ ಪಂದ್ಯದಲ್ಲಿ ಅಮೆರಿಕ (United States vs Pakistan) ವಿರುದ್ದ 15 ರನ್ ಗಳಿಸಿದ ವೇಳೆ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಯುಎಸ್‌ಎ ವಿರುದ್ಧದ ಟಿ20 ವಿಶ್ವಕಪ್ 2024ರ ತಮ್ಮ ಮೊದಲ ಪಂದ್ಯದಲ್ಲಿ 43 ಎಸೆತಗಳನ್ನು ಎದುರಿಸಿದ ಬಾಬರ್​ 3 ಬೌಂಡರಿ, 2 ಸಿಕ್ಸರ್​ ಸಹಿತ 44 ರನ್ ಗಳಿಸಿದರು. ಆದರೆ, ಅರ್ಧಶತಕದ ಅಂಚಿನಲ್ಲಿದ್ದಾಗ ಜಸ್​ದೀಪ್ ಸಿಂಗ್ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. ಅರ್ಧಶತಕ ಸಿಡಿಸಲು ಸಾಧ್ಯ ಆಗದಿದ್ದರೂ ನಾಯಕ ಬಾಬರ್ ಅಜಮ್ ತಮ್ಮ ಹೆಸರನ್ನು ಇತಿಹಾಸ ಪುಸ್ತಕದಲ್ಲಿ ಹೊಸ ಪುಟವೊಂದನ್ನು ತೆರೆಯುವಲ್ಲಿ ಯಶಸ್ವಿಯಾದರು.

ಬಾಬರ್ ಅಜಮ್ ದಾಖಲೆ

ಪಂದ್ಯದ 11ನೇ ಓವರ್‌ನಲ್ಲಿ ಬೌಂಡರಿ ಸಿಡಿಸಿ 15 ರನ್​​ಗಳ ಗಡಿ ದಾಡಿದ ಬಾಬರ್, ವಿರಾಟ್ ಕೊಹ್ಲಿ ಅವರ ದೀರ್ಘಕಾಲದ ವಿಶ್ವ ದಾಖಲೆಯನ್ನು ಮುರಿದರು. ಬಾಬರ್ ಈಗ ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಂದ್ಯಕ್ಕೂ ಬಾಬರ್​ 4023 ರನ್ ಗಳಿಸಿದ್ದರು. ಕೊಹ್ಲಿ 4038 ರನ್ ಗಳಿಸಿದ್ದರು. ಹಲವು ವರ್ಷಗಳಿಂದ ಕೊಹ್ಲಿಯೇ ಟಿ20ಐ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.

ಭಾರತದ ಆರಂಭಿಕ ಟಿ20 ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಕೊಹ್ಲಿ ಕೇವಲ ಒಂದು ರನ್ ಗಳಿಸಿದ್ದರು. ಕೊಹ್ಲಿ 118 ಪಂದ್ಯಗಳಲ್ಲಿ 51.11 ಸರಾಸರಿ ಮತ್ತು 137.95 ಸ್ಟ್ರೈಕ್ ರೇಟ್‌ನಲ್ಲಿ 4038 ರನ್ ಗಳಿಸಿದ್ದಾರೆ. 120 ಪಂದ್ಯಗಳಲ್ಲಿ ಬಾಬರ್ ಸರಾಸರಿ 41.34 ಮತ್ತು ಸ್ಟ್ರೈಕ್ ರೇಟ್ 129.82 ಹೊಂದಿದ್ದು 4067 ರನ್ ಸಿಡಿಸಿದ್ದಾರೆ. ಬಾಬರ್​, ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20ಐ ಕ್ರಿಕೆಟ್‌ನಲ್ಲಿ 4000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಭಾನುವಾರ (ಜೂನ್ 9) ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯದಲ್ಲಿ ಟಿ20ಐನಲ್ಲಿ 4000 ರನ್ ಕ್ಲಬ್ ಸೇರಿರುವ ಬಾಬರ್, ಕೊಹ್ಲಿ ಮತ್ತು ರೋಹಿತ್ ಮೂವರು ಸಹ ಆಡಲಿದ್ದಾರೆ. ಹೀಗಾಗಿ, ಯಾರು ಯಾರ ದಾಖಲೆ ಮುರಿಯುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ರೋಹಿತ್ ಬುಧವಾರ (ಜೂನ್ 5) ಐರ್ಲೆಂಡ್ ವಿರುದ್ಧ ಅರ್ಧಶತಕದೊಂದಿಗೆ 4000 ರನ್ ಕ್ಲಬ್ ಪ್ರವೇಶಿಸಿದ 3ನೇ ಆಟಗಾರ ಎನಿಸಿಕೊಂಡರು.

ಆಟಗಾರಇನ್ನಿಂಗ್ಸ್ರನ್ಸ್ಟ್ರೈಕ್ ರೇಟ್
ಬಾಬರ್ ಅಜಮ್1134067129.82
ವಿರಾಟ್ ಕೊಹ್ಲಿ1104038137.95
ರೋಹಿತ್ ಶರ್ಮಾ1444026139.98

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ