ಬಾಬರ್-ರಿಜ್ವಾನ್ ಡ್ರಾಪ್, ತಂಡಕ್ಕೆ ನೂತನ ನಾಯಕ; ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಪಾಕಿಸ್ತಾನ ಸಂಭಾವ್ಯ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಬರ್-ರಿಜ್ವಾನ್ ಡ್ರಾಪ್, ತಂಡಕ್ಕೆ ನೂತನ ನಾಯಕ; ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಪಾಕಿಸ್ತಾನ ಸಂಭಾವ್ಯ Xi

ಬಾಬರ್-ರಿಜ್ವಾನ್ ಡ್ರಾಪ್, ತಂಡಕ್ಕೆ ನೂತನ ನಾಯಕ; ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಪಾಕಿಸ್ತಾನ ಸಂಭಾವ್ಯ XI

Pakistan Likely XI: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕೆ ಪಾಕಿಸ್ತಾನ ಪ್ಲೇಯಿಂಗ್​ 11 ಹೇಗಿರಲಿದೆ? ಟಿ20 ತಂಡದಲ್ಲಿ ಏನೆಲ್ಲಾ ಬದಲಾವಣೆಯಾಗಿದೆ? ಇಂತಿದೆ ವಿವರ.

ಬಾಬರ್-ರಿಜ್ವಾನ್ ಡ್ರಾಪ್, ತಂಡಕ್ಕೆ ನೂತನ ನಾಯಕ; ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಪಾಕಿಸ್ತಾನ ಸಂಭಾವ್ಯ XI
ಬಾಬರ್-ರಿಜ್ವಾನ್ ಡ್ರಾಪ್, ತಂಡಕ್ಕೆ ನೂತನ ನಾಯಕ; ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಪಾಕಿಸ್ತಾನ ಸಂಭಾವ್ಯ XI

ಮಾರ್ಚ್ 16 ರಿಂದ ಪಾಕಿಸ್ತಾನ ಕ್ರಿಕೆಟ್ ತಂಡವು 5 ಪಂದ್ಯಗಳ ಟಿ20ಐ ಸರಣಿಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಸೆಣಸಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೀನಾಯವಾಗಿ ಸೋತಿರುವ ಪಾಕಿಸ್ತಾನ, ಟಿ20ಐ ಸರಣಿಯಲ್ಲಿ ಹೊಸ ಆರಂಭ ಪಡೆಯಲು ಯತ್ನಿಸುತ್ತಿದೆ. ಆ ಮೂಲಕ 2026ರ ಟಿ20 ವಿಶ್ವಕಪ್‌ಗೆ ತಂಡದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದೆ. ಐಸಿಸಿ ಈವೆಂಟ್ ಅನ್ನು ಗಮನದಲ್ಲಿಟ್ಟುಕೊಂಡು ಬಲಿಷ್ಠ ಅಡಿಪಾಯಕ್ಕೆ ಮುಂದಾಗಿದೆ.

ಈಗಾಗಲೇ ದಿಟ್ಟ ಕ್ರಮ ಕೈಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ದಿಟ್ಟ ಕ್ರಮಗಳನ್ನೂ ಕೈಗೊಂಡಿದೆ. ಹಿರಿಯ ಆಟಗಾರರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಟಿ20ಐ ಫಾರ್ಮೆಟ್​ನಿಂದ ಹೊರಗಿಟ್ಟು ಅಚ್ಚರಿ ಮೂಡಿಸಿದೆ. ಇವರು ಮಾತ್ರವಲ್ಲ, ಮೊಹಮ್ಮದ್ ಹಸ್ನೈನ್, ಸೈಮ್ ಅಯೂಬ್, ಸುಫಿಯಾನ್ ಮೋಕಿಮ್ ಮತ್ತು ತಯ್ಯಬ್ ತಾಹಿರ್ ಅವರನ್ನೂ ಟಿ20ಯಿಂದ ಕೈಬಿಡಲಾಗಿದೆ. ಸಲ್ಮಾನ್ ಅಲಿ ಆಘಾ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದ್ದರೆ, ಶದಾಬ್ ಖಾನ್ ಉಪನಾಯಕನಾಗಿ ಮರಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20ಗೆ ಪಾಕಿಸ್ತಾನ ಸಂಭಾವ್ಯ XI

ಮೊಹಮ್ಮದ್ ಹ್ಯಾರಿಸ್, ಉಸ್ಮಾನ್ ಖಾನ್, ಒಮೈರ್ ಯೂಸುಫ್, ಅಬ್ದುಲ್ ಸಮದ್, ಸಲ್ಮಾನ್ ಅಲಿ ಅಘಾ (ನಾಯಕ), ಶಾದಾಬ್ ಖಾನ್, ಖುಷ್ದಿಲ್ ಶಾ, ಜಹಾಂದಾದ್ ಖಾನ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಮೊಹಮ್ಮದ್ ಅಬ್ಬಾಸ್

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಟಿ20 ಸರಣಿ ವೇಳಾಪಟ್ಟಿ

  • ಮೊದಲ ಟಿ20ಐ - ಮಾರ್ಚ್ 16 (ಭಾನುವಾರ) - ಬೆಳಿಗ್ಗೆ 6:45 ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್‌ 
  • 2ನೇ ಟಿ20ಐ - ಮಾರ್ಚ್ 18 (ಮಂಗಳವಾರ) - ಬೆಳಿಗ್ಗೆ 6:45 ಯೂನಿವರ್ಸಿಟಿ ಓವಲ್, ಡ್ಯುನೆಡಿನ್‌
  • 3ನೇ ಟಿ20ಐ - ಮಾರ್ಚ್ 21 (ಶುಕ್ರವಾರ) - ಬೆಳಿಗ್ಗೆ 11:45 ಈಡನ್ ಪಾರ್ಕ್, ಆಕ್ಲೆಂಡ್‌
  • 4ನೇ ಟಿ20ಐ - ಮಾರ್ಚ್ 23 (ಭಾನುವಾರ) - ಬೆಳಿಗ್ಗೆ 11:45 ಮೌಂಟ್ ಮೌಂಗನುಯಿ
  • 5ನೇ ಟಿ20ಐ - ಮಾರ್ಚ್ 26 (ಬುಧವಾರ) - ಬೆಳಿಗ್ಗೆ 11:45 ವೆಲ್ಲಿಂಗ್ಟನ್‌ನ ಸ್ಕೈ ಕ್ರೀಡಾಂಗಣ

ಪಾಕಿಸ್ತಾನ ಟಿ20 ತಂಡ

ಸಲ್ಮಾನ್ ಅಲಿ ಅಘಾ (ನಾಯಕ), ಶದಾಬ್ ಖಾನ್ (ಉಪನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ಹಸನ್ ನವಾಜ್, ಜಹಾಂದಾದ್ ಖಾನ್, ಖುಷ್​ದಿಲ್ ಶಾ, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಲಿ, ಮೊಹಮ್ಮದ್ ಹ್ಯಾರಿಸ್, ಮುಹಮ್ಮದ್ ಇರ್ಫಾನ್ ಖಾನ್, ಒಮೈರ್ ಬಿನ್ ಯೂಸಫ್, ಶಾಹೀನ್ ಶಾ ಅಫ್ರಿದಿ, ಸುಫ್ಯಾನ್ ಮೋಕಿಮ್ ಮತ್ತು ಉಸ್ಮಾನ್ ಖಾನ್.

ನ್ಯೂಜಿಲೆಂಡ್ ಟಿ20 ತಂಡ

ಮೈಕೆಲ್ ಬ್ರೇಸ್‌ವೆಲ್ (ನಾಯಕ), ಫಿನ್ ಅಲೆನ್, ಮಾರ್ಕ್ ಚಾಪ್‌ಮನ್, ಜಾಕೋಬ್ ಡಫಿ, ಝಾಕ್ ಫೌಲ್ಕ್ಸ್ (4-5ನೇ ಪಂದ್ಯ), ಮಿಚ್ ಹೇ, ಮ್ಯಾಟ್ ಹೆನ್ರಿ (4-5ನೇ ಪಂದ್ಯ), ಕೈಲ್ ಜೇಮಿಸನ್ (1-3ನೇ ಪಂದ್ಯ), ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ವಿಲ್ ಒ'ರೂರ್ಕ್ (1-3ನೇ ಪಂದ್ಯ), ಟಿಮ್ ರಾಬಿನ್ಸನ್, ಬೆನ್ ಸಿಯರ್ಸ್, ಟಿಮ್ ಸೀಫರ್ಟ್, ಇಶ್ ಸೋಧಿ.

ನ್ಯೂಜಿಲೆಂಡ್ vs ಪಾಕಿಸ್ತಾನ ನೇರ ಪ್ರಸಾರ

ಟಿ20ಐ ಸರಣಿಯು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದ್ದು, ನೇರ ಪ್ರಸಾರವು ಸೋನಿಲಿವ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner