ವಿರಾಟ್ ಕೊಹ್ಲಿಯಂತೆ ನಾಯಕತ್ವ ತೊರೆಯಿರಿ; ಬಾಬರ್ ಅಜಮ್​ಗೆ ಪಾಕಿಸ್ತಾನ ಮಾಜಿ ನಾಯಕ ಸಲಹೆ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿಯಂತೆ ನಾಯಕತ್ವ ತೊರೆಯಿರಿ; ಬಾಬರ್ ಅಜಮ್​ಗೆ ಪಾಕಿಸ್ತಾನ ಮಾಜಿ ನಾಯಕ ಸಲಹೆ

ವಿರಾಟ್ ಕೊಹ್ಲಿಯಂತೆ ನಾಯಕತ್ವ ತೊರೆಯಿರಿ; ಬಾಬರ್ ಅಜಮ್​ಗೆ ಪಾಕಿಸ್ತಾನ ಮಾಜಿ ನಾಯಕ ಸಲಹೆ

Babar Azam: ಪಾಕ್ ಮಾಜಿ ಕ್ರಿಕೆಟಿಗ ಇಂತಿಖಾಬ್ ಅಲಂ (Intikhab Alam) ಅವರು, ವಿರಾಟ್ ಕೊಹ್ಲಿ (Virat Kohli) ಅವರ ದಾರಿಯನ್ನು‌ ಅನುಕರಣೆ ಮಾಡಿ ಎಂದು ಬಾಬರ್​ ಅಜಮ್​ಗೆ ಸಲಹೆ ನೀಡಿದ್ದಾರೆ.

ಬಾಬರ್ ಅಜಮ್​ಗೆ ಪಾಕಿಸ್ತಾನ ಮಾಜಿ ನಾಯಕ ಇಂತಿಖಾಬ್ ಆಲಂ ಸಲಹೆ.
ಬಾಬರ್ ಅಜಮ್​ಗೆ ಪಾಕಿಸ್ತಾನ ಮಾಜಿ ನಾಯಕ ಇಂತಿಖಾಬ್ ಆಲಂ ಸಲಹೆ.

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC ODI World Cup 2023) ಪಾಕಿಸ್ತಾನ ತಂಡವು (Pakistan Cricket Team) ಸತತ ಗೆಲುವುಗಳ ಬಳಿಕ‌ ಇದೀಗ ಸತತ ಎರಡು ಸೋಲಿಗೆ ಶರಣಾಗಿದೆ. ಅಕ್ಟೋಬರ್ 14ರಂದು ಭಾರತದ ಎದುರು ಮತ್ತು ಅಕ್ಟೋಬರ್ 20ರಂದು ಆಸ್ಟ್ರೇಲಿಯಾ ವಿರುದ್ಧ ಘೋರ ಪರಾಭವಗೊಂಡಿದೆ. ತಂಡದ ಕಳಪೆ ಪ್ರದರ್ಶನಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ಅದರೊಂದಿಗೆ ನಾಯಕ ಬಾಬರ್ ಅಜಮ್ (Babar Azam) ಅವರನ್ನೂ ಎಳೆದು ತರಲಾಗುತ್ತಿದ್ದು, ಪಾಕ್ ಮಾಜಿ ಕ್ರಿಕೆಟಿಗರು ಟೀಕಾಸ್ತ್ರ ನಡೆಸುತ್ತಿದ್ದಾರೆ.

ಪಾಕಿಸ್ತಾನ ತಂಡದ ಹಿನ್ನಡೆಗೆ ನಾಯಕ ಬಾಬರ್ ಅಜಮ್ ಕೂಡ‌ ಕಾರಣ. ಅವರ ಅಟ್ಟರ್ ಫ್ಲಾಪ್ ಪ್ರದರ್ಶನದಿಂದ ಪಾಕ್ ಸತತ ಸೋಲಿಗೆ ಶರಣಾಗುತ್ತಿದೆ‌. ಸತತ ವೈಫಲ್ಯ ಅನುಭವಿಸುತ್ತಿರುವ ಬಾಬರ್, ಟೀಮ್ ಇಂಡಿಯಾ ಎದುರು 50 ರನ್ ಬಾರಿಸಿದ್ದರು. ಆದರೆ ಉಳಿದ ಪಂದ್ಯಗಳಲ್ಲಿ 18, 10, 5 ರನ್ ಗಳಿಸಿದ್ದಾರೆ. ಹಾಗಾಗಿ ಅವರು‌ ಕೆಟ್ಟ ಪ್ರದರ್ಶನ ನೀಡಿದ ಪರಿಣಾಮ ನಾಯಕತ್ವ ತೊರೆಯುವಂತೆ ಮಾಜಿ ಕ್ರಿಕೆಟಿಗರು ಮನವಿ ಮಾಡಿದ್ದಾರೆ. ಕ್ರಿಕೆಟ್ ತಜ್ಞರು ಸಹ ಇದೇ ಅಭಿಪ್ರಾಯ ಹೊರಹಾಕುತ್ತಿದ್ದಾರೆ.

‘ವಿರಾಟ್ ಕೊಹ್ಲಿಯನ್ನು ಅನುಸರಿಸಿ’

ಇಂಡಿಯನ್ ಎಕ್ಸ್‌ಪ್ರೆಸ್‌ ‌ಜೊತೆ ಮಾತನಾಡಿದ ಪಾಕ್ ಮಾಜಿ ಕ್ರಿಕೆಟಿಗ ಇಂತಿಖಾಬ್ ಅಲಂ (Intikhab Alam) ಅವರು, ವಿರಾಟ್ ಕೊಹ್ಲಿ (Virat Kohli) ಅವರ ದಾರಿಯನ್ನು‌ ಅನುಕರಣೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಕೊಹ್ಲಿಯಂತೆ ನಾಯಕತ್ವ ತೊರೆದು ಬ್ಯಾಟಿಂಗ್ ಕಡೆ ಹೆಚ್ಚು ಹೆಚ್ಚು‌ ಆಸಕ್ತಿ ವಹಿಸಬೇಕು ಎಂದು ಆಲಂ ಅವರು ಹೇಳಿದ್ದಾರೆ. ವಿರಾಟ್ 2021/22 ರಲ್ಲಿ ಟಿ20 ವಿಶ್ವಕಪ್‌ ನಂತರ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದರು. ಆದರೆ ಏಕದಿನ ಕ್ರಿಕೆಟ್‌ ನಾಯಕತ್ವದಿಂದ ವಜಾಗೊಳಿಸಲಾಗಿತ್ತು.

ಬಾಬರ್ ಕುರಿತು‌ ಮಾತನಾಡಿದ ಪಾಕ್ ಮಾಜಿ ನಾಯಕ ಇಂತಿಖಾಬ್ ಅಲಂ ಅವರು, ವಿರಾಟ್ ಕೊಹ್ಲಿ ಅವರ ಆಟಕ್ಕೆ ಮನಸೋತಿದ್ದಾರೆ. ಬಾಬರ್ ಕೊಹ್ಲಿಯನ್ನು ಅನುಸರಿಸಬೇಕು. ಅವರು ತಮ್ಮ‌ ಬ್ಯಾಟಿಂಗ್ ಅನ್ನು ಆನಂದಿಸಲು ಮತ್ತು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಗಳಲ್ಲಿ ಒಬ್ಬರಾಗಲು ನಾಯಕತ್ವ ತ್ಯಜಿಸಿದ್ದರು. ಅದೇ ರೀತಿ ಕೂಡ ನೀವು (ಬಾಬರ್) ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

‘ಒತ್ತಡ ಹೆಚ್ಚಾಗ್ತಿದೆ’

ಬಾಬರ್ ಅಜಮ್ ಅವರಿಗೆ ಹೊರಗೆ ಮತ್ತು ಒಳಗೆ ಒತ್ತಡ ಹೆಚ್ಚಾಗಿದೆ. ನನಗನಿಸಿದ ಪ್ರಕಾರ ಅವರು ಕ್ಯಾಪ್ಟನ್ಸಿ ತೊರೆಯಬೇಕು. ಇದು ನನ್ನ ಅಭಿಪ್ರಾಯ ಅಷ್ಟೆ. ತಾನು ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಆತನಿಕೆ ಇಲ್ಲ. ನಾಯಕನಾಗಿ ಆಟಗಾರರೊಂದಿಗೆ ಉತ್ತಮ ಮಾತುಕತೆ ನಡೆಸಬೇಕು. ಆದರೆ ಸಹ ಆಟಗಾರರು, ಬೌಲರ್‌ಗಳ ಜೊತೆ ಮಾತನಾಡಿದ್ದೇ ಕಂಡಿಲ್ಲ. ಸಂವಹನದ ಕೊರತೆ ಎದ್ದು ಕಾಡುತ್ತಿದೆ. ಒತ್ತಡದಿಂದ ಅವರ‌ ಪ್ರದರ್ಶನವೂ ಕುಸಿಯುತ್ತಿದೆ. ಇಂತಹ ಅವಧಿಯಲ್ಲಿ ಯೋಚಿಸುವುದು ಅಗತ್ಯ ಎಂದು ಸೂಚಿಸಿದ್ದಾರೆ.

ಬಾಬರ್​ ನಾಯಕತ್ವದಲ್ಲಿ ಪಾಕ್ ತಂಡ

2020ರಲ್ಲಿ ನಾಯಕನಾಗಿ ನೇಮಕಗೊಂಡ ಬಾಬರ್ ಅಜಮ್ ಅದೇ ವರ್ಷ ಟೆಸ್ಟ್, ಟಿ20 ಕ್ಯಾಪ್ಟನ್ ಆಗಿಯೂ ತಂಡದ ಜವಾಬ್ದಾರಿ ಪಡೆದರು. ಆ ಮೂಲಕ ಮೂರು ಫಾರ್ಮೆಟ್ ಗಳಲ್ಲೂ ತಂಡದ ಸಾರಥಿಯಾದರು. ಆದರೆ ಅವರ ನಾಯಕತ್ವದಲ್ಲಿ ಪಾಕ್ ಯಾವುದೇ ಟ್ರೋಫಿ ಗೆದ್ದಿಲ್ಲ. 2021ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ಸ್, 2022ರ ಟಿ20 ವಿಶ್ವಕಪ್‌ನಲ್ಲಿ ಫೈನಲ್ಸ್‌ನಲ್ಲಿ ಸೋಲು‌ ಕಂಡಿತು. ಅಲ್ಲದೆ, 2022ರ ಏಷ್ಯಾಕಪ್ ಫೈನಲ್‌ನಲ್ಲಿ ಸೋಲು ಕಂಡಿತ್ತು. ಈ ವರ್ಷದ ಏಷ್ಯಾಕಪ್ ಸೂಪರ್-4 ಹಂತದಲ್ಲಿ ಪಾಕ್ ಹೊರಬಿದ್ದಿತ್ತು.

Whats_app_banner