ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ, ರೋಹಿತ್​ ವಿಶ್ವದಾಖಲೆ ಮೇಲೆ ಬಾಬರ್ ಅಜಮ್ ಕಣ್ಣು; 215 ರನ್ ಗಳಿಸಿದ್ರೆ ಟಿ20ಯಲ್ಲಿ ಈತನದ್ದೇ ದರ್ಬಾರ್​

ವಿರಾಟ್ ಕೊಹ್ಲಿ, ರೋಹಿತ್​ ವಿಶ್ವದಾಖಲೆ ಮೇಲೆ ಬಾಬರ್ ಅಜಮ್ ಕಣ್ಣು; 215 ರನ್ ಗಳಿಸಿದ್ರೆ ಟಿ20ಯಲ್ಲಿ ಈತನದ್ದೇ ದರ್ಬಾರ್​

Babar Azam Record : ಟಿ20ಐ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಅವರ ವಿಶ್ವ ದಾಖಲೆಯನ್ನು ಮುರಿಯಲು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಸಜ್ಜಾಗಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ ವಿಶ್ವದಾಖಲೆ ಮೇಲೆ ಬಾಬರ್ ಅಜಮ್ ಕಣ್ಣು; ಇನ್ನು 215 ರನ್ ಗಳಿಸಿದರೆ ಈತನದ್ದೇ ದರ್ಬಾರ್​
ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ ವಿಶ್ವದಾಖಲೆ ಮೇಲೆ ಬಾಬರ್ ಅಜಮ್ ಕಣ್ಣು; ಇನ್ನು 215 ರನ್ ಗಳಿಸಿದರೆ ಈತನದ್ದೇ ದರ್ಬಾರ್​

ನ್ಯೂಜಿಲೆಂಡ್ ತಂಡದ​ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಯಶಸ್ವಿಯಾಗಿ ಮುಗಿಸಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್​, ಈಗ ಐರ್ಲೆಂಡ್ ಮತ್ತು ಇಂಗ್ಲೆಂಡ್​ ಎದುರಿನ ಚುಟುಕು ಸರಣಿಗೆ ಸಿದ್ಧವಾಗಿದ್ದಾರೆ. ಇದರೊಂದಿಗೆ ಜೂನ್ 1ರಿಂದ ಶುರುವಾಗುವ ಟಿ20 ವಿಶ್ವಕಪ್​ಗೆ ತಂಡವನ್ನು ಸಂಯೋಜನೆ ಉತ್ತಮಗೊಳಿಸಲು ಬಾಬರ್​ ಕಾಯುತ್ತಿದ್ದಾರೆ. ಇದರ ನಡುವೆ ವಿರಾಟ್ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಅವರ ವಿಶ್ವದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಏಕದಿನ ವಿಶ್ವಕಪ್​ನಲ್ಲಿ ಸೋಲಿನ ಹೊಣೆ ಹೊತ್ತು ಮೂರು ಫಾರ್ಮೆಟ್​ಗಳ ಕ್ಯಾಪ್ಟನ್ಸಿಗೆ ಬಾಬರ್ ಅಜಮ್​ ನಿವೃತ್ತಿ ಘೋಷಿಸಿದ್ದರು. ಆದರೀಗ ಟಿ20 ವಿಶ್ವಕಪ್​ ಟೂರ್ನಿಗೂ ಮುಂಚಿತವಾಗಿ ವೈಟ್​ಬಾಲ್ ಕ್ರಿಕೆಟ್​ಗೆ ನಾಯಕನಾಗಿ ಮರುನೇಮಕಗೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯು 2-2ರಲ್ಲಿ ಸಮಬಲಗೊಂಡಿತು. ಈ ಸಿರೀಸ್​ನಲ್ಲಿ ಬ್ಯಾಟಿಂಗ್​ ನಡೆಸಿದ 4 ಇನ್ನಿಂಗ್ಸ್​​ಗಳಲ್ಲಿ 125 ರನ್ ಗಳಿಸಿದರು. ಈಗ ಮೇ 10ರಿಂದ ಶುರುವಾಗುವ ಐರ್ಲೆಂಡ್ ಸರಣಿಗೆ ಬಾಬರ್​ ಸಜ್ಜಾಗಿದ್ದಾರೆ.

ಕೊಹ್ಲಿ-ರೋಹಿತ್​ ದಾಖಲೆ ಮೇಲೆ ಕಣ್ಣಿಟ್ಟ ಬಾಬರ್

ಪ್ರಸ್ತುತ ಟಿ20ಐ ಕ್ರಿಕೆಟ್​ನಲ್ಲಿ 3823 ರನ್‌ ಗಳಿಸಿರುವ ಬಾಬರ್ ಅಜಮ್, ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (4037) ಮತ್ತು ಭಾರತದ ನಾಯಕ ರೋಹಿತ್ ಶರ್ಮಾ (3974) ನಂತರ 3ನೇ ಸ್ಥಾನದಲ್ಲಿದ್ದಾರೆ. ಟಿ20ಐ ವಿಶ್ವಕಪ್​​​​ವರೆಗೂ ಭಾರತವು ಯಾವುದೇ ಚುಟುಕು ಸರಣಿ ಆಡುತ್ತಿಲ್ಲ. ಹಾಗಾಗಿ ಟಿ20ಐ ಕ್ರಿಕೆಟ್‌ನಲ್ಲಿ ರೋಹಿತ್ ಮತ್ತು ಕೊಹ್ಲಿ ಅವರನ್ನು ಹಿಂದಿಕ್ಕಲು ಅತ್ಯಧಿಕ ರನ್ ಗಳಿಸುವ ಉತ್ತಮ ಅವಕಾಶ ಬಾಬರ್​ ಹೊಂದಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಲು ಬಾಬರ್​​ಗೆ 215 ರನ್‌ಗಳ ಅಗತ್ಯವಿದೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್‌ ವಿರುದ್ಧದ ಟಿ20ಐ ಪ್ರವಾಸಕ್ಕೆ 18 ಸದಸ್ಯರ ತಂಡವನ್ನು ಪಾಕಿಸ್ತಾನ ಪ್ರಕಟಿಸಿದೆ. ಈ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಟಿ20 ವಿಶ್ವಕಪ್‌ಗೆ ಮಣೆ ಹಾಕಲು ಪಾಕ್ ನಿರ್ಧರಿಸಿದೆ. ಹೆಚ್ಚಿನ ತಂಡಗಳು ಮೇ 1ರ ಮೊದಲು T20 ವಿಶ್ವಕಪ್ ತಂಡವನ್ನು ಘೋಷಿಸಿದವು. ಆದಾಗ್ಯೂ, ಪಾಕಿಸ್ತಾನವು ಆಟಗಾರರ ಗಾಯಗಳು ಮತ್ತು ಪ್ರದರ್ಶನದ ಕಾಳಜಿಯನ್ನು ಉಲ್ಲೇಖಿಸಿ ಪ್ರಕಟಣೆಯನ್ನು ವಿಳಂಬಗೊಳಿಸಿತು. ಮೇ 23 ಅಥವಾ 24 ರಂದು ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಐರ್ಲೆಂಡ್ ಸರಣಿಯು ಮೇ 10 ರಂದು ಪ್ರಾರಂಭವಾಗಲಿದ್ದು, ಮೇ 12 ಮತ್ತು 14 ರಂದು ಪಂದ್ಯಗಳು ನಡೆಯಲಿವೆ. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯು ಮೇ 22ರಿಂದ ಪ್ರಾರಂಭವಾಗಲಿದೆ. ಜೂನ್ 1ರಿಂದ ಟಿ20 ವಿಶ್ವಕಪ್ ಪ್ರಾರಂಭವಾಗಲಿದೆ. ಜೂನ್ 9ರಂದು ಟೀಮ್ ಇಂಡಿಯಾ ವಿರುದ್ಧ ಸೆಣಸಾಟ ನಡೆಸಲಿದೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್ ಟಿ20ಐಗಳಿಗೆ ಪಾಕಿಸ್ತಾನ ತಂಡ

ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಂ, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ಇರ್ಫಾನ್ ಖಾನ್, ಸೈಮ್ ಅಯೂಬ್, ಸಲ್ಮಾನ್ ಅಘಾ, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ಉಸ್ಮಾನ್ ಖಾನ್.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

IPL_Entry_Point