ಒಂದೇ ದಿನ 3 ಪಂದ್ಯ ಸೋತ ಭಾರತ; ಅಂಡರ್​-19 ಏಷ್ಯಾಕಪ್​ನಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ, ಬಾಂಗ್ಲಾದೇಶ ಮತ್ತೆ ಚಾಂಪಿಯನ್
ಕನ್ನಡ ಸುದ್ದಿ  /  ಕ್ರಿಕೆಟ್  /  ಒಂದೇ ದಿನ 3 ಪಂದ್ಯ ಸೋತ ಭಾರತ; ಅಂಡರ್​-19 ಏಷ್ಯಾಕಪ್​ನಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ, ಬಾಂಗ್ಲಾದೇಶ ಮತ್ತೆ ಚಾಂಪಿಯನ್

ಒಂದೇ ದಿನ 3 ಪಂದ್ಯ ಸೋತ ಭಾರತ; ಅಂಡರ್​-19 ಏಷ್ಯಾಕಪ್​ನಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ, ಬಾಂಗ್ಲಾದೇಶ ಮತ್ತೆ ಚಾಂಪಿಯನ್

India vs Bangladesh U19 Asia Cup Final: ಅಂಡರ್​-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ 59 ರನ್​ಗಳ ಭರ್ಜರಿ ಗೆಲುವು ಸಾಧಿಸಿದ ಬಾಂಗ್ಲಾದೇಶ ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಒಂದೇ ದಿನ 3 ಪಂದ್ಯ ಸೋತ ಭಾರತ; ಅಂಡರ್​-19 ಏಷ್ಯಾಕಪ್​ನಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ, ಬಾಂಗ್ಲಾದೇಶ ಮತ್ತೆ ಚಾಂಪಿಯನ್
ಒಂದೇ ದಿನ 3 ಪಂದ್ಯ ಸೋತ ಭಾರತ; ಅಂಡರ್​-19 ಏಷ್ಯಾಕಪ್​ನಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ, ಬಾಂಗ್ಲಾದೇಶ ಮತ್ತೆ ಚಾಂಪಿಯನ್

2024ರ ಡಿಸೆಂಬರ್​​ 8... ಟೀಮ್ ಇಂಡಿಯಾ ಪಾಲಿಗೆ ಕರಾಳ ದಿನ. ಇವತ್ತು ಟೀಮ್ ಇಂಡಿಯಾ ಮೂರು ಪಂದ್ಯಗಳಲ್ಲಿ ಸೋತಿದೆ. ಆಸ್ಟ್ರೇಲಿಯಾ ವಿರುದ್ಧ ಪುರುಷರ 2ನೇ ಟೆಸ್ಟ್​, ಅದೇ ತಂಡದ ವಿರುದ್ಧ ಮಹಿಳೆಯರ 2ನೇ ಏಕದಿನ ಸೋತಿರುವ ಭಾರತ ಇದೀಗ ಅಂಡರ್​-19 ಏಷ್ಯಾಕಪ್ ಫೈನಲ್​ನಲ್ಲಿ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ. ಬಾಂಗ್ಲಾದೇಶ ವಿರುದ್ಧ ಸೋತು 9ನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ವಿಫಲವಾಗಿದೆ. ಟೀಮ್ ಇಂಡಿಯಾ ವಿರುದ್ಧ 59 ರನ್​ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಬಾಂಗ್ಲಾದೇಶ ಸತತ 2ನೇ ಬಾರಿಗೆ ಅಂಡರ್​-19 ಏಷ್ಯಾಕಪ್​ ಟ್ರೋಫಿಗೆ ಮುತ್ತಿಕ್ಕಿದೆ.

ದುಬೈನ ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಬಾಂಗ್ಲಾದೇಶಕ್ಕೆ ಬ್ಯಾಟಿಂಗ್ ಆಹ್ವಾನ ಮಾಡಿತು. ಅದರಂತೆ ಬ್ಯಾಟಿಂಗ್ ನಡೆಸಿದ ಬಾಂಗ್ಲಾ, 49.1 ಓವರ್​ಗಳಲ್ಲಿ 198 ರನ್ ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 35.2 ಓವರ್​ಗಳಲ್ಲಿ 139 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 59 ರನ್​ಗಳ ಅಂತರದಿಂದ ಶರಣಾಯಿತು. ಬೌಲಿಂಗ್​ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದರೂ ಬ್ಯಾಟಿಂಗ್​ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಪರಿಣಾಮ ಟ್ರೋಫಿ ಕನಸು ಕಮರಿತು.

ಬಾಂಗ್ಲಾದೇಶ ಬ್ಯಾಟಿಂಗ್ ಹೇಗಿತ್ತು?

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಜವಾದ್ ಅಬ್ರಾರ್ 20, ಕಲಾಂ ಸಿದ್ದಿಕಿ ಅಲೆನ್ 1, ನಾಯಕ ಅಜೀಜುಲ್ ಹಕೀಮ್ ತಮೀಮ್ 16 ರನ್ ಭಾರಿ ನಿರಾಸೆ ಮೂಡಿಸಿದರು. ಆರಂಭಿಕ ಆಘಾತದ ನಂತರ ಮೊಹಮ್ಮದ್ ಶಿಹಾಬ್ ಜೇಮ್ಸ್ ಮತ್ತು ರಿಜಾನ್ ಹೊಸನ್ ಅವರು ತಂಡಕ್ಕೆ ಚೇತರಿಕೆ ನೀಡಿದರು. ಜೇಮ್ಸ್ 47 ರನ್, ಹೊಸನ್ 40 ರನ್ ಸಿಡಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಮತ್ತೆ ಪಾರಮ್ಯ ಮೆರೆದ ಭಾರತದ ಬೌಲರ್ಸ್​, 200 ರನ್​ಗಳೊಳಗೆ ಕಟ್ಟಿ ಹಾಕಿದರು. ದೇಬಶಿಶ್ ಸರ್ಕಾರ್ ದೇಬಾ 1, ಫರೀದ್ ಹಸನ್ 39, ಸಮಿಯುನ್ ಬಸಿರ್ ರತುಲ್ 4, ಅಲ್ ಫಹಾದ್ 1, ಮರುಫ್ ಮೃಧ 11 ರನ್ ಗಳಿಸಿದರು. ಭಾರತದ ಬೌಲರ್​​ಗಳಾದ ಯುಧಾಜಿತ್ ಗುಹಾ, ಚೇತನ್ ಶರ್ಮಾ, ಹಾರ್ದಿಕ್ ರಾಜ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಭಾರತದ ಬ್ಯಾಟಿಂಗ್ ವೈಫಲ್ಯ, ಬಾಂಗ್ಲಾ ಬೌಲರ್ಸ್ ಮಿಂಚು

ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ, ಬಾಂಗ್ಲಾದೇಶ ಬೌಲರ್ಸ್​ ಎದುರು ಮಂಡಿಯೂರಿತು. ರನ್ ಗಳಿಸಲು ಪರದಾಟ ನಡೆಸಿತು. ನಾಯಕ ಮೊಹಮ್ಮದ್ ಅಮಾನ್ 26 ರನ್ ಗಳಿಸಿದ್ದೇ ಭಾರತದ ಪರ ಗರಿಷ್ಠ ಸ್ಕೋರ್. ಬಾಂಗ್ಲಾದ ಇಕ್ಬಾಲ್ ಹುಸೇನ್ ಎಮಾನ್, ಅಜೀಜುಲ್ ಹಕೀಮ್ ತಮೀಮ್ ತಲಾ ಮೂರು ವಿಕೆಟ್ ಪಡೆದು ಭಾರತ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಆಯುಷ್ ಮ್ಹಾತ್ರೆ 1, ವೈಭವ್ ಸೂರ್ಯವಂಶಿ 9, ಆ್ಯಂಡ್ರೆ ಸಿದ್ದಾರ್ಥ್ 20, ಕೆಪಿ ಕಾರ್ತಿಕೇಯ 21, ನಿಖಿಲ್ ಕುಮಾರ್ 0, ಹರ್ವಂಶ್ ಸಿಂಗ್ 6, ಕಿರಣ್ ಚೋರ್ಮಲೆ 1, ಹಾರ್ದಿಕ್ ಹಾಜ್ 24, ಚೇತನ್ ಶರ್ಮಾ 10 ರನ್ ಸಿಡಿಸಿ ನಿರಾಸೆ ಮೂಡಿಸಿದರು.

ಒಂದೇ ದಿನದಲ್ಲಿ ಭಾರತಕ್ಕೆ ಮೂರನೇ ಸೋಲು

ಡಿಸೆಂಬರ್​ 8ರಂದು ಟೀಮ್ ಇಂಡಿಯಾ ಒಟ್ಟು 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಅಡಿಲೇಡ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತು. ನಂತರ ಮಹಿಳೆಯರ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ವನಿತೆಯರು 122 ರನ್​ಗಳಿಂದ ಮುಗ್ಗರಿಸಿದರು. ಇದೀಗ ಭಾರತದ ಕಿರಿಯರ ತಂಡವು ಅಂಡರ್​-19 ಏಷ್ಯಾಕಪ್ ಫೈನಲ್​ನಲ್ಲಿ ಬಾಂಗ್ಲಾದೇಶ ವಿರುದ್ಧ 59 ರನ್​ಗಳಿಂದ ಶರಣಾಗಿದೆ.

ವರ್ಷಆತಿಥೇಯ ರಾಷ್ಟ್ರವಿಜೇತರನ್ನರ್ ಅಪ್
1989ಬಾಂಗ್ಲಾದೇಶಭಾರತಶ್ರೀಲಂಕಾ
2003ಪಾಕಿಸ್ತಾನಭಾರತಶ್ರೀಲಂಕಾ
2012ಮಲೇಷ್ಯಾಭಾರತ ಮತ್ತು ಪಾಕಿಸ್ತಾನ ಟ್ರೋಫಿ ಹಂಚಿಕೊಂಡವು
2013/14ಯುಎಇಭಾರತಪಾಕಿಸ್ತಾನ
2016ಶ್ರೀಲಂಕಾಭಾರತಶ್ರೀಲಂಕಾ
2017ಮಲೇಷ್ಯಾಅಫ್ಘಾನಿಸ್ತಾನಪಾಕಿಸ್ತಾನ
2018ಬಾಂಗ್ಲಾದೇಶಭಾರತಶ್ರೀಲಂಕಾ
2019ಶ್ರೀಲಂಕಾಭಾರತಬಾಂಗ್ಲಾದೇಶ
2021ಯುಎಇಭಾರತಶ್ರೀಲಂಕಾ
2023ಯುಎಇಬಾಂಗ್ಲಾದೇಶಯುಎಇ
2024ಯುಎಇಬಾಂಗ್ಲಾದೇಶಭಾರತ

 

 

Whats_app_banner