Liton Das Ruled out: ಏಷ್ಯಾಕಪ್‌ನಿಂದ ಲಿಟನ್ ದಾಸ್ ಔಟ್; ಬಾಂಗ್ಲಾದೇಶಕ್ಕೆ ಭಾರಿ ಹಿನ್ನಡೆ
ಏಷ್ಯಾಕಪ್‌ನಲ್ಲಿ ತನ್ನ ಮೊದಲ ಪಂದ್ಯ ಆಡುವ ಮುನ್ನವೇ ಬಾಂಗ್ಲಾದೇಶಕ್ಕೆ ದೊಡ್ಡ ಆಘಾತವಾಗಿದೆ. ಸ್ಟಾರ್ ಆಟಗಾರ ಲಿಟನ್ ದಾಸ್ ಏಷ್ಯಾಕಪ್‌ನಿಂದ ಔಟ್ ಆಗಿದ್ದಾರೆ.
ಏಷ್ಯಾಕಪ್ 2023ರ (Asia Cup) ಮೊದಲ ಪಂದ್ಯಕ್ಕೂ ಮುನ್ನವೇ ಬಾಂಗ್ಲಾದೇಶಕ್ಕೆ (Bangladesh) ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಬ್ಯಾಟ್ಸಮನ್ ಲಿಟನ್ ದಾಸ್ (Liton Das) ಇಡೀ ಟೂರ್ನಿಯಂದ ಔಟ್ ಆಗಿದ್ದಾರೆ. ವೈರಲ್ ಫೀವರ್‌ನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಲಿಟನ್ ದಾಸ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.
ಬಾಂಗ್ಲಾದೇಶ ತನ್ನ ಮೊದಲ ಪಂದ್ಯವನ್ನು ನಾಳೆ (ಆಗಸ್ಟ್ 31, ಗುರುವಾರ) ಶ್ರೀಲಂಕಾ (Srilanka) ವಿರುದ್ಧ ಆಡಲಿದ್ದು, ಲಿಟನ್ ದಾಸ್ ತಂಡದೊಂದಿಗೆ ಪ್ರವಾಸ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಲಿಟನ್ ದಾಸ್ ಸ್ಥಾನಕ್ಕೆ ಅನಾಮುಲ್ ಹಕ್
ದಾಸ್ ಅವರ ಸ್ಥಾನಕ್ಕೆ ಅನಾಮುಲ್ ಹಕ್ ಬಿಜೋಯ್ (Anamul Haque Bijoy) ಅವರನ್ನು ಆಯ್ಕೆ ಮಾಡಲಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (Bangladesh Cricket Board) ಇಂದು (ಆಗಸ್ಟ್ 30, ಬುಧವಾರ) ಮಾಧ್ಯಮ ಹೇಳಿಕೆ ಮೂಲಕ ಮಾಹಿತಿಯನ್ನು ಬಹಿರಂಗಪಡಿಸಿದೆ.
ಏಷ್ಯಾಕಪ್ ಅಂಗವಾಗಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ಗುರುವಾರ ಕ್ಯಾಂಡಿಯ ಪಲ್ಲೆಕೆಲೆಯಲ್ಲಿ ನಡೆಯಲಿದೆ. ಇವತ್ತು(ಆಗಸ್ಟ್ 30, ಬುಧವಾರ) ಪಾಕಿಸ್ತಾನ ಮತ್ತು ನೇಪಾಳ ಪಂದ್ಯ ಆರಂಭದೊಂದಿಗೆ ಟೂರ್ನಿಗೆ ಚಾಲನೆ ಸಿಕ್ಕಿದೆ.
ಲಿಟನ್ ದಾಸ್ ವಿಕೆಟ್ ಕೀಪರ್ ಮತ್ತು ಬಾಂಗ್ಲಾದೇಶ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. ಅವರ ಅನುಪಸ್ಥಿತಿಯು ಬಾಂಗ್ಲಾ ತಂಡಕ್ಕೆ ದೊಡ್ಡಿ ಹಿನ್ನಡೆ ಎಂದೇ ಹೇಳಬಹುದು. ಲಿಟನ್ ದಾಸ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಅನಾಮುಲ್ ಹಕ್ 44 ಏಕದಿನ ಪಂದ್ಯಗಳನ್ನಾಡಿದ್ದು, 1,254 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳಿವೆ. ಅನಾಮುಲ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತದ ವಿರುದ್ಧ ಕೊನೆಯ ಏಕದಿನ ಪಂದ್ಯ ಆಡಿದ್ದರು.
ಲಿಟನ್ ಅವರಂತೆ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಹಾಗೂ ವಿಕೆಟ್ ಕೀಪಿಂಗ್ ಮಾಡುವಂತ ಆಟಗಾರನನ್ನು ಎದುರು ನೋಡುತ್ತಿದ್ದ ಬಾಂಗ್ಲಾ ಕ್ರಿಕೆಟ್ ಮಂಡಳಿ ಅನಾಮುಲ್ ಹಕ್‌ಗೆ ಅವಕಾಶ ನೀಡಿದೆ. ಬಾಂಗ್ಲಾದೇಶ ಏಷ್ಯಾಕಪ್‌ನ ಬಿ ಗುಂಪಿನಲ್ಲಿದೆ. ಗುಂಪು ಹಂತದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳ ವಿರುದ್ಧ ಸೆಣಸಾಟ ನಡೆಸಲಿದೆ.
ಏಷ್ಯಾ ಕಪ್‌ಗೆ ಬಾಂಗ್ಲಾದೇಶ ತಂಡ
ಶಕೀಬ್ ಅಲ್ ಹಸನ್ (ನಾಯಕ), ತಂಜೀದ್ ತಮೀಮ್, ನಜ್ಮುಲ್ ಹುಸೇನ್ ಶಾಂಟೊ, ತೌಹೀದ್ ಹೃದಯೋಯ್, ಮುಶ್ಬೀಕರ್ ರಹೀಮ್, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಹಸನ್ ಮಹಮೂದ್, ನಸೀಮ್ ಹುಮದ್, ನಸೀಮ್ ಮೆಹದಿಸ್ ಹುಸೇನ್, ಅಫೀಫ್ ಹುಸೇನ್, ಅನಾಮುಲ್ ಹಕ್, ಶೋರ್ಫುಲ್ ಇಸ್ಲಾಂ, ಅಬ್ದೋತ್ ಹುಸೇನ್, ನಯೀಮ್ ಶೇಖ್.