ಕನ್ನಡ ಸುದ್ದಿ  /  Cricket  /  Batting Legend Sachin Tendulkar Congratulates Virat Kohli And Anushka Sharma Welcome Baby Boy Akaay Vamika Brother Jra

ಜೂನಿಯರ್‌ ಕೊಹ್ಲಿ ಆಗಮನಕ್ಕೆ ತೆಂಡೂಲ್ಕರ್‌ ಸಂತಸ; ವಿರುಷ್ಕ ದಂಪತಿಗೆ ಕ್ರಿಕೆಟ್‌ ದೇವರ ಅಭಿನಂದನೆ

Sachin Tendulkar: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಯು ಗಂಡು ಮಗುವನ್ನು ಜಗತ್ತಿಗೆ ಸ್ವಾಗತಿಸಿದ್ದಾರೆ. ಅಕಾಯ್‌ ಜನನಕ್ಕೆ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ಖುಷಿಯಾಗಿದ್ದಾರೆ. ವಿರುಷ್ಕ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಜೂನಿಯರ್‌ ಕೊಹ್ಲಿ ಆಗಮನಕ್ಕೆ ತೆಂಡೂಲ್ಕರ್‌ ಸಂತಸ
ಜೂನಿಯರ್‌ ಕೊಹ್ಲಿ ಆಗಮನಕ್ಕೆ ತೆಂಡೂಲ್ಕರ್‌ ಸಂತಸ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ‌ (Virat Kohli) ಪತ್ನಿ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar), ವಿಶೇಷ ಟಿಪ್ಪಣಿಯೊಂದಿಗೆ ದಂಪತಿಯನ್ನು ಅಭಿನಂದಿಸಿದ್ದಾರೆ. ಕ್ರಿಕೆಟ್‌ ದೇವರ ಪೋಸ್ಟ್‌ ವೈರಲ್‌ ಆಗಿದೆ.

ಕೊಹ್ಲಿ ಮತ್ತು ಅನುಷ್ಕಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ವಮಿಕಾ ಸಹೋದರನನ್ನು ಕುಟುಂಬವು ಸ್ವಾಗತಿಸಿದೆ ಎಂದು ತಿಳಿಸಿದ್ದಾರೆ. ಫೆಬ್ರವರಿ 15ರ ಗುರುವಾರ ಅನುಷ್ಕಾ ಶರ್ಮಾ ಅವರು ಗುಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, 6 ದಿನಗಳ ಬಳಿಕ ಈ ಖುಷಿಯ ಮಾಹಿತಿಯನ್ನು ಕುಟುಂಬ ಹಂಚಿಕೊಂಡಿದೆ.

ಇದನ್ನೂ ಓದಿ | ವಿರುಷ್ಕಾ ದಂಪತಿಗೆ ಗಂಡು ಮಗು ಜನನ; ಜೂನಿಯರ್ ವಿರಾಟ್‌ಗೆ ಅಕಾಯ್‌ ಹೆಸರಿಟ್ಟ ಕೊಹ್ಲಿ-ಅನುಷ್ಕಾ -Virat Kohi Son Akaay

“ತುಂಬಾ ಸಂತೋಷವಾಗುತ್ತಿದೆ. ಫೆಬ್ರವರಿ 15 ರಂದು ನಾವು ನಮ್ಮ ಗಂಡು ಮಗು ಅಕಾಯ್, ವಮಿಕಾಳ ಪುಟ್ಟ ಸಹೋದರನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ಸಂತೋಷಪಡುತ್ತೇವೆ. ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಕೋರುತ್ತೇವೆ. ಈ ಸಮಯದಲ್ಲಿ ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ವಿನಂತಿಸುತ್ತೇವೆ” ಎಂದು ವಿರಾಟ್ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ತೆಂಡೂಲ್ಕರ್, ವಿರುಷ್ಕ ಕುಟುಂಬಕ್ಕೆ ಅಮೂಲ್ಯ ವ್ಯಕ್ತಿಯ ಸೇರ್ಪಡೆಗಾಗಿ ಕೊಹ್ಲಿ ಮತ್ತು ಅನುಷ್ಕಾ ಅವರನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ | ಭಾರತದಲ್ಲಿ ರೈಲು, ಆಟೋ ಹಿಡಿಯಲು ಕೂಡಾ ಚಿಕ್ಕ ವಯಸ್ಸಿನಲ್ಲೇ ಕಷ್ಟಪಡಬೇಕು; ಯಶಸ್ವಿ ಜೈಸ್ವಾಲ್ ಪ್ರಬುದ್ಧ ಮಾತು

“ಸುಂದರವಾದ ಕುಟುಂಬಕ್ಕೆ ಅಕಾಯ್ ಆಗಮನವಾಗಿದ್ದಕ್ಕೆ ವಿರಾಟ್ ಮತ್ತು ಅನುಷ್ಕಾಗೆ ಅಭಿನಂದನೆಗಳು. ಆತನ ಹೆಸರು ಮನೆಯನ್ನು ಬೆಳಗಿಸುವಂತೆ, ಅವನು ಜಗತ್ತನ್ನೇ ಸಂತೋಷ ಮತ್ತು ನಗುವಿನಿಂದ ತುಂಬಲಿ. ಪುಟ್ಟ ಚಾಂಪಿಯನ್‌ಗೆ ಈ ಜಗತ್ತಿಗೆ ಸ್ವಾಗತ, ಎಂದು ತೆಂಡೂಲ್ಕರ್‌ ಟ್ವೀಟ್‌ ಮಾಡಿದ್ದಾರೆ.”

ಕೊಹ್ಲಿ ಮತ್ತು ಅನುಷ್ಕಾ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2021ರ ಜನವರಿಯಲ್ಲಿ ಅನುಷ್ಕಾ ಅವರು ವಮಿಕಾಗೆ ಜನ್ಮ ನೀಡಿದರು.

ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಕೊಹ್ಲಿ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣವನ್ನು ನೀಡಿ ತಂಡದಿಂದ ಅವರು ಹೊರಬಂದರು. 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ, ಇದೇ ಮೊದಲ ಬಾರಿಗೆ ಕೊಹ್ಲಿ ತವರು ನೆಲದಲ್ಲಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.

ಕಳೆದ ತಿಂಗಳು ಭಾರತದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಕೊನೆಯ ಬಾರಿಗೆ ಕೊಹ್ಲಿ ಭಾರತದ ಪರ ಆಡಿದ್ದರು. ಮುಂದೆ ಐಪಿಎಲ್ 2024ರ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅವರು ಆಡುವ ನಿರೀಕ್ಷೆಯಿದೆ.

ಇದನ್ನೂ ಓದಿ | ‌Video: ಮೈದಾನದಲ್ಲಿ ಸನಾ ಜಾವೇದ್ ನೋಡಿ ಸಾನಿಯಾ ಮಿರ್ಜಾ ಎಂದು ಘೋಷಣೆ ಕೂಗಿದ ಪಾಕ್‌ ಅಭಿಮಾನಿಗಳು; ವಿಡಿಯೋ ವೈರಲ್

ಕೊಹ್ಲಿ ಅವರ ಆಪ್ತ ಸ್ನೇಹಿತ ಎಬಿ ಡಿವಿಲಿಯರ್ಸ್, ಕೊಹ್ಲಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ ಎಂದು ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದರು. ಆದರೆ ಕೆಲವೇ ದಿನಗಳಲ್ಲಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದರು. ಆದರೆ, ಇದೀಗ ಎಬಿ ಡಿವಿಲಿಯರ್ಸ್ ಅಂದು ಹೇಳಿದ್ದ ಮಾತು ಸತ್ಯವಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point