Virat Kohli: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ವಿರಾಟ್ ಕೊಹ್ಲಿ ಮತ್ತೆ ನಾಯಕ?
ಕನ್ನಡ ಸುದ್ದಿ  /  ಕ್ರಿಕೆಟ್  /  Virat Kohli: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ವಿರಾಟ್ ಕೊಹ್ಲಿ ಮತ್ತೆ ನಾಯಕ?

Virat Kohli: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ವಿರಾಟ್ ಕೊಹ್ಲಿ ಮತ್ತೆ ನಾಯಕ?

Virat Kohli RCB : 2025ರ ಇಂಡಿಯನ್ ಪ್ರೀಮಿಯರ್ ಲೀಗ್​ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಬದಲಾವಣೆಯಾಗಲಿದೆ ಎಂದು ವರದಿಯಾಗಿದೆ. ಹಾಗಾದರೆ ಹೊಸ ನಾಯಕ ಯಾರಾಗಬಹುದು? ಇಲ್ಲಿದೆ ವಿವರ.

Virat Kohli: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ವಿರಾಟ್ ಕೊಹ್ಲಿ ಮತ್ತೆ ನಾಯಕ?
Virat Kohli: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ವಿರಾಟ್ ಕೊಹ್ಲಿ ಮತ್ತೆ ನಾಯಕ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಪ್ರಶಸ್ತಿ ಗೆಲ್ಲುವ ಕನಸನ್ನು ಮುಂದುವರೆಸಿದೆ. 17 ಸೀಸನ್​​ನಲ್ಲೂ ಪ್ಲೇಆಫ್​​ಗೆ ತನ್ನ ಪ್ರಯಾಣ ಕೊನೆಗೊಳಿಸಿತು. ಪ್ರತಿ ಬಾರಿ ಕೂಡ 'ಈ ಸಲ ಕಪ್ ನಮ್ದೆ' ಎಂಬ ಘೋಷಣೆಯೊಂದಿಗೆ ಆರ್‌ಸಿಬಿ ಅಭಿಯಾನ ಆರಂಭಿಸುತ್ತಿದೆ. ಆದರೆ, ಟ್ರೋಫಿ ಮಾತ್ರ ಗೆಲ್ಲುತ್ತಿಲ್ಲ. 2024ರ ಐಪಿಎಲ್ ಮುಗಿದು ಒಂದು ತಿಂಗಳಾಗಿರುವ ನಡುವೆಯೇ 2025ರ ಟೂರ್ನಿಗೆ ಆರ್​ಸಿಬಿ ಸಜ್ಜಾಗುತ್ತಿದೆ. ಆರ್​ಸಿಬಿ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಸಿಕ್ಕಿದೆ.

ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 7ರಲ್ಲಿ ಸೋಲು, 7ರಲ್ಲಿ ಗೆಲುವು ಸಾಧಿಸಿ ಪ್ಲೇಆಫ್ ಪ್ರವೇಶಿಸಿತ್ತು. ತನ್ನ ಆರಂಭಿಕ 8 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿದ್ದ ಬೆಂಗಳೂರು, ಕೊನೆಯ 6 ರಲ್ಲಿ ಸತತ ಜಯ ದಾಖಲಿಸಿ ರೋಚಕವಾಗಿ ಪ್ಲೇಆಫ್ ಪ್ರವೇಶಿಸಿತ್ತು. ಆದರೆ, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಶರಣಾಯಿತು. ಇದರ ಬೆನ್ನಲ್ಲೇ ಆರ್​ಸಿಬಿ ತಂಡದ ನಾಯಕತ್ವ ಬದಲಾಗಲಿದೆ ಎನ್ನಲಾಗಿದೆ.

ಮತ್ತೆ ವಿರಾಟ್ ಕೊಹ್ಲಿ ನಾಯಕ?

ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್‌ಗೆ (Faf Du plessis) ಈಗ 39 ವರ್ಷ. ಮುಂದಿನ ವರ್ಷ ಆಡುವುದು ಬಹುತೇಕ ಅನುಮಾನ ಎಂದು ಹೇಳಲಾಗಿದೆ. ವಿರಾಟ್ ಕೊಹ್ಲಿ (Virat Kohl) ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದರೊಂದಿಗೆ ನಾಯಕತ್ವದ ಚರ್ಚೆ ಮತ್ತೆ ಆರಂಭವಾಗಿದೆ. ಭಾರತ ತಂಡವನ್ನು ಮುನ್ನಡೆಸುವ ಹೊರೆಯಿಂದ ವಿರಾಟ್ ಕೊಹ್ಲಿ ಆರ್​ಸಿಬಿದ ನಾಯಕತ್ವದಿಂದ ಕೆಳಗಿಳಿದಿದ್ದರು. ಈಗ ಟಿ20ಐ ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದು, ಮತ್ತೆ ನಾಯಕನಾಗಲು ಹೊರಟಿದ್ದಾರೆ.

ಈಗ ವಿರಾಟ್ ಕೊಹ್ಲಿ ಸಂಪೂರ್ಣ ಸ್ವತಂತ್ರರಾಗಿದ್ದಾರೆ. ಭಾರತ ತಂಡ 3 ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟಿ20ಐ ಫಾರ್ಮೆಟ್​ನಿಂದ ಘೋಷಿಸಿದ ನಂತರ ವಿರಾಟ್ ಮತ್ತೊಮ್ಮೆ ಆರ್​ಸಿಬಿಗೆ ನಾಯಕರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅವರು 2025ರಲ್ಲಿ ಆರ್​ಸಿಬಿ ನಾಯಕನಾಗಿ ನೇಮಕವಾಗಲಿದ್ದು, ಮತ್ತೊಮ್ಮೆ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ ರೆಡ್ ಆರ್ಮಿ 66 ಪಂದ್ಯಗಳಲ್ಲಿ ಗೆದ್ದಿದೆ. ಅಲ್ಲದೆ, ಕಿಂಗ್ ಕೊಹ್ಲಿ ನಾಯಕತ್ವದಲ್ಲಿ, ಆರ್‌ಸಿಬಿ 2016 ರಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ರನ್ನರ್​ಅಪ್ ಆಗಿತ್ತು. ಅಲ್ಲದೆ, 3 ಬಾರಿ ಪ್ಲೇಆಫ್‌ಗಳನ್ನು ಆಡಿತ್ತು. ಆರ್​ಸಿಬಿ ಫ್ರಾಂಚೈಸಿ ಕಿಂಗ್ ಕೊಹ್ಲಿಗೆ ಮತ್ತೊಮ್ಮೆ ನಾಯಕ ಪಟ್ಟ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮತ್ತೊಮ್ಮೆ ಆರೆಂಜ್ ಕ್ಯಾಪ್ ಗೆದ್ದ ವಿರಾಟ್

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್​​-2024ರಲ್ಲಿ ವಿರಾಟ್ ಕೊಹ್ಲಿ ಅವರು ಬೆಂಕಿ ಪ್ರದರ್ಶನ ನೀಡಿದ್ದರು. ಆರ್​ಸಿಬಿ ತಂಡದ ಪರ ಯಾರೂ ಸರಿಯಾಗಿ ಬ್ಯಾಟಿಂಗ್ ನಡೆಸದಿದ್ದರೂ ಕೊಹ್ಲಿ ಏಕಾಂಗಿ ಹೋರಾಟ ನಡೆಸಿದರು. 15 ಪಂದ್ಯಗಳಲ್ಲಿ 5 ಅರ್ಧಶತಕ, 1 ಶತಕ ಸಹಿತ 741 ರನ್ ಕಲೆ ಹಾಕಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ 2ನೇ ಬಾರಿಗೆ ಆರೆಂಜ್ ಕ್ಯಾಪ್ ಗೆದ್ದರು. 2016ರಲ್ಲಿ ಕೊಹ್ಲಿ ಆರೆಂಜ್ ಕ್ಯಾಪ್ ಅನ್ನು ಗೆದ್ದುಕೊಂಡಿದ್ದರು. ಅಂದು 973 ರನ್ ಬಾರಿಸಿದ್ದರು.

Whats_app_banner