ಕನ್ನಡ ಸುದ್ದಿ  /  ಕ್ರಿಕೆಟ್  /  ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಶುಭ್ಮನ್ ಗಿಲ್ ನಾಯಕ; ಪರಾಗ್, ಅಭಿಷೇಕ್, ನಿತೀಶ್ ರೆಡ್ಡಿಗೆ ಸ್ಥಾನ

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಶುಭ್ಮನ್ ಗಿಲ್ ನಾಯಕ; ಪರಾಗ್, ಅಭಿಷೇಕ್, ನಿತೀಶ್ ರೆಡ್ಡಿಗೆ ಸ್ಥಾನ

India vs Zimbabwe: ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ರಿಯಾನ್ ಪರಾಗ್,‌ ಅಭಿಷೇಕ್ ಶರ್ಮಾ ಹಾಗೂ ನಿತೀಶ್‌ ರೆಡ್ಡಿ ಭಾರತ ಕ್ರಿಕೆಟ್‌ ತಂಡಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ (PTI)

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಆಟಗಾರರಿಗೆ ಟೀಮ್‌ ಇಂಡಿಯಾ ಬಾಗಿಲು ತೆರೆದಿದೆ. ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ (India tour of Zimbabwe) ಭಾರತ ಯುವ ತಂಡವನ್ನು ಆಯ್ಕೆ ಮಾಡಲಾಗಿದ್ದು, ಶುಭ್ಮನ್‌ ಗಿಲ್‌ ನಾಯಕತ್ವದ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಐಪಿಎಲ್‌ನಲ್ಲಿ ಮಿಂಚಿದ ಆಟಗಾರರಾದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಮತ್ತು ನಿತೀಶ್ ರೆಡ್ಡಿ ಅವರನ್ನು ಟೀಮ್‌ ಇಂಡಿಯಾಗೆ ಆಯ್ಕೆ ಮಾಡಲಾಗಿದ್ದು, ಭಾರತ ತಂಡಕ್ಕೆ ಪದಾರ್ಪಣೆ ಮಾಡಲು ಕಾಯುತ್ತಿದ್ದಾರೆ.

ಪ್ರಸ್ತುತ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ.

ರಿಯಾನ್‌ ಪರಾಗ್, ಅಭಿಷೇಕ್ ಮತ್ತು ನಿತೀಶ್‌ ರೆಡ್ಡಿ ಮಾತ್ರವಲ್ಲದೆ, ಸಿಎಸ್‌ಕೆ ವೇಗಿ ತುಷಾರ್ ದೇಶಪಾಂಡೆ, ಆವೇಶ್ ಖಾನ್ ಮತ್ತು ರಿಂಕು ಸಿಂಗ್ ಕೂಡಾ ಜಿಂಬಾಬ್ವೆಗೆ ತೆರಳಲಿದ್ದಾರೆ. ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಬೆಂಚ್‌ ಕಾಯುತ್ತಿದ್ದ ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ 15 ಸದಸ್ಯರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಮೀಸಲು ಆಟಗಾರರಾಗಿದ್ದ ಗಿಲ್ ಮತ್ತು ಆವೇಶ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಪರ ಅಭಿಷೇಕ್ ಹಾಗೂ ನಿತೇಶ್‌ ರೆಡ್ಡಿ ಅಮೋಘ ಪ್ರದರ್ಶನ ನೀಡಿದ್ದರು. ಇದೇ ವೇಳೆ ರಾಜಸ್ಥಾನ ಪರ ಪರಾಗ್ ಅದ್ಭುತ ಪ್ರದರ್ಶನ ನೀಡಿದ್ದರು. ಹೈದರಾಬಾದ್ ತಂಡವನ್ನು ಪ್ರತಿನಿಧಿಸುವ ಪಂಜಾಬ್ ಬ್ಯಾಟರ್‌ ಅಭಿಷೇಕ್, ಸ್ಫೋಟಕ ಸ್ಟ್ರೈಕ್‌ ರೇಟ್‌ನೊಂದಿಗೆ 484 ರನ್ ಗಳಿಸಿದ್ದರು. ಇವರು ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರ. ರಾಜಸ್ಥಾನ್ ರಾಯಲ್ಸ್‌ ಪರ ಪರಾಗ್ 573 ರನ್ ಗಳಿಸಿದ್ದಾರೆ.

ಜುಲೈ 6ರಿಂದ ಆರಂಭವಾಗಲಿರುವ ಜಿಂಬಾಬ್ವೆ ಪ್ರವಾಸದಲ್ಲಿ 5 ಟಿ20 ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳು ಹರಾರೆಯಲ್ಲಿ ನಡೆಯಲಿದ್ದು, ಜುಲೈ 14ರಂದು ಸರಣಿ ಕೊನೆಗೊಳ್ಳಲಿದೆ.

ಸರಣಿ ವೇಳಾಪಟ್ಟಿ

ಕ್ರ.ಸಂ.ದಿನಾಂಕದಿನಪಂದ್ಯಸ್ಥಳಸಮಯ
1ನೇ ಟಿ2006-ಜುಲೈ 2024ಶನಿವಾರಜಿಂಬಾಬ್ವೆ vs ಭಾರತಹರಾರೆ ಸ್ಪೋರ್ಟ್ಸ್ ಕ್ಲಬ್4:30 PM
2ನೇ ಟಿ2007-ಜುಲೈ 2024ಭಾನುವಾರಜಿಂಬಾಬ್ವೆ vs ಭಾರತಹರಾರೆ ಸ್ಪೋರ್ಟ್ಸ್ ಕ್ಲಬ್4:30 PM
3ನೇ ಟಿ2010-ಜುಲೈ 2024ಬುಧವಾರಜಿಂಬಾಬ್ವೆ vs ಭಾರತಹರಾರೆ ಸ್ಪೋರ್ಟ್ಸ್ ಕ್ಲಬ್4:30 PM
4ನೇ ಟಿ2013-ಜುಲೈ 2024ಶನಿವಾರಜಿಂಬಾಬ್ವೆ vs ಭಾರತಹರಾರೆ ಸ್ಪೋರ್ಟ್ಸ್ ಕ್ಲಬ್4:30 PM
5ನೇ ಟಿ2014-ಜುಲೈ 2024ಭಾನುವಾರಜಿಂಬಾಬ್ವೆ vs ಭಾರತಹರಾರೆ ಸ್ಪೋರ್ಟ್ಸ್ ಕ್ಲಬ್4:30 PM

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ

ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಆವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.

ಟಿ20 ವಿಶ್ವಕಪ್ 2024 ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ