ಶ್ರೀಲಂಕಾ vs ಭಾರತ ಸರಣಿಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಈ ದಿನದಿಂದ ಟಿ20, ಏಕದಿನ ಸೀರೀಸ್ ಆರಂಭ
ಕನ್ನಡ ಸುದ್ದಿ  /  ಕ್ರಿಕೆಟ್  /  ಶ್ರೀಲಂಕಾ Vs ಭಾರತ ಸರಣಿಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಈ ದಿನದಿಂದ ಟಿ20, ಏಕದಿನ ಸೀರೀಸ್ ಆರಂಭ

ಶ್ರೀಲಂಕಾ vs ಭಾರತ ಸರಣಿಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಈ ದಿನದಿಂದ ಟಿ20, ಏಕದಿನ ಸೀರೀಸ್ ಆರಂಭ

India vs Sri Lanka: ಭಾರತ ಮತ್ತು ಶ್ರೀಲಂಕಾ ನಡುವಿನ ಸೀಮಿತ ಓವರ್​ಗಳ ಸರಣಿಗೆ ಪರಿಷ್ಕೃತ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಜುಲೈ 26ರ ಬದಲಿಗೆ 27 ರಿಂದ ಸರಣಿ ಪ್ರಾರಂಭವಾಗಲಿದೆ.

ಶ್ರೀಲಂಕಾ ಪ್ರವಾಸದ ಭಾರತದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಈ ದಿನದಿಂದ ಟಿ20, ಏಕದಿನ ಸೀರೀಸ್ ಆರಂಭ
ಶ್ರೀಲಂಕಾ ಪ್ರವಾಸದ ಭಾರತದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಈ ದಿನದಿಂದ ಟಿ20, ಏಕದಿನ ಸೀರೀಸ್ ಆರಂಭ

ಶ್ರೀಲಂಕಾ vs ಭಾರತ ನಡುವಿನ (India vs Sri Lanka) ಸೀಮಿತ ಓವರ್​​ಗಳ (ಟಿ20, ಏಕದಿನ) ಸರಣಿಯ ಪರಿಷ್ಮೃತ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಸರಣಿಯು ಜುಲೈ 26ರ ಬದಲು ಜುಲೈ 27 ರಿಂದ ಪ್ರಾರಂಭವಾಗಲಿದೆ. ಮೊದಲ ಟಿ20 ಪಂದ್ಯ ಪಲ್ಲೆಕೆಲೆಯಲ್ಲಿ ನಡೆಯಲಿದೆ. ಪಲ್ಲೆಕೆಲೆ ಎಲ್ಲಾ 3 ಟಿ20ಐ ಪಂದ್ಯಗಳಿಗೂ ಆತಿಥ್ಯ ವಹಿಸಲಿದ್ದು, 2ನೇ ಪಂದ್ಯವನ್ನು ಅದರ ಮರುದಿನವೇ ನಿಗದಿಪಡಿಸಲಾಗಿದೆ.

ಅಂತೆಯೇ ಆಗಸ್ಟ್ 1 ರಂದು ಪ್ರಾರಂಭವಾಗಬೇಕಿದ್ದ ಏಕದಿನ ಸರಣಿಯನ್ನು ಒಂದು ದಿನ ಮುಂದಕ್ಕೆ ಹಾಕಲಾಗಿದೆ. ಇದೀಗ ಆಗಸ್ಟ್ 2 ರಿಂದ ಏಕದಿನ ಸರಣಿ ಶುರುವಾಗಲಿದ್ದು, 2ನೇ ಮತ್ತು 3ನೇ ಏಕದಿನ ಪಂದ್ಯಗಳು ಕ್ರಮವಾಗಿ ಆಗಸ್ಟ್ 4 ಮತ್ತು 7 ರಂದು ನಡೆಯಲಿವೆ. 2021ರ ನಂತರ ಮೊದಲ ಬಾರಿಗೆ ಭಾರತ ತಂಡವು ಮೊದಲ ವೈಟ್-ಬಾಲ್​ ಸರಣಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿದೆ.

ಈ ಹಿಂದಿನ ಪ್ರವಾಸದಲ್ಲಿ ರಾಹುಲ್ ದ್ರಾವಿಡ್ (Rahul Dravid) ಸ್ಟ್ಯಾಂಡ್-ಇನ್ ಕೋಚ್ ಆಗಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಆಗಿನ್ನೂ ರವಿ ಶಾಸ್ತ್ರಿ (Ravi Shastri) ಮುಖ್ಯ ತಂಡದ ಕೋಚ್ ಆಗಿದ್ದರು. ಭಾರತ ಟೆಸ್ಟ್ ತಂಡವು ಇಂಗ್ಲೆಂಡ್​​​ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದ್ದ ಕಾರಣ ಶಿಖರ್ ಧವನ್ (Shikhar Dhawan) ನಾಯಕತ್ವದಲ್ಲಿ 2ನೇ ಸ್ಟ್ರಿಂಗ್ ತಂಡವನ್ನು ಕಳುಹಿಸಲಾಗಿತ್ತು.

ಆದರೆ ಈ ಸರಣಿಗೆ ಐಪಿಎಲ್​​ನಲ್ಲಿ (IPL) ಮಿಂಚಿದ್ದ ಯುವ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಬಹುತೇಕ ಆಟಗಾರರು ಈ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಇದೀಗ ಮುಂಬರುವ ಸರಣಿಯು ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇದು ಎರಡೂ ತಂಡಗಳಿಗೆ ಪರಿವರ್ತನೆ ಮತ್ತು ಪ್ರಯೋಗದ ಅವಧಿಯನ್ನು ಸೂಚಿಸುತ್ತದೆ.

ಹಿರಿಯ ಆಟಗಾರರಿಗೆ ವಿಶ್ರಾಂತಿ

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಆದಾಗ್ಯೂ, ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ. ಹಾಗಾಗಿ ಉದಯೋನ್ಮುಖ ಪ್ರತಿಭೆಗಳ ಸಾಮರ್ಥ್ಯವನ್ನು ಪರೀಕ್ಷಿಸಿಲು ಯುವಕರಿಗೆ ಈ ಸರಣಿಯಯಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಯುವಕರಿಗೆ ಹೆಚ್ಚು ಅವಕಾಶ ನೀಡುವ ನಿರೀಕ್ಷೆ ಇದೆ.

ಇದು ತಂಡದ ಆಳವನ್ನು ನಿರ್ಣಯಿಸಲು ಮತ್ತು ಭವಿಷ್ಯದ ಟೂರ್ನಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು ಮ್ಯಾನೇಜ್​ಮೆಂಟ್​ಗೆ ಅವಕಾಶ ನೀಡುತ್ತದೆ. ಎರಡೂ ತಂಡಗಳಿಗೆ ಹೊಸ ಮುಖ್ಯಕೋಚ್​ ನೇಮಕಗೊಂಡಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ. ಭಾರತ ತಂಡಕ್ಕೆ ಗೌತಮ್ ಗಂಭೀರ್ ಮಾರ್ಗದರ್ಶಕರಾಗಿದ್ದರೆ, ಅವರ ನೇರ ಮತ್ತು ದೃಢವಾದ ಕೋಚಿಂಗ್ ಶೈಲಿಯು ತಂಡಕ್ಕೆ ಹೊಸ ಕ್ರಿಯಾತ್ಮಕತೆ ತರುವ ನಿರೀಕ್ಷೆಯಿದೆ. ಏತನ್ಮಧ್ಯೆ, ಶ್ರೀಲಂಕಾ ತನ್ನ ಮಧ್ಯಂತರ ಮುಖ್ಯ ಕೋಚ್ ಆಗಿ ಸನತ್ ಜಯಸೂರ್ಯ ಅವರನ್ನು ನೇಮಿಸಿದೆ.

ಭಾರತ vs ಶ್ರೀಲಂಕಾ ಟಿ20ಐ ಸರಣಿ ವೇಳಾಪಟ್ಟಿ

ಜುಲೈ 27: 1ನೇ ಟಿ20ಐ, ಪಲ್ಲೆಕೆಲೆ

ಜುಲೈ 28: 2ನೇ ಟಿ20ಐ, ಪಲ್ಲೆಕೆಲೆ

ಜುಲೈ 30: 3ನೇ ಟಿ20ಐ ಪಲ್ಲೆಕೆಲೆ

ಭಾರತ vs ಶ್ರೀಲಂಕಾ ಏಕದಿನ ಸರಣಿ ವೇಳಾಪಟ್ಟಿ

ಆಗಸ್ಟ್ 2: 1ನೇ ಏಕದಿನ, ಕೊಲಂಬೊ

ಆಗಸ್ಟ್ 4: 2ನೇ ಏಕದಿನ, ಕೊಲಂಬೊ

ಆಗಸ್ಟ್ 7: 3ನೇ ಏಕದಿನ, ಕೊಲಂಬೊ

Whats_app_banner