ಶಫಾಲಿ ವರ್ಮಾ ಔಟ್, ಸ್ಮೃತಿ ಮಂಧಾನ ನಾಯಕಿ, ಹರ್ಮನ್​ಗೆ ವಿಶ್ರಾಂತಿ; ಐರ್ಲೆಂಡ್ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ
ಕನ್ನಡ ಸುದ್ದಿ  /  ಕ್ರಿಕೆಟ್  /  ಶಫಾಲಿ ವರ್ಮಾ ಔಟ್, ಸ್ಮೃತಿ ಮಂಧಾನ ನಾಯಕಿ, ಹರ್ಮನ್​ಗೆ ವಿಶ್ರಾಂತಿ; ಐರ್ಲೆಂಡ್ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ

ಶಫಾಲಿ ವರ್ಮಾ ಔಟ್, ಸ್ಮೃತಿ ಮಂಧಾನ ನಾಯಕಿ, ಹರ್ಮನ್​ಗೆ ವಿಶ್ರಾಂತಿ; ಐರ್ಲೆಂಡ್ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ

India Women's Squad: ಜನವರಿ 10ರಿಂದ ಶುರುವಾಗುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಸ್ಮೃತಿ ಮಂಧಾನ ತಂಡವನ್ನು ಮುನ್ನಡೆಸಲಿದ್ದಾರೆ.

ಶಫಾಲಿ ವರ್ಮಾ ಔಟ್, ಸ್ಮೃತಿ ಮಂಧಾನ ನಾಯಕಿ, ಹರ್ಮನ್​ಗೆ ವಿಶ್ರಾಂತಿ; ಐರ್ಲೆಂಡ್ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ
ಶಫಾಲಿ ವರ್ಮಾ ಔಟ್, ಸ್ಮೃತಿ ಮಂಧಾನ ನಾಯಕಿ, ಹರ್ಮನ್​ಗೆ ವಿಶ್ರಾಂತಿ; ಐರ್ಲೆಂಡ್ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ

ಐರ್ಲೆಂಡ್ ಮಹಿಳಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 15 ಸದಸ್ಯರ ತಂಡ ಪ್ರಕಟಿಸಿದೆ. ಜನವರಿ 10ರ ಶುಕ್ರವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಗೆ ನಿಯಮಿತ ನಾಯಕಿ ಹರ್ಮನ್​ಪ್ರೀತ್​ಕೌರ್, ವೇಗಿ ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ ಮತ್ತು ರಾಧಾ ಯಾದವ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹರ್ಮನ್‌ಪ್ರೀತ್ ಅನುಪಸ್ಥಿತಿಯಲ್ಲಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಆರಂಭಿಕ ಏಕದಿನ ಪಂದ್ಯದಲ್ಲಿ ಮೊಣಕಾಲಿನ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ, ಉಳಿದ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಈ ಸರಣಿಗೆ ರೆಸ್ಟ್​ ಪಡೆದಿದ್ದಾರೆ. ರಾಘವಿ ಬಿಸ್ಟ್, ಪ್ರತೀಕಾ ರಾವಲ್ ಮತ್ತು ಪ್ರಿಯಾ ಮಿಶ್ರಾ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವೆಸ್ಟ್ ಇಂಡೀಸ್ ಸರಣಿಯನ್ನು ಕಳೆದುಕೊಂಡಿದ್ದ ತೇಜಲ್ ಹಸಬ್ನಿಸ್ ಅವರು ತಂಡಕ್ಕೆ ಮರಳಿದ್ದಾರೆ. 

ಶಫಾಲಿ ವರ್ಮಾಗೆ ಮತ್ತೆ ಸಿಕ್ಕಿಲ್ಲ ಅವಕಾಶ

ಇತ್ತೀಚೆಗೆ 115 ಎಸೆತಗಳಲ್ಲಿ 197 ರನ್ ಸಿಡಿಸಿದ್ದ ಶಫಾಲಿ ವರ್ಮಾ ಮತ್ತೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಈ ಹಿಂದಿನ ಸರಣಿಗೂ ಅವರು ಅವಕಾಶ ಪಡೆದಿರಲಿಲ್ಲ. ಅರುಂಧತಿ ರೆಡ್ಡಿ ಮತ್ತು ರಾಧಾ ಯಾಧವ್ ಸೀನಿಯರ್ ಮಹಿಳಾ ಚಾಲೆಂಜರ್ ಟ್ರೋಫಿ ತಂಡಗಳಲ್ಲಿ ಸ್ಥಾನ ಪಡೆದಿದ್ದ ಕಾರಣ ಅವರು ಹೊರಗುಳಿಯಬಹುದು ಎಂದು ನಿರೀಕ್ಷಿಸಲಾಗಿತ್ತು. 

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋತಿದ್ದ ಭಾರತ ತಂಡ, ವೆಸ್ಟ್ ಇಂಡೀಸ್ ಎದುರಿನ ಒಡಿಐ ಸಿರೀಸ್​ ಅನ್ನು 3-0 ಅಂತರದಿಂದ ತವರು ನೆಲದಲ್ಲಿ ಗೆದ್ದು ಭರ್ಜರಿ ಕಂಬ್ಯಾಕ್ ಮರಳಿದೆ. ಇದೀಗ ಐರ್ಲೆಂಡ್ ವಿರುದ್ಧದ ಸರಣಿಯನ್ನೂ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯು ಜನವರಿ 10 ರಂದು ಆರಂಭವಾಗಲಿದ್ದು, ಉಳಿದ ಪಂದ್ಯಗಳು ಜನವರಿ 12 ಮತ್ತು 15 ರಂದು ನಡೆಯಲಿವೆ. ಮೂರೂ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯಲಿವೆ. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಟಿ20ಐ ಸರಣಿ ಗೆಲುವು ಸಾಧಿಸಿದ್ದ ಐರ್ಲೆಂಡ್ ತಂಡ, 3 ಪಂದ್ಯಗಳ ಏಕದಿನ ಸರಣಿಯನ್ನು ಕಳೆದುಕೊಂಡಿತ್ತು.

ಭಾರತ ತಂಡದ ಆಟಗಾರ್ತಿಯರು ಈ ಸರಣಿಯ ನಂತರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಗೆ ಸಿದ್ಧತೆ ನಡೆಸಲಿದ್ದಾರೆ.

ಐರ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ

ಸ್ಮೃತಿ ಮಂಧಾನ (ನಾಯಕಿ), ದೀಪ್ತಿ ಶರ್ಮಾ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ಉಮಾ ಚೆಟ್ರಿ (ವಿಕೆಟ್ ಕೀಪರ್​), ರಿಚಾ ಘೋಷ್ (ವಿಕೆಟ್ ಕೀಪರ್), ತೇಜಲ್ ಹಸಬ್ನಿಸ್, ರಾಘವಿ ಬಿಸ್ಟ್, ಮಿನ್ನು ಮಣಿ, ಪ್ರಿಯಾ ಮಿಶ್ರಾ, ತನುಜಾ ಕನ್ವರ್, ಟಿಟಾಸ್ ಸಾಧು, ಸೈಮಾ ಠಾಕೋರ್, ಸಯಾಲಿ ಸತ್ಘರೆ.

Whats_app_banner