BCCI Official Partner: ಭಾರತ ಕ್ರಿಕೆಟ್ ತಂಡಕ್ಕೆ ಎಸ್‌ಬಿಐ ಪ್ರಾಯೋಜಕತ್ವ; ಪ್ರತಿ ಪಂದ್ಯಕ್ಕೆ ಇಷ್ಟು ಹಣ ಪಡೆಯಲಿರುವ ಬಿಸಿಸಿಐ
ಬಿಸಿಸಿಐ ತನ್ನ ದೇಶಿಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ಎಸ್‌ಬಿಐ ಲೈಫ್‌ಗೆ ಅಧಿಕೃತ ಪ್ರಾಯೋಜಕತ್ವವನ್ನು ನೀಡಿದೆ. ಪ್ರತಿ ಪಂದ್ಯಕ್ಕೆ ಎಸ್‌ಬಿಐನಿಂದ ಬಿಸಿಸಿಐ ಲಕ್ಷ ಲಕ್ಷ ಹಣ ಪಡೆಯಲಿದೆ.
ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ-SBI ವಿಮಾ ಸಂಸ್ಥೆ ‘ಎಸ್‌ಬಿಐ ಲೈಫ್’ (BSI Life) ಭಾರತ ಕ್ರಿಕೆಟ್ ತಂಡದ (Indian Cricket Team) ಅಧಿಕೃತ ಪಾಲುದಾರ (BCCI Official Partner) ಸಂಸ್ಥೆ ಎಂದು ಬಿಸಿಸಿಐ (BCCI) ಘೋಷಣೆ ಮಾಡಿದೆ. 2023-26ನೇ ಸಾಲಿನವರೆಗೆ ದೇಶೀಯ ಮತ್ತು ಅಂತರಾಷ್ಟ್ರೀಯ ಸೀಸನ್‌ಗಳಿಗೆ ‘ಎಸ್‌ಬಿಐ ಲೈಫ್’ ಅಧಿಕೃತ ಪಾಲುದಾರ ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಲೈಫ್ ಬಿಸಿಸಿಐ ಜೊತೆಗೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಬಿಸಿಸಿಐ ಎಸ್‌ಬಿಐ ಲೈಫ್ ಅನ್ನು ದೇಶೀಯ ಮತ್ತು ಅಂತರಾಷ್ಟ್ರೀಯ ಪಂದ್ಯಗಳಿಗೆ ಅಧಿಕೃತ ಪಾಲುದಾರನನ್ನಾಗಿ ಮಾಡಿದೆ. ಭಾರತ ತಂಡದ ಒಂದು ಪಂದ್ಯಕ್ಕೆ ಎಸ್‌ಬಿಐ ಬಿಸಿಸಿಐಗೆ 85 ಲಕ್ಷ ರೂಪಾಯಿ ಪಾವತಿ ಮಾಡಲಿದೆ.
ಟೈಟಲ್ ಪ್ರಾಯೋಜಕತ್ವದಿಂದ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ ಸಿಗುತ್ತೆ 4.2 ಕೋಟಿ
ಮತ್ತೊಂದೆಡೆ ಬಿಸಿಸಿಐನ ಟೈಟಲ್ ಪಾಲುದಾರ ಸಂಸ್ಥೆಯನ್ನಾಗಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಆಗಿದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ 4.2 ಕೋಟಿ ರೂಪಾಯಿ ನೀಡಲಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ನಾವು ಎಸ್‌ಬಿಐ ಲೈಫ್ ಅನ್ನು ನಮ್ಮ ಅಧಿಕೃತ ಪಾಲುದಾರರನ್ನಾಗಿ ಮಾಡುತ್ತಿದ್ದೇವೆ ಎಂದು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ಅಂತಾರಾಷ್ಟ್ರೀಯ ಪಂದ್ಯಗಳ ಹೊರತಾಗಿ, ದೇಶೀಯ ಪಂದ್ಯಗಳಲ್ಲಿ ಎಸ್‌ಬಿಐ ಲೈಫ್ ನಮ್ಮ ಅಧಿಕೃತ ಪಾಲುದಾರರಾಗಲಿದೆ. ಬಿಸಿಸಿಐ ಪ್ರತಿ ಪಂದ್ಯಕ್ಕೆ 85 ಲಕ್ಷ ರೂಪಾಯಿ ಪಡೆಯಲಿದೆ ಎಂದು ಹೇಳಿದ್ದಾರೆ.
ವಾಸ್ತವವಾಗಿ ಎಸ್‌ಬಿಐ ಲೈಫ್ ಭಾರತದ ಅತಿದೊಡ್ಡ ವಿಮಾ ಕಂಪನಿಗಳಲ್ಲಿ ಒಂದಾಗಿದೆ. ಎಸ್‌ಬಿಐ ಲೈಫ್ ಪ್ರತಿ ಪಂದ್ಯಕ್ಕೆ 85 ಲಕ್ಷ ರೂಪಾಯಿ ಪಾವತಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ, ಆರಂಭಿಕ ಮೂಲ ಬೆಲೆ ಪ್ರತಿ ಪಂದ್ಯಕ್ಕೆ 75 ಲಕ್ಷ ರೂ. ಆದರೆ ಬಿಸಿಸಿಐ ಪ್ರತಿ ಪಂದ್ಯಕ್ಕೆ 85 ಲಕ್ಷ ರೂಪಾಯಿ ಪಾವತಿ ಮಾಡಲಿದೆ.
ಭಾರತ-ಆಸ್ಟ್ರೇಲಿಯಾ ಸರಣಿಯೊಂದಿಗೆ ಹೊಸ ಒಪ್ಪಂದ ಆರಂಭ
ಈ ಒಪ್ಪಂದವು ಭಾರತ-ಆಸ್ಟ್ರೇಲಿಯಾ ಸರಣಿಯೊಂದಿಗೆ ಪ್ರಾರಂಭವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಏಕದಿನ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಿತು.
ಈ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಆ ಮೂಲಕ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಎಸ್‌ಬಿಐ ಲೈಫ್ ಸಂಸ್ಥೆಯೊಂದಿಗೆ ಮೂರು ವರ್ಷಗಳ ಒಪ್ಪಂದವು 56 ಪಂದ್ಯಗಳನ್ನು ಒಳಗೊಂಡಿದೆ. ಇದಲ್ಲದೇ, ಐಸಿಸಿ ಟೂರ್ನಿಗಳಲ್ಲಿ ಎಸ್‌ಬಿಐ ಲೈಫ್ ಬಿಸಿಸಿಐನ ಅಧಿಕೃತ ಪ್ರಾಯೋಜಕತ್ವ ಆಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಪಂದ್ಯ ಇಂದು (ಸೆಪ್ಟೆಂಬರ್ 24, ಭಾನುವಾರ) ಇಂದೋರ್‌ನಲ್ಲಿ ನಡೆಯಲಿದೆ.