ಕನ್ನಡ ಸುದ್ದಿ  /  Cricket  /  Bcci Release Ipl 2024 Residual Schedule Out Ahmedabad To Host Playoffs Chennai Chepauk To Host Final On May 26 Jra

ಏಪ್ರಿಲ್‌ 8ರಿಂದ ಐಪಿಎಲ್‌ ಎರಡನೇ ಹಂತದ ಪಂದ್ಯಗಳು ಆರಂಭ; ಮೇ 26ರಂದು ಚೆಪಾಕ್‌ನಲ್ಲಿ ಫೈನಲ್

IPL 2024 Full Schedule : 17ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಿಸಿದೆ. ಎಲ್ಲಾ ಪಂದ್ಯಗಳು ಭಾರತದಲ್ಲೇ ನಡೆಯಲಿದ್ದು, ಫೈನಲ್ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.

ಏಪ್ರಿಲ್‌ 8ರಿಂದ ಐಪಿಎಲ್‌ ಎರಡನೇ ಹಂತದ ಪಂದ್ಯಗಳು ಆರಂಭ
ಏಪ್ರಿಲ್‌ 8ರಿಂದ ಐಪಿಎಲ್‌ ಎರಡನೇ ಹಂತದ ಪಂದ್ಯಗಳು ಆರಂಭ (PTI)

ಐಪಿಎಲ್‌ 2024ರ ಆವೃತ್ತಿಯ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿದೆ. ನಿರೀಕ್ಷೆಯಂತೆಯೇ, ಇಂಡಿಯನ್ ಪ್ರೀಮಿಯರ್ ಲೀಗ್‌ನ ಉಳಿದ ಎಲ್ಲಾ ಪಂದ್ಯಗಳು ಭಾರತದಲ್ಲಿಯೇ ನಡೆಯಲಿದೆ. ಟೂರ್ನಿಯ ಯಾವುದೇ ಪಂದ್ಯಗಳನ್ನು ವಿದೇಶದಲ್ಲಿ ನಡೆಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ. ಎಲ್ಲಾ 74 ಪಂದ್ಯಗಳು ಭಾರತದ ಮೈದಾನಗಳಲ್ಲಿಯೇ ನಡೆಯಲಿದ್ದು, ಅಹಮದಾಬಾದ್ ಮತ್ತು ಚೆನ್ನೈನಲ್ಲಿ ಅಂತಿಮ ಹಂತದ ಪಂದ್ಯಗಳು ನಡೆಯಲಿವೆ.

ಮೇ 21 ಮತ್ತು 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಇದೇ ವೇಳೆ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತವರು ಚೆಪಾಕ್‌ ಮೈದಾನದಲ್ಲಿ ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯವು ನಡೆಯಲಿದೆ. ಕ್ವಾಲಿಫೈಯರ್‌ ಪಂದ್ಯ ಮೇ 24ರಂದು ನಡೆದರೆ, ಮೇ 26ರಂದು ಅದ್ಧೂರಿ ಫೈನಲ್‌ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಖಚಿತ ಮಾಹಿತಿಯನ್ನು ಆಧರಿಸಿ ಕ್ರಿಕ್‌ಬಜ್‌ ವರದಿ ಮಾಡಿದೆ.

ಐಪಿಎಲ್‌ ಮೊದಲ ಹಂತದದಲ್ಲಿ ಮೊದಲ 21 ಪಂದ್ಯಗಳ ನಡೆಯುತ್ತಿವೆ. ಅದರಣತೆ ಏಪ್ರಿಲ್‌ 7ರಂದು 21ನೇ ಪಂದ್ಯದ ಮೂಲಕ ಮೊದಲ ಹಂತ ಕೊನೆಗೊಳ್ಳುತ್ತಿವೆ. ಇದೇಗ ಎರಡನೇ ಹಂತದ ಪಂದ್ಯಗಳು ಏಪ್ರಿಲ್ 8ರ ಸೋಮವಾರದಿಂದಲೇ ಆರಂಭವಾಗುತ್ತಿದೆ. ಅಂದರೆ, ಯಾವುದೇ ಅಂತರವಿಲ್ಲದೆ ಪಂದ್ಯಾವಳಿ ಮುಂದುವರೆಯುತ್ತಿದೆ.

ಇದನ್ನೂ ಓದಿ | ಸೋತು-ಗೆದ್ದವರ ನಡುವೆ ಫೈಟ್; ಪಂಜಾಬ್​ ಕಿಂಗ್ಸ್ ವಿರುದ್ಧದ ಹೈವೋಲ್ಟೇಜ್​ ಕದನಕ್ಕೆ ಆರ್​ಸಿಬಿ ಪ್ಲೇಯಿಂಗ್ XI ಹೀಗಿದೆ ವಿವರ

ಎರಡನೇ ಹಂತದ ಮೊಲದ ಪಂದ್ಯ ಕೂಡಾ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದಲೇ ಆರಂಭವಾಗುತ್ತಿದೆ. ಏಪ್ರಿಲ್ 8ರಂದು ಚೆಪಾಕ್ ಮೈದಾನದಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಗಳು ಮುಖಾಮುಖಿಯಾಗುತ್ತಿವೆ.

ಲೋಕಸಭಾ ಹಿನ್ನೆಲೆಯಲ್ಲಿ ಬಿಸಿಸಿಐ ಮುಂದೆ ಸವಾಲು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನು ಅಂತಿಮಗೊಳಿಸುವುದು ಬಿಸಿಸಿಐಗೆ ಸವಾಲಾಗಿತ್ತು. ಇದೀಗ, ಏಪ್ರಿಲ್ 19ರಿಂದ ಜೂನ್ 1ರವರೆಗೆ ಒಟ್ಟು ಏಳು ಹಂತಗಳಲ್ಲಿ ಭಾರತದ ಉದ್ದಗಲಕ್ಕೂ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವುದು ಅಂತಿಮವಾಗಿದೆ. ಹೀಗಾಗಿ ಭದ್ರತೆ ಒದಗಿಸುವುವುದೇ ಬಿಸಿಸಿಐ ಮುಂದಿರುವ ದೊಡ್ಡ ಸವಾಲು ಹಾಗೂ ಕಾಳಜಿಯಾಗಿದೆ. ಜೂನ್ 4ರಂದು ಮತಎಣಿಕೆ ನಡೆಯಲಿದೆ. ಹೀಗಾಗಿ ಪ್ರಮುಖ ದಿನಾಂಕಗಳನ್ನು ತಪ್ಪಿಸಿ ವೇಳಾಪಟ್ಟಿ ರಚಿಸಲಾಗಿದೆ.

ಕೆಲವು ರಾಜ್ಯಗಳಲ್ಲಿ ಚುನಾವಣೆ ಮತ್ತು ಐಪಿಎಲ್‌ ಪಂದ್ಯಗಳು ಮೇಲಿಂದ ಮೇಲೆ ನಡೆಯುವುದನ್ನು ತಪ್ಪಿಸಲು, ಬಿಸಿಸಿಐ ಕೆಲವು ತಂಡಗಳು ತವರನ್ನು ಬದಲಾಯಿಸಿದೆ. ವೇಳಾಪಟ್ಟಿಯ ಪ್ರಕಾರ, ಪಂಜಾಬ್ ಕಿಂಗ್ಸ್‌ ತಂಡಕ್ಕೆ ಎರಡನೇ ತವರು ಮೈದಾನವಾಗಿ ಧರ್ಮಶಾಲಾ ಆಯ್ಕೆಯಾಗಿದೆ. ಇಲ್ಲಿ ಪಂಜಾಬ್‌ ತಂಡದ ಎರಡು ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಮೇ 5ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹಾಗೂ ಮೇ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಧರ್ಮಶಾಲಾದಲ್ಲಿ ಪಂದ್ಯ ನಡೆಯಲಿದೆ.

ಗುವಾಹಟಿಯಲ್ಲಿಯನ್ನು ರಾಜಸ್ಥಾನ ರಾಯಲ್ಸ್‌ ತಂಡದ ಎರಡನೇ ತವರಾಗಿ ಆಯ್ಕೆ ಮಾಡಲಾಗಿದೆ. ಇಲ್ಲಿ ಎರಡು ಪಂದ್ಯಗಳು ನಡೆಯಲಿದೆ. ಮೇ 15 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಹಾಗೂ ಮೇ 19ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುವಾಹಟಿಯಲ್ಲಿ ರಾಯಲ್ಸ್‌ ಆಡಲಿದೆ.