ಐಪಿಎಲ್‌ ಅಲ್ಲ, ಟಿ20 ವಿಶ್ವಕಪ್‌ಗೂ ಇಲ್ಲ; ಮೊಹಮ್ಮದ್‌ ಶಮಿ ಮತ್ತೆ ಮೈದಾನಕ್ಕಿಳಿಯುವ ದಿನ ತಿಳಿಸಿದ ಜಯ್‌ ಶಾ-bcci secretary jay shah explains return date of team india pacer mohammed shami ipl 2024 india vs bangladesh series jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌ ಅಲ್ಲ, ಟಿ20 ವಿಶ್ವಕಪ್‌ಗೂ ಇಲ್ಲ; ಮೊಹಮ್ಮದ್‌ ಶಮಿ ಮತ್ತೆ ಮೈದಾನಕ್ಕಿಳಿಯುವ ದಿನ ತಿಳಿಸಿದ ಜಯ್‌ ಶಾ

ಐಪಿಎಲ್‌ ಅಲ್ಲ, ಟಿ20 ವಿಶ್ವಕಪ್‌ಗೂ ಇಲ್ಲ; ಮೊಹಮ್ಮದ್‌ ಶಮಿ ಮತ್ತೆ ಮೈದಾನಕ್ಕಿಳಿಯುವ ದಿನ ತಿಳಿಸಿದ ಜಯ್‌ ಶಾ

Mohammed Shami: ಐಪಿಎಲ್‌ ಮುಗಿದ ಬೆನ್ನಲ್ಲೇ ಭಾರತವು ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಲಿದೆ. ಈ ಎರಡೂ ಟೂರ್ನಿಗೆ ಮೊಹಮ್ಮದ್ ಶಮಿ ಅಲಭ್ಯರಾಗಲಿದ್ದಾರೆ. ಭಾರತ ತಂಡವು ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಆತಿಥ್ಯ ವಹಿಸಲಿದೆ. ಈ ವೇಳೆ ಶಮಿ ಮೈದಾನಕ್ಕಿಳಿಯುವ ಸುಳಿವು ಸಿಕ್ಕಿದೆ.

ಮೊಹಮ್ಮದ್‌ ಶಮಿ ಮತ್ತೆ ಮೈದಾನಕ್ಕಿಳಿಯುವ ದಿನ ತಿಳಿಸಿದ ಜಯ್‌ ಶಾ
ಮೊಹಮ್ಮದ್‌ ಶಮಿ ಮತ್ತೆ ಮೈದಾನಕ್ಕಿಳಿಯುವ ದಿನ ತಿಳಿಸಿದ ಜಯ್‌ ಶಾ (PTI)

ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತದ ಪ್ರಮುಖ ವೇಗಿ ಮೊಹಮ್ಮದ್‌ ಶಮಿ (Mohammed Shami), ಸದ್ಯಕ್ಕಂತೂ ಮೈದಾನಕ್ಕಿಳಿಯುವ ಸಾಧ್ಯತೆ ಇಲ್ಲ. ಇತ್ತೀಚೆಗಷ್ಟೇ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದ ವೇಗಿ, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ, ಹೀಗಾಗಿ ಐಪಿಎಲ್‌ (IPL 2024) ಟೂರ್ನಿಯಲ್ಲಿ ಅವರು ಗುಜರಾತ್‌ ಟೈಟಾನ್ಸ್‌ (GT) ತಂಡದಿಂದ ಹೊರಗುಳಿಯಲಿದ್ದಾರೆ. ಇದು ಹಾಲಿ ರನ್ನರ್‌ ಅಪ್‌ ತಂಡಕ್ಕೆ ಭಾರಿ ಹಿನ್ನಡೆಯಾಗಲಿದೆ. ಪಂದ್ಯಾವಳಿ ಪೂರ್ತಿ ತಂಡಕ್ಕೆ ಶಮಿ ಅನುಪಸ್ಥಿತಿ ಕಾಡಲಿದೆ. ಹಾಗಿದ್ದರೆ, ಶಮಿ ಯಾವಾಗ ಚೇತರಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಬಿಸಿಸಿಐ ಜಯ್‌ ಶಾ ಉತ್ತರ ನೀಡಿದ್ದಾರೆ.

ಈ ವರ್ಷಾಂತ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ವೇಳಗೆ ಮೊಹಮ್ಮದ್‌ ಶಮಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ಟೀಮ್‌ ಇಂಡಿಯಾದಿಂದ ಹೊರಬಿದ್ದಿರುವ ಶಮಿ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಕೂಡಾ ಮಿಸ್‌ ಮಾಡಿಕೊಂಡಿದ್ದರು. ಕಳೆದ ತಿಂಗಳು ಅಕಿಲ್ಸ್ ಸ್ನಾಯುರಜ್ಜುಗೆ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು, ಸದ್ಯಕ್ಕಂತೂ ವೃತ್ತಿಪರ ಕ್ರಿಕೆಟ್‌ ಆಡುವುದು ಕಷ್ಟವಾಗಿದೆ.

ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಆಡಿದ್ದ ಶಮಿ, ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಆಟಗಾರನಾಗಿ ಹೊರಹೊಮ್ಮಿದರು.

ಇದನ್ನೂ ಓದಿ | ವಿರಾಟ್ ಕೊಹ್ಲಿ ಶ್ರೇಷ್ಠತೆ ಕುಂದಿದೆ; ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಆಟಗಾರನ ಕುರಿತು ಮ್ಯಾಥ್ಯೂ ಹೇಡನ್ ಹೇಳಿಕೆ

ಐಪಿಎಲ್‌ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಭಾರತವು ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಲಿದೆ. ಆದರೆ, ಇದಕ್ಕೂ ಶಮಿ ಅಲಭ್ಯರಾಗಲಿದ್ದಾರೆ. ಭಾರತ ತಂಡವು ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

“ಶಮಿ ಅವರ ಶಸ್ತ್ರಚಿಕಿತ್ಸೆ ಮುಗಿದಿದ್ದು ಅವರು ಭಾರತಕ್ಕೆ ಮರಳಿದ್ದಾರೆ. ಬಾಂಗ್ಲಾದೇಶ ವಿರುದ್ಧದ ತವರಿನಲ್ಲಿ ನಡೆಯಲಿರುವ ಸರಣಿಗೆ ಶಮಿ ತಂಡಕ್ಕೆ ಮರಳುವ ಸಾಧ್ಯತೆಯಿದೆ,” ಎಂದು ಶಾ ಮಾಧ್ಯಮಗಳಿಗೆ ಹೇಳಿದ್ದಾರೆ.

ಇದನ್ನೂ ಓದಿ | ವಿಧಿಯ ಕೈವಾಡ 2 ಘಟನೆ ನಡೀತು, ಅವನು ಹುಟ್ದ, ಆ ಜಾಗನೂ ಹುಟ್ತು; ಆರ್​ಸಿಬಿ ಜತೆಗೆ ವಿರಾಟ್ ಕೊಹ್ಲಿ 16ನೇ ವಾರ್ಷಿಕೋತ್ಸವ

ಅತ್ತ ಕೆಎಲ್ ರಾಹುಲ್ ಅವರಿಗೆ ಇಂಜೆಕ್ಷನ್ ಅಗತ್ಯವಿದೆ. ಅವರು ಎನ್‌ಸಿಎಯಲ್ಲಿದ್ದಾರೆ ಎಂದು ಶಾ ಹೇಳಿದ್ದಾರೆ.

ರಿಷಬ್ ಪಂತ್ ಚೇತರಿಕೆ

ಐಪಿಎಲ್‌ ಆಡಲಿರುವ ರಿಷಬ್ ಪಂತ್ ಕುರಿತು ಬಿಸಿಸಿಐ ಕಾರ್ಯದರ್ಶಿ ಅಪ್ಡೇಟ್‌ ನೀಡಿದ್ದಾರೆ. “ಪಂತ್‌ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೀಪಿಂಗ್ ಕೂಡಾ ಮಾಡುತ್ತಿದ್ದಾರೆ. ನಾವು ಶೀಘ್ರದಲ್ಲೇ ಅವರನ್ನು ಫಿಟ್ ಎಂದು ಘೋಷಿಸುತ್ತೇವೆ. ಅವರು ಟಿ20 ವಿಶ್ವಕಪ್ ಆಡಿದರೆ, ಅದು ನಮಗೆ ದೊಡ್ಡ ವಿಷಯ. ಅವರು ನಮ್ಮ ದೊಡ್ಡ ಆಸ್ತಿ. ಅವರು ಐಪಿಎಲ್‌ನಲ್ಲಿ ಹೇಗೆ ಆಡುತ್ತಾರೆ ನೋಡೋಣ” ಎಂದು ಶಾ ಹೇಳಿದ್ದಾರೆ.