ಸತತ ಮೂರನೇ ಬಾರಿಗೆ ಎಸಿಸಿ ಅಧ್ಯಕ್ಷರಾಗಿ ಜಯ್ ಶಾ ಮರು ನೇಮಕ; ಬಿಸಿಸಿಐ ಕಾರ್ಯದರ್ಶಿಗೆ ಸರ್ವಾನುಮತ
Jay Shah: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಸತತ ಮೂರನೇ ಬಾರಿಗೆ ನೇಮಕಗೊಂಡಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರನ್ನು ಸತತ ಮೂರನೇ ಬಾರಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (Asian Cricket Council) ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಬಾಲಿಯಲ್ಲಿ ಜನವರಿ 31ರ ಬುಧವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಸಿಸಿಯ ಎಲ್ಲಾ ಸದಸ್ಯರು, ಶಾ ಅವರ ನಾಮನಿರ್ದೇಶನವನ್ನು ಸರ್ವಾನುಮತದಿಂದ ಬೆಂಬಲಿಸಿದರು.
ಜಯ್ ಶಾ ಅವರ ಅಧಿಕಾರ ವಿಸ್ತರಣೆಯನ್ನು ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ ಎರಡನೇ ಬಾರಿಗೆ ಪ್ರಸ್ತಾಪಿಸಿದರು. ಅದರಂತೆಯೇ ಸತತ ಮೂರನೇ ಬಾರಿಗೆ ಅವರು ಎಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ | ಎನ್ಸಿಎ ತಲುಪಿದ ರವೀಂದ್ರ ಜಡೇಜಾ; ಮುಂದಿನ ಪಂದ್ಯಕ್ಕಲ್ಲ, ಉಳಿದ ಟೆಸ್ಟ್ ಸರಣಿಗೂ ಆಲ್ರೌಂಡರ್ ಅನುಮಾನ
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಅವರ ಬಳಿಕ ಶಾ 2021ರ ಜನವರಿಯಲ್ಲಿ ಈ ಜವಾಬ್ದಾರಿ ವಹಿಸಿಕೊಂಡರು. ಶಾ ನಾಯಕತ್ವದಲ್ಲಿ ಎಸಿಸಿ 2022ರಲ್ಲಿ ಟಿ20 ಸ್ವರೂಪದಲ್ಲಿ ಮತ್ತು 2023ರಲ್ಲಿ ಏಕದಿನ ಸ್ವರೂಪದಲ್ಲಿ ಏಷ್ಯಾಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿತು.
“ಎಸಿಸಿ ಮಂಡಳಿಯು ನನ್ನ ಮೇಲಿಟ್ಟ ನಂಬಿಕೆಗೆ ನಾನು ಆಭಾರಿಯಾಗಿದ್ದೇನೆ. ಕ್ರೀಡೆಯ ಮೇಲೆ ವಿಶೇಷ ಗಮನ ಹರಿಸುವ ಮೂಲಕ ಕ್ರೀಡೆಯ ಸರ್ವಾಂಗೀಣ ಅಭಿವೃದ್ಧಿಗೆ ನಾವು ಬದ್ಧರಾಗಿರಬೇಕು. ಏಷ್ಯದಾದ್ಯಂತ ಕ್ರಿಕೆಟ್ ಅನ್ನು ಪೋಷಿಸಲು ಎಸಿಸಿ ಬದ್ಧವಾಗಿದೆ,” ಎಂದು ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಸರ್ಫರಾಜ್ vs ಪಾಟೀದಾರ್ vs ಸುಂದರ್; ಕೊಹ್ಲಿ-ಜಡೇಜಾ ಸ್ಥಾನಕ್ಕೆ ಯಾರು? ಎರಡನೇ ಟೆಸ್ಟ್‌ಗೆ 4 ಗೊಂದಲ
“ಶಾ ಅವರ ಮಾರ್ಗದರ್ಶನದಲ್ಲಿ, ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ಕ್ರಿಕೆಟ್ ಶಕ್ತಿ ಕೇಂದ್ರಗಳಲ್ಲಿ ಹೊಸ ಪ್ರತಿಭೆಗಳನ್ನು ಪತ್ತೆಹಚ್ಚುವಲ್ಲಿ ಎಸಿಸಿ ಪ್ರಮುಖ ಪಾತ್ರ ವಹಿಸಿದೆ” ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸಿಲ್ವಾ ಹೇಳಿದರು.
ಇದನ್ನೂ ಓದಿ | ನಮ್ಮ ಎಲ್ಲಾ ಸ್ಪಿನ್ ಅಸ್ತ್ರ ಪ್ರಯೋಗಿಸಲು ಹಿಂಜರಿಯಲ್ಲ; 2ನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಬ್ರೆಂಡನ್ ಮೆಕಲಮ್ ಎಚ್ಚರಿಕೆ
ಇದೆ ವೇಳೆ ಒಮಾನ್ ಕ್ರಿಕೆಟ್ ಅಧ್ಯಕ್ಷ ಮತ್ತು ಎಸಿಸಿ ಉಪಾಧ್ಯಕ್ಷ ಪಂಕಜ್ ಖಿಮ್ಜಿ ಕೂಡ ಶಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮರು ನೇಮಕವನ್ನು ಸ್ವಾಗತಿಸಿದ ಹಸನ್, ಶಾ ಅವರ ನಾಯಕತ್ವದಲ್ಲಿ ಏಷ್ಯಾದಲ್ಲಿ ಕ್ರಿಕೆಟ್ ಕ್ಷೇತ್ರದಲ್ಲಿನ ಅಭಿವೃದ್ಧಿ ಮುಂದುವರಿಯುತ್ತದೆ ಎಂದು ಹೇಳಿದರು.
(This copy first appeared in Hindustan Times Kannada website. To read more like this please logon to kannada.hindustantime.com )