ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ಗೆ ಸಜ್ಜಾಗಲು ಮಯಾಂಕ್‌ಗೆ ಪಾ‌ಕಿಸ್ತಾನ ಬೌಲರ್ಸ್ ವಿಡಿಯೋ ತೋರಿಸ್ತಿದೆ ಬಿಸಿಸಿಐ; ಹೀಗಂದ ವರದಿಗಾರನಿಗೆ ಬೆಂಡೆತ್ತಿದ ನೆಟ್ಟಿಗರು

ಟಿ20 ವಿಶ್ವಕಪ್​ಗೆ ಸಜ್ಜಾಗಲು ಮಯಾಂಕ್‌ಗೆ ಪಾ‌ಕಿಸ್ತಾನ ಬೌಲರ್ಸ್ ವಿಡಿಯೋ ತೋರಿಸ್ತಿದೆ ಬಿಸಿಸಿಐ; ಹೀಗಂದ ವರದಿಗಾರನಿಗೆ ಬೆಂಡೆತ್ತಿದ ನೆಟ್ಟಿಗರು

Mayank Yadav: ಪಾಕಿಸ್ತಾನ ತಂಡದೊಂದಿಗೆ ಕೆಲಸ ಮಾಡಿದ್ದ ಎಲ್ಎಸ್​ಜಿ​​ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರು ಮಯಾಂಕ್ ಯಾದವ್ ಅವರನ್ನು ಟಿ20 ವಿಶ್ವಕಪ್​ ಟೂರ್ನಿಗೆ ಸಿದ್ಧಪಡಿಸುತ್ತಿದ್ದಾರೆ ಎಂದು ಪಾಕ್​ ವರದಿಗಾರ ಹೇಳಿದ್ದಾರೆ.

ಟಿ20 ವಿಶ್ವಕಪ್​ಗೆ ಮಯಾಂಕ್​ ಸಿದ್ಧಪಡಿಸಲು ಪಾಕಿಸ್ತಾನ ಬೌಲರ್ಸ್ ವಿಡಿಯೋ ತೋರಿಸಲಾಗ್ತಿದೆ ಎಂದ ಪಾಕ್ ವರದಿಗಾರನಿಗೆ ಬೆಂಡೆತ್ತಿದ ನೆಟ್ಟಿಗರು
ಟಿ20 ವಿಶ್ವಕಪ್​ಗೆ ಮಯಾಂಕ್​ ಸಿದ್ಧಪಡಿಸಲು ಪಾಕಿಸ್ತಾನ ಬೌಲರ್ಸ್ ವಿಡಿಯೋ ತೋರಿಸಲಾಗ್ತಿದೆ ಎಂದ ಪಾಕ್ ವರದಿಗಾರನಿಗೆ ಬೆಂಡೆತ್ತಿದ ನೆಟ್ಟಿಗರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಯುವ ಸ್ಟಾರ್ ಮಯಾಂಕ್ ಯಾದವ್ (Mayank Yadav) ಅವರು ವೇಗದ ಎಸೆತಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ಗಂಟೆಗೆ 155.8 ಕಿ.ಮೀ ವೇಗದಲ್ಲಿ ಮಿಂಚಿನ ವೇಗದ ಬೌಲಿಂಗ್ ನಡೆಸಿ 2024ರ ಐಪಿಎಲ್​​ನಲ್ಲಿ ಅತ್ಯಂತ ವೇಗದ ಎಸೆತ ದಾಖಲಿಸಿದ್ದ ಮಯಾಂಕ್, ಏಪ್ರಿಲ್ 2ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 156.7 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ತನ್ನ ದಾಖಲೆ ಮತ್ತು ಜೆರಾಲ್ಡ್ ಕೊಯೆಟ್ಜಿ ವೇಗದ ಎಸೆತದ ದಾಖಲೆಯನ್ನು ಮುರಿದಿದ್ದರು. ಪ್ರಸಕ್ತ ಆವೃತ್ತಿಯಲ್ಲಿ ಅತಿ ವೇಗದ ಎಸೆತ ಹಾಕಿದ ಪಟ್ಟಿಯಲ್ಲಿ ಮಯಾಂಕ್​ ಅಗ್ರಸ್ಥಾನದಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

‘ಪಾಕ್ ಬೌಲರ್ಸ್ ವಿಡಿಯೋ ತೋರಿಸಿ ಮಯಾಂಕ್​ ರೆಡಿ ಮಾಡ್ತಿದ್ದಾರೆ’

ಮಯಾಂಕ್ ಅವರ ವೇಗ ಮತ್ತು ಅವರ ವಿಕೆಟ್ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ವಿಶ್ವ ಕ್ರಿಕೆಟ್ ಸಂಪೂರ್ಣ ವಿಸ್ಮಯಗೊಂಡಿದೆ. ಹೆಚ್ಚಿನ ಅನುಭವಿಗಳು ಮತ್ತು ತಜ್ಞರು ಈಗಾಗಲೇ ಐಪಿಎಲ್ 2024ರ ಅಂತ್ಯದ ನಂತರ ಮಯಾಂಕ್​​ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದೇ ವೇಳೆ ಪಾಕಿಸ್ತಾನದ ವರದಿಗಾರೊಬ್ಬರು, ತಮ್ಮ‌ ದೇಶದ ಬೌಲರ್‌ಗಳ ವಿಡಿಯೋಗಳನ್ನು ತೋರಿಸಲಾಗುತ್ತಿದೆ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದಾರೆ.

‘ಸದ್ಯ ಟಿ20 ವಿಶ್ವಕಪ್ ಟೂರ್ನಿ​ಗೆ ಮಯಾಂಕ್​ರನ್ನು ಬಿಸಿಸಿಐ ಸಿದ್ಧಪಡಿಸುತ್ತಿದೆ. 2023ರ ಏಕದಿನ ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನ ತಂಡದೊಂದಿಗೆ ಕೆಲಸ ಮಾಡಿದ್ದ ಲಕ್ನೋ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರು ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಅವರ ವಿಡಿಯೋಗಳನ್ನು ಮಯಾಂಕ್​ಗೆ ತೋರಿಸಿ ವಿಶ್ವಕಪ್​ಗೆ ಸಜ್ಜುಗೊಳಿಸುತ್ತಿದ್ದಾರೆ’ ಎಂದು ಪಾಕಿಸ್ತಾನದ ವರದಿಗಾರ ಫರೀದ್ ಖಾನ್ ಎಕ್ಸ್​​ನಲ್ಲಿ ಹೇಳಿದ್ದಾರೆ.

‘ಮಯಾಂಕ್ ಯಾದವ್ ಭಾರತದ ಟಿ20 ವಿಶ್ವಕಪ್ ತಂಡದ ಭಾಗವಾಗಲಿದ್ದಾರೆ. ನಾನು ನಿಮಗೆ ಭರವಸೆ ನೀಡುತ್ತೇನೆ. ನೀವು ನನ್ನ ಪೋಸ್ಟ್​​​ನ ಸ್ಕ್ರೀನ್ ಶಾಟ್ ತೆಗೆದುಕೊಳ್ಳಿ. ನಾನು ಹೇಳಿದ್ದು ಸುಳ್ಳಾಗುವುದಿಲ್ಲ. ಏಕೆಂದರೆ ಭಾರತವು ಮಯಾಂಕ್​ ಅವರನ್ನು ಟಿ20 ವಿಶ್ವಕಪ್​ಗೆ ಸಿದ್ಧಪಡಿಸುತ್ತಿದೆ. 2022ರ ಟಿ20 ವಿಶ್ವಕಪ್​​ನಲ್ಲಿ ಭಾರತ ವಿರುದ್ಧ ನಸೀನ್ ಶಾ ಮತ್ತು ಹ್ಯಾರಿಸ್ ರೌಫ್ ಅವರ ಸ್ಪೆಲ್​​​ ವಿಡಿಯೋಗಳನ್ನು ಬಿಸಿಸಿಐ ಆತನಿಗೆ ತೋರಿಸುತ್ತಿದೆ. ಪಾಕಿಸ್ತಾನದ ಮಾಜಿ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಎಲ್ಎಸ್​ಜಿ ತಂಡದಲ್ಲಿದ್ದು, ಅದೇ ತಂಡದಲ್ಲಿರುವ ಮಯಾಂಕ್ ಅವರಿಗೆ ವಿದೇಶಿ ಪಿಚ್​​ಗಳು, ಎದುರಾಳಿ ತಂಡಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ’ ಎಂದು ಫರೀದ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

ಅಲ್ಲದೆ, ಟಿ20 ವಿಶ್ವಕಪ್​ಗೆ ಸಿದ್ಧಪಡಿಸುವಂತೆ ಮಾರ್ಕೆಲ್​ ಅವರಿಗೆ ಕೂಡ ಬಿಸಿಸಿಐ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ. ವಿಲಕ್ಷಣ ಹೇಳಿಕೆಯ ನಂತರ ವರದಿಗಾರ ಫರೀದ್ ಖಾನ್ ಎಕ್ಸ್​ನಲ್ಲಿ ನಿರ್ದಯವಾಗಿ ಟ್ರೋಲ್ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.

ಏತನ್ಮಧ್ಯೆ, ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ಈಗಾಗಲೇ ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಜೊತೆ ಮೂರನೇ ವೇಗದ ಬೌಲಿಂಗ್ ಆಯ್ಕೆಯಾಗಿ ಮಯಾಂಕ್​ಗೆ ಅವಕಾಶ ನೀಡಬೇಕೆಂದು ತಿಳಿಸಿದ್ದಾರೆ. ‘ನಾನು ಅಜಿತ್ ಅಗರ್ಕರ್ ಅವರ ಸ್ಥಾನದಲ್ಲಿದ್ದರೆ ಮಯಾಂಕ್​ಗೆ ಅವಕಾಶ ನೀಡುತ್ತಿದ್ದೆ. ಬುಮ್ರಾ, ಶಮಿ ಅವರೊಂದಿಗೆ ಅವಕಾಶ ಕೊಡುತ್ತಿದ್ದೆ. ಮಯಾಂಕ್ ಅವರ ಫಾರ್ಮ್, ಆಕ್ಷನ್ ಮತ್ತು ಚೆಂಡು ಬಿಡುಗಡೆ ಮಾಡುವ ವಿಧಾನ ನೋಡಿದರೆ ತುಂಬಾ ನಿಯಂತ್ರಣದಲ್ಲಿದ್ದಾರೆ ಎಂದು ತೋರುತ್ತದೆ. ಸಾಮರ್ಥ್ಯ ಸಾಬೀತುಪಡಿಸಲು ಆತನಿಗೆ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟರೆ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ಭಾವನೆ ನನಗಿದೆ. ಐಪಿಎಲ್​​ನಲ್ಲಿ ಅನೇಕ ವಿದೇಶಿ ಆಟಗಾರರನ್ನು ಔಟ್​ ಮಾಡುವುದರಿಂದ ಟಿ20 ವಿಶ್ವಕಪ್​​​ನಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ’ ಎಂದು ಕ್ರಿಕ್​ಬಜ್​ನಲ್ಲಿ ಚರ್ಚೆಯಲ್ಲಿ ಹೇಳಿದ್ದಾರೆ.

IPL_Entry_Point