Explained: ಐಪಿಎಲ್ನಲ್ಲಿ ಡಿಆರ್ಎಸ್ ಬದಲಿಗೆ ಸ್ಮಾರ್ಟ್ ರಿಪ್ಲೆ ಸಿಸ್ಟಮ್ ಬಳಕೆ; ಎಸ್ಆರ್ಎಸ್ ಹೇಗೆ ಕೆಲಸ ಮಾಡುತ್ತದೆ?
Smart Replay System : ಐಪಿಎಲ್ ರೋಚಕತೆ ಮತ್ತಷ್ಟು ಹೆಚ್ಚಿಸಲು ಪ್ರಸಕ್ತ ಟೂರ್ನಿಯಲ್ಲಿ ಹೊಸ ನಿಯಮವೊಂದನ್ನು ಪರಿಚಯಿಸಲು ಬಿಸಿಸಿಐ ಮುಂದಾಗಿದೆ. 17ನೇ ಆವೃತ್ತಿಯಲ್ಲಿ ಐಪಿಎಲ್ ಡಿಸಿಷನ್ ರಿವ್ಯೂ ಸಿಸ್ಟಮ್ ಬದಲಿಗೆ ಸ್ಮಾರ್ಟ್ ರಿಪ್ಲೆ ಸಿಸ್ಟಮ್ ಬಳಕೆಗೆ ಬಿಸಿಸಿಐ ಮುಂದಾಗಿದೆ.

ಐಪಿಎಲ್ (IPL 2024) ಜಾತ್ರೆಗೆ ಕ್ಷಣಗಣನೆ ಆರಂಭಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK vs RCB) ಸೆಣಸಾಟ ನಡೆಸಲಿವೆ. ಐಪಿಎಲ್ ರೋಚಕತೆ ಮತ್ತಷ್ಟು ಹೆಚ್ಚಿಸಲು ಪ್ರಸಕ್ತ ಟೂರ್ನಿಯಲ್ಲಿ ಹೊಸ ನಿಯಮವೊಂದನ್ನು ಪರಿಚಯಿಸಲು ಬಿಸಿಸಿಐ ಮುಂದಾಗಿದೆ. 17ನೇ ಆವೃತ್ತಿಯಲ್ಲಿ ಐಪಿಎಲ್ ಡಿಸಿಷನ್ ರಿವ್ಯೂ ಸಿಸ್ಟಮ್ ಬದಲಿಗೆ ಸ್ಮಾರ್ಟ್ ರಿಪ್ಲೆ ಸಿಸ್ಟಮ್ (Smart Replay System) ಬಳಕೆಗೆ ಬಿಸಿಸಿಐ (BCCI) ಮುಂದಾಗಿದೆ.
ಈ ಹಿಂದೆ ಫೀಲ್ಡ್ ಅಂಪೈರ್ಸ್ ತೀರ್ಪುಗಳಲ್ಲಿ ಲೋಪದೋಷ ಕಂಡು ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ರಿಪ್ಲೆ ಸಿಸ್ಟಮ್ ಮೂಲಕ ದಕ್ಷತೆ ಹೆಚ್ಚಿಸಲು ಮತ್ತು ಪ್ರಕ್ರಿಯೆ ಸುಗಮಗೊಳಿಸಲು ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಡಿಆರ್ಎಸ್ನಂತೆ ಗೊಂದಲಗಳು ಇಲ್ಲದೆ, ಸ್ಪಷ್ಟವಾದ ತೀರ್ಪು ಪ್ರಕಟವಾಗಲಿದೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ.
ಸ್ಮಾರ್ಟ್ ರಿವ್ಯೂ ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ?
ಡಿಸಿಷನ್ ರಿವ್ಯೂ ಸಿಸ್ಟಮ್ನಂತೆ ಫೀಲ್ಡ್ ಅಂಪೈರ್ 3ನೇ ಅಂಪೈರ್ಗೆ ಮನವಿ ಸಲ್ಲಿಸಬೇಕು. ಆದರೆ ಇಲ್ಲಿ 3ನೇ ಅಂಪೈರ್ ಇನ್ಪುಟ್ ಕೊಡುವವರೆಗೂ ಕಾಯುವಂತಿಲ್ಲ. ಬದಲಾಗಿ ಹೊಸ ತಂತ್ರಜ್ಞಾನದ ಮೂಲಕ ತೀರ್ಪುನೀಡಲಾಗುತ್ತದೆ. ಹಾಕ್-ಐ ಅಪರೇಟ್ಗಳ ನೆರವಿನಿಂದ ತಕ್ಷಣವೇ ತೀರ್ಪು ಹೊರಬರಲಿದೆ. ಈ ವ್ಯವಸ್ಥೆಯು ಮೈದಾನದಲ್ಲಿ ಇರಿಸಲಾಗಿರುವ ಹಾಕ್-ಐನಿಂದ ಎಂಟು ಹೈಸ್ಪೀಡ್ ಕ್ಯಾಮೆರಾಗಳನ್ನು ಒಳಗೊಂಡಿರುತ್ತದೆ.
8 ಹೈಸ್ಪೀಡ್ ಕ್ಯಾಮೆರಾಗಳಿಂದ ಚಿತ್ರ ತ್ವರಿತ ವಿಶ್ಲೇಷಣೆ ಮತ್ತು ನೈಜ-ಸಮಯದ ಚಿತ್ರಗಳನ್ನು ಒದಗಿಸಲು ಟಿವಿ ಅಂಪೈರ್ ಜೊತೆಗೆ ಇಬ್ಬರು ಹಾಕ್-ಐ ಆಪರೇಟರ್ಗಳನ್ನು ನಿಯೋಜಿಸಲಾಗುತ್ತದೆ. 3ನೇ ಅಂಪೈರ್ ಮತ್ತು ಹಾಕ್-ಐ ಆಪರೇಟರ್ಗಳ ನಡುವೆ ಮಧ್ಯಸ್ಥಿಕೆ ವಹಿಸಿದ್ದ ಟಿವಿ ಪ್ರಸಾರ ನಿರ್ದೇಶಕರು ಈ ನೂತನ ಪದ್ದತಿಯಲ್ಲಿ ಭಾಗವಹಿಸಲ್ಲ. ಬದಲಾಗಿ, ಹಾಕ್-ಐ ಆಪರೇಟರ್ಗಳು ಸ್ಪ್ಲಿಟ್-ಸ್ಕ್ರೀನ್ಗಳ ಮೂಲಕ ಪರಿಶೀಲನೆ ನಡೆಸಲಿದ್ದಾರೆ. ಆಯಾ ಸ್ಕ್ರೀನ್ ಮೂಲಕ ನೆರವು ಪಡೆಯಲಾಗುತ್ತದೆ.
ಬೌಂಡರಿ ಲೈನ್ನಲ್ಲಿ ಫೀಲ್ಡರ್ ಕ್ಯಾಚ್ ಹಿಡಿದಿದ್ದಾರೆ ಎಂದು ಇಟ್ಟುಕೊಳ್ಳೋಣ. ಆಗ ಫೀಲ್ಡರ್ ಕಾಲು ಬೌಂಡರಿ ಗೆರೆ ಟಚ್ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಕಾಲಿನ ಭಾಗದ ವಿಡಿಯೋವನ್ನು ಸ್ಪ್ಲಿಟ್ ಸ್ಕ್ರೀನ್ನಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಹಾಗೆಯೇ ಪಾದದ ಯಾವ ಭಾಗ ಬೌಂಡರಿ ಗೆರೆಗೆ ಟಚ್ ಆಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದು. ಈ ಹಿಂದೆ ಅಷ್ಟು ಸ್ಪಷ್ಟನೆ ಸಿಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ 3ನೇ ಅಂಪೈರ್ ಹೇಳಿದ್ದೇ ಅಂತಿಮ ನಿರ್ಧಾರವಾಗಿರುತ್ತಿತ್ತು. ಈಗ ಯಾವುದೇ ಸಮಸ್ಯೆ ಕೂಡ ಉದ್ಭವವಾಗುವುದಿಲ್ಲ. ನೋಬಾಲ್, ಸ್ಟಂಪ್ಸ್ ಸೇರಿದಂತೆ ಪ್ರತಿಯೊಂದನ್ನು ಪರಿಶೀಲಿಸಬಹುದು.
ಕ್ಯಾಮೆರಾಗಳು ಎಲ್ಲೆಲ್ಲೆ ಇರುತ್ತವೆ?
8 ಹಾಕ್-ಐ-ಕ್ಯಾಮೆರಾಗಳನ್ನು ಪ್ರತಿ ಐಪಿಎಲ್ ಪಂದ್ಯದಲ್ಲೂ ಬಳಕೆ ಮಾಡಲಾಗುತ್ತದೆ. ವಿಕೆಟ್ ಸ್ಕ್ವೇರ್ ಬಳಿ ನಾಲ್ಕು ಕ್ಯಾಮೆರಾಗಳು ಮತ್ತು ಬೌಂಡರಿ ಗೆರೆಗಳ ಬಳಿಕ 4 ಕ್ಯಾಮೆರಾಗಳನ್ನೂ ಅಳವಡಿಸಲಾಗುತ್ತದೆ. ರನೌಟ್, ಸ್ಟಂಪ್ಸ್, ಕ್ಯಾಚ್, ಓವರ್ ಥ್ರೋ ದೃಶ್ಯಗಳನ್ನು ಈ ಕ್ಯಾಮೆರಾಗಳಲ್ಲಿ ಪರಿಶೀಲಿಸಬಹುದು. ಹಾಕ್-ಐ ಕ್ಯಾಮೆರಾಗಳು ಪ್ರತಿ ಸೆಕೆಂಡಿಗೆ ಬರೋಬ್ಬರಿ 300 ಫ್ರೇಮ್‌ಗಳಲ್ಲಿ ಸೆರೆಹಿಡಿಯುತ್ತವೆ. ಇದು ಸ್ಪಷ್ಟ ಚಿತ್ರಣವನ್ನು ನೀಡಲಿದೆ. ಐಪಿಎಲ್ನಲ್ಲಿ ಯಶಸ್ಸು ಕಂಡರೆ, ಬಿಸಿಸಿಐನ ಎಲ್ಲಾ ಟೂರ್ನಿಗಳು ಮತ್ತು ಐಸಿಸಿಯೂ ಸ್ಮಾರ್ಟ್ ರಿಪ್ಲೆ ಸಿಸ್ಟಮ್ ಅನ್ನು ಪರಿಚಯಿಸಿದರೂ ಅನುಮಾನವೇ ಬೇಡ.