ಮೇ 15-16ರಂದು ಐಪಿಎಲ್ ಪುನರಾರಂಭ ಸಾಧ್ಯತೆ; ಸರ್ಕಾರ ಅನುಮತಿಗಾಗಿ ಕಾಯುತ್ತಿರುವ ಬಿಸಿಸಿಐ
ಕನ್ನಡ ಸುದ್ದಿ  /  ಕ್ರಿಕೆಟ್  /  ಮೇ 15-16ರಂದು ಐಪಿಎಲ್ ಪುನರಾರಂಭ ಸಾಧ್ಯತೆ; ಸರ್ಕಾರ ಅನುಮತಿಗಾಗಿ ಕಾಯುತ್ತಿರುವ ಬಿಸಿಸಿಐ

ಮೇ 15-16ರಂದು ಐಪಿಎಲ್ ಪುನರಾರಂಭ ಸಾಧ್ಯತೆ; ಸರ್ಕಾರ ಅನುಮತಿಗಾಗಿ ಕಾಯುತ್ತಿರುವ ಬಿಸಿಸಿಐ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಋತುವಿನ ಉಳಿದ ಪಂದ್ಯಗಳು ಮೇ 15-16ರಂದು ಪುನರಾರಂಭಗೊಳ್ಳುವ ಸಾಧ್ಯತೆಯಿದೆ. ಈ ಕುರಿತು ಕೇಂದ್ರ ಸರ್ಕಾರದ ಅನುಮತಿಗಾಗಿ ಬಿಸಿಸಿಐ ಕಾಯುತ್ತಿದೆ. ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಮೇ 15-16ರಂದು ಐಪಿಎಲ್ ಪುನರಾರಂಭ ಸಾಧ್ಯತೆ; ಸರ್ಕಾರ ಅನುಮತಿಗಾಗಿ ಕಾಯುತ್ತಿರುವ ಬಿಸಿಸಿಐ
ಮೇ 15-16ರಂದು ಐಪಿಎಲ್ ಪುನರಾರಂಭ ಸಾಧ್ಯತೆ; ಸರ್ಕಾರ ಅನುಮತಿಗಾಗಿ ಕಾಯುತ್ತಿರುವ ಬಿಸಿಸಿಐ (PTI)

ಐಪಿಎಲ್ 2025ರ ಆವೃತ್ತಿಯ ಉಳಿದ ಪಂದ್ಯಗಳನ್ನು ಪುನರಾರಂಭಿಸುವ ಮೊದಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪಂದ್ಯಾವಳಿಯ 18ನೇ ಆವೃತ್ತಿಯನ್ನು ಶುಕ್ರವಾರ (ಮೇ 9) ಒಂದು ವಾರದವರೆಗೆ ಸ್ಥಗಿತಗೊಳಿಸಲಾಯಿತು. ಆ ಬಳಿಕ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ, ಮುಂದಿನ ವಾರದಲ್ಲಿ ಯಾವುದೇ ಸಮಯದಲ್ಲಿ ಪಂದ್ಯಾವಳಿಯನ್ನು ಪುನರಾರಂಭಿಸುವ ಸಾಧ್ಯತೆ ಇದೆ.

ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಐಪಿಎಲ್‌ ಟೂರ್ನಿಯ 18ನೇ ಆವೃತ್ತಿಯನ್ನು ಪುನರಾರಂಭಿಸಲು ನಿರ್ಧರಿಸುವ ಮೊದಲು ಅಗತ್ಯವಿರುವ ಎಲ್ಲಾ ಮಧ್ಯಸ್ಥಗಾರರನ್ನು ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ.

ಐಪಿಎಲ್ ಪುನರಾರಂಭಿಸಲು ಭಾರತ ಸರ್ಕಾರ ನೀಡುವ ಅನುಮೋದನೆಯೇ ಪ್ರಮುಖ ಅಂಶ. ಸರ್ಕಾರವು ಅಗತ್ಯ ಅನುಮತಿ ನೀಡಿದರೆ ಮಾತ್ರ ಮುಂದಿನ ಕ್ರಮ ತೆಗೆದುಕೊಳ್ಳಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಹೇಳಿದರು. “ಮುಂದಿನ ದಿನಗಳಲ್ಲಿ, ಲೀಗ್ ಪುನರಾರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಉಳಿದ ಪಂದ್ಯಗಳನ್ನು ಆಯೋಜಿಸಲು ನಾವು ಫ್ರಾಂಚೈಸಿಗಳು, ಪ್ರಸಾರಕರು, ಪ್ರಾಯೋಜಕರು ಮತ್ತು ರಾಜ್ಯ ಕ್ರಿಕೆಟ್‌ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುತ್ತೇವೆ” ಎಂದು ಸೈಕಿಯಾ ಹೇಳಿದ್ದಾರೆ.

“ಈ ಹಂತದಲ್ಲಿ ಐಪಿಎಲ್‌ನ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಅದರ ಪುನರಾರಂಭದ ಸಮಯವನ್ನು ಅಂತಿಮಗೊಳಿಸುವ ಮೊದಲು ಭಾರತ ಸರ್ಕಾರದ ಅನುಮೋದನೆಯನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಇಡೀ ಪ್ರಕ್ರಿಯೆ ಮುಗಿದ ನಂತರ ಐಪಿಎಲ್ ಪುನರಾರಂಭದ ದಿನಾಂಕವನ್ನು ಬಿಸಿಸಿಐ ಸೂಕ್ತವಾಗಿ ಪ್ರಕಟಿಸುತ್ತದೆ,” ಎಂದು ಅವರು ಹೇಳಿದ್ದಾರೆ.

ಮೇ 15-16ರಂದು ಐಪಿಎಲ್ ಪುನರಾರಂಭ ಸಾಧ್ಯತೆ

ಐಪಿಎಲ್ ಪುನರಾರಂಭದ ದಿನಾಂಕದ ಬಗ್ಗೆ ಮಂಡಳಿಯ ಅಧಿಕಾರಿಗಳು ಮೌನವಾಗಿದ್ದಾರೆ. ಆದಾಗ್ಯೂ, ಮೇ 15 ಅಥವಾ 16ರೊಳಗೆ ಐಪಿಎಲ್ 2025 ಋತುವನ್ನು ಪುನರಾರಂಭಿಸುವ ಸಾಧ್ಯತೆ ಇದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಮೂಲಗಳು ಹಿಂದೂಸ್ತಾನ್ ಟೈಮ್ಸ್‌ಗೆ ಖಚಿತಪಡಿಸಿವೆ. ಆದರೆ, ಪಂದ್ಯಾವಳಿಯು ಸೀಮಿತ ಸ್ಥಳಗಳಲ್ಲಿ ಮುಂದುವರೆಯುವ ಸಾಧ್ಯತೆ ಇದೆ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.