Bengaluru Weather: ಐಪಿಎಲ್‌ ಕ್ರಿಕೆಟ್‌ನ ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಇಂದು, ಬೆಂಗಳೂರನ್ನಾವರಿಸಿದೆ ಮಳೆ ಮೋಡ, ಇವತ್ತಿನ ಮಳೆ ಕಥೆ ಏನು
ಕನ್ನಡ ಸುದ್ದಿ  /  ಕ್ರಿಕೆಟ್  /  Bengaluru Weather: ಐಪಿಎಲ್‌ ಕ್ರಿಕೆಟ್‌ನ ಆರ್‌ಸಿಬಿ Vs ಸಿಎಸ್‌ಕೆ ಪಂದ್ಯ ಇಂದು, ಬೆಂಗಳೂರನ್ನಾವರಿಸಿದೆ ಮಳೆ ಮೋಡ, ಇವತ್ತಿನ ಮಳೆ ಕಥೆ ಏನು

Bengaluru Weather: ಐಪಿಎಲ್‌ ಕ್ರಿಕೆಟ್‌ನ ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಇಂದು, ಬೆಂಗಳೂರನ್ನಾವರಿಸಿದೆ ಮಳೆ ಮೋಡ, ಇವತ್ತಿನ ಮಳೆ ಕಥೆ ಏನು

ಐಪಿಎಲ್ 2024 ಪಂದ್ಯ ಅಂತಿಮ ಘಟ್ಟದ ಸಮೀಪ ತಲುಪಿದ್ದು, ಪ್ಲೇಆಫ್‌ ಹಂತಕ್ಕೆ ಆರ್‌ಸಿಬಿ ಪ್ರವೇಶಿಸುವುದೇ ಇಲ್ಲವೇ? ಬೆಂಗಳೂರಿನಲ್ಲೇ ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಇಂದು ನಡೆಯಲಿದೆ. ಈ ನಡುವೆ, ಮಳೆಯ ಆತಂಕ ಎದುರಾಗಿದ್ದು ಬೆಂಗಳೂರನ್ನು ಮಳೆ ಮೋಡ ಆವರಿಸಿಕೊಂಡಿದೆ. ಹಾಗಾದರೆ ಇವತ್ತಿನ ಮಳೆಯ ಕಥೆ ಏನು, ಬೆಂಗಳೂರು ಹವಾಮಾನ (Bengaluru Weather) ವರದಿ ವಿವರ ಇಲ್ಲಿದೆ.

ಐಪಿಎಲ್‌ ಕ್ರಿಕೆಟ್‌ನ ನಿರ್ಣಾಯಕ ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಇಂದು ರಾತ್ರಿ ನಡೆಯಲಿದೆ. ಈ ನಡುವೆ ಬೆಂಗಳೂರನ್ನಾವರಿಸಿದೆ ಮೋಡದ ಕರಿಛಾಯೆ, ಇವತ್ತಿನ ಮಳೆ ಕಥೆ ಏನು, ಬೆಂಗಳೂರು ಹವಾಮಾನ (Bengaluru Weather) ವಿವರ ನೀಡಿದ ಹವಾಮಾನ ಇಲಾಖೆ. (ಸಾಂಕೇತಿಕ ಚಿತ್ರ)
ಐಪಿಎಲ್‌ ಕ್ರಿಕೆಟ್‌ನ ನಿರ್ಣಾಯಕ ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಇಂದು ರಾತ್ರಿ ನಡೆಯಲಿದೆ. ಈ ನಡುವೆ ಬೆಂಗಳೂರನ್ನಾವರಿಸಿದೆ ಮೋಡದ ಕರಿಛಾಯೆ, ಇವತ್ತಿನ ಮಳೆ ಕಥೆ ಏನು, ಬೆಂಗಳೂರು ಹವಾಮಾನ (Bengaluru Weather) ವಿವರ ನೀಡಿದ ಹವಾಮಾನ ಇಲಾಖೆ. (ಸಾಂಕೇತಿಕ ಚಿತ್ರ) (Blackcoffeelub)

ಬೆಂಗಳೂರು: ಐಪಿಎಲ್‌ 2024 ಅಂತಿಮ ಘಟ್ಟದ ಸಮೀಪ ತಲುಪಿದ್ದು, ಇಂದು ರಾತ್ರಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪ್ರಮುಖ ಪಂದ್ಯದ ಮೇಲೆ ಬೆಂಗಳೂರು ಹವಾಮಾನ (Bengaluru Weather) ಪರಿಸ್ಥಿತಿ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಪ್ಲೇಆಫ್‌ ಹಂತಕ್ಕೆ ಮುನ್ನಡೆಯಲು ಅವಕಾಶ ನೀಡುವ ಈ ಪಂದ್ಯ ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದ ಫಲಿತಾಂಶವನ್ನು ಆಧರಿಸಿ ಎರಡೂ ತಂಡಗಳ ಪ್ಲೇಆಫ್ ಆಕಾಂಕ್ಷೆಗಳ ಭವಿಷ್ಯ ನಿರ್ಧಾರವಾಗಲಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇಂದು ರಾತ್ರಿ 8 ರಿಂದ 11 ಗಂಟೆಯವರೆಗೆ ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್‌ ಪಂದ್ಯ ನಡೆಯುವ ವೇಳೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಶೇ.75 ರಷ್ಟು ಇದೆ ಎಂದು ಮಳೆ ಮುನ್ಸೂಚನೆಯ ಹವಾಮಾನ ವರದಿ ಹೇಳಿವೆ. ಇದಲ್ಲದೇ, ಇಂದು ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಅಲ್ಲಲ್ಲಿ ಬಿರುಗಾಳಿ ಮತ್ತು ಗುಡುಗು ಸಹಿತ ಭಾರೀ ಮಳೆ ಸುರಿಯುವ ಲಕ್ಷಣಗಳಿವೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಮೇ 18 ರಂದು ಅಂದರೆ ಇಂದು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಭಾರೀ ಗಾಳಿಯೊಂದಿಗೆ (ಗಂಟೆಗೆ 40-50 ಕಿಮೀ ವೇಗ) ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್‌ ಪಂದ್ಯ ರದ್ದಾದರೆ…

ಒಂದೊಮ್ಮೆ ಬೆಂಗಳೂರಿನಲ್ಲಿ ಭಾರಿ ಮಳೆಯ ಕಾರಣಕ್ಕೆ ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್‌ ಪಂದ್ಯ ರದ್ದಾದರೆ ಎರಡೂ ತಂಡಗಳು ತಲಾ ಒಂದು ಅಂಕ ಪಡೆಯುತ್ತವೆ. ಐಪಿಎಲ್‌ 2024ರ ಪ್ಲೇ ಆಫ್ ಹಂತಕ್ಕೆ ಹೋಗುವ ಆರ್‌ಸಿಬಿಯ ಕನಸು ಕಮರಿ ಹೋಗಲಿದೆ. ಸಿಎಸ್‌ಕೆ ಪ್ಲೇಆಫ್ ಹಂತಕ್ಕೆ ಮುನ್ನಡೆಯಲಿದೆ.

ನಿರಂತರ ಮಳೆ ಸುರಿದರೆ ಮಾತ್ರವೇ ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್‌ ಪಂದ್ಯ ವಾಷ್‌ ಔಟ್ ಆಗಬಹುದು. ಹಾಗಾಗದೇ ಇದ್ದರೆ, ಐಪಿಎಲ್ ಆಟದ ನಿಯಮ ಪ್ರಕಾರ, 5 ಓವರ್ ಪಂದ್ಯವಾದರೂ ನಡೆಯಲಿದೆ. ಇದು ಕೂಡ ತಡರಾತ್ರಿ 10.56ಕ್ಕೆ ಮೊದಲೇ ನಡೆಯಬೇಕು.

ಈ ದಿನದ ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್‌ ಪಂದ್ಯದ ಮುಖ್ಯ ವಿವರ

ಐಪಿಎಲ್ 2024ರ 68ನೇ ಪಂದ್ಯ

ಆಡಲಿರುವ ತಂಡಗಳು - ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) vs ಚೆನ್ನೈ ಸೂಪರ್‌ ಕಿಂಗ್ಸ್ (ಸಿಎಸ್‌ಕೆ)

ಪಂದ್ಯ ನಡೆಯುವ ಸ್ಥಳ - ಎಂ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

ಪಂದ್ಯದ ದಿನಾಂಕ ಮತ್ತು ಸಮಯ - ಮೇ 18, ರಾತ್ರಿ 7.30 ರಿಂದ 11

ಐಪಿಎಲ್‌ ಪಂದ್ಯದ ನೇರ ಪ್ರಸಾರ - ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌, ಜಿಯೋ ಸಿನಿಮಾ ಆಪ್‌ ಮತ್ತು ವೆಬ್‌ಸೈಟ್‌

ಐಪಿಎಲ್‌ ಪಂದ್ಯಗಳ ಇತಿಹಾಸದಲ್ಲೇ ಅತ್ಯಂತ ರೋಚಕ ಪಂದ್ಯವೆನಿಸಿಕೊಂಡರುವ ಈ ದಿನದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಬಹುನಿರೀಕ್ಷಿತ ಹಣಾಹಣಿಯು ಮಳೆಯ ಕಾರಣಕ್ಕೆ ರದ್ದಾಗುವ ಅಪಾಯದಲ್ಲಿದೆ. ಇದು ಬೆಂಗಳೂರು ಅಭಿಮಾನಿಗಳ ನಿದ್ದೆಗೆಡಿಸಿದೆ. ಆದಾಗ್ಯೂ ಆರ್‌ಸಿಬಿ ಗೆಲ್ಲುವ ಲೆಕ್ಕಾಚಾರಗಳನ್ನೂ ಅವರು ಹಾಕುತ್ತಿದ್ದಾರೆ. ಅಂತಹ ಲೆಕ್ಕಾಚಾರಗಳ ವರದಿಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಈಗಾಗಲೇ ಪ್ರಕಟಿಸಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner