2023ರಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿದ ಐವರು ಬ್ಯಾಟರ್‌ಗಳು; ಇಬ್ಬರು ದ್ವಿಶತಕ, ಪಟ್ಟಿಯಲ್ಲಿ ಓರ್ವ ಭಾರತೀಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2023ರಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿದ ಐವರು ಬ್ಯಾಟರ್‌ಗಳು; ಇಬ್ಬರು ದ್ವಿಶತಕ, ಪಟ್ಟಿಯಲ್ಲಿ ಓರ್ವ ಭಾರತೀಯ

2023ರಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿದ ಐವರು ಬ್ಯಾಟರ್‌ಗಳು; ಇಬ್ಬರು ದ್ವಿಶತಕ, ಪಟ್ಟಿಯಲ್ಲಿ ಓರ್ವ ಭಾರತೀಯ

  • Year Ender 2023: ಶುಭ್ಮನ್ ಗಿಲ್, ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ಹಲವು ಬ್ಯಾಟರ್‌ಗಳು 2023ರಲ್ಲಿ ಭರ್ಜರಿ ಇನ್ನಿಂಗ್ಸ್‌ ಆಡಿದ್ದಾರೆ. 2023ಕ್ಕೆ ವಿದಾಯ ಹೇಳುತ್ತಿರುವ ಸಂದರ್ಭದಲ್ಲಿ ಈ ವರ್ಷ ಏಕದಿನ ಮಾದರಿಯಲ್ಲಿ ಸುದೀರ್ಘ ಇನ್ನಿಂಗ್ಸ್ ಆಡಿದ ಟಾಪ್ 5 ಬ್ಯಾಟರ್‌ಗಳನ್ನು ನೋಡೋಣ. ಈ ಪಟ್ಟಿಯಲ್ಲಿ ವಿಶ್ವಚಾಂಪಿಯನ್ ಆಸೀಸ್‌ ತಂಡದ ಇಬ್ಬರು ಇದ್ದಾರೆ.

2023ರಲ್ಲಿ ಕ್ರಿಕೆಟ್ ಅಭಿಮಾನಿಗಳು ಸಂಪೂರ್ಣ ಎಂಜಾಯ್‌ ಮಾಡಿದ್ದಾರೆ. ಏಕದಿನ ವಿಶ್ವಕಪ್ ಸೇರಿದಂತೆ ಈ ವರ್ಷ ಹಲವು ಪ್ರಮುಖ ಪಂದ್ಯಾವಳಿಗಳು ನಡೆದಿವೆ.
icon

(1 / 6)

ಶುಭಮನ್ ಗಿಲ್: 2023ರಲ್ಲಿ ಶುಭ್ಮನ್ ಗಿಲ್‌ ಅಬ್ಬರಿಸಿದ್ದಾರೆ. ಏಕದಿನ ಶ್ರೇಯಾಂಕದಲ್ಲೂ ನಂಬರ್‌ ವನ್‌ ಸ್ಥಾನ ಪಡೆದಿದ್ದರು. ಈ ವರ್ಷ ಗಿಲ್ ದ್ವಿಶತಕ ಬಾರಿಸುವ ಮೂಲಕ ಶುಭಾರಂಭ ಮಾಡಿದರು. ಜನವರಿ 18ರಂದು ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದರು. 208 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್‌ ಆಡಿದರು. ಇದು ಈ ವರ್ಷದ ಅತಿ ದೊಡ್ಡ ಏಕದಿನ ಇನ್ನಿಂಗ್ಸ್ ಆಗಿದೆ.
icon

(2 / 6)

ಗ್ಲೆನ್ ಮ್ಯಾಕ್ಸ್‌ವೆಲ್: ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ ಅಬ್ಬರ ಯಾರಿಗೆ ತಾನೆ ನೆನಪಿಲ್ಲ. ಸೋಲುವ ಹಂತದಲ್ಲಿದ್ದ ಪಂದ್ಯವನ್ನು ಗೆಲ್ಲಿಸಿ ಅವರು ಪವಾಡ ಸೃಷ್ಟಿಸಿದರು. ಅಫ್ಘಾನಿಸ್ತಾನ ವಿರುದ್ಧ ರನ್ ಚೇಸ್ ವೇಳೆ 201 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
icon

(3 / 6)

ಬೆನ್ ಸ್ಟೋಕ್ಸ್: ಇಂಗ್ಲೆಂಡ್‌ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಈ ವರ್ಷದ ಮೂರನೇ ಸುದೀರ್ಘ ಇನ್ನಿಂಗ್ಸ್ ಆಡಿದರು. ಸೆಪ್ಟೆಂಬರ್ 13ರಂದು ನ್ಯೂಜಿಲೆಂಡ್ ವಿರುದ್ಧ ಸ್ಟೋಕ್ಸ್ 183 ರನ್ ಗಳಿಸಿದರು.
icon

(4 / 6)

ಫಖರ್ ಜಮಾನ್: 2023ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕನೇ ಅತ್ಯಧಿಕ ಇನ್ನಿಂಗ್ಸ್ ಆಡಿದವರು ಪಾಕಿಸ್ತಾನದ ಆರಂಭಿಕ ಆಟಗಾರ ಫಖರ್ ಜಮಾನ್. ಏಪ್ರಿಲ್ 29ರಂದು ನ್ಯೂಜಿಲೆಂಡ್ ವಿರುದ್ಧ ಫಖರ್ ಜಮಾನ್ 180 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು.
icon

(5 / 6)

ಮಿಚೆಲ್ ಮಾರ್ಷ್: ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಕೂಡ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಅಬ್ಬರಿಸಿದರು. ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 177 ರನ್ ಗಳಿಸಿದ ಮಾರ್ಷ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
icon

(6 / 6)

ಇತರ ಗ್ಯಾಲರಿಗಳು