ರಾಜಸ್ಥಾನ ರಾಯಲ್ಸ್‌ಗೆ ದೊಡ್ಡ ಹೊಡೆತ, ಐಪಿಎಲ್​ಗೂ ಮುನ್ನ ಸಂಜು ಸ್ಯಾಮ್ಸನ್ ಬೆರಳು ಮುರಿತ, ರಣಜಿಗೆ ಅಲಭ್ಯ; ವರದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ರಾಜಸ್ಥಾನ ರಾಯಲ್ಸ್‌ಗೆ ದೊಡ್ಡ ಹೊಡೆತ, ಐಪಿಎಲ್​ಗೂ ಮುನ್ನ ಸಂಜು ಸ್ಯಾಮ್ಸನ್ ಬೆರಳು ಮುರಿತ, ರಣಜಿಗೆ ಅಲಭ್ಯ; ವರದಿ

ರಾಜಸ್ಥಾನ ರಾಯಲ್ಸ್‌ಗೆ ದೊಡ್ಡ ಹೊಡೆತ, ಐಪಿಎಲ್​ಗೂ ಮುನ್ನ ಸಂಜು ಸ್ಯಾಮ್ಸನ್ ಬೆರಳು ಮುರಿತ, ರಣಜಿಗೆ ಅಲಭ್ಯ; ವರದಿ

Sanju Samson: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ವಿಕೆಟ್ ಕೀಪರ್​ ಬ್ಯಾಟರ್​ ಸಂಜು ಸ್ಯಾಮ್ಸನ್ ಗಾಯಗೊಂಡಿದ್ದಾರೆ.

ರಾಜಸ್ಥಾನ ರಾಯಲ್ಸ್‌ಗೆ ದೊಡ್ಡ ಹೊಡೆತ, ಐಪಿಎಲ್​ಗೂ ಮುನ್ನ ಸಂಜು ಸ್ಯಾಮ್ಸನ್ ಬೆರಳು ಮುರಿತ, ರಣಜಿಗೆ ಅಲಭ್ಯ; ವರದಿ
ರಾಜಸ್ಥಾನ ರಾಯಲ್ಸ್‌ಗೆ ದೊಡ್ಡ ಹೊಡೆತ, ಐಪಿಎಲ್​ಗೂ ಮುನ್ನ ಸಂಜು ಸ್ಯಾಮ್ಸನ್ ಬೆರಳು ಮುರಿತ, ರಣಜಿಗೆ ಅಲಭ್ಯ; ವರದಿ (AP)

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಕ್ಕೆ ಆಘಾತವೊಂದು ಬರಸಿಡಿಲಿನಂತೆ ಎದುರಾಗಿದೆ. 2008ರ ನಂತರ ಮತ್ತೊಂದು ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಪಿಂಕ್ ಆರ್ಮಿ ತಂಡಕ್ಕೆ ಈ ಬಾರಿ ನಾಯಕನೇ ಅಲಭ್ಯವಾಗುವ ಭೀತಿ ಎದುರಾಗಿದೆ. ಹೌದು, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ವಿಕೆಟ್ ಕೀಪರ್​ ಬ್ಯಾಟರ್​ ಸಂಜು ಸ್ಯಾಮ್ಸನ್ (Sanju Samson) ಗಾಯಗೊಂಡಿದ್ದಾರೆ. ಆದರೆ ಗಾಯದ ತೀವ್ರತೆ ಇನ್ನೂ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.

ಎರಡನೇ ಬಾರಿಗೆ ಗೆಲ್ಲುವ ರಾಜಸ್ಥಾನ್ ರಾಯಲ್ಸ್ ಆಕಾಂಕ್ಷೆಗೆ ಭಾರಿ ಹೊಡೆತ ಸಿಕ್ಕಿದ್ದು, ನಾಯಕ ಸಂಜು ಸ್ಯಾಮ್ಸನ್ ಅವರ ಬಲ ತೋರು ಬೆರಳು ಮುರಿತಕ್ಕೊಳಗಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ, ಸ್ವಲ್ಪ ಸಮಯದವರೆಗೆ ಆಟದಿಂದ ಹೊರಗುಳಿಬೇಕಾಗಿದೆ ಎಂದು ಇದೇ ವರದಿಗಳು ತಿಳಿಸಿವೆ. ಫೆಬ್ರವರಿ 2ರ ಭಾನುವಾರದಂದು 5ನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಬೌಲಿಂಗ್​ನಲ್ಲಿ ಬೌನ್ಸರ್​​ನಿಂದ ಪೆಟ್ಟು ತಿಂದ ಸ್ಯಾಮ್ಸನ್​ ಅವರು ಒಂದು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್​​ನಿಂದ ಹೊರಬೇಕಿದೆಯಂತೆ!

ಬಿಸಿಸಿಐ ಮೂಲಗಳು ಹೇಳಿದ್ದೇನು?

ಪಿಟಿಐ ವರದಿ ಪ್ರಕಾರ, ಪ್ರಸ್ತುತ ಸ್ಯಾಮ್ಸನ್ ತನ್ನ ತವರು ನೆಲೆಯಾದ ತಿರುವನಂತಪುರಕ್ಕೆ ಮರಳಿದ್ದಾರೆ. ಶೀಘ್ರದಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಪುನರ್ವಸತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಶಿಬಿರ ಪೂರ್ಣಗೊಳಿಸಿದ ನಂತರ ತರಬೇತಿ ಪ್ರಾರಂಭಿಸಲಿದ್ದಾರೆ. ಸ್ಯಾಮ್ಸನ್ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲು ಎನ್​ಸಿಎ ಗ್ರೀನ್​ ಸಿಗ್ನಲ್​ ನೀಡುವುದು ಅಗತ್ಯ ಇದೆ. 6 ವಾರಗಳ ಚೇತರಿಕೆ ಎಂದರೆ ಮುಂಬರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಕೇರಳ ಪರ ಕಣಕ್ಕಿಳಿಯಲು ಸಾಧ್ಯವಿಲ್ಲ.

'ಸ್ಯಾಮ್ಸನ್ ಅವರ ಬಲ ತೋರು ಬೆರಳಿಗೆ ಮೂಳೆ ಮುರಿತವಾಗಿದೆ. ಐದರಿಂದ ಆರು ವಾರಗಳ ಕಾಲ ಎನ್​ಸಿಎನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲಿದ್ದಾರೆ. ಆದ್ದರಿಂದ ಫೆಬ್ರವರಿ 8 ರಿಂದ ಪುಣೆಯಲ್ಲಿ ಕೇರಳ ತಂಡದ ಪರ (ಜಮ್ಮು-ಕಾಶ್ಮೀರ ವಿರುದ್ಧ) ರಣಜಿ ಟ್ರೋಫಿ ಕ್ವಾರ್ಟರ್-ಫೈನಲ್​ನಲ್ಲಿ ಸಂಜು ಆಡುವುದು ಅನುಮಾನ' ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ. ಆದರೆ, ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್‌ ಪರ ಆಡಲು ಪುನರಾಗಮನ ಮಾಡಬಹುದು ಎಂದು ಇದೇ ಮೂಲಗಳು ತಿಳಿಸಿವೆ. ಒಂದು ವೇಳೆ ಗಾಯದ ಪ್ರಮಾಣ ಗಂಭೀರವಾಗಿದ್ದರೆ, ಚಿಕಿತ್ಸೆಯ ಸಮಯ ವಿಸ್ತರಿಸಿದರೂ ಅಚ್ಚರಿ ಇಲ್ಲ.

ಸಂಜು ಕಳಪೆ ಪ್ರದರ್ಶನ

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಗಳಿಸಿರೋದು ಕೇವಲ 52 ರನ್ ಮಾತ್ರ. 118.60ರ ಸ್ಟ್ರೈಕ್​ರೇಟ್​ನಲ್ಲಿ ರನ್ ಗಳಿಸಿರುವ ಕೇರಳ ಬ್ಯಾಟರ್​ ಸರಾಸರಿ 10.20. ಆದರೆ ಈ ಸರಣಿಗೂ ಮುನ್ನ ಸೌತ್ ಆಫ್ರಿಕಾ ವಿರುದ್ಧ ಎರಡು ಭರ್ಜರಿ ಶತಕ ಸಿಡಿಸಿದ್ದರು. ಸರಣಿಗೂ ಮುನ್ನ ಐದು ಪಂದ್ಯಗಳಲ್ಲಿ 3 ಶತಕ ಸಿಡಿಸಿ ಮಿಂಚಿದ್ದರು.

Whats_app_banner