ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್​ ಕೊಹ್ಲಿಗೆ ಕ್ಲೀನ್​ ಬೋಲ್ಡ್​ ಆಗಿದ್ದ ಬಾಲಿವುಡ್​ ಬೆಡಗಿ; ಕ್ರಿಕೆಟ್ ರಾಜನನ್ನು ಹುಚ್ಚೆದ್ದು ಪ್ರೀತಿಸಿದ್ರಂತೆ 'ಸೀತಾ'!

ವಿರಾಟ್​ ಕೊಹ್ಲಿಗೆ ಕ್ಲೀನ್​ ಬೋಲ್ಡ್​ ಆಗಿದ್ದ ಬಾಲಿವುಡ್​ ಬೆಡಗಿ; ಕ್ರಿಕೆಟ್ ರಾಜನನ್ನು ಹುಚ್ಚೆದ್ದು ಪ್ರೀತಿಸಿದ್ರಂತೆ 'ಸೀತಾ'!

Mrunal Thakur on Virat Kohli: ವಿರಾಟ್​ ಕೊಹ್ಲಿಯ ನೋಟ - ಆಟಕ್ಕೆ ಮಾರು ಹೋಗದವರೇ ಇಲ್ಲ. ಎಂತೆಂತಹವರೋ ಕೊಹ್ಲಿಗೆ, ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಅದರಲ್ಲೂ ಬಾಲಿವುಡ್​ ನಟಿಯರದ್ದು ದೊಡ್ಡ ಪಟ್ಟಿಯೇ ಇದೆ.

ವಿರಾಟ್​ ಕೊಹ್ಲಿಗೆ ಕ್ಲೀನ್​ ಬೋಲ್ಡ್​ ಆಗಿದ್ದ ಬಾಲಿವುಡ್​ ಬೆಡಗಿ; ಕ್ರಿಕೆಟ್ ರಾಜನನ್ನು ಕೊಹ್ಲಿಯನ್ನು ಹುಚ್ಚೆದ್ದು ಪ್ರೀತಿಸಿದ್ರಂತೆ 'ಸೀತಾ'!
ವಿರಾಟ್​ ಕೊಹ್ಲಿಗೆ ಕ್ಲೀನ್​ ಬೋಲ್ಡ್​ ಆಗಿದ್ದ ಬಾಲಿವುಡ್​ ಬೆಡಗಿ; ಕ್ರಿಕೆಟ್ ರಾಜನನ್ನು ಕೊಹ್ಲಿಯನ್ನು ಹುಚ್ಚೆದ್ದು ಪ್ರೀತಿಸಿದ್ರಂತೆ 'ಸೀತಾ'!

ದಾಖಲೆಗಳ ಸರದಾರ ವಿರಾಟ್​ ಕೊಹ್ಲಿ (Virat Kohli) ಆಟಕ್ಕೆ, ಕ್ಲೀನ್​ ಬೋಲ್ಡ್​ ಆಗದವರು ಈ ಜಗತ್ತಲ್ಲೇ ಇಲ್ಲವೇನೋ! ಚಿಕ್ಕ ಮಕ್ಕಳಿಂದ ಹಣ್ಣು ಹಣ್ಣು ಮುದುಕರವರೆಗೆ, ಎಲ್ಲರೂ ಕಿಂಗ್​ ಕೊಹ್ಲಿಯ ಆಟಕ್ಕೆ ಸಲಾಂ ಅಂದವರೇ! ಕಿಂಗ್​ ಕೊಹ್ಲಿ ಪ್ಯಾಡ್​ ಕಟ್ಟಿ ಮೈದಾನಕ್ಕಿಳಿದರೆ ಸಾಕು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಅಖಾಡಕ್ಕಿಳಿದರೆ ಎದುರಾಳಿ ತಂಡದ ಆಟಗಾರರಿಗೆ ನಡುಕ ಶುರುವಾಗುತ್ತದೆ. ಏಕೆಂದರೆ, ಆ ಆಟದ ಗತ್ತೇ ಅಂತದ್ದು!

ಟ್ರೆಂಡಿಂಗ್​ ಸುದ್ದಿ

ಕೊಹ್ಲಿಯ ವಿನಾಶಕಾರಿ ಬ್ಯಾಟಿಂಗ್​ಗಷ್ಟೇ ಸೀಮಿತವಲ್ಲ, ಫೀಲ್ಡಿಂಗ್​ ಮಾಡುತ್ತಿದ್ದಾರೆ ಅಂದರೂ ಎದುರಾಳಿ ಬ್ಯಾಟರ್ಸ್​​ ನಡುಗುತ್ತಿರುತ್ತಾರೆ. ಇದಕ್ಕೆ ಆತ ಸಾಲಿಡ್​​ ಫೀಲ್ಡರ್​ ಎಂಬುದು ಒಂದು ಕಾರಣವಾದರೆ, ಮತ್ತೊಂದು ಕಾರಣ ಕೆಣಕಿದರೆ ಸತ್ವಿ ಎಂಬುದು. ಹೌದು, ಆನ್​ ಫೀಲ್ಡ್​ನಲ್ಲಿ ಅಗ್ರೆಸ್ಸಿವ್​​ ಕೊಹ್ಲಿಯನ್ನು ಕೆಣಕಿ ಉಳಿದವರುಂಟೆ. ಸ್ಲೆಡ್ಜಿಂಗ್​ ಮಾಡುವುದರಲ್ಲಿ ಪಂಟರ್ಸ್​ ಎಂದೇ ಮೆರೆದಾಡುತ್ತಿದ್ದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ಕ್ರಿಕೆಟಿಗರಿಗೆ ಅವರದ್ದೇ ನೆಲದಲ್ಲಿ ಕಿಂಗ್​ ಕೊಟ್ಟ ತಿರುಗೇಟನ್ನು ಮರೆಯಲು ಸಾಧ್ಯವೇ?

ಕೊಹ್ಲಿಯ ಬ್ಯಾಟಿಂಗ್​, ಫೀಲ್ಡಿಂಗ್​, ಅಗ್ರೆಸ್ಸಿವ್​ ಆ್ಯಟಿಟ್ಯೂಡ್​, ಫಿಟ್​ನೆಸ್, ಸ್ಟೈಲಿಶ್ ಲುಕ್ಸ್,​ ಎಲ್ಲಕ್ಕೂ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ಇದಕ್ಕೆ ಬಾಲಿವುಡ್​ ಬೆಡಗಿಯರೂ ಹೊರತಾಗಿಲ್ಲ. ಅದರಲ್ಲಿ ಸೀತಾ ರಾಮಂ ನಟಿ ಮೃನಾಲ್ ಠಾಕೂರ್​. ಹೌದು, ಹೀಗಂತ ಮೃನಾಲ್ ಠಾಕೂರ್ ಅವರು ಸಂದರ್ಶನವೊಂದರಲ್ಲಿ ಕೊಹ್ಲಿಯೆಂದರೆ ನನಗೆ ಹುಚ್ಚು ಎಂದು ಹೇಳಿದ್ದರು. ಬಾಲಿವುಡ್ ನಟಿಯರ ಪಟ್ಟಿಯಲ್ಲಿ ಮೃನಾಲ್ ಕೂಡ ಸೇರಿರುವುದು ವಿಶೇಷ.

ಕಿಂಗ್​ ಕೊಹ್ಲಿಗೆ ಕ್ಲೀನ್​ ಬೋಲ್ಡ್​ ಆಗಿದ್ದ ಬಾಲಿವುಡ್​ ಬೆಡಗಿ

ಮೃನಾಲ್​ ಠಾಕೂರ್​​.., ಬಾಲಿವುಡ್​ನ ಯುವ ನಟಿ.. ಟಿವಿ ಸೀರಿಯಲ್​​​ಗಳಿಂದ ಆರಂಭವಾದ ಈಕೆಯ ಜರ್ನಿ, ಸದ್ಯ ಬಾಲಿವುಡ್​​ನ ಬಹುಬೇಡಿಕೆಯ ನಟಿಯಾಗುವ ಮಟ್ಟಕ್ಕೇ, ಬೆಳೆದಿದೆ. ಟಾಲಿವುಡ್​ನಲ್ಲೂ ಬಹುಬೇಡಿಕೆಯ ನಟಿಯಾಗಿದ್ದಾರೆ. ಜೆರ್ಸಿ, ಸೀತಾ ರಾಮಂ ಚಿತ್ರಗಳಲ್ಲಿ ನಟಿಸಿದ ಮೇಲಂತೂ ಆಕೆಯ ಖ್ಯಾತಿ ಅನ್ನೋದು ಉತ್ತುಂಗಕ್ಕೇರಿದೆ. ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ. ತನ್ನ ನೋಟ, ನಟನೆಯಿಂದಲೇ, ಅಭಿಮಾನಿಗಳಿಗೆ ಮತ್ತೇರಿಸಿದ ನಟಿ ಈಕೆ.

ಕೊಹ್ಲಿಯನ್ನ ಹುಚ್ಚೆದ್ದು ಪ್ರೀತಿಸಿದ್ರಂತೆ ಮೃನಾಲ್

I was madly in love with Virat Kohli. ಅಂದರೆ, ನಾನು ವಿರಾಟ್ ಕೊಹ್ಲಿಯನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದೆ. ನಾವಲ್ಲ.. ಸ್ವತಃ ಮೃನಾಲ್​ ಠಾಕೂರ್​, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಮಾತುಗಳಿವು. ಕ್ರಿಕೆಟ್​ ಮೇಲಿನ ಪ್ರೀತಿಯ ಬಗ್ಗೆ ಮಾತನಾಡಿರುವ ಮೃನಾಲ್​, ನಾನು ಕ್ರಿಕೆಟ್​ ಅನ್ನ ಹೆಚ್ಚು ಪ್ರೀತಿ ಮಾಡುತ್ತೇನೆ. ಅದರಲ್ಲೂ ವಿರಾಟ್​ ಕೊಹ್ಲಿಯನ್ನಂತೂ, ಹುಚ್ಚೆದ್ದು ಪ್ರೀತಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.

ಮೃನಾಲ್​ ಒಬ್ಬರಲ್ಲ, ಪಟ್ಟಿ ದೊಡ್ಡದಿದೆ

ಹೌದು.. ಕಿಂಗ್​ ಕೊಹ್ಲಿಗೆ ಮನಸೋತ ಬಾಲಿವುಡ್​ ಬೆಡಗಿಯರ ದಂಡು ದೊಡ್ಡದಿದೆ. ಬಾಲಿವುಡ್​ ಅಂಗಳದಲ್ಲಿ ತಮ್ಮ ನಟನೆ, ನೃತ್ಯದಿಂದಲೇ ಕೊಟ್ಯಂತರ ಜನ ಮನ ಗೆದ್ದ ಚೆಲುವೆಯರೆಲ್ಲಾ ವಿರಾಟನ ಆಟಕ್ಕೆ ಫಿದಾ ಆದವರೇ! ಅಲಿಯಾ ಭಟ್​, ಕಂಗನಾ ರಾಣಾವತ್, ಸಾರಾ ಅಲಿ ಖಾನ್, ಕರೀನಾ ಕಪೂರ್, ಜಾನ್ವಿ ಕಪೂರ್, ರಶ್ಮಿಕಾ ಮಂದಣ್ಣ, ಕತ್ರಿಕಾ ಕೈಫ್, ಸಮಂತಾ ರುತ್ ಪ್ರಭು, ತಮನ್ನಾ ಭಾಟಿಯಾ.. ಹೀಗೆ ಹೇಳುತ್ತಾ ಹೋದರೆ, ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ. ಇದನ್ನೆಲ್ಲಾ ನಾವು ಹೇಳಿದ್ದಲ್ಲ, ಸ್ವತಃ ನಟಿಯರೇ ಈ ಮಾತುಗಳನ್ನು ಹೇಳಿದ್ದಾರೆ.

ಅನುಷ್ಕಾಗೆ ಮನಸೋತ ವಿರಾಟ್​ ಕೊಹ್ಲಿ.!

ಕೊಹ್ಲಿಯ ಕರಿಯರ್​ ಆರಂಭದಿಂದಲೇ ಸಾಕ್ಷಿ ಅಗರ್ವಾಲ್​, ತಮ್ಮನ್ನಾ ಭಾಟಿಯಾ, ಇಝಾಬೆಲ್ಲೆ ಲೈಟ್..​​​ ಹೀಗೆ ಹಲವರ ಹೆಸರುಗಳು ಕೊಹ್ಲಿ ಜೊತೆ ತಳುಕು ಹಾಕಿಕೊಂಡಿದ್ದವು. ಆದರೆ ಇವೆಲ್ಲಾ ಸುಳ್ಳು ಎಂದು ತಿಳಿದಿದ್ದೇ, ಅನುಷ್ಕಾ ಶರ್ಮಾ - ವಿರಾಟ್​ ಕೊಹ್ಲಿ ಲವ್​ ಸುದ್ದಿ ಹೊರ ಬಿದ್ದಾಗ.. ಯಾರ ಮೋಡಿಗೂ ಸಿಗದ ಕೊಹ್ಲಿ ಅನುಷ್ಕಾಗೆ ಮನಸೋತರು. ಜಾಹೀರಾತು ಶೂಟ್​ನಿಂದ ಆರಂಭವಾದ ಇವರ ಜರ್ನಿ ಮದುವೆ, ಮಕ್ಕಳು ಎಲ್ಲಾವನ್ನ ದಾಟಿಕೊಂಡು ಯಶಸ್ಸಿಯಾಗಿ ಸಾಗುತ್ತಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ