ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್ ಮುಂಜಾನೆ ಆರಂಭ; ಪಂದ್ಯದ ದಿನಾಂಕ, ಭಿನ್ನ ಸಮಯ ಹಾಗೂ ನೇರಪ್ರಸಾರ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಆಸ್ಟ್ರೇಲಿಯಾ 3ನೇ ಟೆಸ್ಟ್ ಮುಂಜಾನೆ ಆರಂಭ; ಪಂದ್ಯದ ದಿನಾಂಕ, ಭಿನ್ನ ಸಮಯ ಹಾಗೂ ನೇರಪ್ರಸಾರ ವಿವರ

ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್ ಮುಂಜಾನೆ ಆರಂಭ; ಪಂದ್ಯದ ದಿನಾಂಕ, ಭಿನ್ನ ಸಮಯ ಹಾಗೂ ನೇರಪ್ರಸಾರ ವಿವರ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯವು ಡಿಸೆಂಬರ್ 14ರ ಶನಿವಾರ ಆರಂಭವಾಗಲಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯಲಿದೆ. ಪಂದ್ಯದ ಸಮಯ ಹಾಗೂ ನೇರಪ್ರಸಾರ ವಿವರ ಇಲ್ಲಿದೆ.

ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್ ಮುಂಜಾನೆ ಆರಂಭ; ಪಂದ್ಯದ ಸಮಯ ಹಾಗೂ ನೇರಪ್ರಸಾರ ವಿವರ
ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್ ಮುಂಜಾನೆ ಆರಂಭ; ಪಂದ್ಯದ ಸಮಯ ಹಾಗೂ ನೇರಪ್ರಸಾರ ವಿವರ (AAP Image via REUTERS)

ಅಡಿಲೇಡ್‌ ಟೆಸ್ಟ್‌ನಲ್ಲಿ 10 ವಿಕೆಟ್‌ಗಳಿಂದ ಸೋಲು ಕಂಡ ಭಾರತ ಕ್ರಿಕೆಟ್‌ ತಂಡ, ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೂರನೇ ಪಂದ್ಯವನ್ನಾಡಲು ಗಬ್ಬಾ ಕಡೆ ಸಾಗಿದೆ. ಡಿಸೆಂಬರ್ 14ರ ಶನಿವಾರದಿಂದ 18ರವರೆಗೆ ಬ್ರಿಸ್ಬೇನ್‌ನ ಗಬ್ಬಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸುವ ನಿರೀಕ್ಷೆ ರೋಹಿತ್‌ ಶರ್ಮಾ ಬಳಗದ್ದು. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ 295 ರನ್‌ಗಳ ಬೃಹತ್‌ ಜಯ ಸಾಧಿಸಿದ್ದ ಟೀಮ್‌ ಇಂಡಿಯಾ, ಆ ನಂತರ ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿತು. ಸದ್ಯ ಸರಣಿಯು 1-1 ಅಂತರದಿಂದ ಸಮಬಲಗೊಂಡಿದೆ. ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ.

ಸರಣಿಯ ಆರಂಭಿಕ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಭಾರತೀಯರು, ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಆಸೀಸ್‌ ವಿರುದ್ಧ ಮತ್ತೆ ಕಳಪೆ ಪ್ರದರ್ಶನ ಮುಂದುವರೆಸಿತು. ಇದೀಗ ಸೋಲನ್ನು ಮರೆತು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ದೃಷ್ಟಿಯಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಲು ಬ್ರಿಸ್ಬೇನ್‌ನಲ್ಲಿ ಗೆಲುವು ತಂಡಕ್ಕೆ ಅಗತ್ಯವಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಯಾವಾಗ?

ಮೂರನೇ ಟೆಸ್ಟ್ ಪಂದ್ಯವು ಡಿಸೆಂಬರ್ 14ರ ಶನಿವಾರ ಆರಂಭವಾಗಲಿದೆ. ಪಂದ್ಯ ಡಿಸೆಂಬರ್ 18 ರಂದು ಮುಕ್ತಾಯಗೊಳ್ಳಲಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಆಸ್ಟ್ರೇಲಿಯಾ vs ಭಾರತ ಸರಣಿಯ 3ನೇ ಟೆಸ್ಟ್ ಪಂದ್ಯವು ನಿಯಮಿತ ಟೆಸ್ಟ್ ಪಂದ್ಯ ಆಗಿರುತ್ತದೆ. ಎರಡನೇ ಟೆಸ್ಟ್‌ ಪಂದ್ಯವು ಹಗಲು-ರಾತ್ರಿ ಪಂದ್ಯವಾಗಿತ್ತು. ಆದರೆ ಮೂರನೇ ಟೆಸ್ಟ್‌ ಪಂದ್ಯವು ಮೊದಲ ಎರಡು ಟೆಸ್ಟ್‌ ಸಮಯಕ್ಕಿಂತ ಭಿನ್ನವಾಗಿ ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ ಬೇಗ, ಅಂದರೆ 5.50ಕ್ಕೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆಯು 30 ನಿಮಿಷಗಳ ಮುಂಚಿತವಾಗಿ, ಅಂದರೆ 5.20ಕ್ಕೆ ನಡೆಯಲಿದೆ.

ಭಾರತದಲ್ಲಿ ಪಂದ್ಯ ವೀಕ್ಷಣೆ ಹೇಗೆ?

ಮೂರನೇ ಟೆಸ್ಟ್ ಪಂದ್ಯವನ್ನು ಭಾರತೀಯರು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಮೂಲಕ ಮೂಲಕ ಲೈವ್‌ ಸ್ಟ್ರೀಮ್ ವೀಕ್ಷಿಸಬಹುದು.‌‌

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್‌ ಕೀಪರ್), ನಿತೀಶ್ ರೆಡ್ಡಿ, ರವಿಚಂದ್ರನ್ ಅಶ್ವಿನ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ , ಸರ್ಫರಾಜ್ ಖಾನ್, ಅಭಿಮನ್ಯು ಈಶ್ವರನ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್.

Whats_app_banner