ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಮತ್ತೊಂದು ಆಘಾತ; ತಂದೆ ನಿಧನದ ಕಾರಣ ತಂಡ ತೊರೆದ ಬೌಲಿಂಗ್ ಕೋಚ್
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಮತ್ತೊಂದು ಆಘಾತ; ತಂದೆ ನಿಧನದ ಕಾರಣ ತಂಡ ತೊರೆದ ಬೌಲಿಂಗ್ ಕೋಚ್

ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಮತ್ತೊಂದು ಆಘಾತ; ತಂದೆ ನಿಧನದ ಕಾರಣ ತಂಡ ತೊರೆದ ಬೌಲಿಂಗ್ ಕೋಚ್

ತವರಿಗೆ ಮರಳಿರುವ ಬೌಲಿಂಗ್‌ ಕೋಚ್ ಮಾರ್ನೆ ಮಾರ್ಕೆಲ್ ಯಾವಾಗ ಭಾರತ ತಂಡಕ್ಕೆ ಮರಳುತ್ತಾರೆ ಎಂಬುವುದರ ಕುರಿತು ಇನ್ನೂ ಮಾಹಿತಿ ಲಭಿಸಿಲ್ಲ.

ಭಾರತ ತಂಡಕ್ಕೆ ಮತ್ತೊಂದು ಆಘಾತ; ತಂದೆ ನಿಧನದ ಕಾರಣ ತಂಡ ತೊರೆದ ಬೌಲಿಂಗ್ ಕೋಚ್
ಭಾರತ ತಂಡಕ್ಕೆ ಮತ್ತೊಂದು ಆಘಾತ; ತಂದೆ ನಿಧನದ ಕಾರಣ ತಂಡ ತೊರೆದ ಬೌಲಿಂಗ್ ಕೋಚ್ (Surjeet Yadav)

ಭಾರತ ಕ್ರಿಕೆಟ್‌ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ (Morne Morkel), ದುಬೈನಿಂದ ಮನೆಗೆ ಮರಳಿದ್ದಾರೆ ಎಂದು ವರದಿಯಾಗಿದೆ. ತಮ್ಮ ತಂದೆಯ ನಿಧನದಿಂದಾಗಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಭಾರತ ತಂಡ ತೊರೆದು ತವರಿಗೆ ಹೋಗಿದ್ದಾರೆ. ಸದ್ಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆಡಲು ಭಾರತ ತಂಡ ಪ್ರಸ್ತುತ ಯುಎಇಯಲ್ಲಿದೆ. ಬುಧವಾರ (ಫೆ.19) ಟೂರ್ನಿ ಆರಂಭವಾಗಲಿದ್ದು, ಆತಿಥೇಯ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಗುರುವಾರ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ಆಡಲಿದೆ.

ದುಬೈನಲ್ಲಿರುವ ಭಾರತೀಯ ತಂಡವು ಐಸಿಸಿ ಪಂದ್ಯಾವಳಿಗೆ ತಯಾರಿ ನಡೆಸುತ್ತಿದೆ. ಈ ನಡುವೆ ಮಾರ್ಕೆಲ್‌ ಅವರ ತಂದೆಯ ನಿಧನವು, ತಂಡದ ಸದಸ್ಯರಿಗೂ ದುಃಖ ತರಿಸಿದೆ. ಈ ಬಗೆಗ ದೈನಿಕ್ ಜಾಗರಣ್ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ಐಸಿಸಿ ಅಕಾಡೆಮಿಯಲ್ಲಿ ಭಾನುವಾರ ಭಾರತದ ಮೊದಲ ತರಬೇತಿ ಅವಧಿಯಲ್ಲಿ ಭಾಗವಹಿಸಿದ್ದರು. ಆದರೆ ಅಭ್ಯಾಸದ ಎರಡನೇ ದಿನದಂದು ಕಾಣಿಸಿಕೊಂಡಿಲ್ಲ. ಸೋಮವಾರ ದುಬೈನಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಸದ್ಯ ಮಾರ್ಕೆಲ್ ಯಾವಾಗ ಭಾರತೀಯ ಶಿಬಿರಕ್ಕೆ ಮರಳುತ್ತಾರೆ ಎನ್ನುವ ಬಗ್ಗೆ ಇನ್ನೂ ತಿಳಿದುಬಂದಿಲ್ಲ.

ಮಾರ್ಕೆಲ್ ಅವರ ಅನುಪಸ್ಥಿತಿಯಿಂದ ಭಾರತೀಯ ಬೌಲರ್‌ಗಳ ಸಿದ್ಧತೆಗೆ ತೊಂದರೆಯಾಗಲಿದೆ. ಪಂದ್ಯಾವಳಿಗೆ ನಡೆಸಬೇಕಾದ ಅಗತ್ಯ ಸಿದ್ಧತೆಗೆ ಸಮಸ್ಯೆಯಾಗಿ ತಂಡದ ಮೇಲೆ ಒತ್ತಡ ಉಂಟಾಗಲಿದೆ. ಗಾಯದಿಂದಾಗಿ ಈಗಾಗಲೇ ವೇಗಿ ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಇಲ್ಲ. ಇಂಗ್ಲೆಂಡ್ ವಿರುದ್ಧದ ವೈಟ್-ಬಾಲ್ ಸರಣಿಯಲ್ಲಿ ಆಡಿದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಅವರನ್ನೇ ವೇಗದ ಬೌಲಿಂಗ್ ಅವಲಂಬಿಸಿದೆ.

ಅಭ್ಯಾಸ ಅವಧಿ

ದುಬೈನ ಐಸಿಸಿ ಅಕಾಡೆಮಿಯಲ್ಲಿ ಎರಡು ದಿನಗಳ ಕಠಿಣ ಅಭ್ಯಾಸದ ನಂತರ, ಭಾರತ ತಂಡವು ಮಂಗಳವಾರ ರಜೆ ದಿನವಾಗಿ ಆರಿಸಿಕೊಂಡಿದೆ. ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ಬುಧವಾರ (ಫೆ.19) ಅಭ್ಯಾಸ ನಡೆಸಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯ

ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡವು 32-8 ಅಂತರದ ಗೆಲುವಿನ ಮುನ್ನಡೆ ಸಾಧಿಸಿದೆ. ತಟಸ್ಥ ಸ್ಥಳಗಳಲ್ಲಿ ಭಾರತದ ಮುನ್ನಡೆ 8-2 ಇದೆ. ಆದರೆ, ಶ್ರೀಲಂಕಾದಲ್ಲಿ ನಡೆದ 2023ರ ಏಷ್ಯಾ ಕಪ್‌ನಲ್ಲಿ ನಿರ್ಣಾಯಕ ಸೂಪರ್ ಫೋರ್ ಮುಖಾಮುಖಿ ಸೇರಿದಂತೆ ಭಾರತದೊಂದಿಗಿನ ಕೊನೆಯ ಐದು ಪಂದ್ಯಗಳಲ್ಲಿ ಬಾಂಗ್ಲಾದೇಶವು ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.

ತವರಿನಲ್ಲಿ ನಡೆದ ಕೊನೆಯ ಸರಣಿಯಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಸಾಧಿಸಿತ್ತು. ಆ ಆತ್ಮವಿಶ್ವಾಸದೊಂದಿಗೆ ಭಾರತವು ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗೆ ಸಜ್ಜಾಗಿದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner