ಬೆಂಗಳೂರಿನಂತೆ ಬ್ರಿಸ್ಬೇನ್​​ನಲ್ಲೂ ಮಳೆ; ಭಾರತ vs ಆಸ್ಟ್ರೇಲಿಯಾ​ ಮೂರನೇ ಟೆಸ್ಟ್​ ನಡೆಯೋದೇ ಅನುಮಾನ
ಕನ್ನಡ ಸುದ್ದಿ  /  ಕ್ರಿಕೆಟ್  /  ಬೆಂಗಳೂರಿನಂತೆ ಬ್ರಿಸ್ಬೇನ್​​ನಲ್ಲೂ ಮಳೆ; ಭಾರತ Vs ಆಸ್ಟ್ರೇಲಿಯಾ​ ಮೂರನೇ ಟೆಸ್ಟ್​ ನಡೆಯೋದೇ ಅನುಮಾನ

ಬೆಂಗಳೂರಿನಂತೆ ಬ್ರಿಸ್ಬೇನ್​​ನಲ್ಲೂ ಮಳೆ; ಭಾರತ vs ಆಸ್ಟ್ರೇಲಿಯಾ​ ಮೂರನೇ ಟೆಸ್ಟ್​ ನಡೆಯೋದೇ ಅನುಮಾನ

Brisbane weather forecast: ಬ್ರಿಸ್ಬೇನ್​​ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಪಂದ್ಯದ ಐದೂ ದಿನಗಳು ಸಹ ಮಳೆ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಂತೆ ಬ್ರಿಸ್ಬೇನ್​​ನಲ್ಲೂ ಮಳೆ; ಭಾರತ vs ಆಸ್ಟ್ರೇಲಿಯಾ​ ಮೂರನೇ ಟೆಸ್ಟ್​ ನಡೆಯೋದೇ ಅನುಮಾನ
ಬೆಂಗಳೂರಿನಂತೆ ಬ್ರಿಸ್ಬೇನ್​​ನಲ್ಲೂ ಮಳೆ; ಭಾರತ vs ಆಸ್ಟ್ರೇಲಿಯಾ​ ಮೂರನೇ ಟೆಸ್ಟ್​ ನಡೆಯೋದೇ ಅನುಮಾನ

ಬಾರ್ಡರ್-ಗವಾಸ್ಕರ್ ಟ್ರೋಫಿ 2025 (Border Gavaskar Trophy 2025) ಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಬ್ರಿಸ್ಬೇನ್​ನಲ್ಲಿ ಮಳೆ (Brisbane weather forecast) ಮುನ್ಸೂಚನೆ ಇದೆ. ಪರ್ತ್ ಮತ್ತು ಅಡಿಲೇಡ್​​​ನಲ್ಲಿ ನಡೆದ ಮೊದಲ ಎರಡು ಪಂದ್ಯಗಳಿಗೆ ಅಡ್ಡಿಯಾಗದ ವರುಣ, ಮೂರನೇ ಟೆಸ್ಟ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಬಹುಶಃ ಎಲ್ಲಾ 5 ದಿನಗಳಲ್ಲಿ ಮಳೆ ಪರಿಣಾಮ ಬೀರಬಹುದು ಎಂದು ಅಲ್ಲಿನ ಹವಾಮಾನ ಇಲಾಖೆ ವರದಿ ಮಾಡಿದೆ. ಇದು ನೋಡಿದರೆ ಪಂದ್ಯ ನಡೆಯುವುದೇ ಅನುಮಾನ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಬೆಂಗಳೂರು (Bengaluru) ಸೇರಿದಂತೆ ಸುತ್ತಮುತ್ತಲೂ ಇಂತಹದ್ದೇ ವಾತಾವರಣ ಇದೆ.

AccuWeather.com ಪ್ರಕಾರ, ಟೆಸ್ಟ್ ಪಂದ್ಯದ ಮೊದಲ ದಿನ (ಡಿಸೆಂಬರ್ 14) ಹೆಚ್ಚಾಗಿ ಮೋಡ ಕವಿದ ಮತ್ತು ಆರ್ದ್ರವಾಗಿರುತ್ತದೆ. ಅಂದೇ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯೂ ಇದೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ಶೇಕಡಾ 65 ರಷ್ಟು ಮಳೆಯಾಗುವ ಸಾಧ್ಯತೆಯಿದೆ. 2ನೇ ದಿನ (ಡಿಸೆಂಬರ್ 15) ಮತ್ತು 3 (ಡಿಸೆಂಬರ್ 16) ರಂದು ಮಳೆ ಮುಂದುವರೆಯಲಿದೆ. ದಿನವಿಡೀ ಮೋಡ ಕವಿದ ಮತ್ತು ಆರ್ದ್ರ ವಾತಾವರಣದೊಂದಿಗೆ 2ನೇ ದಿನ ಶೇಕಡಾ 59 ರಷ್ಟು ಮಳೆ, 3ನೇ ದಿನ ಬೆಳಿಗ್ಗೆ ಶೇಕಡಾ 60ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಕೊನೆಯ ಎರಡು ದಿನಗಳು ಡಿಸೆಂಬರ್ 17 ಮತ್ತು 18ರಂದು ಮಳೆಯ ಪ್ರಮಾಣ ಕಡಿಮೆ ಇರಲಿದೆ. ಆಗಾಗ್ಗೆ ಬಿಸಿಲು ಸಹ ಕಾಣಿಸಿಕೊಳ್ಳಬಹುದು.

ಐದು ಪಂದ್ಯಗಳ ಸರಣಿ ಪ್ರಸ್ತುತ 1-1ರಲ್ಲಿ ಸಮಬಲ ಸಾಧಿಸಿದೆ. ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿವೆ. ಪರ್ತ್ ಟೆಸ್ಟ್​​​ನಲ್ಲಿ ಭಾರತ 295 ರನ್​ಗಳಿಂದ ಗೆದ್ದರೆ, ಅಡಿಲೇಡ್​​ನಲ್ಲಿ ಆಸ್ಟ್ರೇಲಿಯಾ 10 ವಿಕೆಟ್​ಗಳ ಜಯ ಸಾಧಿಸಿದೆ. ಇದೀಗ 3ನೇ ಪಂದ್ಯಕ್ಕೆ ನಿರೀಕ್ಷಿತವಾಗಿ ಎರಡೂ ತಂಡಗಳ ಪ್ಲೇಯಿಂಗ್​ 11ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವರದಿಯಾಗಿದೆ. ಆದರೆ ಕೆಲವು ವರದಿಗಳು, ಎರಡೂ ತಂಡಗಳಲ್ಲಿ ಬದಲಾವಣೆ ಖಚಿತ ಎಂದು ಹೇಳುತ್ತಿವೆ. ಕೆಎಲ್ ರಾಹುಲ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದರೂ ಅವರ ಕ್ರಮಾಂಕ ಬದಲಾಗುವ ನಿರೀಕ್ಷೆ ಇದೆ.

ಮತ್ತೊಂದೆಡೆ, ರವೀಂದ್ರ ಜಡೇಜಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಇವರಿಗೆ ರವಿಚಂದ್ರನ್ ಅಶ್ವಿನ್ ಜಾಗ ಬಿಟ್ಟುಕೊಡಬೇಕಾಗಬಹುದು. ಅಲ್ಲದೆ, ಆರಂಭಿಕ ಪಂದ್ಯದಲ್ಲಿ ಅಬ್ಬರಿಸಿದರೂ ಎರಡನೇ ಪಂದ್ಯದಲ್ಲಿ ಮಿಂಚದ ಹರ್ಷಿತ್ ರಾಣಾ ಅವರನ್ನು ಈ ಪಂದ್ಯಕ್ಕೆ ಕೈ ಬಿಡಬಹುದು. ಬದಲಿಗೆ ಆಕಾಶ್ ದೀಪ್​ಗೆ ಮಣೆ ಹಾಕಬಹುದು. ಅದಕ್ಕೆ ಕಾರಣ ಆಕಾಶ್ ಸ್ವಿಂಗ್ ಬೌಲಿಂಗ್. ಆಸೀಸ್ ತಂಡವು ಸ್ಕಾಟ್ ಬೋಲ್ಯಾಂಡ್ ಬದಲಿಗೆ ಜೋಶ್ ಹೇಜಲ್​ವುಡ್ ಅವರನ್ನು ಕರೆತರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಆಕಾಶ್ ದೀಪ್/ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.

ಭಾರತ-ಆಸ್ಟ್ರೇಲಿಯಾ ಮುಖಾಮುಖಿ ದಾಖಲೆ (ಟೆಸ್ಟ್)

ಒಟ್ಟು ಪಂದ್ಯಗಳು - 109

ಆಸ್ಟ್ರೇಲಿಯಾ ಗೆಲುವು - 46

ಭಾರತ ತಂಡ ಗೆಲುವು - 33

ಡ್ರಾಗೊಂಡ ಪಂದ್ಯ - 29

ಟೈ ಆದ ಪಂದ್ಯಗಳು - 01