ಕನ್ನಡ ಸುದ್ದಿ  /  Cricket  /  Cameron Green Josh Hazlewood Script History With 116 Run Partnership For 10th Wicket In 1st Test Against New Zealand Prs

ನ್ಯೂಜಿಲೆಂಡ್ ವಿರುದ್ಧ ಆರ್​ಸಿಬಿ ಹಾಲಿ-ಮಾಜಿ ಆಟಗಾರರ ಪರಾಕ್ರಮ; ಆಸ್ಟ್ರೇಲಿಯಾ​ ಪರ 10ನೇ ವಿಕೆಟ್​ಗೆ ದಾಖಲೆಯ ಜೊತೆಯಾಟ

Cameron Green, Josh Hazlewood : ಆರ್​​ಸಿಬಿ ಆಟಗಾರ ಕ್ಯಾಮರೂನ್ ಗ್ರೀನ್ ಮತ್ತು ಮಾಜಿ ಆಟಗಾರ ಜೋಶ್ ಹೇಜಲ್‌ವುಡ್ ಜೋಡಿ ದಾಖಲೆ ಬರೆದಿದೆ. ಇಬ್ಬರು ಸಹ ನ್ಯೂಜಿಲೆಂಡ್ ವಿರುದ್ಧ 10ನೇ ವಿಕೆಟ್‌ಗೆ ಅತ್ಯುನ್ನತ ಜೊತೆಯಾಟ ದಾಖಲಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಆರ್​ಸಿಬಿ ಹಾಲಿ-ಮಾಜಿ ಆಟಗಾರರ ಪರಾಕ್ರಮ
ನ್ಯೂಜಿಲೆಂಡ್ ವಿರುದ್ಧ ಆರ್​ಸಿಬಿ ಹಾಲಿ-ಮಾಜಿ ಆಟಗಾರರ ಪರಾಕ್ರಮ

ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಮುನ್ನಡೆ ಪಡೆದಿದೆ. ಮೊದಲ ಇನ್ನಿಂಗ್ಸ್​​​​ನಲ್ಲಿ ಆಸೀಸ್ 383 ರನ್ ಕಲೆ ಹಾಕಿದರೆ, ಕಿವೀಸ್ 179 ರನ್​ಗಳಿಗೆ ಆಲ್​​ಔಟ್ ಆಯಿತು. ಇದರೊಂದಿಗೆ ಕಾಂಗರೂ ಪಡೆ 204 ರನ್​​ಗಳ ಮುನ್ನಡೆ ಸಾಧಿಸಿತು. ಇಷ್ಟು ರನ್​​ಗಳ ಮುನ್ನಡೆಗೆ ಕಾರಣವಾಗಿದ್ದು, ಆರ್​ಸಿಬಿ ಆಟಗಾರರ ದಾಖಲೆಯ ಜೊತೆಯಾಟ. ಇದು ಆಸೀಸ್​ ಪರ 4ನೇ ಅತ್ಯುತ್ತಮ ಪಾಲುದಾರಿಕೆ.

ಹೌದು, ಆರ್​​ಸಿಬಿ ಆಟಗಾರ ಕ್ಯಾಮರೂನ್ ಗ್ರೀನ್ ಮತ್ತು ಮಾಜಿ ಆಟಗಾರ ಜೋಶ್ ಹೇಜಲ್‌ವುಡ್ ಜೋಡಿ ದಾಖಲೆ ಬರೆದಿದೆ. ಇಬ್ಬರು ಸಹ ನ್ಯೂಜಿಲೆಂಡ್ ವಿರುದ್ಧ 10ನೇ ವಿಕೆಟ್‌ಗೆ ಅತ್ಯುನ್ನತ ಜೊತೆಯಾಟ ದಾಖಲಿಸಿದ್ದಾರೆ. ವೆಲ್ಲಿಂಗ್‌ಟನ್‌ನಲ್ಲಿ 2ನೇ ದಿನದಾಟದ ಮೊದಲ ಸೆಷನ್​ನಲ್ಲಿ ನ್ಯೂಜಿಲೆಂಡ್‌ ಬೌಲಿಂಗ್ ದಾಳಿಯನ್ನು ಹಿಮ್ಮೆಟ್ಟಿಸಿದ ಗ್ರೀನ್-ಹೇಜಲ್​ವುಡ್ ಅಂತಿಮ ವಿಕೆಟ್‌ಗೆ 116 ರನ್ ಕಲೆ ಹಾಕಿದರು.

2004ರಲ್ಲಿ ಬ್ರಿಸ್ಬೇನ್‌ನಲ್ಲಿ ಜೇಸನ್ ಗಿಲ್ಲೆಸ್ಪಿ ಮತ್ತು ಗ್ಲೆನ್ ಮೆಕ್‌ಗ್ರಾತ್ ಅವರ ಹಿಂದಿನ 114 ರನ್‌ಗಳ ದಾಖಲೆಯನ್ನು ಗ್ರೀನ್ ಜೋಡಿ ಛಿದ್ರಗೊಳಿಸಿತು. ಈ ಪಾಲುದಾರಿಕೆಯು ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಹತ್ತನೇ ವಿಕೆಟ್‌ಗೆ 100 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಜೊತೆಯಾಟವಾಡಿದ ಆಸ್ಟ್ರೇಲಿಯಾದ 4ನೇ ಜೋಡಿಯಾಗಿದೆ. ಇದು ಕಾಂಗರೂ ಪಡೆ ಮೊದಲ ಇನ್ನಿಂಗ್ಸ್​​ನಲ್ಲಿ ಮುನ್ನಡೆ ಸಾಧಿಸಲು ನೆರವಾದರು.

ಕ್ಯಾಮರೂನ್ ಗ್ರೀನ್ 174 ರನ್​

ನ್ಯೂಜಿಲೆಂಡ್ ಬೌಲಿಂಗ್​ ಎದುರು ಆಸೀಸ್ ಬ್ಯಾಟರ್ಸ್ ತತ್ತರಿಸಿದರು. ಆದರೆ ಗ್ರೀನ್ ಮಾತ್ರ ಕಿವೀಸ್ ಬೌಲರ್​​​ಗಳ ವಿರುದ್ಧ ಸಿಡಿದೆದ್ದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ರೀನ್​ ಕೊನೆಯವರೆಗೂ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದರು. ಹೇಜಲ್​ವುಡ್ ಜೊತೆಗೂಡಿ ಶತಕದ ಜೊತೆಯಾಟ ಆಡಿದ ಬಲಗೈ ಆಟಗಾರ 275 ಎಸೆತಗಳಲ್ಲಿ 23 ಬೌಂಡರಿ, 5 ಸಿಕ್ಸರ್​ ಸಹಿತ 174 ರನ್ ಕಲೆ ಹಾಕಿದರು.

10ನೇ ವಿಕೆಟ್​ಗೆ ಹೇಜಲ್​ವುಡ್​ರ 22 ರನ್​ಗಳಿಗೆ ಗ್ರೀನ್ 83 ರನ್​ಗಳನ್ನು ಸೇರಿಸಿದರು. ಹೇಜಲ್​ವುಡ್ 62 ಎಸೆತಗಳಲ್ಲಿ 4 ಬೌಂಡರಿ ಸಹಿತ 22 ರನ್ ಕಲೆ ಹಾಕಿದರು. ಇನ್ನು ಕ್ಯಾಮರೂನ್​ ಗ್ರೀನ್ ಅವರಿಗೆ ಇದು ಎರಡನೇ ಟೆಸ್ಟ್ ಶತಕವಾಗಿದೆ. ಕಳೆದ ವರ್ಷ ಅಹಮದಾಬಾದ್‌ನಲ್ಲಿ ಭಾರತದ ವಿರುದ್ಧ ಅವರ ಮೊದಲ ಶತಕ ದಾಖಲಾಗಿತ್ತು.

ಇಬ್ಬರು ಸಹ ಆರ್​ಸಿಬಿ ಆಟಗಾರರು

ಅಜೇಯ 174 ರನ್ ಗಳಿಸಿದ ಕ್ಯಾಮರೂನ್ ಗ್ರೀನ್ ಅವರು 17.50 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಲಿದ್ದಾರೆ. ಅವರು ಮುಂಬೈ ಇಂಡಿಯನ್ಸ್ ತಂಡದಿಂದ ಟ್ರೇಡ್​ ಮೂಲಕ ಆರ್​ಸಿಬಿ ತಂಡವನ್ನು ಸೇರಿದರು. ಇನ್ನು ಜೋಶ್ ಹೇಜಲ್​ವುಡ್ ಸಹ ಆರ್​​ಸಿಬಿ ಮಾಜಿ ಆಟಗಾರ. ಕಳೆದ ವರ್ಷದವರೆಗೂ ಬೆಂಗಳೂರು ಪರ ಆಡಿದ ಆಟಗಾರರನ್ನು ಈ ಬಾರಿ ಕೈಬಿಡಲಾಯಿತು.

ಸ್ಕೋರ್ ವಿವರ

ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ನಡೆಸಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಪರ ಗ್ರೀನ್ ಅಜೇಯ 174 ರನ್ ಕಲೆ ಹಾಕಿದರು. ಆದರೆ ಉಳಿದ ಆಟಗಾರರಿಂದ ಸರಿಯಾದ ಸಾಥ್ ಸಿಗಲಿಲ್ಲ. ಪರಿಣಾಮ 115.1 ಓವರ್​​​ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 383 ರನ್ ಕಲೆ ಹಾಕಿತು. ಮೊದಲ ಇನ್ನಿಂಗ್ಸ್​​ನಲ್ಲಿ ನ್ಯೂಜಿಲೆಂಡ್ ಕಳಪೆ ಪ್ರದರ್ಶನ ನೀಡಿತು. ನಾಥನ್ ಲಿಯಾನ್ ಅವರ ಬೌಲಿಂಗ್​ ಮುಂದೆ ತತ್ತರಿಸಿತು. ಹೀಗಾಗಿ 10 ವಿಕೆಟ್ ನಷ್ಟಕ್ಕೆ 179 ರನ್ ಕಲೆ ಹಾಕಿತು.

IPL_Entry_Point