ಕನ್ನಡ ಸುದ್ದಿ  /  ಕ್ರಿಕೆಟ್  /  ಪಂದ್ಯದ ನಡುವೆ ಹಿಂದೆ ಸರಿದ ರವಿಚಂದ್ರನ್ ಅಶ್ವಿನ್​ಗೆ ಬದಲಿ ಆಟಗಾರ ಆಡಬಹುದೇ; ಕ್ರಿಕೆಟ್ ನಿಯಮ ಹೇಳುವುದೇನು?

ಪಂದ್ಯದ ನಡುವೆ ಹಿಂದೆ ಸರಿದ ರವಿಚಂದ್ರನ್ ಅಶ್ವಿನ್​ಗೆ ಬದಲಿ ಆಟಗಾರ ಆಡಬಹುದೇ; ಕ್ರಿಕೆಟ್ ನಿಯಮ ಹೇಳುವುದೇನು?

Ravichandran Ashwin : ಕೌಟುಂಬಿಕ ತುರ್ತುಪರಿಸ್ಥಿತಿ ಕಾರಣ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿರುವ ರವಿಚಂದ್ರನ್ ಅಶ್ವಿನ್ ಅವರ ಬದಲಿಗೆ ಮತ್ತೊಬ್ಬ ಆಟಗಾರ ಆಡಬಹುದೇ? ಕ್ರಿಕೆಟ್ ನಿಯಮ ಹೇಳುವುದೇನು? ಇಲ್ಲಿದೆ ವಿವರ.

ಪಂದ್ಯದ ನಡುವೆ ಹಿಂದೆ ಸರಿದ ರವಿಚಂದ್ರನ್ ಅಶ್ವಿನ್​ಗೆ ಬದಲಿ ಆಟಗಾರ ಆಡಬಹುದೇ
ಪಂದ್ಯದ ನಡುವೆ ಹಿಂದೆ ಸರಿದ ರವಿಚಂದ್ರನ್ ಅಶ್ವಿನ್​ಗೆ ಬದಲಿ ಆಟಗಾರ ಆಡಬಹುದೇ

ಭಾರತದ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರು ಪ್ರಸ್ತುತ ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಿಂದ (India vs England 3rd Test) ಕೌಟುಂಬಿಕ ತುರ್ತುಪರಿಸ್ಥಿತಿ ಕಾರಣ ತಂಡದಿಂದ ಹಿಂದೆ ಸರಿದಿದ್ದಾರೆ. ಸ್ಮರಣೀಯ 500ನೇ ಟೆಸ್ಟ್ ವಿಕೆಟ್​ ಪಡೆದ ಕೆಲವೇ ಗಂಟೆಗಳ ನಂತರ ನಿರ್ಧಾರ ಕೈಗೊಂಡರು. ಟೆಸ್ಟ್​​ನಲ್ಲಿ ಅನಿಲ್ ಕುಂಬ್ಳೆ (Anil Kumble) ನಂತರ ಈ ಸಾಧನೆಗೈದ ಎರಡನೇ ಭಾರತೀಯ. ಆದರೆ ಅಶ್ವಿನ್​ ಬದಲಿಗೆ ಮತ್ತೊಬ್ಬ ಆಟಗಾರನಿಗೆ ತಂಡದಲ್ಲಿ ಅವಕಾಶ ಸಿಗಲಿದೆಯೇ?

ಟ್ರೆಂಡಿಂಗ್​ ಸುದ್ದಿ

ತಾಯಿಗೆ ಅನಾರೋಗ್ಯ

ಆರಂಭದಲ್ಲಿ ಅಶ್ವಿನ್ ಹಿಂದೆ ಸರಿಯಲು ಕಾರಣ ಏನೆಂಬುದನ್ನು ಕಾರಣವನ್ನು ಬಿಸಿಸಿಐ ತಿಳಿಸಲಿಲ್ಲ. ಆದರೆ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಆಟಗಾರನ ತಾಯಿ ವೈದ್ಯಕೀಯ ತುರ್ತುಸ್ಥಿತಿ ಎದುರಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ಅಶ್ವಿನ್ ಅವರ ತಾಯಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅವರು ರಾಜ್‌ಕೋಟ್ ಟೆಸ್ಟ್​ ಬಿಟ್ಟು ಚೆನ್ನೈಗೆ ತೆರಳಿ ತನ್ನ ತಾಯಿಯೊಂದಿಗೆ ಇರಲಿ ಎಂದು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೌಟುಂಬಿಕ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ತಕ್ಷಣವೇ ಜಾರಿಗೆ ಬರುವಂತೆ ತಂಡದಿಂದ ಅಶ್ವಿನ್ ಹಿಂದೆ ಸರಿದಿದ್ದಾರೆ. ಈ ಸವಾಲಿನ ಸಮಯದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ತಂಡವು ಅಶ್ವಿನ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತೀಯ ಕ್ರಿಕೆಟಿಗ ಖಾಸಗಿತನವನ್ನು ಗೌರವಿಸುವಂತೆ ಎಲ್ಲರಿಗೂ ವಿನಂತಿಸಿದೆ. ಆದರೀಗ ರಾಜೀವ್​ ಶುಕ್ಲಾ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಅಶ್ವಿನ್ ಬದಲಿಗೆ ಮತ್ತೊಬ್ಬ ಆಟಗಾರನಿಗೆ ಸಿಗುವುದೇ ಅವಕಾಶ?

ಇದೀಗ ಅಶ್ವಿನ್ ಅನುಪಸ್ಥಿತಿಯಿಂದ ಭಾರತ ತಂಡದಲ್ಲಿ 10 ಆಟಗಾರರು ಮಾತ್ರ ಇದ್ದಾರೆ. ಆಟದ ನಿಯಮಗಳನ್ನು ರೂಪಿಸುವ ಮ್ಯಾರಿಲೆಬೋನ್ ಕ್ರಿಕೆಟ್ ಕ್ಲಬ್ (MCC) ಪ್ರಕಾರ, ಅಂಪೈರ್‌ಗಳು ಆಟದ ಸಮಯದಲ್ಲಿ ಆಟಗಾರ ಗಾಯಗೊಂಡಿದ್ದರೆ ಅಥವಾ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬ ವಿಚಾರವನ್ನು ಸಂಪೂರ್ಣವಾಗಿ ನಂಬಿದರೆ ಬದಲಿ ಫೀಲ್ಡರ್‌ಗೆ ಅವಕಾಶ ನೀಡಬಹುದು. ಎಂಸಿಸಿ ನಿಯಮ ಸಂಖ್ಯೆ 24.1.1.2ರ ಪ್ರಕಾರ ಒಂದು ತಂಡವು 'ಸಂಪೂರ್ಣ ಸ್ವೀಕಾರಾರ್ಹ ಕಾರಣಕ್ಕಾಗಿ' ಬದಲಿ ಫೀಲ್ಡರ್ ಅನ್ನು ಸಹ ಹೊಂದಬಹುದು.

10 ಆಟಗಾರರು ಬ್ಯಾಟಿಂಗ್, ಬೌಲಿಂಗ್; ಒಬ್ಬ ಫೀಲ್ಡರ್

ಅಶ್ವಿನ್ ಅನಾರೋಗ್ಯ ಅಥವಾ ಗಾಯಗೊಂಡಿಲ್ಲದ ಕಾರಣ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರ ಒಪ್ಪಿಗೆಯೊಂದಿಗೆ ರಾಜ್‌ಕೋಟ್‌ನಲ್ಲಿ ಭಾರತ ತಂಡಕ್ಕೆ ಬದಲಿ ಫೀಲ್ಡರ್ ಹೊಂದಲು ಮಾತ್ರ ಅವಕಾಶ ನೀಡಲಾಗುತ್ತದೆ. ಬದಲಿ ಫೀಲ್ಡರ್ ಪಂದ್ಯದ ಉಳಿದ ಭಾಗಕ್ಕೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಅನುಮತಿಸಲಾಗುವುದಿಲ್ಲ. ಉಳಿದ 10 ಆಟಗಾರರು ಮಾತ್ರ ಬೌಲಿಂಗ್ ಮತ್ತು ಬ್ಯಾಟಿಂಗ್ ನಡೆಸಬಹುದು. ಮತ್ತೊಬ್ಬ ಆಟಗಾರ ಫೀಲ್ಡಿಂಗ್ ಮಾತ್ರ ನಡೆಸಲಿದ್ದಾರೆ. ಕನ್ಕ್ಯಶನ್​ಗೆ ಒಳಗಾದ ಹೊರಬಿದ್ದ ಆಟಗಾರನ ಬದಲಿ ಆಟಗಾರರಿಗೆ ಮಾತ್ರ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಅವಕಾಶವಿದೆ. ಸದ್ಯ ಅಶ್ವಿನ್ 7 ಓವರ್​ ಬೌಲಿಂಗ್ ಮಾಡಿದ್ದು 37 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದಿದ್ದಾರೆ.

ಟಿ20 ವರ್ಲ್ಡ್‌ಕಪ್ 2024