ಎರಡು ಮಕ್ಕಳ ತಂದೆಯಾದ್ರೂ ಮಕ್ಕಳಾಟ ಬಿಟ್ಟಿಲ್ಲ; ಮೈದಾನದಲ್ಲಿ ಏನೆಲ್ಲಾ ಮಾಡಿದ್ರು ನೋಡಿ ವಿರಾಟ್ ಕೊಹ್ಲಿ
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಎರಡನೇ ಏಕದಿನಕ್ಕೆ ಮರಳಿದರು. ಆದರೆ ಈ ಪಂದ್ಯದಲ್ಲಿ ಬ್ಯಾಟ್ನಲ್ಲಿ ಸದ್ದು ಮಾಡದಿದ್ದರೂ ಮೈದಾನದಲ್ಲಿ ಪ್ರೇಕ್ಷಕರಿಗೆ ಫುಲ್ ಮನರಂಜನೆ ನೀಡಿದ್ದಾರೆ.

ಕಟಕ್ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲೂ ಭಾರತ ತಂಡ 4 ವಿಕೆಟ್ಗಳ ಅಂತರದಿಂದ ಜಯದ ನಗೆ ಬೀರಿದ್ದು, ಒಂದು ಪಂದ್ಯ ಬಾಕಿ ಇರುವಂತೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ರೋಹಿತ್ ಪಡೆ ಕೈವಶ ಮಾಡಿಕೊಂಡಿದೆ. ಅಗ್ನಿ ಪರೀಕ್ಷೆ ಎದುರಿಸುತ್ತಿದ್ದ ನಾಯಕ ರೋಹಿತ್ ಶರ್ಮಾ ಅಮೋಘ ಶತಕದೊಂದಿಗೆ ಬಲಿಷ್ಠವಾಗಿ ಪುನರಾಗಮನ ಮಾಡಿದ್ದು, ಹಲವು ದಾಖಲೆಗಳನ್ನೂ ನಿರ್ಮಿಸಿದ್ದಾರೆ. ಆದರೆ ಇದರ ನಡುವೆ ಮತ್ತು ಕಳಪೆ ಪ್ರದರ್ಶನ ನೀಡಿದ್ದರ ಹೊರತಾಗಿಯೂ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾಡಿರುವ ಡ್ಯಾನ್ಸ್ ಸಾಮಾಜಿಕ ಜಾಲತಾನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಅಭಿಮಾನಿಗಳು ಇವರು ಎರಡು ಮಕ್ಕಳ ತಂದೆಯಾದರೂ ಮಕ್ಕಳಾಟ ಬಿಟ್ಟಿಲ್ಲ ಎಂದು ಹೇಳುತ್ತಿದ್ದಾರೆ.
ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ತಾನು ಬ್ಯಾಟ್ ಮೂಲಕ ಸದ್ದು ಮಾಡದಿದ್ದರೂ ಮೈದಾನದಲ್ಲಿ ಚೇಷ್ಟೆ, ಸ್ಲೆಡ್ಜಿಂಗ್, ಗೇಲಿ, ಡ್ಯಾನ್ಸ್… ಸೇರಿ ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಾಗುವ ಕೊಹ್ಲಿ, ಪಂದ್ಯ ಕಣ್ತುಂಬಿಕೊಳ್ಳಲು ಬಂದಿದ್ದ ಪ್ರೇಕ್ಷಕರಿಗೆ ಈ ಬಾರಿಯೂ ನಿರಾಸೆ ಮಾಡಲಿಲ್ಲ. ಮೈದಾನದಲ್ಲಿ ಕೊಹ್ಲಿಯ ವರ್ತನೆಗಳು ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ರಂಜಿಸುತ್ತವೆ ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿ. ಫಿಟ್ನೆಸ್ ಸಮಸ್ಯೆಯಿಂದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯದೇ ಬೆಂಚ್ ಕಾದಿದ್ದ ಕೊಹ್ಲಿ 2ನೇ ಏಕದಿನ ಪಂದ್ಯದಲ್ಲಿ ಅವರು ಪ್ಲೇಯಿಂಗ್ ಇಲೆವೆನ್ಗೆ ಮರಳಿದರು. ಆದರೆ ಬ್ಯಾಟ್ನಲ್ಲಿ ಅವರು ನಿರಾಸೆ ಮೂಡಿಸಿದರು. 8 ಎಸೆತಗಳಲ್ಲಿ 5 ರನ್ ಗಳಿಸಿ ಔಟಾದರು. ರನ್ ಗಳಿಸದೆ ನಿರಾಸೆ ಮೂಡಿಸಿದರೂ ಮೈದಾನದಲ್ಲಿ ನೃತ್ಯದ ಮೂಲಕ ಮನರಂಜಿಸುವಲ್ಲಿ ಯಶಸ್ವಿಯಾದರು.
ಕೈ ಸನ್ನೆಯನ್ನೇ ನೃತ್ಯವನ್ನಾಗಿ ಪರಿವರ್ತಿಸಿದ ಕೊಹ್ಲಿ
ಇಂಗ್ಲೆಂಡ್ ಇನ್ನಿಂಗ್ಸ್ ಸಮಯದಲ್ಲಿ ಕೊಹ್ಲಿ ನೃತ್ಯ ಮಾಡಲು ಪ್ರಾರಂಭಿಸಿದ ವಿಡಿಯೋ ಆನ್ಲೈನ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಹ ಆಟಗಾರನಿಗೆ ಕೈ ಸನ್ನೆ ಮಾಡುವ ಮೂಲಕ ಫೀಲ್ಡಿಂಗ್ ಸೆಟ್ ಮಾಡಲು ಯತ್ನಿಸುತ್ತಿದ್ದರು. ಆ ಕೈ ಸನ್ನೆಯನ್ನೇ ನೃತ್ಯವನ್ನಾಗಿ ಪರಿವರ್ತಿಸಿದ್ದು, ನಿಜವಾಗಲೂ ಅದ್ಭುತವಾಗಿತ್ತು. ಅವರ ಈ ನೃತ್ಯದ ವಿಡಿಯೋಗೆ ತಮಾಷೆಯ ಪ್ರತಿಕ್ರಿಯೆಗಳು ಬರುತ್ತಿವೆ. ಕೊಹ್ಲಿ 2 ಮಕ್ಕಳ ತಂದೆಯಾದರೂ ಮಕ್ಕಳಾಟ ಆಡೋದನ್ನು ನಿಲ್ಲಿಸಿಲ್ಲ ಎಂದು ಬಗೆ ಬಗೆ ಕಾಮೆಂಟ್ಗಳನ್ನು ಮಾಡಿದ್ದಾರೆ. ಈತ ಯಾವಾಗ, ಹೇಗಿರುತ್ತಾನೆ ಎಂದು ಊಹಿಸುವುದೇ ಕಷ್ಟ ಎನ್ನುತ್ತಿದ್ದಾರೆ. ಇವರನ್ನು ಎರಡು ಮಕ್ಕಳನ್ನು ಎಂದು ನಂಬುವುದಕ್ಕೆ ಸಾಧ್ಯವೇ ಇಲ್ಲ. ಇವರು ತುಂಬಾ ಫನ್ನಿ ಎಂದು ನಗುವ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ ನೆಟ್ಟಿಗರು.
ಕೊಹ್ಲಿ ಲಯಕ್ಕೆ ಮರಳುವುದು ಅನಿವಾರ್ಯ
ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ನಲ್ಲಿ ಕೊಹ್ಲಿ ಶತಕ ಗಳಿಸಿದರೂ, ಅದೇ ವೇಗವನ್ನು ಉಳಿಸಿಕೊಳ್ಳಲು ವಿಫಲರಾದರು. ಉಳಿದ 4 ಪಂದ್ಯಗಳಲ್ಲಿ ಗಳಿಸಿದ್ದು 90 ರನ್ ಮಾತ್ರ. ಪ್ರಸ್ತುತ ವಿರಾಟ್ ವಿರುದ್ಧವೂ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕೊಹ್ಲಿ ಲಯಕ್ಕೆ ಮರಳುವುದು ಅಗತ್ಯ. ಹೀಗಾಗಿ ಮಹತ್ವದ ಟೂರ್ನಿಗೂ ಮುನ್ನ ಉಳಿದಿರುವ ಒಂದು ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೋ ಎಂಬುದನ್ನು ಕಾದುನೋಡಬೇಕಿದೆ. ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 304 ರನ್ಗಳಿಗೆ ಆಲೌಟ್ ಆಯಿತು. ಮೊದಲು ಬ್ಯಾಟಿಂಗ್ ಮಾಡಿದ ಬೆನ್ ಡಕೆಟ್ (65) ಮತ್ತು ಜೋ ರೂಟ್ (69) ಅರ್ಧಶತಕ ಸಿಡಿಸಿದರೆ, ಲಿಯಾಮ್ ಲಿವಿಂಗ್ಸ್ಟನ್ (41) ರನ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ಭಾರತ 44.3 ಓವರ್ಗಳಲ್ಲಿ ಗೆದ್ದು ಬೀಗಿತು.
