ಕನ್ನಡ ಸುದ್ದಿ  /  ಕ್ರಿಕೆಟ್  /  ಹೊಸ ಹೇರ್‌ಸ್ಟೈಲ್‌ಗೆ ವಿರಾಟ್ ಕೊಹ್ಲಿ ಖರ್ಚು ಮಾಡಿದ ಹಣ ಲಕ್ಷ ಲಕ್ಷ; ಕೇಶ ವಿನ್ಯಾಸಕ ಹಕೀಮ್ ಹೇಳಿದ್ರು ಅಚ್ಚರಿ ಮಾಹಿತಿ

ಹೊಸ ಹೇರ್‌ಸ್ಟೈಲ್‌ಗೆ ವಿರಾಟ್ ಕೊಹ್ಲಿ ಖರ್ಚು ಮಾಡಿದ ಹಣ ಲಕ್ಷ ಲಕ್ಷ; ಕೇಶ ವಿನ್ಯಾಸಕ ಹಕೀಮ್ ಹೇಳಿದ್ರು ಅಚ್ಚರಿ ಮಾಹಿತಿ

Virat Kohli hairstyle: 2024ರ ಐಪಿಎಲ್‌ ಆವೃತ್ತಿಯಲ್ಲಿ ಮೈದಾನಕ್ಕೆ ಇಳಿಯುವುದಕ್ಕೂ ಮೊದಲು, ವಿರಾಟ್ ಕೊಹ್ಲಿ ಹೊಸ ಕೇಶವಿನ್ಯಾಸ ಮಾಡಿಸಿಕೊಂಡರು. ಕಿಂಗ್‌ ಕೊಹ್ಲಿಯ ನ್ಯೂ ಲುಕ್‌ ಅಭಿಮಾನಿಗಳಿಗೆ ಭಾರಿ ಮೆಚ್ಚುಗೆಯಾಯ್ತು. ಈ ಕುರಿತು ಕೇಶವಿನ್ಯಾಸಕ ಆಲಿಮ್ ಹಕೀಮ್ ಮಾತನಾಡಿದ್ದಾರೆ.

ಹೊಸ ಹೇರ್‌ಸ್ಟೈಲ್‌ಗೆ ವಿರಾಟ್ ಕೊಹ್ಲಿ ಖರ್ಚು ಮಾಡಿದ ಹಣ ಲಕ್ಷ ಲಕ್ಷ
ಹೊಸ ಹೇರ್‌ಸ್ಟೈಲ್‌ಗೆ ವಿರಾಟ್ ಕೊಹ್ಲಿ ಖರ್ಚು ಮಾಡಿದ ಹಣ ಲಕ್ಷ ಲಕ್ಷ

ಕ್ರಿಕೆಟ್ ಲೋಕದ ಅತ್ಯಂತ ಜನಪ್ರಿಯ ಆಟಗಾರ ವಿರಾಟ್ ಕೊಹ್ಲಿ ಎಂಬುದಕ್ಕೆ ಸಾಕ್ಷಿ ಬೇಕಿಲ್ಲ. ಆರ್‌ಸಿಬಿ ಆಟಗಾರ ಕಿಂಗ್ ಕೊಹ್ಲಿಗೆ ಇರುವಷ್ಟು ಫ್ಯಾನ್ ಫಾಲೊವಿಂಗ್‌, ವಿಶ್ವದ ಬೇರೆ ಯಾವೊಬ್ಬ ಕ್ರಿಕೆಟಿಗನಿಗೂ ಇಲ್ಲ. ಮೈದಾನದಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸಿ ರೆಕಾರ್ಡ್‌ಗಳ ಒಡೆಯನಾಗಿರುವ ವಿರಾಟ್‌ ಆಟಕ್ಕೆ ಫಿದಾ ಆಗದವರಿಲ್ಲ. ಮೈದಾನದಲ್ಲಿ ವಿರಾಟ್‌ ಎಷ್ಟು ಡೇಂಜರಸ್‌ ಆಟಗಾರನೋ, ಮೈದಾನದ ಹೊರಗಡೆ ಅವರು ಅಷ್ಟೇ ಕೂಲ್.‌ ಆಟ ಮಾತ್ರವಲ್ಲದೆ ಫ್ಯಾಷನ್‌ನಲ್ಲೂ ಕಿಂಗ್‌ ಎತ್ತಿದ ಕೈ. ಇತ್ತೀಚೆಗೆ ಐಪಿಎಲ್ 2024ರ ಆವೃತ್ತಿಯ ಆರಂಭಕ್ಕೂ ಮುನ್ನ ಹೊಸ ಹೇರ್‌ಸ್ಟೈಲ್‌ನೊಂದಿಗೆ ಅಖಾಡಕ್ಕಿಳಿದ ವಿರಾಟ್‌ ಅವರ ಹೊಸ ಲುಕ್‌ಗೆ ಅಭಿಮಾನಿಗಳು ಬೋಲ್ಡ್‌ ಆಗಿದ್ದರು. ಈ ಬಗ್ಗೆ ಸೋಷಿಯಲ್‌ ಮೀಡಿಯಾದದಲ್ಲಿ ಭಾರಿ ಚರ್ಚೆ ನಡೆಯಿತು.

ಟ್ರೆಂಡಿಂಗ್​ ಸುದ್ದಿ

ವಿರಾಟ್‌ ಹೊಸ ಸ್ಟೈಲ್ ಆಕರ್ಷಕವಾಗಿತ್ತು. ಈ ನಡುವೆ, ವಿರಾಟ್‌ ಹೇರ್‌ಸ್ಟೈಲ್‌ ಮಾಡುವವವರು ಯಾರು? ಪ್ರತಿ ಬಾರಿ ತಮ್ಮ ಕೇಶವಿನ್ಯಾಸಕ್ಕೆ ಆರ್‌ಸಿಬಿ ಬ್ಯಾಟರ್‌ ಎಷ್ಟು ಹಣ ಖರ್ಚು ಮಾಡ್ತಾರೆ ಎಂಬ ಬಗ್ಗೆ ಅಭಿಮಾನಿಗಳಿಗೆ ಭಾರಿ ಕುತೂಹಲವಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಕೊಹ್ಲಿ ಅವರ ಹೇರ್‌ಕಟಿಂಗ್‌ ಸೇರಿದಂತೆ ಹೇರ್‌ಸ್ಟೈಲ್‌ ಮಾಡುವವರು, ಪ್ರಸಿದ್ಧ ಸೆಲೆಬ್ರಿಟಿ ಕೇಶವಿನ್ಯಾಸಕ ಆಲಿಮ್ ಹಕೀಮ್. ಟೀಮ್‌ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸೇರಿದಂತೆ, ಹಲವಾರು ಸೆಲೆಬ್ರಿಟಿಗಳ ಹೇರ್‌ಸ್ಟೈಲ್‌ ಮಾಡುವವರು ಇವರೇ. ಕೊಹ್ಲಿಯ ಹೊಸ ಲುಕ್‌ ಹಿಂದಿನ ಕೈಚಳಕ ಕೂಡಾ ಹಕೀಮ್ ಅವರದ್ದೇ.

ಒಂದು ಲಕ್ಷ ಶುಲ್ಕ!

ಉನ್ನತ ಕ್ರಿಕೆಟಿಗರೊಂದಿಗೆ ಕೊಲಾಬರೇಷನ್‌ ಮಾಡಿಕೊಂಡು ಹೆಸರುವಾಸಿಯಾದ ಹಕೀಮ್, ತಮ್ಮ ಕೇಶವಿನ್ಯಾಸಕ್ಕೆ ಎಷ್ಟು ಚಾರ್ಜ್‌ ಮಾಡ್ತಾರೆ ಎಂಬುದನ್ನು ಹೇಳಿಕೊಂಡಿದ್ದಾರೆ. ಪ್ರತಿ ಹೇರ್‌ಸ್ಟೈಲ್‌ ಸೆಷನ್‌ಗೆ “ಕನಿಷ್ಠ 1 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ” ಎಂದು, ತಮ್ಮ ಶುಲ್ಕದ ವಿವರಗಳನ್ನು ಹೇಳಿದ್ದಾರೆ.

ಇದನ್ನೂ ಓದಿ | ಹಳೆಯ ಲುಕ್​​ನಲ್ಲಿ ಎಂಎಸ್‌ ಧೋನಿ, ರಗಡ್​ ಲುಕ್​ನಲ್ಲಿ ವಿರಾಟ್ ಕೊಹ್ಲಿ; ಸ್ಟನ್ನಿಂಗ್ ಹೇರ್​ಸ್ಟೈಲ್​ನೊಂದಿಗೆ ಐಪಿಎಲ್​ನಲ್ಲಿ ಕಣಕ್ಕೆ

ವಿರಾಟ್‌ ಕೊಹ್ಲಿ ಜೊತೆಗಿನ ತಮ್ಮ ಕೇಶವಿನ್ಯಾಸದ ಪ್ರಕ್ರಿಯೆಯನ್ನು ವಿವರಿಸಿದ ಹಕೀಮ್, ಟೀಮ್‌ ಇಂಡಿಯಾ ಮಾಜಿ ನಾಯಕನೊಂದಿಗಿನ ತಮ್ಮ ದೀರ್ಘಕಾಲದ ಸ್ನೇಹದ ಕುರಿತು ಬಿಚ್ಚಿಟ್ಟಿದ್ದಾರೆ. ಇದರೊಂದಿಗೆ ಹೊಸ ಹೊಸ ಪ್ರಯೋಗ ಹಾಗೂ ಸ್ಟೈಲ್‌ ಕುರಿತು ವಿರಾಟ್‌ ಅವರಿಗಿರುವ ಆಸಕ್ತಿ ಬಗ್ಗೆಯೂ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಹುಬ್ಬುಗಳಲ್ಲಿ ಸೀಳು, ಕೇಶವಿನ್ಯಾಸ, ಬಣ್ಣದ ಸೂಕ್ಷ್ಮ ಸ್ಪರ್ಶ ಸೇರಿದಂತೆ ಇತ್ತೀಚೆಗೆ ಕೊಹ್ಲಿ ಅವರ ಹೊಸ ಕೇಶವಿನ್ಯಾಸವು ವ್ಯಾಪಕವಾಗಿ ಗಮನ ಸೆಳೆದಿದೆ.

“ನನ್ನ ಫೀಸ್‌ ತುಂಬಾ ಸರಳವಾಗಿದೆ. ನಾನು ಎಷ್ಟು ಶುಲ್ಕ ವಿಧಿಸುತ್ತೇನೆ ಎಂದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಇದು 1 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಅದು ಕನಿಷ್ಠ ಶುಲ್ಕ” ಎಂದು ಹಕೀಮ್ ಅವರು ಬ್ರಟ್ ಇಂಡಿಯಾಗೆ ತಿಳಿಸಿದ್ದಾರೆ.

“ಮಾಹಿ ಸರ್ ಮತ್ತು ವಿರಾಟ್ ಅವರು ನನ್ನ ತುಂಬಾ ಹಳೆಯ ಸ್ನೇಹಿತರು. ಅವರಿಬ್ಬರು ಬಹಳ ಸಮಯದಿಂದಲೂ ನನ್ನ ಬಳಿಗೆ ಹೇರ್ ಕಟ್ ಮಾಡಿಸಲು ಬರುತ್ತಿದ್ದಾರೆ. ಐಪಿಎಲ್ ವೇಳೆ ನಾವು ತುಂಬಾ ಕೂಲ್ ಹಾಗೂ ವಿಭಿನ್ನ ಸ್ಟೈಲ್‌ ಮಾಡಲು ನಿರ್ಧರಿಸಿದೆವು. ಪ್ರತಿ ಬಾರಿಯೂ ವಿರಾಟ್ ಯಾವಾಗಲೂ 'ನಾವು ಈ ಬಾರಿ ಈ ಸ್ಟೈಲ್ ಪ್ರಯತ್ನಿಸಬೇಕು, ಮುಂದಿನ ಬಾರಿ ಅದನ್ನು ಪ್ರಯತ್ನಿಸೋಣ' ಎಂದು ಹೇಳುತ್ತಾರೆ”.

“ಮುಂದಿನ ಲುಕ್ ಹೇಗಿರಬೇಕು ಎಂದು ನಾವು ಚಾಟ್ ಮಾಡುತ್ತಲೇ ಇರುತ್ತೇವೆ. ಈ ಬಾರಿ ನಾವು ತುಂಬಾ ಸ್ಮಾರ್ಟ್ ಸ್ಟೈಲ್ ಮಾಡಲು ನಿರ್ಧರಿಸಿದೆವು. ಹುಬ್ಬುಗಳಲ್ಲಿ ಸೀಳು, ಹಿಂಭಾಗದಲ್ಲಿ ಸ್ವಲ್ಪ ಹೆಚ್ಚು ಕೂದಲು ಬಿಟ್ಟೆವು. ಕೂದಲನ್ನು ಸ್ವಲ್ಪ ಕಲರ್ ಮಾಡಿದೆವು. ಹೊಸ ಹೇರ್‌ಸ್ಟೈಲ್ ಫೋಟೋವನ್ನು ಪೋಸ್ಟ್ ಮಾಡಿದಾಗ, ಅದು ಇಂಟರ್ನೆಟ್‌ನಲ್ಲಿ ವೈರಲ್‌ ಆಯ್ತು. ನನ್ನ ಪೋಸ್ಟ್‌ಗಳಲ್ಲಿ ನಾನು ಪಡೆದ ಶೇರ್‌ ಮತ್ತು ಲೈಕ್‌ಗಳ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಿತು” ಎಂದು ಹಕೀಮ್‌ ಹೇಳಿಕೊಂಡಿದ್ದಾರೆ.

IPL_Entry_Point