ಕನ್ನಡ ಸುದ್ದಿ  /  ಕ್ರಿಕೆಟ್  /  ಒಂದು ಸಲ ಚಾಂಪಿಯನ್, 2 ಸೆಮಿಫೈನಲ್, 4 ಸಲ ಲೀಗ್​ನಿಂದ ಔಟ್; ಎಂಟು ಟಿ20 ವಿಶ್ವಕಪ್​ ಆವೃತ್ತಿಗಳಲ್ಲಿ ಭಾರತ ತಂಡದ ಪ್ರದರ್ಶನ

ಒಂದು ಸಲ ಚಾಂಪಿಯನ್, 2 ಸೆಮಿಫೈನಲ್, 4 ಸಲ ಲೀಗ್​ನಿಂದ ಔಟ್; ಎಂಟು ಟಿ20 ವಿಶ್ವಕಪ್​ ಆವೃತ್ತಿಗಳಲ್ಲಿ ಭಾರತ ತಂಡದ ಪ್ರದರ್ಶನ

India in T20 World Cup : 2007ರಲ್ಲಿ ಆರಂಭಗೊಂಡ ಟಿ20 ವಿಶ್ವಕಪ್​ 2022ರ ತನಕ ಎಂಟು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದೆ. ಹಾಗಾದರೆ ಈ ಆವೃತ್ತಿಗಳಲ್ಲಿ ಭಾರತ ಕ್ರಿಕೆಟ್ ತಂಡ ನೀಡಿದ್ದ ಪ್ರದರ್ಶನ ಹೇಗಿತ್ತು? ಇಲ್ಲಿದೆ ಅದರ ಒಂದು ನೋಟ.

ಒಂದು ಸಲ ಚಾಂಪಿಯನ್, 2 ಸೆಮಿಫೈನಲ್, 4 ಸಲ ಲೀಗ್​ನಿಂದ ಔಟ್; ಎಂಟು ಟಿ20 ವಿಶ್ವಕಪ್​ ಆವೃತ್ತಿಗಳಲ್ಲಿ ಭಾರತ ತಂಡದ ಪ್ರದರ್ಶನ
ಒಂದು ಸಲ ಚಾಂಪಿಯನ್, 2 ಸೆಮಿಫೈನಲ್, 4 ಸಲ ಲೀಗ್​ನಿಂದ ಔಟ್; ಎಂಟು ಟಿ20 ವಿಶ್ವಕಪ್​ ಆವೃತ್ತಿಗಳಲ್ಲಿ ಭಾರತ ತಂಡದ ಪ್ರದರ್ಶನ

India in T20 World Cup: ಜೂನ್ 1 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುಎಸ್​ಎ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟ್ರೋಫಿ ಗೆದ್ದು 11 ವರ್ಷಗಳ ಪ್ರಶಸ್ತಿ ಕಾಯುವಿಕೆಯನ್ನು ಕೊನೆಗೊಳಿಸಲು ನಂಬರ್ 1 ಟಿ20 ತಂಡವಾದ ಭಾರತ ತಂಡ ಎದುರು ನೋಡುತ್ತಿದೆ. ಟಿ20 ವಿಶ್ವಕಪ್​ನಲ್ಲಿ ಎರಡನೇ ಬಾರಿ ತಂಡವನ್ನು ಮುನ್ನಡೆಸಲು ರೋಹಿತ್​ ಶರ್ಮಾ ಸಜ್ಜಾಗಿದ್ದಾರೆ. ಜೂನ್ 5ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಎ ಗುಂಪಿನಲ್ಲಿ ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ನಡೆಸಲಿರುವ ಟೀಮ್ ಇಂಡಿಯಾ, ಜೂನ್ 12 ಮತ್ತು 15 ರಂದು ಯುಎಸ್​ಎ ಮತ್ತು ಕೆನಡಾ ತಂಡಗಳನ್ನು ಎದುರಿಸಲಿವೆ. 9ನೇ ಆವೃತ್ತಿಯ ಟಿ20 ವಿಶ್ವಕಪ್ ಆರಂಭದ ಮೊದಲು, ಪುರುಷರ ಕಡಿಮೆ ಸ್ವರೂಪದ ಮೆಗಾ ಈವೆಂಟ್‌ನ ಈ ಹಿಂದಿನ ಎಂಟು ಆವೃತ್ತಿಗಳಲ್ಲಿ ಭಾರತತಂಡವು ಹೇಗೆ ಪ್ರದರ್ಶನ ನೀಡಿದೆ ಎಂಬುದರ ನೋಟ ಇಲ್ಲಿದೆ.

2007: ಟಿ20 ವಿಶ್ವಕಪ್‌ ಮೊದಲ ಆವೃತ್ತಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಿತು. ಅಂದು ಎಂಎಸ್ ಧೋನಿ ನೇತೃತ್ವದ ಯುವ ಭಾರತೀಯ ತಂಡ ಚಾಂಪಿಯನ್ ಆಗುವ ಮೂಲಕ ಎಲ್ಲರನ್ನು ಬೆರಗುಗೊಳಿಸಿತು. ಸೆಪ್ಟೆಂಬರ್ 24ರಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ತಂಡವನ್ನು 5 ರನ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು.

2009: ಕಳೆದ ಬಾರಿ ಚಾಂಪಿಯನ್ ಆಗಿದ್ದ ಟೀಮ್ ಇಂಡಿಯಾ, ಇಂಗ್ಲೆಂಡ್​ನಲ್ಲಿ ನಡೆದ 2009ರ ಟಿ20 ವಿಶ್ವಕಪ್​ನ ಸೂಪರ್​​-8 ನಲ್ಲಿ ಮೂರಕ್ಕೆ ಮೂರು ಸೋತು ಸೆಮಿಫೈನಲ್​ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. ಸೂಪರ್​-8 ನಲ್ಲಿ ವೆಸ್ಟ್ ಇಂಡೀಸ್​ ವಿರುದ್ಧ 7 ವಿಕೆಟ್, ಇಂಗ್ಲೆಂಡ್ ವಿರುದ್ಧ 3 ರನ್ ಮತ್ತು ಸೌತ್ ಆಫ್ರಿಕಾ ವಿರುದ್ಧ 12 ರನ್‌ಗಳಿಂದ ಸೋತಿತ್ತು.

2010: ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದ್ದ 2010 ಟಿ20 ವಿಶ್ವಕಪ್‌ನ ಗುಂಪು ಹಂತದ ಪಂದ್ಯಗಳಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಆದರೆ 2009ರ ಆವೃತ್ತಿಯಂತೆ 2010ರಲ್ಲೂ ಟೀಮ್ ಇಂಡಿಯಾ ಎಲ್ಲಾ 3 ಸೂಪರ್ 8 ಪಂದ್ಯಗಳನ್ನು ಕಳೆದುಕೊಂಡು ಅಭಿಯಾನ ಕೊನೆಗೊಳಿಸಿತು.

2012: ಸೆಪ್ಟೆಂಬರ್‌ನಲ್ಲಿ ನಡೆದ ಈ ವಿಶ್ವಕಪ್​​ನ ಲೀಗ್​ನಲ್ಲಿ ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದ ಭಾರತ, ಸೂಪರ್​-8ರಲ್ಲಿ ಮೂರರಲ್ಲಿ 2 ಗೆದ್ದರೂ ಸೆಮಿಫೈನರ್​ಗೆ ಅರ್ಹತೆ ಪಡೆದುಕೊಳ್ಳಲು ವಿಫಲವಾಗಿತ್ತು. ನೆಟ್​ರನ್ ರೇಟ್ ಆಧಾರದಲ್ಲಿ ಅಷ್ಟೇ ಅಂಕ ಪಡೆದಿದ್ದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿತ್ತು.

2014: ಸತತ ಮೂರು ಆವೃತ್ತಿಗಳಲ್ಲಿ ಲೀಗ್​​ನಿಂದಲೇ ಹೊರಬಿದ್ದಿದ್ದ ಟೀಮ್ ಇಂಡಿಯಾ ಬಾಂಗ್ಲಾದೇಶ ಆಯೋಜಿಸಿದ್ದ 2014ರ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಗುಂಪು ಹಂತದಲ್ಲಿ ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಭಾರತ ಸೆಮಿಫೈನಲ್​ ಪ್ರವೇಶಿಸಿತ್ತು. ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಶರಣಾಯಿತು. ಕೊಹ್ಲಿ ಟಾಪ್ ಸ್ಕೋರರ್ ಆದರು.

2016: ಭಾರತವೇ ಆತಿಥ್ಯ ವಹಿಸಿದ್ದ 2016ರ ಟಿ20 ವಿಶ್ವಕಪ್​ನಲ್ಲಿ ಭಾರತ ಸೆಮಿಫೈನಲ್​ನಿಂದ ಹೊರಬಿದ್ದಿತ್ತು. ನ್ಯೂಜಿಲೆಂಡ್ ವಿರುದ್ಧದ ಮೊದಲ ಗ್ರೂಪ್ 2 ಪಂದ್ಯದಲ್ಲಿ 47 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿದ ಹೊರತಾಗಿಯೂ, ಭಾರತವು ಟಾಪ್-2 ರಲ್ಲಿ ಸ್ಥಾನ ಪಡೆದು ಸೆಮಿಫೈನಲ್‌ಗೆ ಅರ್ಹತೆ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಸೋತಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಒಟ್ಟು 192 ರನ್ ಗಳಿಸಿದ ಹೊರತಾಗಿಯೂ ಇಂಡಿಯಾ 7 ವಿಕೆಟ್​ಗಳಿಂದ ಸೋತಿತ್ತು. ವಿರಾಟ್ ಮತ್ತೊಮ್ಮೆ ಅತ್ಯಧಿಕ ರನ್ ಗಳಿಸಿದರು.

2021: ಭಾರತವು 2021ರ ಟಿ20 ವಿಶ್ವಕಪ್‌ನ ಮೊದಲ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಮತ್ತು ನ್ಯೂಜಿಲೆಂಡ್ ವಿರುದ್ಧ ಮುಜುಗರದ ಸೋಲು ಅನುಭವಿಸಿತು. ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಗೆದ್ದು ಆರು ಅಂಕಗಳೊಂದಿಗೆ ಲೀಗ್​​ ಮುಗಿಸಿತು. ಆದರೆ ಅವರು ಅಗ್ರ ಎರಡು ಸ್ಥಾನಗಳನ್ನು ಗಳಿಸಲು ಮತ್ತು ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

2022: ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಂಡ ಭಾರತವು ಒಟ್ಟು 4 ಪಂದ್ಯ ಜಯಿಸಿ 8 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಸೆಮೀಸ್ ಪ್ರವೇಶಿಸಿತು. ಆದರೆ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಟೂರ್ನಿಯಲ್ಲಿ ಕೊಹ್ಲಿ 296 ರನ್ ಸಿಡಿಸಿ ಟಾಪ್ ಸ್ಕೋರರ್ ಆದರು.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ