ಕನ್ನಡ ಸುದ್ದಿ  /  Cricket  /  Chennai Super Kings Vs Royal Challengers Bangalore Ipl Stats Records At Ma Chidambaram Stadium Ipl 2024 Csk Vs Rcb Prs

ಎಂಎ ಚಿದಂಬರಂ ಕ್ರೀಡಾಂಗಣ; ಸಿಎಸ್​ಕೆ vs ಆರ್​​​ಸಿಬಿ ನಡುವಿನ ಐಪಿಎಲ್​ ಅಂಕಿಅಂಶಗಳು ಮತ್ತು ದಾಖಲೆಗಳು

Chennai Super Kings vs Royal Challengers Bangalore : ಐಪಿಎಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮುಖಾಮುಖಿ ದಾಖಲೆ ಹೇಗಿದೆ? ಇಲ್ಲಿದೆ ಅದರ ನೋಟ.

ಸಿಎಸ್​ಕೆ vs ಆರ್​​​ಸಿಬಿ ನಡುವಿನ ಐಪಿಎಲ್​ ಅಂಕಿಅಂಶಗಳು ಮತ್ತು ದಾಖಲೆಗಳು
ಸಿಎಸ್​ಕೆ vs ಆರ್​​​ಸಿಬಿ ನಡುವಿನ ಐಪಿಎಲ್​ ಅಂಕಿಅಂಶಗಳು ಮತ್ತು ದಾಖಲೆಗಳು

ಮಾರ್ಚ್ 22ರಿಂದ ಐಪಿಎಲ್ ಜಾತ್ರೆಗೆ (IPL 202) ಅದ್ಧೂರಿ ಚಾಲನೆ ಸಿಗಲಿದೆ. ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಕದನಕ್ಕೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಸಿದ್ಧವಾಗಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಅಥವಾ ಚೆಪಾಕ್ ಸ್ಟೇಡಿಯಂ (MA Chidambaram Stadium) ಈ ಹೈವೋಲ್ಟೇಜ್​ ಫೈಟ್​ಗೆ ಆತಿಥ್ಯ ವಹಿಸಲಿದೆ. ಲೀಗ್‌ನಲ್ಲಿ ಎರಡು ಜನಪ್ರಿಯ ತಂಡಗಳ ನಡುವಿನ ಥ್ರಿಲ್ಲರ್‌ ಪಂದ್ಯಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಆದಾಗ್ಯೂ, 5 ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಅವರ ಸ್ವಂತ ನೆಲದಲ್ಲಿ ಎದುರಿಸುವುದು ಆರ್‌ಸಿಬಿಗೆ ಸುಲಭದ ಕೆಲಸವಲ್ಲ. ಏಕೆಂದರೆ ಆರ್​ಸಿಬಿ ಕೊನೆಯದಾಗಿ ಅಂದರೆ 2008ರ ನಂತರ ಚಿದಂಬರಂ ಮೈದಾನದಲ್ಲಿ ಸಿಎಸ್​ಕೆ ಎದುರು ಗೆದ್ದ ಇತಿಹಾಸವೇ ಇಲ್ಲ. ಅಲ್ಲದೆ, ಒಟ್ಟಾರೆ ಮುಖಾಮುಖಿ ದಾಖಲೆಗಳಲ್ಲೂ ಬೆಂಗಳೂರಿಗಿಂತ ಸಿಎಸ್​ಕೆ ತಂಡವೇ ಮುಂದಿದೆ. ಈಗ ರಾಯಲ್ ಚಾಲೆಂಜರ್ಸ್​ ಚೆಪಾಕ್​ನಲ್ಲಿ 15 ವರ್ಷಗಳ ನಂತರ ಗೆಲುವಿನ ಖಾತೆ ತೆರೆಯಲು ಸಜ್ಜಾಗಿದೆ.

ಸಿಎಸ್​ಕೆ ಮತ್ತು ಆರ್​ಸಿಬಿ ಮುಖಾಮುಖಿ ದಾಖಲೆ

ಸಿಎಸ್​ಕೆ ಮತ್ತು ಆರ್​​ಸಿಬಿ ತಂಡಗಳು ಐಪಿಎಲ್ ಇತಿಹಾಸದಲ್ಲಿ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಸಿಎಸ್​ಕೆ 20ರಲ್ಲಿ ಗೆದ್ದು ಬೀಗಿದೆ. ಆರ್​ಸಿಬಿ 10ರಲ್ಲಿ ಜಯದ ನಗೆ ಬೀರಿದ್ದು, ಅದರ ಸಂಖ್ಯೆ ಹೆಚ್ಚಿಸಿಕೊಳ್ಳಲು ಸಿದ್ಧವಾಗಿದೆ. 2024ರ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ತಂಡವನ್ನು ಅವರದ್ದೇ ತವರಿನಲ್ಲಿ ಸೋಲಿಸಿ ಐಪಿಎಲ್ ಅಭಿಯಾನ ಆರಂಭಿಸಲು ಆರ್​ಸಿಬಿ ಸಜ್ಜಾಗಿದೆ.

ಚೆಪಾಕ್ ಸ್ಟೇಡಿಯಂನಲ್ಲಿ ಸಿಎಸ್​ಕೆ VS ಆರ್​ಸಿಬಿ ಹೆಡ್-ಟು-ಹೆಡ್

ಎಂಎ ಚಿದಂಬರಂ ಸ್ಟೇಡಿಯಂ ಅಥವಾ ಚೆಪಾಕ್ ಸ್ಟೇಡಿಯಂನಲ್ಲಿ ಸಿಎಸ್​ಕೆ ವಿರುದ್ಧ ಆರ್​ಸಿಬಿ ಕೆಟ್ಟ ದಾಖಲೆ ಹೊಂದಿದೆ. ತವರಿನ ಮೈದಾನದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಚೆನ್ನೈ, ಆರ್​ಸಿಬಿ ತಂಡವನ್ನು ಮತ್ತೊಮ್ಮೆ ಮಣಿಸಲು ಸನ್ನದ್ಧವಾಗಿದೆ. ಚೆಪಾಕ್‌ನಲ್ಲಿ ಉಭಯ ತಂಡಗಳು ಎಂಟು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಸಿಎಸ್​ಕೆ 7ರಲ್ಲಿ ಜಯಿಸಿದೆ. ಆದರೆ, ಆರ್​​ಸಿಬಿ ಈ ಮೈದಾನದಲ್ಲಿ ಕೇವಲ ಒಂದು ಪಂದ್ಯ ಗೆದ್ದಿದೆಯಷ್ಟೆ.

ಎಂಎ ಚಿದಂಬರಂ ಸ್ಟೇಡಿಯಂ ಪಿಚ್ ವರದಿ

ಮಾರ್ಚ್ 22ರಂದು ಸಿಎಸ್​ಕೆ ಮತ್ತು ಆರ್​​ಸಿಬಿ ನಡುವಿನ ಐಪಿಎಲ್​ 2024ರ ಆರಂಭಿಕ ಪಂದ್ಯಕ್ಕೆ ಎಂಎ ಚಿದಂಬರಂ ಮೈದಾನ ಆತಿಥ್ಯ ವಹಿಸುತ್ತಿದೆ. 38,200 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಮೈದಾನ, 17ನೇ ಆವೃತ್ತಿಯಲ್ಲಿ ಕನಿಷ್ಠ ಏಳು ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯಿದೆ. ಕ್ರೀಡಾಂಗಣದ ಮೇಲ್ಮೈ ಬ್ಯಾಟರ್ ಮತ್ತು ಬೌಲರ್​​​ಗಳಿಗೆ ಸೂಕ್ತವಾಗಿದೆ. ಆದಾಗ್ಯೂ, ಪಂದ್ಯ ಮುಂದುವರೆದಂತೆ ಪಿಚ್ ನಿಧಾನಗೊಳ್ಳಲಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚಿನ ಬೆಂಬಲ ಸಿಗುತ್ತದೆ. ಈ ಪಿಚ್‌ನಲ್ಲಿ ಸ್ಪಿನ್ ಬೌಲರ್‌ಗಳು ಸ್ವಲ್ಪ ತಿರುವು ಪಡೆಯುತ್ತಾರೆ. ಬ್ಯಾಟಿಂಗ್ ತಂಡಕ್ಕೆ ಗುರಿಯನ್ನು ಬೆನ್ನಟ್ಟಲು ಕಷ್ಟವಾಗುತ್ತದೆ.

ಚಿದಂಬರಂ ಸ್ಟೇಡಿಯಂ ಐಪಿಎಲ್​ ದಾಖಲೆ, ಅಂಕಿಅಂಶಗಳು

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವು ಇಲ್ಲಿಯವರೆಗೆ ಒಟ್ಟು 76 ಪಂದ್ಯಗಳನ್ನು ಆಯೋಜಿಸಿದೆ. ಅದರಲ್ಲಿ 46 ಪಂದ್ಯಗಳಲ್ಲಿ ತಂಡವು ಮೊದಲು ಬ್ಯಾಟಿಂಗ್ ಗೆದ್ದಿದೆ. ಎರಡನೇ ಬ್ಯಾಟಿಂಗ್ ಮಾಡಿದ ತಂಡವು 30 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. 2023ರ ಏಪ್ರಿಲ್ 30 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗಳಿಸಿದ 201 ರನ್‌ ಈ ಮೈದಾನದಲ್ಲಿ ಅತ್ಯಂತ ಯಶಸ್ವಿ ಐಪಿಎಲ್​​ ರನ್ ಚೇಸ್ ಆಗಿದೆ.

IPL_Entry_Point