ಕನ್ನಡ ಸುದ್ದಿ  /  ಕ್ರಿಕೆಟ್  /  ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂಗೆ ಇಂದು ಮಳೆಯ ಆತಂಕವಿರುವುದೇ; ಐಪಿಎಲ್ ಕ್ರಿಕೆಟ್ ಫೈನಲ್ ಮ್ಯಾಚ್ ಸಮಯದ ಹವಾಮಾನ ವರದಿ

ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂಗೆ ಇಂದು ಮಳೆಯ ಆತಂಕವಿರುವುದೇ; ಐಪಿಎಲ್ ಕ್ರಿಕೆಟ್ ಫೈನಲ್ ಮ್ಯಾಚ್ ಸಮಯದ ಹವಾಮಾನ ವರದಿ

Chennai Weather Updates, IPL 2024 Final, KKR vs SRH: ಐಪಿಎಲ್ 2024 ಫೈನಲ್ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್​ನ್ಯೂಸ್ ಸಿಕ್ಕಿದೆ. ಕೆಕೆಆರ್ ಮತ್ತು ಎಸ್​ಆರ್​ ಹೆಚ್ ತಂಡಗಳ ಕದನಕ್ಕೆ ಮಳೆ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂಗೆ ಇಂದು ಮಳೆಯ ಆತಂಕವಿರುವುದೇ; ಐಪಿಎಲ್ ಕ್ರಿಕೆಟ್ ಫೈನಲ್ ಮ್ಯಾಚ್ ಸಮಯದ ಹವಾಮಾನ ವರದಿ
ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂಗೆ ಇಂದು ಮಳೆಯ ಆತಂಕವಿರುವುದೇ; ಐಪಿಎಲ್ ಕ್ರಿಕೆಟ್ ಫೈನಲ್ ಮ್ಯಾಚ್ ಸಮಯದ ಹವಾಮಾನ ವರದಿ

Chennai Weather Updates: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವೆ ಇಂದು (ಮೇ 26ರ) ರಾತ್ರಿಯ ಹೈ-ವೋಲ್ಟೇಜ್ ಇಂಡಿಯನ್ ಪ್ರೀಮಿಯರ್ ಲೀಗ್​ 2024 ಫೈನಲ್​ಗೆ ಮಳೆ ಅಡ್ಡಿಪಡಿಸಲಿದೆಯೇ? ಪ್ರಶಸ್ತಿ ಸುತ್ತಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವವರು ಹವಾಮಾನ ವರದಿ ಇಲ್ಲಿ ನೋಡಬಹುದು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಕೆಕೆಆರ್​ ಮತ್ತು ಎಸ್​ಆರ್​ಹೆಚ್ ಫೈನಲ್​ ಫೈಟ್​ಗೆ ಮಳೆ ಸಂಭವ ಕಡಿಮೆ ಎಂದು ವರದಿಯಾಗಿದೆ. ಹವಾಮಾನ ವರದಿ ನೀಡಿರುವ ಮಾಹಿತಿ ಪ್ರಕಾರ, ಮೋಡ ಕವಿದ ವಾತಾವರಣ ಇರಲಿದೆ. ಮೇ 25 ರಂದು ಚೆನ್ನೈನಲ್ಲಿ ತೀವ್ರ ಮಳೆ ಸುರಿದು ಉಭಯ ತಂಡಗಳ ಅಭ್ಯಾಸಕ್ಕೆ ಅಡ್ಡಿಪಡಿಸಿತ್ತು. ಇದು ಫೈನಲ್‌ಗೂ ಮಳೆ ಬರುವ ಆತಂಕ ಸೃಷ್ಟಿಸಿತ್ತು. ಆದರೀಗ ಇಂದು (ಭಾನುವಾರ) ಅಕ್ಯುವೆದರ್ ಪ್ರಕಾರ ಮಳೆಯ ಅಪಾಯವು ಕೇವಲ 4% ರಷ್ಟಿದೆ.

ಐಪಿಎಲ್​ ಫೈನಲ್​ಗೆ ಮೀಸಲು ದಿನ

ಮೇ 25ರಂದು ಹವಾಮಾನ ಇಲಾಖೆ ನೀಡಿರುವ ವರದಿಯ ಪ್ರಕಾರ ಫೈನಲ್​ ಪಂದ್ಯಕ್ಕೆ ಮೋಡ ಕವಿದ ವಾತಾವರಣ ಇರಲಿದ್ದು, ಕೆಲ ಹೊತ್ತು ಮಳೆ ಅಡ್ಡಿಪಡಿಸುವ ನಿರೀಕ್ಷೆ ಇದೆ ಎಂದು ಹೇಳಿತ್ತು. ಆದರೀಗ ಇವತ್ತು ಮಳೆಯ ಪ್ರಮಾಣ ತುಂಬಾ ಕಡಿಮೆಯಾಗಿದೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದೆ. ಒಂದು ವೇಳೆ ವರುಣ ಅವಕೃಪೆ ತೋರಿದರೆ ಮೀಸಲು ದಿನದಂದು ನಡೆಸಲಾಗುತ್ತದೆ. ಆದರೂ ಇವತ್ತೇ ಪಂದ್ಯ ನಡೆಸಲು 120 ನಿಮಿಷಗಳ ಹೆಚ್ಚುವರಿ ಅವಧಿಯನ್ನು ನೀಡಲಾಗುತ್ತದೆ. 5 ಓವರ್ ಅಥವಾ ಸೂಪರ್ ಓವರ್​ ನಡೆಸಲು ಅವಕಾಶ ನೀಡದೆ ನಿರಂತರ ಮಳೆ ಸುರಿದರೆ ಮೀಸಲು ದಿನವಾದ ಸೋಮವಾರ (27) ಪಂದ್ಯ ಆರೋಜಿಸಲಾಗುತ್ತದೆ.

ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುಕ್ತಾಯದ ನಂತರ ಆಟಕ್ಕೆ ಅವಕಾಶ ನೀಡದೆ ನಿರಂತರ ಮಳೆ ಕಾಣಿಸಿಕೊಂಡರೂ ಪಂದ್ಯವನ್ನು ಮೀಸಲು ದಿನಕ್ಕೆ ಮುಂಡೂಡಲಾಗುತ್ತದೆ. ಒಂದು ವೇಳೆ ಇದೇ ದಿನ ಎರಡನೇ ಬ್ಯಾಟಿಂಗ್​ ಮಾಡುವ ತಂಡವು 5 ಓವರ್​ಗಳನ್ನು ಪೂರ್ಣಗೊಳಿಸಿದ್ದರೆ, ಡಕ್ವರ್ಥ್ ಲೂಯಿಸ್ ನಿಯಮದಡಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. 2023ರ ಐಪಿಎಲ್ ಫೈನಲ್ ಪಂದ್ಯ ಮೀಸಲು ದಿನದಂದು ನಡೆದಿತ್ತು. ಒಟ್ಟು ಮೂರು ದಿನಗಳ ಕಾಲ ಫೈನಲ್ ಪಂದ್ಯ ನಡೆದಿತ್ತು. ಅಂದು ಸಿಎಸ್​ಕೆ ಚಾಂಪಿಯನ್ ಆಗಿತ್ತು.

ಕೆಂಪು ಪಿಚ್​​ನಲ್ಲಿ ಕೆಕೆಆರ್ vs ಎಸ್​ಆರ್​ಹೆಚ್ ಸೆಣಸಾಟ

ಮೇ 24ರ ಶುಕ್ರವಾರ, ಎಸ್​ಆರ್​ಹೆಚ್​ ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿತ್ತು. ಕಪ್ಪು ಮಣ್ಣಿನ ಪಿಚ್‌ನಲ್ಲಿ 2ನೇ ಇನ್ನಿಂಗ್ಸ್‌ನಲ್ಲಿ ಗಮನಾರ್ಹ ತಿರುವು ಪಡೆಯಲು ಪ್ರಾರಂಭಿಸಿತು. ಎರಡೂ ತಂಡಗಳಿಗೂ ಇಬ್ಬನಿ ಕಾಡಿತ್ತು. ಇದು ಚೇಸಿಂಗ್ ತಂಡಕ್ಕೆ ಹೆಚ್ಚು ಪ್ರಯೋಜನ ನೀಡಿತ್ತು. ಆದರೆ ಫೈನಲ್​ಗಾಗಿ ಪಿಚ್​ ಕೆಂಪು-ಮಣ್ಣಿನ ಪಟ್ಟಿಯಾಗಿದೆ.

ಕೆಂಪು ಮಣ್ಣಿನ ಪಿಚ್​ ಅನ್ನು ಮೇ 1 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಸಿಎಸ್‌ಕೆ ಪಂದ್ಯಕ್ಕೆ ಬಳಸಲಾಗಿತ್ತು. ಸ್ಪಿನ್ನರ್‌ಗಳಾದ ಹರ್‌ಪ್ರೀತ್ ಬ್ರಾರ್ ಮತ್ತು ರಾಹುಲ್ ಚಾಹರ್ ಅವರು ದಿನದಂದು ಪಿಬಿಕೆಎಸ್‌ನ ಮ್ಯಾಚ್ ವಿನ್ನರ್‌ಗಳಾಗಿದ್ದರು. ಈ ಜೋಡಿ 8 ಓವರ್ ಬೌಲಿಂಗ್ ಮಾಡಿ,​ ಕೇವಲ 33 ರನ್‌ ನೀಡಿ 4 ವಿಕೆಟ್ ಪಡೆದಿದ್ದರು. ಆದರೆ ಫೈನಲ್ ಪಂದ್ಯದಲ್ಲೂ ಸ್ಪಿನ್ನರ್​ಗಳೇ ಮಿಂಚುವ ನಿರೀಕ್ಷೆ ಇದೆ.

 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ