ರೋಹಿತ್​ ಶರ್ಮಾ ದೇಹದ ಕುರಿತು ಕಾಂಗ್ರೆಸ್ ವಕ್ತಾರೆ ವಿವಾದಾತ್ಮಕ ಪೋಸ್ಟ್; ರಾಹುಲ್ ಗಾಂಧಿ ಗೆಲುವಿನ ಪರ್ಸೆಂಟೇಜ್ ಕೆದಕಿದ ಬಿಜೆಪಿ
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್​ ಶರ್ಮಾ ದೇಹದ ಕುರಿತು ಕಾಂಗ್ರೆಸ್ ವಕ್ತಾರೆ ವಿವಾದಾತ್ಮಕ ಪೋಸ್ಟ್; ರಾಹುಲ್ ಗಾಂಧಿ ಗೆಲುವಿನ ಪರ್ಸೆಂಟೇಜ್ ಕೆದಕಿದ ಬಿಜೆಪಿ

ರೋಹಿತ್​ ಶರ್ಮಾ ದೇಹದ ಕುರಿತು ಕಾಂಗ್ರೆಸ್ ವಕ್ತಾರೆ ವಿವಾದಾತ್ಮಕ ಪೋಸ್ಟ್; ರಾಹುಲ್ ಗಾಂಧಿ ಗೆಲುವಿನ ಪರ್ಸೆಂಟೇಜ್ ಕೆದಕಿದ ಬಿಜೆಪಿ

ಕ್ರಿಕೆಟಿಗ ರೋಹಿತ್​ ಶರ್ಮಾ ದೇಹದ ಕುರಿತು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರು ವಿವಾದಾತ್ಮಕ ಪೋಸ್ಟ್ ಹಾಕಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಗೆಲುವಿನ ಪರ್ಸೆಂಟೇಜ್ ಅನ್ನು ಬಿಜೆಪಿ ಕೆದಕಿದೆ.

ರೋಹಿತ್​ ಶರ್ಮಾ ದೇಹದ ಕುರಿತು ಕಾಂಗ್ರೆಸ್ ವಕ್ತಾರೆ ವಿವಾದಾತ್ಮಕ ಪೋಸ್ಟ್; ರಾಹುಲ್ ಗಾಂಧಿ ಗೆಲುವಿನ ಪರ್ಸೆಂಟೇಜ್ ಕೆದಕಿದ ಬಿಜೆಪಿ
ರೋಹಿತ್​ ಶರ್ಮಾ ದೇಹದ ಕುರಿತು ಕಾಂಗ್ರೆಸ್ ವಕ್ತಾರೆ ವಿವಾದಾತ್ಮಕ ಪೋಸ್ಟ್; ರಾಹುಲ್ ಗಾಂಧಿ ಗೆಲುವಿನ ಪರ್ಸೆಂಟೇಜ್ ಕೆದಕಿದ ಬಿಜೆಪಿ

ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅವರ ದೇಹ ತೂಕದ ಕುರಿತು ಮಾತನಾಡಿದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್‌ ಅವರು ವಿವಾದಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ನಿಮ್ಮ ಗೆಲುವಿನ ಶೇಕಡವಾರು ತೋರಿಸಿ ಎಂದು ಪ್ರತಿಕ್ರಿಯಿಸಿದೆ. ಬಿಜೆಪಿ ಕಿಡಿಕಾರಿರುವುದರ ನಡುವೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾಂಗ್ರೆಸ್ ನಾಯಕಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಅಂತಿಮ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 17 ಎಸೆತಗಳಲ್ಲಿ ತಲಾ ಒಂದೊಂದು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ 15 ರನ್ ಗಳಿಸಿ ನಿರಾಸೆ ಮೂಡಿಸಿದರು. ಈ ಬೆನ್ನಲ್ಲೇ ಕಾಂಗ್ರೆಸ್ ವಕ್ತಾರೆ ಎಕ್ಸ್​​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕ್ರಿಕೆಟಿಗ ರೋಹಿತ್​ ದಪ್ಪ ಮತ್ತು ಪರಿಣಾಮಕಾರಿ ನಾಯಕನಲ್ಲ ಎಂದು ಬರೆದಿದ್ದಾರೆ. ಆದರೆ, ವಿವಾದವಾಗುತ್ತಿದ್ದಂತೆ ಪೋಸ್ಟ್ ಅಳಿಸಿದ್ದಾರೆ.

ಕಾಂಗ್ರೆಸ್ ವಕ್ತಾರೆ ಪೋಸ್ಟ್​ನಲ್ಲಿ ಏನಿತ್ತು?

ಒಬ್ಬ ಕ್ರೀಡಾಪಟುವಾಗಿ ರೋಹಿತ್​ ಶರ್ಮಾ ತುಂಬಾ ದಪ್ಪಗಿದ್ದಾರೆ. ಅವರು ತೂಕವನ್ನು ಇಳಿಸಿಕೊಳ್ಳಬೇಕಿರುವುದು ಅಗತ್ಯ. ಅಲ್ಲದೆ, ರೋಹಿತ್​ ಭಾರತ ಕಂಡಿರುವ ಪ್ರಭಾವಿಶಾಲಿ ಕ್ಯಾಪ್ಟನ್ ಅಲ್ಲ ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದರು. ಈ ಹೇಳಿಕೆ ವಿವಾದವಾಗುತ್ತಿದ್ದಂತೆ ಪೋಸ್ಟ್​ ಅನ್ನು ಡಿಲೀಟ್ ಮಾಡಿದ್ದಾರೆ. ಈ ಪೋಸ್ಟ್​​ಗೆ ಅಭಿಮಾನಿಗಳು ಸಹ ಹಿಟ್​ಮ್ಯಾನ್​ರ ಅಂಕಿ-ಅಂಶಗಳನ್ನು ಕಾಮೆಂಟ್​ನಲ್ಲಿ ಹಾಕಿದ್ದರು.

ವಿವಾದ ಬಳಿಕ ಶಮಾ ಮೊಹಮ್ಮದ್‌ ಸ್ಪಷ್ಟನೆ

ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಬಗ್ಗೆ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಅವರು ಮಾಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. 'ಇದು ಕ್ರೀಡಾಪಟುವಿನ ಫಿಟ್ನೆಸ್ ಬಗ್ಗೆ ಸಾಮಾನ್ಯ ಟ್ವೀಟ್ ಆಗಿತ್ತು. ಇದು ದೇಹವನ್ನು ಶೇಮ್ ಮಾಡುವಂತಿರಲಿಲ್ಲ. ಒಬ್ಬ ಕ್ರೀಡಾಪಟು ಫಿಟ್ ಆಗಿರಬೇಕು ಎಂದು ಯಾವಾಗಲೂ ನಂಬಿದ್ದೆ. ಅವರು ದಪ್ಪ ಇದ್ದಾರೆಂದು ನನಗೆ ಅನಿಸಿತು ಎಂದು ಹೇಳಿದ್ದಾರೆ.

ಇದೇ ಕಾರಣಕ್ಕೆ ನಾನು ಆ ಕುರಿತು ಟ್ವೀಟ್ ಮಾಡಿದ್ದೇನೆ. ಆದರೆ, ಯಾವುದೇ ಕಾರಣವಿಲ್ಲದೆ ನನ್ನ ಮೇಲೆ ದಾಳಿ ಮಾಡಲಾಗಿದೆ. ನಾನು ಅವರನ್ನು ಹಿಂದಿನ ನಾಯಕರೊಂದಿಗೆ ಹೋಲಿಸಿದಾಗ, ನಾನು ಒಂದು ಹೇಳಿಕೆಯನ್ನು ನೀಡಿದ್ದೇನೆ. ನನಗೆ ಹಕ್ಕಿದೆ. ಹೇಳುವುದರಲ್ಲಿ ತಪ್ಪೇನಿದೆ? ಇದು ಪ್ರಜಾಪ್ರಭುತ್ವ ಎಂದು ಶಮಾ ಮೊಹಮ್ಮದ್ ಹೇಳಿದ್ದಾರೆ. ಇದರ ನಡುವೆಯೂ ಅವರ ವಿರುದ್ಧ ಆಕ್ರೋಶ ಇನ್ನೂ ನಿಂತಿಲ್ಲ.

ಬಿಜೆಪಿ ತಿರುಗೇಟು

ರೋಹಿತ್​​ ಶರ್ಮಾ ದೇಹ ತೂಕದ ಕುರಿತ ಕಾಂಗ್ರೆಸ್ ವಕ್ತಾರೆ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ನಾಯಕ ರೋಹಿತ್ ಶರ್ಮಾ ಅವ​ರನ್ನು ಪ್ರಭಾವಶಾಲಿ ಅಲ್ಲ ಎಂದು ಕರೆಯುವ ನೈತಿಕ ಹಕ್ಕು ಹೊಂದಿಲ್ಲ. ದೆಹಲಿಯಲ್ಲಿ 6 ಸಲ ಶೂನ್ಯಕ್ಕೆ ಔಟ್ ಮತ್ತು 90 ಚುನಾವಣೆ ಸೋತ ನಾಯಕತ್ವ ಹೊಂದಿರುವವರು ರೋಹಿತ್ ನಾಯಕತ್ವ ಪ್ರಶ್ನಿಸುತ್ತಿದ್ದಾರೆ ಎಂದಿದ್ದಾರೆ ಬಿಜೆಪಿ ವಕ್ತಾರ ಶೆಹಜಾದ್ ಪೂನವಲ್ಲ.

ಬಿಜೆಪಿ ವಕ್ತಾರೆ ರಾಧಿಕಾ ಖೇರಾ ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ, ದಶಕಗಳ ಕಾಲ ಕ್ರೀಡಾಪಟುಗಳನ್ನು ಅವಮಾನಿಸಿದ, ಅವರಿಗೆ ಮಾನ್ಯತೆ ನಿರಾಕರಿಸಿದ ಮತ್ತು ಈಗ ಕ್ರಿಕೆಟ್ ದಂತಕಥೆಯನ್ನು ಅಣಕಿಸಲು ಧೈರ್ಯ ಮಾಡಿದ ಅದೇ ಕಾಂಗ್ರೆಸ್ ಇದೇನಾ? ಸ್ವಜನಪಕ್ಷಪಾತದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪಕ್ಷವು ಸ್ವಯಂ ನಿರ್ಮಿತ ಚಾಂಪಿಯನ್‌ಗೆ ಉಪನ್ಯಾಸ ನೀಡುತ್ತಿದೆಯೇ? ಎಂದಿದ್ದಾರೆ.

ರೋಹಿತ್ ಶರ್ಮಾ ವಿಶ್ವಕಪ್ ವಿಜೇತ ನಾಯಕ. ನಿಮ್ಮ ನಾಯಕ ರಾಹುಲ್ ಗಾಂಧಿ ನೆಲಕಚ್ಚಿದ ತನ್ನದೇ ಆದ ಪಕ್ಷವನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ವ್ಯಕ್ತವಾಗಿದ್ದು, 'ರೋಹಿತ್ ಶರ್ಮಾ ತಮ್ಮ ತಂಡ ಮತ್ತು ಇಡೀ ಭಾರತದ ವಿಶ್ವಾಸ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆ ಅವರ ಕೀಳು ಮಟ್ಟದ ಮನಸ್ಥಿತಿ ಪ್ರದರ್ಶಿಸುತ್ತದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.