ಕೆಎಲ್ ರಾಹುಲ್ ಬೇಡ; ಟಿ20 ವಿಶ್ವಕಪ್​ಗೆ ಎಂಎಸ್ ಧೋನಿ ತರಹದ ವಿಕೆಟ್ ಕೀಪರ್ ಆರಿಸಿದ ಆ್ಯಡಂ ಗಿಲ್​ಕ್ರಿಸ್ಟ್
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಎಲ್ ರಾಹುಲ್ ಬೇಡ; ಟಿ20 ವಿಶ್ವಕಪ್​ಗೆ ಎಂಎಸ್ ಧೋನಿ ತರಹದ ವಿಕೆಟ್ ಕೀಪರ್ ಆರಿಸಿದ ಆ್ಯಡಂ ಗಿಲ್​ಕ್ರಿಸ್ಟ್

ಕೆಎಲ್ ರಾಹುಲ್ ಬೇಡ; ಟಿ20 ವಿಶ್ವಕಪ್​ಗೆ ಎಂಎಸ್ ಧೋನಿ ತರಹದ ವಿಕೆಟ್ ಕೀಪರ್ ಆರಿಸಿದ ಆ್ಯಡಂ ಗಿಲ್​ಕ್ರಿಸ್ಟ್

Adam Gilchrist : ಟಿ20 ವಿಶ್ವಕಪ್​ ಟೂರ್ನಿಗೆ ಟೀಮ್ ಇಂಡಿಯಾ ವಿಕೆಟ್​ ಕೀಪರ್​ ಆಯ್ಕೆಗೆ ಸಂಬಂಧಿಸಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್​ಕ್ರಿಸ್ಟ್ ಅವರು ಕೆಎಲ್ ರಾಹುಲ್ ಕಡೆಗಣಿಸಿ ಧೋನಿ ರೀತಿಯ ಆಟಗಾರನಿಗೆ ಮಣೆ ಹಾಕಿದ್ದಾರೆ.

ಟಿ20 ವಿಶ್ವಕಪ್​ಗೆ ಎಂಎಸ್ ಧೋನಿ ತರಹದ ವಿಕೆಟ್ ಕೀಪರ್ ಆರಿಸಿದ ಆ್ಯಡಂ ಗಿಲ್​ಕ್ರಿಸ್ಟ್
ಟಿ20 ವಿಶ್ವಕಪ್​ಗೆ ಎಂಎಸ್ ಧೋನಿ ತರಹದ ವಿಕೆಟ್ ಕೀಪರ್ ಆರಿಸಿದ ಆ್ಯಡಂ ಗಿಲ್​ಕ್ರಿಸ್ಟ್

ಜೂನ್ 1ರಿಂದ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ಭಾರತ ತಂಡ (Team India) ಪ್ರಕಟಿಸಲು ದಿನಗಣನೆ ಶುರುವಾಗಿದೆ. ಇದರ ಮಧ್ಯೆ ಮಾಜಿ ಕ್ರಿಕೆಟರ್​ಗಳು ಯಾವ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ. ಚುಟುಕು ವಿಶ್ವಕಪ್​ಗೆ ಯಾರು ಸೂಕ್ತ ಎಂಬ ಸಲಹೆ ನೀಡುತ್ತಿದ್ದಾರೆ. ಅದರಂತೆ ಟೀಮ್ ಇಂಡಿಯಾ ವಿಕೆಟ್​ ಕೀಪರ್​ ಆಯ್ಕೆಗೆ ಸಂಬಂಧಿಸಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್​ಕ್ರಿಸ್ಟ್ (Adam Gilchrist) ಅವರು ಕೆಎಲ್ ರಾಹುಲ್ (KL Rahul) ಕಡೆಗಣಿಸಿ ಅಚ್ಚರಿ ಆಯ್ಕೆ ಮಾಡಿದ್ದಾರೆ.

ಗಿಲ್​ಕ್ರಿಸ್ಟ್ ಅವರು ಆಯ್ಕೆ ಮಾಡಿದ ತಂಡದಲ್ಲಿ ಕೆಎಲ್ ರಾಹುಲ್​ ಅವರಿಗೆ ಜಾಗವೇ ಕೊಟ್ಟಿಲ್ಲ. ಬದಲಿಗೆ ಯುವ ಆಟಗಾರರಾದ ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ಅವರಿಗೆ ಅವಕಾಶ ನೀಡಿದ್ದಾರೆ. ಐಪಿಎಲ್-2024ರಲ್ಲಿ ಈ ಇಬ್ಬರು ಸಹ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ 2024ರ ಟಿ20 ವಿಶ್ವಕಪ್‌ಗೆ ಸ್ಥಾನ ಪಡೆದುಕೊಳ್ಳಲು ಅವಕಾಶವಿದೆ. ಇದರ ಹೊರತಾಗಿಯೂ ಆರು ವಿಕೆಟ್​ ಕೀಪರ್​ಗಳ ನಡುವೆ ಪೈಪೋಟಿ ಮುಂದುವರೆದಿದೆ.

ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಬ್ಯಾಟ್ ಮತ್ತು ಗ್ಲೌಸ್‌ನೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇಶಾನ್ ಕಿಶನ್, ಜಿತೇಶ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅವರಿಂದ ಹಿಂದೆ ಬಿದ್ದಿಲ್ಲ. ಆದರೆ ಈ ಆರು ವಿಕೆಟ್​ ಕೀಪರ್ಸ್ ಬ್ಯಾಟರ್​ಗಳ ಪೈಕಿ ಇಬ್ಬರು ಕೆರಿಬಿಯನ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾಗೆ ಟಿಕೆಟ್ ಪಡೆಯುವ ಸಾಧ್ಯತೆಯಿದೆ. ಅದರಲ್ಲೂ ರಿಷಭ್ ಸೆಲೆಕ್ಟರ್​ಗಳ ಮೊದಲ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆ್ಯಡಂ ಗಿಲ್​ಕ್ರಿಸ್ಟ್ ಹೇಳಿದ್ದೇನು?

ಆ್ಯಡಂ ಗಿಲ್​ಕ್ರಿಸ್ಟ್​ ಅವರು ವಿಶ್ವಕಪ್​ಗೆ ಭಾರತದ ತಂಡದಲ್ಲಿ ಮೊದಲ ಆಯ್ಕೆಯ ಕೀಪರ್ ಆಗಲು ರಿಷಭ್ ಅವರನ್ನು ಬೆಂಬಲಿಸಿದ್ದಾರೆ. ಪಂತ್ ಉತ್ತಮ ಲಯದಲ್ಲಿದ್ದಾರೆ. ವಿಕೆಟ್ ಹಿಂದೆ ನಿಂತು ಪ್ರಭಾವ ಬೀರಿದ್ದಾರೆ. ಎಂಎಸ್ ಧೋನಿಯಂತೆ ಚಾಣಾಕ್ಷತೆ ಮತ್ತು ಚುರುಕಿನ ಕೀಪಿಂಗ್​ ಮಾಡುತ್ತಿದ್ದಾರೆ. ಅದಕ್ಕೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವೇ ಸಾಕ್ಷಿ. ವಿಕೆಟ್ ಹಿಂದೆ 2 ಕ್ಯಾಚ್, 2 ಸ್ಟಂಪ್ಸ್ ಮಾಡಿದ ಪಂತ್ ಬ್ಯಾಟಿಂಗ್​ನಲ್ಲಿ ಅಜೇಯ 19 ರನ್ ಬಾರಿಸಿದರು. ನನ್ನ ಪ್ರಕಾರ ಸೆಲೆಕ್ಟರ್ಸ್ ಆತನ ಮೇಲೆ ಸಾಕಷ್ಟು ಗಮನ ಹರಿಸಿರುವ ಸಾಧ್ಯತೆ ಇದೆ ಎಂದಿದ್ದಾರೆ.

ವರ್ಲ್ಡ್​​​ಕಪ್​ಗೆ ನೀವಿನ್ನೂ (ಬಿಸಿಸಿಐ) ವಿಕೆಟ್ ಕೀಪರ್​ ಸ್ಥಾನಕ್ಕೆ ಆಯ್ಕೆ ಮಾಡದೇ ಇದ್ದರೆ ಆ ಸ್ಥಾನವನ್ನು ರಿಷಭ್​ಗೆ ನೀಡುತ್ತೇನೆ. ಅವರನ್ನು ಮತ್ತೆ ತಂಡದಲ್ಲಿ ನೋಡಲು ಬಯಸುತ್ತೇನೆ. ವಿಕೆಟ್ ಕೀಪಿಂಗ್​ನಲ್ಲಿ ದೈಹಿಕ ಸಾಮರ್ಥ್ಯ ಹೊಂದಿರುವ ಪಂತ್, ಬ್ಯಾಟಿಂಗ್​ನಲ್ಲೂ ಸುಧಾರಿಸಿದ್ದಾರೆ ಎಂದು ಡೆಲ್ಲಿ ನಾಯಕನನ್ನು ಬೆಂಬಲಿಸಿದ್ದಾರೆ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ. ಇದೇ ವೇಳೆ ಬ್ಯಾಕಪ್ ಯಾರಿರಬೇಕೆಂದು ಸೂಚಿಸಿದ್ದಾರೆ.

ಬ್ಯಾಕಪ್​ ಸಂಜು ಇರಲಿ ಎಂದು ಮಾಜಿ ವಿಕೆಟ್ ಕೀಪರ್​

ರಿಷಭ್​ ಪಂತ್​ಗೆ ಬ್ಯಾಕಪ್ ವಿಕೆಟ್ ಕೀಪರ್​ ಆಗಿ ಸಂಜು ಸ್ಯಾಮ್ಸನ್​ ನೇಮಕಗೊಂಡರೆ ಉತ್ತಮ ಎಂದು ಗಿಲ್​ಕ್ರಿಸ್ಟ್ ಹೇಳಿಕೆ ನೀಡಿದ್ದಾರೆ. ನಾಯಕತ್ವದಲ್ಲಿ ಸಾಕಷ್ಟು ಪ್ರಬುದ್ಧತೆ ಸಾಧಿಸಿರುವ ಸ್ಯಾಮ್ಸನ್​ ಅವರನ್ನು ಟಿ20 ವಿಶ್ವಕಪ್​ ತಂಡದಲ್ಲಿ ಮೀಸಲು ಆಟಗಾರನ ಸ್ಥಾನಕ್ಕೆ ಆಯ್ಕೆ ಮಾಡಲು ಇಚ್ಛಿಸುತ್ತೇನೆ. ಬ್ಯಾಟಿಂಗ್​​ನಲ್ಲೂ ಉತ್ತಮ ದಾಳಿ ನಡೆಸುತ್ತಿದ್ದಾರೆ. ಹಾಗಾಗಿ ಆತನಿಗೆ ಅವಕಾಶ ನೀಡಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಆ್ಯಡಂ ಗಿಲ್‌ಕ್ರಿಸ್ಟ್ ತಿಳಿಸಿದ್ದಾರೆ.

Whats_app_banner