ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ಕ್ರಿಕೆಟ್ ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಐಪಿಎಲ್ ಆಡುತ್ತಿರುವ 11 ಆಟಗಾರರಿಗೆ ಅವಕಾಶ

ಟಿ20 ಕ್ರಿಕೆಟ್ ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಐಪಿಎಲ್ ಆಡುತ್ತಿರುವ 11 ಆಟಗಾರರಿಗೆ ಅವಕಾಶ

Australia Cricket Team : ಜೂನ್ 1ರಿಂದ ಶುರುವಾಗುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಪ್ರಕಟಿಸಿದೆ. ಮಿಚೆಲ್ ಮಾರ್ಷ್ ನಾಯಕತ್ವ ಪಡೆದಿದ್ದರೆ, ಸ್ಟೀವ್ ಸ್ಮಿತ್ ಅವಕಾಶ ಪಡೆಯಲು ವಿಫಲರಾಗಿದ್ದಾರೆ.

ಟಿ20 ಕ್ರಿಕೆಟ್ ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಐಪಿಎಲ್ ಆಡುತ್ತಿರುವ 11 ಆಟಗಾರರಿಗೆ ಅವಕಾಶ
ಟಿ20 ಕ್ರಿಕೆಟ್ ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಐಪಿಎಲ್ ಆಡುತ್ತಿರುವ 11 ಆಟಗಾರರಿಗೆ ಅವಕಾಶ

ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಗೆ (ICC T20 Cricket World Cup 2024) ಆಸ್ಟ್ರೇಲಿಯಾ (Australia Cricket Team) ತಮ್ಮ 15 ಆಟಗಾರರ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಘೋಷಿಸಿದೆ. ಆದರೆ ತಂಡದಲ್ಲಿ ದೊಡ್ಡ ಹೆಸರುಗಳೇ ಕಾಣೆಯಾಗಿವೆ. ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್ (Steve Smith), ಯಂಗ್ ಗನ್ ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅನುಭವಿ ಸೀಮರ್ ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ಆಲ್-ರೌಂಡರ್ ಮ್ಯಾಟ್ ಶಾರ್ಟ್ ಅವರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದು, ಅಚ್ಚರಿ ಮೂಡಿಸಿದೆ.

ಟ್ರೆಂಡಿಂಗ್​ ಸುದ್ದಿ

ತವರಿನಲ್ಲಿ ನಡೆದ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ಪಡೆಯದ ಎಡಗೈ ಸ್ಪಿನ್ನರ್ ಆಶ್ಟನ್ ಅಗರ್ ತಂಡಕ್ಕೆ ಮರಳಿದ್ದಾರೆ. ಮಾರ್ಕಸ್ ಸ್ಟೋಯ್ನಿಸ್, ಟಿಮ್ ಡೇವಿಡ್, ಕ್ಯಾಮರೂನ್ ಗ್ರೀನ್ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್ ಅಂತಿಮ ತಂಡದಲ್ಲಿ ಆಲ್​ರೌಂಡರ್​ಗಳಾಗಿದ್ದಾರೆ. ಚೆಲ್ ಮಾರ್ಷ್ ಅವರು ತಂಡದ ನಾಯಕತ್ವವನ್ನು ವಹಿಸಲಿದ್ದಾರೆ. ಫುಲ್ ಟೈಮ್ ಟಿ20 ಕ್ಯಾಪ್ಟನ್ ಎಂಬುದನ್ನು ಇದು ಸೂಚಿಸುತ್ತದೆ. ಆಸ್ಟ್ರೇಲಿಯಾ ತಂಡವು ಸಮತೋಲಿತ ತಂಡವನ್ನು ಹೊಂದಿದೆ.

9ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಪ್ರಬಲ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ಹೇಳಿದ್ದಾರೆ. ಇದು ವ್ಯಾಪಕವಾದ ವಿಶ್ವಕಪ್ ಅನುಭವ ಹೊಂದಿರುವ ಅನುಭವಿ ತಂಡವಾಗಿದೆ ಎಂದು ಹೇಳಿದ್ದಾರೆ. ಸ್ಟೀವ್​ ಸ್ಮಿತ್ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್​ಗಾಗಿ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ತಂಡಕ್ಕೆ ಪದಾರ್ಪಣೆ ಮಾಡಿದಾಗಿನಿಂದ ಈವರೆಗೂ ಆಸೀಸ್​ ಪರ ಐಸಿಸಿ ಈವೆಂಟ್​ಗಳಲ್ಲಿ ಭಾಗವಹಿಸಿದ್ದರು.

ಡೇವಿಡ್ ವಾರ್ನರ್​ಗೆ ಕೊನೆಯ ಟಿ20 ವಿಶ್ವಕಪ್​

ಈಗಾಗಲೇ ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ 37 ವರ್ಷದ ಡೇವಿಡ್ ವಾರ್ನರ್​, ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್​ಗೂ ವಿದಾಯ ಘೋಷಿಸುವುದಾಗಿ ಹೇಳಿದ್ದಾರೆ. ಐಸಿಸಿ ಟ್ರೋಫಿ ಜಯಿಸಿ ಗೆಲುವಿನ ವಿದಾಯ ಘೋಷಿಸಲು ಸಿದ್ಧರಾಗಿದ್ದಾರೆ. ಇದು ಅವರಿಗೆ ಕೊನೆಯ ಟಿ20 ವಿಶ್ವಕಪ್ ಆಗಲಿದೆ. 2023ರ ಏಕದಿನ ವಿಶ್ವಕಪ್​ನಲ್ಲಿ ಟ್ರೋಫಿ ಗೆದ್ದ ಆಸೀಸ್ ತಂಡದ ಭಾಗವಾಗಿದ್ದ ವಾರ್ನರ್, 15 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾರೆ.

ಐಪಿಎಲ್​ನಲ್ಲಿ ಆಡುತ್ತಿದ್ದಾರೆ 11 ಆಟಗಾರರು

ಟಿ20 ವಿಶ್ವಕಪ್​ಗೆ ಘೋಷಣೆಯಾದ ಆಸ್ಟ್ರೇಲಿಯಾದ 15 ಆಟಗಾರ ಪೈಕಿ 11 ಆಟಗಾರರು ಐಪಿಎಲ್ ಆಡುತ್ತಿದ್ದಾರೆ. ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್ (ಡೆಲ್ಲಿ ಕ್ಯಾಪಿಟಲ್ಸ್), ಪ್ಯಾಟ್ ಕಮಿನ್ಸ್, ಟ್ರಾವಿಸ್ ಹೆಡ್ (ಸನ್​ರೈಸರ್ಸ್ ಹೈದರಾಬಾದ್), ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್​ವೆಲ್ (ಆರ್​ಸಿಬಿ), ಮಿಚೆಲ್ ಸ್ಟಾರ್ಕ್ (ಕೆಕೆಆರ್​), ಮಾರ್ಕಸ್ ಸ್ಟೋಯ್ನಿಸ್ (ಎಲ್​ಎಸ್​ಜಿ), ಟಿಮ್ ಡೇವಿಡ್ (ಮುಂಬೈ ಇಂಡಿಯನ್ಸ್), ನಾಥನ್ ಎಲ್ಲಿಸ್ (ಪಂಜಾಬ್ ಕಿಂಗ್ಸ್), ಮ್ಯಾಥ್ಯೂ ವೇಡ್ (ಗುಜರಾತ್ ಟೈಟಾನ್ಸ್)

ಟಿ20 ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ

ಮಿಚೆಲ್ ಮಾರ್ಷ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಜಂಪಾ.

ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

IPL_Entry_Point