ಎಂಎಸ್ ಧೋನಿ ಔಟ್, ಮತೀಶಾ ಪತಿರಾಣ ಇಂಪ್ಯಾಕ್ಟ್ ಪ್ಲೇಯರ್; ಲಕ್ನೋ ಪಂದ್ಯಕ್ಕೆ ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಎಂಎಸ್ ಧೋನಿ ಔಟ್, ಮತೀಶಾ ಪತಿರಾಣ ಇಂಪ್ಯಾಕ್ಟ್ ಪ್ಲೇಯರ್; ಲಕ್ನೋ ಪಂದ್ಯಕ್ಕೆ ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್ Xi

ಎಂಎಸ್ ಧೋನಿ ಔಟ್, ಮತೀಶಾ ಪತಿರಾಣ ಇಂಪ್ಯಾಕ್ಟ್ ಪ್ಲೇಯರ್; ಲಕ್ನೋ ಪಂದ್ಯಕ್ಕೆ ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್ XI

CSK Playing XI : 17ನೇ ಆವೃತ್ತಿಯ ಐಪಿಎಲ್​ನ 34ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಎಂಎಸ್ ಧೋನಿ ಅವರು ಅಲಭ್ಯರಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಲಕ್ನೋ ಪಂದ್ಯಕ್ಕೆ ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್ XI
ಲಕ್ನೋ ಪಂದ್ಯಕ್ಕೆ ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್ XI

ಏಪ್ರಿಲ್ 19ರಂದು 17ನೇ ಆವೃತ್ತಿಯ ಐಪಿಎಲ್​ನ 34ನೇ ಪಂದ್ಯದಲ್ಲಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು (Lucknow Super Giants vs Chennai Super Kings) ಮುಖಾಮುಖಿಯಾಗಲಿವೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸುಂದರವಾದ ಗೆಲುವಿನ ನಂತರ ಸಿಎಸ್​ಕೆ, ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಸತತ ಎರಡು ಸೋಲುಗಳಿಂದ ಬಳಲುತ್ತಿರುವ ಲಕ್ನೋ, ಗೆಲುವಿನ ಹಳಿಗೆ ಮರಳಲು ಭರ್ಜರಿ ಕಸರತ್ತು ನಡೆಸುತ್ತಿದೆ.

ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ 6 ಪಂದ್ಯಗಳನ್ನಾಡಿದ್ದು, 4ರಲ್ಲಿ ಜಯದ ನಗೆ ಬೀರಿದೆ. 2ರಲ್ಲಿ ಸೋತಿದೆ. 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಲಕ್ನೋ 6 ಪಂದ್ಯಗಳಲ್ಲಿ ತಲಾ 3 ಮೂರು ಗೆಲುವು, ಸೋಲು ಕಂಡಿದೆ. 6 ಅಂಕ ಸಂಪಾದಿಸಿ 5ನೇ ಸ್ಥಾನ ಪಡೆದಿದೆ. ಈಗ ಉಭಯ ತಂಡಗಳು ತಮ್ಮ ಗೆಲುವುಗಳನ್ನು ವಿಸ್ತರಿಸಲು ಭರ್ಜರಿ ಕಸರತ್ತು ನಡೆಸಿವೆ. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಪರ ಮಾಜಿ ನಾಯಕ ಎಂಎಸ್ ಧೋನಿ ಕಣಕ್ಕಿಳಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಎಂಎಸ್ ಧೋನಿಗೆ ಗಾಯ?

ಮುಂಬೈ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ 4 ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್​ ಸಹಿತ 20 ರನ್ ಬಾರಿಸಿದ್ದರು. ಆದರೆ ಇದೇ 20 ರನ್​ಗಳಿಂದ ಚೆನ್ನೈ ಗೆದ್ದು ಬೀಗಿತು. ಆದರೆ ಪಂದ್ಯದ ನಂತರ ಧೋನಿ ಕುಂಟುತ್ತಿರುವಂತೆ ಕಂಡುಬಂದಿದ್ದು, ಮಾಜಿ ನಾಯಕ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೇ ಎಂಬ ಅನುಮಾನ ಮೂಡಿತ್ತು. ಕಳೆದ ವರ್ಷವೇ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಧೋನಿ, ಮತ್ತೊಮ್ಮೆ ಗಾಯಗೊಂಡಿದ್ದಾರೆ. ಈ ಬಗ್ಗೆ ಅಪ್ಡೇಟ್ ನೀಡಿರುವ ಸಿಎಸ್​ಕೆ ಕೋಚ್, ಧೋನಿ ಅವರು ಗಾಯಗಳ ಕುರಿತು ಅಷ್ಟೇನು ಕಾಳಜಿ ವಹಿಸುವುದಿಲ್ಲ ಎಂದು ಹೇಳಿದ್ದಾರೆ.

ರಚಿನ್ ರವೀಂದ್ರ ಉತ್ತಮ ಫಾರ್ಮ್‌ನಲ್ಲಿಲ್ಲ. ಆದರೆ ಎಂಎಸ್ ಧೋನಿ ತಮ್ಮ ಆಟಗಾರರನ್ನು ಬೆಂಬಲಿಸುತ್ತಾರೆ ಎಂದು ತಿಳಿದುಬಂದಿದೆ, ಹೀಗಾಗಿ ರಚಿನ್ ರವೀಂದ್ರ ತಂಡದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಅಜಿಂಕ್ಯ ರಹಾನೆ ಬಗ್ಗೆಯೂ ಇದೇ ಹೇಳಬಹುದು. ಅವರು ಸಹ ಅತ್ಯುತ್ತಮ ಪ್ರದರ್ಶನ ನೀಡಿಲ್ಲ. ಆದರೆ ಆಡುವ 11ರಲ್ಲಿ ಅವರ ಸ್ಥಾನಕ್ಕೆ ಯಾವುದೇ ಕುತ್ತು ಇಲ್ಲ ಎಂದು ತಿಳಿದು ಬಂದಿದೆ. ಲಕ್ನೋ ಪಿಚ್​ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ.

ವೇಗಿಗಳ ಪೈಕಿ ಒಬ್ಬರ ಸ್ಥಾನದಲ್ಲಿ ಮಹೇಶ್ ತೀಕ್ಷಣ ಅವರನ್ನು ಆಡಿಸಲು ನಿರ್ಧರಿಸಲು ಚಿಂತನೆ ನಡೆಸಿದೆ. ಆದಾಗ್ಯೂ, ಮಥೀಶ ಪತಿರಾಣ ಉತ್ತಮ ಫಾರ್ಮ್‌ನಲ್ಲಿರುವ ಕಾರಣದಿಂದ ಬದಲಾವಣೆ ಅಸಂಭವ ಎಂದು ಹೇಳಲಾಗಿದೆ. ಆದರೆ, ಮುಸ್ತಫಿಜುರ್ ರೆಹಮಾನ್, ಎದುರಾಳಿ ತಂಡಕ್ಕೆ ಪರಿಣಾಮಕಾರಿಯಾಗಲಿದ್ದಾರೆ. ಸಿಎಸ್​ಕೆ ಪ್ಲೇಯಿಂಗ್ XIನಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ದೀಪಕ್ ಚಹಾರ್ ಮರಳಿ ಬರುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಸಿಎಸ್​ಕೆ ಪ್ಲೇಯಿಂಗ್ XI vs ಎಲ್​ಎಸ್​ಜಿ

ರಚಿನ್ ರವೀಂದ್ರ, ಋತುರಾಜ್ ಗಾಯಕ್ವಾಡ್ (ನಾಯಕ), ಅಜಿಂಕ್ಯ ರಹಾನೆ, ಡ್ಯಾರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್​), ಶಾರ್ದೂಲ್ ಠಾಕೂರ್/ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್.

ಇಂಪ್ಯಾಕ್ಟ್ ಪ್ಲೇಯರ್: ಮಥೀಶ ಪತಿರಣ

Whats_app_banner