ಡೇವಿಡ್ ವಾರ್ನರ್ ರಿಟರ್ನ್; ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ಕದನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ XI
DC vs SRH Playing XI : ಐಪಿಎಲ್ನ 35ನೇ ಪಂದ್ಯದಲ್ಲಿ ಸೆಣಸಾಟ ನಡೆಸಲು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಸಜ್ಜಾಗಿವೆ. ಉಭಯ ತಂಡಗಳು ಬಲಿಷ್ಠ ಪ್ಲೇಯಿಂಗ್ XI ಕಣಕ್ಕಿಳಿಸಲು ಭಾರಿ ಕಸರತ್ತು ನಡೆಸುತ್ತಿವೆ.
2024ರ ಐಪಿಎಲ್ನ 35ನೇ ಪಂದ್ಯದಲ್ಲಿ ಭಯಾನಕ ಬ್ಯಾಟಿಂಗ್ ವಿಭಾಗ ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Delhi Capitals vs Sunrisers Hyderabad,) ಮುಖಾಮುಖಿಯಾಗುತ್ತಿವೆ. ಋತುವಿನ ಮೊದಲಾರ್ಧದಲ್ಲಿ ವಿಶಾಖಪಟ್ಟಣಂನಲ್ಲಿ ಆಡಿದ್ದ ಡೆಲ್ಲಿ, ದ್ವಿತಿಯಾರ್ಧದಲ್ಲಿ ತನ್ನ ತವರು ಮೈದಾನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯಕ್ಕಾಗಿ ರಾಷ್ಟ್ರ ರಾಜಧಾನಿಗೆ ಮರಳಿದೆ. ಡಿಸಿ ವೈಜಾಗ್‌ನಲ್ಲಿ 2 ಪಂದ್ಯ ಆಡಿದ್ದು, ಒಂದು ಗೆಲುವು, ಒಂದು ಸೋಲು ಕಂಡಿದೆ.
2022ರ ಡಿಸೆಂಬರ್ನಲ್ಲಿ ಭಯಾನಕ ಕಾರು ಅಪಘಾತದ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ನಾಯಕ ರಿಷಭ್ ಪಂತ್, ಇದೀಗ ತವರಿನ ಪ್ರೇಕ್ಷಕರ ಮುಂದೆ ಮೊದಲ ಬಾರಿ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಋತುವಿನಲ್ಲಿ ನಿಧಾನಗತಿಯ ಆರಂಭ ಪಡೆದ ನಂತರ ತಮ್ಮ ಲಯವನ್ನು ಕಂಡುಕೊಂಡಿದ್ದಾರೆ. ಏಳು ಪಂದ್ಯಗಳಿಂದ ಎರಡು ಅರ್ಧಶತಕಗಳೊಂದಿಗೆ 210 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 156.72. ಸ್ಟಂಪ್ಸ್ ಹಿಂದೆಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಆದರೆ ಡೆಲ್ಲಿ ಹೋಮ್ ಪಂದ್ಯವು ಅಷ್ಟು ಸುಲಭವಾಗಿಲ್ಲ. ಏಕೆಂದರೆ, ಈ ತಂಡವು ಬ್ಯಾಟಿಂಗ್ ದೈತ್ಯರನ್ನೇ ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಟಕ್ಕೆ ಸಿದ್ಧವಾಗಿದೆ. ಆದರೆ, ಐಪಿಎಲ್ ಇತಿಹಾಸದಲ್ಲಿ ಎರಡು ಗರಿಷ್ಠ ಸ್ಕೋರ್ ಮಾಡಿರುವ ಹೈದರಾಬಾದ್, ಮತ್ತೊಮ್ಮೆ ಅಂತಹದ್ದೇ ಇನ್ನಿಂಗ್ಸ್ ಕಟ್ಟುವ ನಿರೀಕ್ಷೆಯಲ್ಲಿದೆ. ಎಡಗೈ ಆರಂಭಿಕ ಜೋಡಿಗಳಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ವಿರುದ್ಧ ಪವರ್‌ಪ್ಲೇನಲ್ಲಿ ಖಲೀಲ್ ಅಹ್ಮದ್ ಮತ್ತು ಇಶಾಂತ್ ಶರ್ಮಾ ಹೇಗೆ ಬೌಲಿಂಗ್ ನಡೆಸುತ್ತಾರೆ ಎಂಬುದು ಸಹ ಕುತೂಹಲ ಮೂಡಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬೆರಳಿನ ಗಾಯದಿಂದ ಹಿಂದಿರುಗುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಅಹಮದಾಬಾದ್‌ನಲ್ಲಿ ತಮ್ಮ ಕೊನೆಯ ಪಂದ್ಯದ ದಿನದಂದು ವಾರ್ನರ್ 85-90ರಷ್ಟು ಫಿಟ್ ಆಗಿದ್ದರು. ಆದರೆ, ಸನ್‌ರೈಸರ್ಸ್ ವಿರುದ್ಧದ ಪಂದ್ಯದ ಮುನ್ನಾದಿನದಂದು ತರಬೇತಿ ಪಡೆದ ನಂತರ ಶನಿವಾರ ಅವರ ಲಭ್ಯತೆಯ ಕುರಿತು ಅಂತಿಮ ಕರೆಯನ್ನು ತೆಗೆದುಕೊಳ್ಳಲಾಗುವುದು ಎಂದು ಪಾಂಟಿಂಗ್ ಹೇಳಿದ್ದಾರೆ.
ವಾರ್ನರ್ ಹಿಂದಿರುಗಿದರೆ, ಕ್ಯಾಪಿಟಲ್ಸ್ ತನ್ನ ಕೊನೆಯ ಪಂದ್ಯವನ್ನು ಕೇವಲ ಮೂರು ವಿದೇಶಿ ಆಟಗಾರರೊಂದಿಗೆ ಆಡಿದ್ದರಿಂದ, ಸುಮಿತ್ ಕುಮಾರ್‌ಗೆ ನೇರವಾಗಿ ಸ್ಥಾನ ನೀಡಬಹುದು. ಆದರೆ ಶಾಯ್ ಹೋಪ್ ಅಥವಾ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರಲ್ಲಿ ಒಬ್ಬರು ಜಾಗ ಖಾಲಿ ಮಾಡಬೇಕಾಗುತ್ತದೆ. ಒಂದು ವೇಳೆ ನಾಲ್ವರು ವಿದೇಶಿ ಆಟಗಾರರು ಕಣಕ್ಕಿಳಿದರೆ ಸುಮಿತ್ ತಂಡದಿಂದ ಹೊರಗಿಳಿಯಬೇಕಾಗುತ್ತದೆ.
ಡೆಲ್ಲಿ ಸಂಭಾವ್ಯ ಪ್ಲೇಯಿಂಗ್ 11: ಪೃಥ್ವಿ ಶಾ, ಡೇವಿಡ್ ವಾರ್ನರ್, ಜೇಕ್ ಫ್ರೇಸರ್-ಮೆಕ್‌ಗುರ್ಕ್/ಶಾಯ್ ಹೋಪ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ, ಮುಕೇಶ್ ಕುಮಾರ್, ಖಲೀಲ್ ಅಹ್ಮದ್.
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್
ಸನ್‌ರೈಸರ್ಸ್ ಸಂಪೂರ್ಣ ಫಿಟ್ ತಂಡವನ್ನು ಹೊಂದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಮ್ಮ ಕೊನೆಯ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆಯಿದೆ. ಟ್ರಾವಿಸ್ ಹೆಡ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಲಿದ್ದಾರೆ. ಟಾಸ್ಗೆ ಅನುಗುಣವಾಗಿ ಮಯಾಂಕ್ ಮಾರ್ಕಂಡೆಗೆ ಅವಕಾಶ ನೀಡುತ್ತಾರೆ. ಒಂದು ವೇಳೆ ಬ್ಯಾಟಿಂಗ್ ಕುಸಿತ ಕಂಡರೆ ರಾಹುಲ್ ತ್ರಿಪಾಠಿ ಆಯ್ಕೆಯಾಗುತ್ತಾರೆ.
ಎಸ್ಆರ್ಹೆಚ್ ಪ್ಲೇಯಿಂಗ್ XI: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಏಡನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ನಿತೀಶ್ ಕುಮಾರ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕತ್, ಟಿ ನಟರಾಜನ್.