ಕನ್ನಡ ಸುದ್ದಿ  /  ಕ್ರಿಕೆಟ್  /  ಡೆಲ್ಲಿ ಕ್ಯಾಪಿಟಲ್ಸ್ ಕಟ್ಟುನಿಟ್ಟಾದ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್ ಟೈಟಾನ್ಸ್; ರಿಷಭ್ ಪಂತ್ ಪಡೆಗೆ ಸುಲಭ ಗೆಲುವು

ಡೆಲ್ಲಿ ಕ್ಯಾಪಿಟಲ್ಸ್ ಕಟ್ಟುನಿಟ್ಟಾದ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್ ಟೈಟಾನ್ಸ್; ರಿಷಭ್ ಪಂತ್ ಪಡೆಗೆ ಸುಲಭ ಗೆಲುವು

Gujarat Titans vs Delhi Capitals : 17ನೇ ಆವೃತ್ತಿಯ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್​ಗಳ ಸುಲಭ ಜಯ ಸಾಧಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ಕಟ್ಟುನಿಟ್ಟಾದ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್ ಟೈಟಾನ್ಸ್
ಡೆಲ್ಲಿ ಕ್ಯಾಪಿಟಲ್ಸ್ ಕಟ್ಟುನಿಟ್ಟಾದ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್ ಟೈಟಾನ್ಸ್ (AFP)

ಮುಕೇಶ್ ಕುಮಾರ್ (14/3) ಮತ್ತು ಇಶಾಂತ್ ಶರ್ಮಾ (8/2) ಮತ್ತು ಟ್ರಿಸ್ಟಾನ್ಸ್ ಸ್ಟಬ್ಸ್ (11/2) ಅವರ ಕಟ್ಟುನಿಟ್ಟಾದ ಬೌಲಿಂಗ್ ದಾಳಿಯ ನೆರವಿನಿಂದ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸುಲಭ ಗೆಲುವು ದಾಖಲಿಸಿದೆ. ಆರು ವಿಕೆಟ್​​ಗಳ ಹೀನಾಯ ಸೋಲನುಭವಿಸಿದ ಶುಭ್ಮನ್ ಗಿಲ್ ನೇತೃತ್ವದ ಜಿಟಿ, ಟೂರ್ನಿಯಲ್ಲಿ ನಾಲ್ಕನೇ ಸೋಲಿಗೆ ಶರಣಾಗಿದೆ. ಅಲ್ಲದೆ, ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಾರಿದೆ. ಗೆದ್ದ ಡೆಲ್ಲಿ 3ನೇ ಗೆಲುವಿನೊಂದಿಗೆ 6ನೇ ಸ್ಥಾನಕ್ಕೆ ಜಂಪ್ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್, ಎದುರಾಳಿ ಬೌಲರ್​ಗಳ ಮಾರಕ ದಾಳಿಗೆ ನಲುಗಿತು. ರಶೀದ್ ಖಾನ್ 31 ರನ್ ಬಾರಿಸಿದ್ದೇ ಜಿಟಿ ಪರ ಗರಿಷ್ಠ ಸ್ಕೋರ್ ಆಗಿದೆ. ಇಶಾಂತ್ ಶರ್ಮಾ, ಸ್ಟಬ್ಸ್, ಮುಕೇಶ್ ಅವರ ಉತೃಷ್ಟದ ಬೌಲಿಂಗ್​ನಿಂದ ಟೈಟಾನ್ಸ್ 17.3 ಓವರ್​​ಗಳಲ್ಲಿ ಕೇವಲ 89 ರನ್​ಗಳಿಗೆ ಆಲೌಟ್ ಆಯಿತು. ಪ್ರಸಕ್ತ ಐಪಿಎ​ಲ್​​ನಲ್ಲಿ 100ಕ್ಕಿಂತ ಕಡಿಮೆ ರನ್​ಗೆ ಆಲೌಟ್ ಮೊದಲ ತಂಡ ಎಂಬ ಅಪಕೀರ್ತಿಗೆ ಒಳಗಾಗಿದೆ. ಖಲೀಲ್ ಅಹ್ಮದ್, ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

90 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ನಾಲ್ಕು ವಿಕೆಟ್​ಗಳನ್ನು ಕಳೆದುಕೊಂಡಿತು. ಜೇಕ್ ಪ್ರೇಸರ್ ಮ್ಯಾಕ್​ಗುರ್ಕ್ (20), ಪೃಥ್ವಿ ಶಾ (7), ಅಭಿಷೇಕ್ ಪೋರಲ್ (15), ಶೈ ಹೋಪ್ (19) ಬೇಗನೇ ಔಟಾದರು. ಕೊನೆಯಲ್ಲಿ ರಿಷಭ್ ಪಂತ್ ಅಜೇಯ 16 ರನ್, ಸುಮಿತ್ ಕುಮಾರ್ ಅಜೇಯ 9 ರನ್ ಗಳಿಸಿದ್ದಾರೆ. 8.5 ಓವರ್​​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 92 ರನ್​ಗಳಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಉತ್ತಮ ನೆಟ್ ರನ್ ರೇಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಗುಜರಾತ್ ಪರ ಸಂದೀಪ್ ವಾರಿಯರ್ 2 ವಿಕೆಟ್, ಸ್ಪೆನ್ಸರ್ ಜಾನ್ಸನ್ ಮತ್ತು ರಶೀದ್ ಖಾನ್ ತಲಾ 1 ವಿಕೆಟ್ ಪಡೆದಿದ್ದಾರೆ.

ಡೆಲ್ಲಿಗೆ ದೊಡ್ಡ ಗೆಲುವು (ಎಸೆತಗಳ ಅಂತರ)

67 ಎಸೆತಗಳು vs ಗುಜರಾತ್ ಟೈಟಾನ್ಸ್, ಅಹಮದಾಬಾದ್, 2024*

57 ಎಸೆತಗಳು vs ಪಂಜಾಬ್ ಕಿಂಗ್ಸ್, ಮುಂಬೈ, 2022

42 ಎಸೆತಗಳು vs ಡೆಕ್ಕನ್ ಚಾರ್ಜರ್ಸ್, ಹೈದರಾಬಾದ್, 2008

40 ಎಸೆತಗಳು vs ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ, 2012

ಕ್ರ.ಸಂ

ತಂಡ

ಪಂದ್ಯ

ಗೆಲುವು

ಸೋಲು

NRR

ಅಂಕ

1

ರಾಜಸ್ಥಾನ್ ರಾಯಲ್ಸ್

761+0.67712
2

ಕೋಲ್ಕತ್ತಾ ನೈಟ್ ರೈಡರ್ಸ್

642+1.3998
3

ಚೆನ್ನೈ ಸೂಪರ್ ಕಿಂಗ್ಸ್

642+0.7268
4

ಸನ್​ರೈಸರ್ಸ್ ಹೈದರಾಬಾದ್

642+0.5028
5

ಲಕ್ನೋ ಸೂಪರ್ ಜೈಂಟ್ಸ್

633+0.0386
6

ಡೆಲ್ಲಿ ಕ್ಯಾಪಿಟಲ್ಸ್

734-0.0746
7

ಗುಜರಾತ್ ಟೈಟಾನ್ಸ್

734-1.3036
8

ಪಂಜಾಬ್ ಕಿಂಗ್ಸ್

624-0.2184
9

ಮುಂಬೈ ಇಂಡಿಯನ್ಸ್

624-0.2344
10

ರಾಯಲ್ ಚಾಲೆಂಜರ್ಸ್ ಬೆಂಗಳೂರು

716-1.1852

IPL_Entry_Point